ಆಗಬೇಕಾಗಿದೆ ವನವಾಸಿ ಕಲ್ಯಾಣ! ಭಾರತ ದೇಶದಲ್ಲಿ ಸುಮಾರು ಒಂಭತ್ತೂವರೆ ಕೋಟಿಗೂ ಮಿಕ್ಕ ಜನ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದಾರೆ. ರಾಷ್ಟ್ರ-ರಾಜ್ಯದ ಕಾನೂನುಗಳಿಂದ ಬೃಹತ್ ಯೋಜನೆ, ಕಾರ್ಖಾನೆಗಳಿಂದ ಸರಿಯಾದ ಪುನರ್ವಸತಿ ಇಲ್ಲದೇ ತಮ್ಮ ಮೂಲ ನಿವಾಸದಿಂದ, ಅರಣ್ಯದಿಂದಲೂ ಹೊರದೂಡಲ್ಪಟ್ಟಿದ್ದಾರೆ. ಬಡತನ, ಅಜ್ಞಾನ, ಮತಾಂತರ ಪಿಡುಗಿನ ವಿರುದ್ಧ ನಿಂತು ಹಲವು ಸೇವಾ ಕಾರ್ಯಕ್ರಮ ಮತ್ತು ವೈವಿಧ್ಯ ಚಟುವಟಿಕೆಗಳ ಮೂಲಕ ಸ್ವಾವಲಂಬಿಗಳನ್ನಾಗಿಸುವತ್ತ ನಿರಂತರವಾಗಿ ಮುನ್ನಡೆಯುತ್ತಿದೆ ವನವಾಸಿ ಕಲ್ಯಾಣ. ೧೯೫೨ರಲ್ಲಿ ಸ್ಥಾಪಿಸಿವಾದ `ವನವಾಸಿ ಕಲ್ಯಾಣ’ ಆಶ್ರಮ ಬಾಳಾಸಾಹೇಬ ದೇಶಪಾಂಡೆಯವರಿಂದ ಸ್ಥಾಪಿತವಾಯಿತು. ವನವಾಸಿ [...]
RSS Feed
Twitter











