
ಕೊರೊನಾಗೆ ಕಡೆಗೊಂದು ಔಷಧಿ ಬಂದಿದೆ. ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವೈದ್ಯವಿಜ್ಞಾನಿಗಳು (ಡಿಆರ್‌ಡಿಒ) ಕೊರೊನಾವನ್ನು ಕಟ್ಟಿಹಾಕಲು 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ)ಯನ್ನು ಕಂಡುಹಿಡಿದಿದ್ದಾರೆ. ಈ ಔಷಧವನ್ನು ಮೇ 17ರಂದು ಅಧಿಕೃತವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಿಡುಗಡೆಮಾಡಿದ್ದಾರೆ. ಈ ಔಷಧಿಯ ಅಭಿವೃದ್ಧಿಯಲ್ಲಿ ಡಿಆರ್‌ಡಿಒ ಗೆ ಸಹಯೋಗ ನೀಡಿದ್ದ ಡಾ.ರೆಡ್ಡಿಸ್ ಲ್ಯಾಬ್ ಇದನ್ನು ಮಾರುಕಟ್ಟೆಗೆ ತಂದಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿಯೂ ಇದು ಯಶಸ್ವಿಯಾಗಿದೆ. ಕೊವಿಡ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಸಹಕಾರಿಯಾಗಲಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿದೆ.
ಭರವಸೆ ನೀಡಬಲ್ಲ ಫಲಿತಾಂಶವನ್ನು ನೀಡಿರುವ 2ಡಿಜಿ, ಪೌಡರ್ ರೂಪದಲ್ಲಿ ಇರಲಿದ್ದು ನೀರಿನ ಜತೆ ಬೆರೆಸಿ ಸೇವಿಸಬಹುದಾಗಿದೆ. ಸೋಂಕಿತರ ಆಕ್ಸಿಜನ್ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ ಮತ್ತು ಕೊರೊನಾದಿಂದ ಶೀಘ್ರವಾಗಿ ಗುಣಮುಖರಾಗುವ ಸಾಧ್ಯತೆ ನೂರಕ್ಕೆ ನೂರರಷ್ಟು ಸಮೀಪದಲ್ಲಿದೆ. ನಮ್ಮ ದೇಶಕ್ಕೆ ಇದು ಸಂಜೀವಿನಿಯಾಗುವುದರ ಜೊತೆಗೆ ಇಡೀ ವಿಶ್ವಕ್ಕೇ ಹೊಸ ಭರವಸೆ ಮೂಡಿಸಿದೆ.
ಸದ್ಯದ ತೀವ್ರ ಬೇಡಿಕೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಔಷಧವನ್ನು ಅತ್ಯಂತ ಶೀಘ್ರವಾಗಿ ಉತ್ಪಾದಿಸುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕೆ ಪೂರಕವಾಗಿ ಇದು ದೇಶದ ಎಲ್ಲಾ ಮೂಲೆಗಳನ್ನು ತಲುಪುವಂತೆ ಸೂಕ್ತ ನಿಯಂತ್ರಿತ ಸರಬರಾಜು ಜಾಲವನ್ನು ಹೊಸೆಯಬೇಕಿದೆ. ಸೋಂಕಿತರ ಕೈಗೆ ಸುಲಭವಾಗಿ ಯಾವುದೇ ರೀತಿಯ ವಿಳಂಬವಾಗದಂತೆ ತಲುಪಿಸಬೇಕಿದೆ. ಇದೆಲ್ಲಕ್ಕಿಂತ ಅಗತ್ಯವಾಗಿ ಈ ನವ ಸಂಜೀವಿನಿಯನ್ನು ಭಾರತ ವಿರೋಧಿ ದುಷ್ಟಕೂಟಗಳಿಂದ ರಕ್ಷಿಸಬೇಕಿದೆ.
