ಸರ್ವೋಚ್ಛ ನ್ಯಾಯಾಲಯದಲ್ಲಿ ಇಂದು ಅಯೋಧ್ಯೆಯ ತೀರ್ಪು ಹೊರಬರುತ್ತದೆ. ತತ್ಸಂಬಂಧ, ಶ್ರೀ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಆಗಾಗ ಕೇಳಿಬರುವ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಇಲ್ಲಿ ಕೊಡಲಾಗಿದೆ.
ಪ್ರಶ್ನೆ: ಪ್ರಭು ಶ್ರೀ ರಾಮನನ್ನು ಹಿಂದೂಗಳು ಆರಾಧಿಸಿ ಪೂಜಿಸುವುದೇಕೆ?
ಹಿಂದೂ ಸಂಪ್ರದಾಯದಂತೆ, ಎರಡನೆಯ ಯುಗವಾದ ತ್ರೇತಾಯುಗದಲ್ಲಿ ಜನಿಸಿದ ಪ್ರಭು ಶ್ರೀ ರಾಮ, ಮಹಾವಿಷ್ಣುವಿನ ಏಳನೆಯ ಅವತಾರ. ಅಧರ್ಮವನ್ನು ತೊಡೆದುಹಾಕಲೆಂದೇ ಜನ್ಮತಾಳಿದವನು ಶ್ರೀ ರಾಮ ಎಂಬುದು ಬಲವಾದ ನಂಬಿಕೆ. ೩೦೦೦ ವರ್ಷಗಳ ಕೆಳಗೆ ಹಿಂದೂಗಳ ನಾಯಕನಾಗಲೆಂದೇ ಜನಿಸಿದವನು ಶ್ರೀ ರಾಮ ಎಂಬ ನಂಬಿಕೆ ಇದೆ. ಶ್ರೀ ರಾಮ, ಮಹಾವಿಷ್ಣುನಿವ ಅಭಿವ್ಯಕ್ತ ರೂಪ ಎಂಬ ನಂಬಿಕೆ ಕೇವಲ ಭಾರತದಲ್ಲಷ್ಟೇ ಅಲ್ಲದೆ, ದಕ್ಷಿಣ ಏಷಿಯಾ ದೇಶಗಳಲ್ಲೂ ಇದೆ. ಪ್ರಭು ಶ್ರೀರಾಮನ ಜೀವನದ ಎಷ್ಟೋ ಅಂಶಗಳು ಪುರಾತತ್ವ ಸಾಕ್ಷ್ಯಗಳು ನಿರೂಪಿಸಿವೆ. ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದಿಂದ ಶ್ರೀ ರಾಮನ ಜೀವನ ತಿಳಿದುಬರುತ್ತದೆ. ಇತ್ತೀಚೆಗಿನ ಮುಳುಗಿಹೋದ ದ್ವಾರಕೆಯು ಶ್ರೀರಾಮನ ಕಥೆಯನ್ನು, ಅವನು ಜೀವಿಸಿ ಗತಿಸಿದ ಸಾಕ್ಷ್ಯಗಳನ್ನು ಒದಗಿಸುತ್ತದೆ.
ಪ್ರಶ್ನೆ: ಶ್ರೀ ರಾಮಜನ್ಮಭೂಮಿಯ ಅಸ್ತಿತ್ವಕ್ಕೆ ಸಾಕ್ಷಿ ಪುರಾವೆಗಳಿವೆಯೇ?
