ನೇರ ನೋಟ: ದು.ಗು.ಲಕ್ಷ್ಮಣ ದೇಶದಾದ್ಯಂತ ರಾಜಕಾರಣಿಗಳ ಭ್ರಷ್ಟ ಹಗರಣಗಳು, ಅವ್ಯವಹಾರಗಳು, ದುರಾಡಳಿತ ಮುಂತಾದ ಅದೇ ಚರ್ವಿತಚರ್ವಣ ಸುದ್ದಿಗಳನ್ನು ಕೇಳಿಕೇಳಿ ಬೇಸತ್ತಿರುವ ಜನತೆಗೆ ನೀವಂತೂ ನಿಮ್ಮ ‘ಅದ್ಭುತ ಹೇಳಿಕೆ’ಗಳಿಂದ ಸಾಕಷ್ಟು ಮನರಂಜನೆ ಒದಗಿಸುತ್ತಿರುವಿರಿ. ಹಣದುಬ್ಬರದಿಂದ ಕಂಗಾಲಾಗಿರುವ, ಗಗನದೆತ್ತರಕ್ಕೆ ಏರಿರುವ ಬೆಲೆಗಳಿಂದ ದಿಗಿಲಾಗಿರುವ ಜನರಿಗೆ ನಿಮ್ಮ ಹೇಳಿಕೆಗಳು ಒಂದಷ್ಟು ಹೊತ್ತು ಖಂಡಿತ ಖುಷಿ ನೀಡುತ್ತವೆ. ಜನರೀಗ ಮನರಂಜನೆ ಪಡೆಯುವುದಕ್ಕೆ ಸಿನಿಮಾ, ಯಕ್ಷಗಾನ, ಆರ್ಕೆಸ್ಟ್ರಾ , ಟಿವಿ ಮುಂತಾದವುಗಳಿಗೆ ಮೊರೆಹೋಗುವ ಅಗತ್ಯವೇ ಇಲ್ಲ. ನಿಮ್ಮ ‘ನಗೆಬಾಂಬ್’ ಹೇಳಿಕೆಗಳನ್ನು ಜಗಿಯುತ್ತಿದ್ದರೆ ಭರಪೂರ ಮನರಂಜನೆಗೆ ಕೊರತೆಯೇ ಇರುವುದಿಲ್ಲ. ಗೌರವಾನ್ವಿತ ಮಾರ್ಕಂಡೇಯ ಕಟ್ಜು ಸಾಹೇಬರೆ, ಸಪ್ರೇಮ ಪ್ರಣಾಮಗಳು. ನೀವು ಭಾರತೀಯ ಪತ್ರಿಕಾಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಾಗ ಪತ್ರಕರ್ತನಾದ [...]