ಹೌದು ಈ ಕ್ಲಿಷ್ಟಕರ ಸಾಂಕ್ರಾಮಿಕ ಸೋಂಕಿನ ಸನ್ನಿವೇಷದಲ್ಲಿ ಅಮೃತ ಸಮವಾದ ಈ 2ಡಿಜಿ ಔಷಧಿಯನ್ನು, ಅದರ ಉಪಯುಕ್ತತೆಯನ್ನು ಹಾಗೂ ರೋಗಿಗಳಿಗೆ ತಲುಪಿಸುವ ಎಲ್ಲ ಪ್ರಯತ್ನಗಳನ್ನು ಭಂಗಗೊಳಿಸಲು ಕೆಲವರು ಕಾಯುತ್ತಿದ್ದಾರೆ. ಈಗಾಗಲೇ ಈ ದುರುದ್ದೇಶಕ್ಕಾಗಿ ಟೂಲ್‌ಕಿಟ್ ರೆಡಿ ಮಾಡಿಕೊಂಡು ಕೂತಿರುವ ಸಾಧ್ಯತೆಗಳೂ ಇವೆ. ಇದು ಸುಮ್ಮನೆ ತಮಾಷೆಗೋ ಅಥವಾ ಯಾವುದೋ ರಾಜಕೀಯ ವ್ಯಕ್ತಿ, ಪಕ್ಷದ ಮೇಲಿನ ದ್ವೇಷಸಾಧನೆಗೋ ಹೇಳುವ ಮಾತಲ್ಲ. ಕಳೆದೆರಡು ವರ್ಷಗಳಲ್ಲಿ ಭಾರತದ ಇಮೇಜನ್ನು ಹಾಳು ಮಾಡಲು ಶತಪ್ರಯತ್ನ ಮಾಡುತ್ತಿರುವ ಗುಂಪುಗಳ ಪ್ರಯತ್ನಗಳನ್ನು ಗಮನಿಸಿದ ಯಾರೇ ಆದರೂ ಇದೇ ನಿಲುವನ್ನು ತಳೆಯ ಬೇಕಾಗುತ್ತದೆ.
ಭಾರತದ ಒಳಗೆ ಇರುವ ತುಕ್ಡೇಗ್ಯಾಂಗಿನ ಸದಸ್ಯರು ತಮ್ಮ ದೇಶದ ವಿರುದ್ಧವೇ ಒಳಸಂಚು ರೂಪಿಸಿ ಕೊರೊನಾ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್, ಆಪ್, ಕಮ್ಯುನಿಸ್ಟ್ ಇತ್ಯಾದಿ ರಾಜಕೀಯ ಪಕ್ಷಗಳ ಕುಮ್ಮಕ್ಕು ಬೇರೆ ಇದೆ. ದೇಶದ ಜನರ ಆರೋಗ್ಯ ರಕ್ಷಣೆಗೆಂದು ಮೋದಿ ನೇತೃತ್ವದ ಆಡಳಿತ ಹಗಲುರಾತ್ರಿ ಶ್ರಮವಹಿಸುತ್ತಿದ್ದರೆ ಇದನ್ನು ಹಾಳುಮಾಡಿ ನೀರುಪಾಲು ಮಾಡಲು ಈ ದುಷ್ಟಕೂಟ ಪ್ರಯತ್ನಿಸುತ್ತಿದೆ.
ಸುಮ್ಮನೆ ಲೆಕ್ಕ ಹಾಕಿ, ಕೊರೊನಾ ಸಮಯದಲ್ಲಿ ಇವರು ಎಬ್ಬಿಸಿಡ ರಾಡಿ ಎಷ್ಟು? ಮೊದಲ ಅಲೆಯ ಸಮಯದಲ್ಲಿ ಸಿಎಎ-ಎನ್‌ಆರ್‌ಸಿ ವಿರುದ್ಧ ಹೋರಾಟ, ವಲಸೆ ಕಾರ್ಮಿಕರನ್ನು ಭಯಗೊಳಿಸಿ ಓಡಿಸಿದ್ದು, ಕರೊನಾ ವಾರಿಯರ್‌ಗಳ ಮೇಲೆ ಹಲ್ಲೆ ನಡೆಸಿದವರಿಗೆ ರಕ್ಷಣೆ, ರೈತಕಾಯಿದೆ ವಿರೋಧಿ ಹೋರಾಟದ ಹೆಸರಿನಲ್ಲಿ ದಂಗೆ, ಕೊರೊನಾ ಲಸಿಕೆ ವಿರುದ್ಧ ಅಪಪ್ರಚಾರ, ಮೋದಿ ಜನರನ್ನು ಬಲಿಪಶು ಮಾಡುತ್ತಿದ್ದಾರೆಂಬ ಹೇಳಿಕೆಗಳು – ಇವೆಲ್ಲವೂ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ದೇಶದ ಆಡಳಿತವನ್ನು ದುರ್ಬಲಗೊಳಿಸುವ ಪ್ರಯತ್ನಗಳೇ.