ರಾಮಾಯಣದಲ್ಲಿ ಉಲ್ಲೇಖಿಸಿರುವ ಹಲವು ಸ್ಥಳಗಳನ್ನು ಗುರುತಿಸಿ, ೧೯೭೫ರಿಂದ ೧೯೮೦ರ ವರೆಗೆಭಾರತೀಯ ಪುರಾತತ್ವ ಇಲಾಖೆಯ ವತಿಯಿಂದ ಪ್ರೊ ಬಿ ಬಿ ಲಾಲ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಉತ್ಖನನ ಕಾರ್ಯ ನಡೆಯಿತು. ಆ ಉತ್ಖನನದ ಬಳಿಕ ಅವರು ಸ್ಥಾಪಿಸಿದ್ದೇನೆಂದರೆ, ಕ್ರಿಸ್ತ ಪೂರ್ವ ೭ನೇ ಶತಮಾನದ ಹಿಂದೆಯೇ ಶ್ರೀ ರಾಮಜನ್ಮಭೂಮಿ ಇತ್ತೆಂದು. ಬಾಬ್ರಿ ಕಟ್ಟಡದ ಒಳಗೆ ಎರಡು ಗುಂಡಿಗಳನ್ನು ತೋಡಿದಾಗ ಕಂಬಗಳು ಕಂಡುಬಂದವು. ಬಾಬ್ರಿ ಮಸೀದಿಯನ್ನು ಕಟ್ಟಲು ಬಳಸಿದ್ದ ೧೪ ಕಸೌಟಿ ಕಲ್ಲಿನ ಕಂಬಗಳು, ಉತ್ಖನನದಲ್ಲಿ ಸಿಕ್ಕ ಕಂಬಗಳು ಒಂದೇ ರೀತಿಯದ್ದಾಗಿದ್ದವು. ೧೨ನೇ ಶತಮಾನದ ಹಿಂದೂ ದೇಗುಲಗಳಲ್ಲಿ ಕಂಡುಬರುವ ಕೆತ್ತನೆಗಳು ಈ ಕಂಬಗಳಲ್ಲಿದ್ದವು. ಅಲ್ಲದೇ ೧೫೨೮ರಲ್ಲಿ ಮಂದಿರ ಕೆಡವಿದಾಗಿನ ಕೆಲ ಕಲಾಕೃತಿಗಳು ಸಿಕ್ಕವು. ಅವುಗಳಲ್ಲಿ ಮುಖ್ಯವಾದುದು, ನಗಾರಿ ಲಿಪಿಯಲ್ಲಿ ಬರೆದ ೧.೧*೦.೫೬ ಮೀಟರ್ ದೊಡ್ಡದಾದ ಚಪ್ಪಡಿ ಹಾಗೂ ಅದರಲ್ಲಿನ ೨೦ ಸಾಲುಗಳ ಕೆತ್ತನೆ.
ಆ ಸಾಲುಗಳು ಹೇಳಿದ್ದ ಕಥೆಯೇ – ಅಲ್ಲೊಂದು ಸುಂದರವಾದ ಹರಿ – ಮಹಾವಿಷ್ಣುವಿನ ದೇವಾಲಯವಿತ್ತೆಂಬುದು.
ಪ್ರಶ್ನೆ: ೧೫೨೮ರಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರವನ್ನು ಕೆಡವಿದುದರ ಪುರಾವೆ ಇದೆಯೇ?