ಕಳೆದ ಮಾರ್ಚ್ ನಂತರದ ಎರಡನೆ ಅಲೆಯ ಸಮಯದಲ್ಲಿಯೂ ಇವರ ಧ್ವಂಸಕಾರ್ಯ ಇನ್ನಷ್ಟು ಉಲ್ಪಣಿಸಿತು. ಸುಡುವ ಹೆಣಗಳನ್ನು ತೋರಿಸಿ ಜಗತ್ತಿನಲ್ಲಿ ದೇಶದ ಮಾನ ಕಳೆಯುವುದರ ಜೊತೆಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೊರೊನಾ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಿ ಜನರಲ್ಲಿ ಭಯವನ್ನು ಮೂಡಿಸುವಲ್ಲಿ ಬಹುಪಾಲು ಸಫಲರಾದರು. ಲಸಿಕೆ ತಯಾರಿಕೆಗೂ ನೂರಾರು ಅಡ್ಡಿಗಳನ್ನೇರ್ಪಡಿಲು ಯತಿಸಿದರು. ಆಕ್ಸಿಜನ್ ಕಂಟೈನರ್ ಹೊತ್ತ ರೈಲು ಪಯಣಿಸುವ ಹಳಿಗಳನ್ನು ಕಿತ್ತರು.
ಕೃತಕವಾಗಿ ಆಕ್ಸಿಜನ್ ಕೊರತೆ, ಬೆಡ್‌ಗಳ ಕೊರತೆ, ರೆಮಿಡಿಸಿವಿಯರ್ ಚುಚ್ಚುಮದ್ದಿನ ಕೊರತೆ, ವೆಂಟಿಲೇಟರ್‌ಗಳ ಕೊರತೆ ಆಗುವಂತೆ ಮಾಡಿದ್ದೇ ಈ ದೇಶವಿರೋಧಿ ಕೂಟಗಳು. ದೇಶವನ್ನು ಬಹುಕಾಲ ಆಳಿದ್ದ ಪಕ್ಷದ ಜೊತೆಗೆ ಈಗ ದೆಹಲಿ, ಮಹಾರಾಷ್ಟ್ರಗಳಲ್ಲಿ ಆಡಳಿತ ನಡೆಸುತ್ತಿದ್ದ ಪಕ್ಷಗಳ ಸದಸ್ಯರೇ ಇವುಗಳಲ್ಲಿ ಪಾಲ್ಗೊಂಡಿದ್ದು ನೋಡಿದರೆ ಇವರ ವಿಚಾರ, ಕಾರ್ಯದ ಕುರಿತು ಹೇಸಿಗೆಯೆನಿಸುತ್ತದೆ.
ಈ ಹಿಂದಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೀವ್ರವಾಗಿ ಇವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರಬೇಕು. ಈಗ ಅಮೃತೋಪಸಮವಾಗಿ ಬಂದಿರುವ ಹೊಸ ಔಧಿಯೂ ಈ ದುಷ್ಟರ ಜಾಲಕ್ಕೆ ಸಿಕ್ಕಿಕೊಳ್ಳದಂತೆ ಎಚ್ಚರವಹಿಸ ಬೇಕಿದೆ.
ತನ್ನ ತಾಯಿಯ ಬಂಧ ವಿಮೋಚನೆಗೆಂದು ದೇವಲೋಕಕ್ಕೆ ಹಾರಿ ಅಮೃತಕಳಸ ಹೊತ್ತುತಂದ ಪಕ್ಷಿರಾಜ ಗರುಡನು ಅದು ದುಷ್ಟನಾಗಗಳ ಕೈಗೆ ಸಿಗದಂತೆ ಹೇಗೆ ಜೋಪಾನ ಮಾಡಿ ಸಂರಕ್ಷಿಸಿದನೋ ಹಾಗೆಯೇ 2ಡಿಜಿ ಔಷಧಿಯ ರಕ್ಷಣೆಗೂ ಬಲಶಾಲಿಯಾದ ಗರುಡನ ರಕ್ಷಣೆಯನ್ನೇರ್ಪಡಿಸಬೇಕಿದೆ. ಅಪಪ್ರಚಾರ, ಅಕ್ರಮ ದಾಸ್ತಾನು ಇತ್ಯಾದಿಗಳ ಮೂಲಕ ಮತ್ತೆ ಇದರ ತಂಟೆಗೆ ಬರಲೆತ್ನಿಸುವ ವಿಷಸರ್ಪಗಳನ್ನು ವೈನತೇಯ ಆಪೋಷಣ ತೆಗೆದುಕೊಳ್ಳಬೇಕಿದೆ.