ಮುಸಲ್ಮಾನರ ಅಧಿಕೃತ ದಾಖಲೆಗಳೇ ಭವ್ಯ ಮಂದಿರವೊಂದನ್ನು ನೆಲಸಮ ಮಾಡಿದುದರ ಬಗ್ಗೆ ಪ್ರಸ್ತಾಪಿಸುತ್ತವೆ. ಭಾರತಕ್ಕೆ ಬ್ರಿಟಿಷರ ಬರುವಿಕೆಯ ಮುನ್ನ ಬಂದ ಯೂರೊಪಿನ ಪ್ರವಾಸಿಗರು ಮಂದಿರ ಕೆಡವಿದುದರ ಬಗ್ಗೆ ಪ್ರಸ್ತಾಪಿಸುತ್ತಾರೆ. ಪುರಾತತ್ವ ಇಲಾಖೆಯ ಅಧ್ಯಯನಗಳಿಂದಲೂ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಮೊದಲುಆ ಜಾಗದಲ್ಲಿ ಮಂದಿರವಿತ್ತು ಎಂಬುದಾಗಿಸಾಕ್ಷ್ಯಾಧಾರಗಳಿಂದ ನಿರೂಪಿಸಿವೆ. ಬ್ರಿಟಿಷರ ಕಾಲದ ಭೂ ಆದಾಯ ದಾಖಲೆಗಳು ಆ ಸ್ಥಳವನ್ನು ಜನ್ಮಸ್ಥಾನ ಎಂದೇ ಕರೆದಿವೆ. ೧೮೮೬ರ ಕೋರ್ಟ್ ತೀರ್ಪು ಬಾಬ್ರಿ ಮಸೀದಿ ನಿರ್ಮಾಣವಾದದ್ದು ಹಿಂದೂಗಳ ಪಾವನ ಕ್ಷೇತ್ರದಲ್ಲಿ ಎಂದು ಹೇಳಿದೆ.
ಪ್ರಶ್ನೆ: ಶ್ರೀ ರಾಮ ಮಂದಿರವನ್ನು ಧ್ವಂಸ ಮಾಡಿದ್ದು ಬಾಬರ್ ಎಂದು ಹೇಳುವುದಾದರೂ ಹೇಗೆ?
ಅನೆಟ್ ಸುಸಾನಾ ಬೆವೆರಿಜ್ ಪರ್ಷಿಯಾ ಭಾಷೆಯ ಬಾಬರ್ ನಾಮಾ ಕೃತಿಯನ್ನು ಆಂಗ್ಲಾಕ್ಕೆ ತಂದಿದ್ದಾರೆ. ಈ ಪುಸ್ತಕದಲ್ಲಿ ಶ್ರೀರಾಮ ಮಂದಿರವನ್ನು ಧ್ವಂಸ ಮಾಡಿದುದರ ಬಗ್ಗೆ ಉಲ್ಲೇಖವಿದೆ. ಆನೆಟ್ ಸುಸಾನಾ ಬೆವೆರಿಜ್ ಪ್ರಕಾರ ಬಾಬರನು ಆ ಸ್ಥಳದ ಘನತೆ, ಪಾವಿತ್ರ್ಯತೆಯನ್ನು ಕಂಡು ಮಾರು ಹೋಗಿದ್ದನು. ಪ್ರವಾದಿ ಮೊಹಮ್ಮದನ ನಿಷ್ಠಾವಂತ ಅನುಯಾಯಿಯಾದ ಬಾಬರ್ ದೇವಸ್ಥಾನವನ್ನು ಮಸೀದಿಯನ್ನಾಗಿ ಪರಿವರ್ತಿಸಬೇಕೆಂದು ನಿರ್ಧರಿಸಿ ಆ ಕಾರ್ಯಾಗೈದನು. ಮಂದಿರದ ನೆಲಸಮದ ಸಮಯದಲ್ಲಿ ಖುದ್ದು ನಿಂತು ಬಾಬರನು ನಿರ್ವಹಿಸಿದ ಎಂಬ ಬಗ್ಗೆ ತನ್ನ ದಿನಚರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಗೊಂಡಿದೆ. ಹಿಂದೂಗಳ ಜೊತೆ ಸೌಹಾರ್ದತೆ ಬೆಳೆಸುವ ಉದ್ದೇಶದಿಂದ ನಂತರದ ದಿನಗಳಲ್ಲಿ ಅಕ್ಬರನು ರಾಮ ಮಂದಿರದ ನೆಲಸಮವಾದ ೫೦ ವರ್ಷಗಳ ನಂತರ ಸೀತಾ ಕಿ ರಸೋಯಿ ಯನ್ನು, ರಾಮ ಛಬೂತರ್ ಅನ್ನು ಗರ್ಭಗೃಹದ ಸಮೀಪದಲ್ಲಿ ನಿರ್ಮಿಸಿದ. ೧೭೦೦ರಿಂದಲೂ ಈ ಜಾಗದಲ್ಲಿ ರಾಮ ನವಮಿ ನಡೆಯುತ್ತಾ ಬಂದಿರುವುದಕ್ಕೆ ಪುರಾವೆಗಳಿವೆ.
ಪ್ರಶ್ನೆ : ಶ್ರೀರಾಮ ಜನ್ಮಭೂಮಿಯನ್ನು ಮುಕ್ತಿಗೊಳಿಸಲು ಈವರೆಗೆ ಏಕೆ ಸಾಧ್ಯವಾಗಿಲ್ಲ?
ಹತ್ತಾರು ಸಾವಿರಾರು ಭಕ್ತರು ಶ್ರೀ ರಾಮಜನ್ಮಭೂಮಿಯ ಸಲುವಾಗಿ ತಮ್ಮ ಪ್ರಾಣಾರ್ಪಣೆಗೈದಿದ್ದಾರೆ. ರಾಮಜನ್ಮಭೂಮಿಯನ್ನು ಮುಕ್ತಿಗೊಳಿಸಲು ಮುಸಲ್ಮಾನ ಪ್ರಾಬಲ್ಯವಿರುವ ಈ ಪ್ರದೇಶದಲ್ಲಿ ಎಷ್ಟೋ ಹಿಂದೂ ರಾಜರುಗಳು ಹೊರಾಟ ನಡೆಸಿದ್ದಾರೆ. ೧೯೪೭ಕ್ಕೂ ಮುನ್ನ ೭೭ ಬಾರಿ ರಾಮಜನ್ಮಭೂಮಿಯನ್ನು ಮುಕ್ತಗೊಳಿಸುವ ಸಲುವಾಗಿ ಮುಸಲ್ಮಾನರ ವಿರುದ್ಧ ಹಿಂದೂಗಳು ಹೋರಾಟ ಮಾಡಿದ್ದಾರೆ.
ಪ್ರಶ್ನೆ : ಬ್ರಿಟಿಷರ ಆಳ್ವಿಕೆಯಲ್ಲಿ ಶ್ರೀ ರಾಮಜನ್ಮ ಭೂಮಿಯನ್ನು ಮುಕ್ತಗೊಳಿಸಲು ಯಾವುದಾದರೂ ಪ್ರಯತ್ನ ನದೆದಿದೆಯೇ?
೧೮೮೫ರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೂಲಕ ಹಿಂದೂಗಳು ಈ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಲು ಮುಂದಾಗಿದ್ದರು. ೧೮೮೬ರಲ್ಲಿ ಹೊರಬಂದ ತೀರ್ಪಿನ ಮುಖ್ಯಾಂಶ ಹೀಗಿದೆ. “ಹಿಂದೂಗಳಿಗೆ ಶ್ರದ್ಧೆಯ ಪ್ರದೇಶವಾಗಿರುವ, ಅವರಿಗೆ ಸೇರಿರುವ ಈ ಸ್ಥಳದಲ್ಲಿ ಮಸೀದಿ ನಿರ್ಮಿಸಿರುವುದು ದುರದೃಷ್ಟಕರ. ಆದರೆ ಈ ಘಟನೆ ನಡೆದಿರುವುದು ೩೫೬ ವರ್ಷಗಳ ಹಿಂದೆ. ಈಗ ಪರಿಹಾರ ಹುಡುಕುವುದು ಸರಿಯಾಗುವುದಿಲ್ಲ. ಯಥಾಸ್ಥಿತಿ ಕಾಪಾಡುವುದೇ ಇಲ್ಲಿ ಮುಖ್ಯ. ಹೊಸತನ್ನು ಇಲ್ಲಿ ತರಲು ಬಯಸುದರೆ, ಅದರಿಂದ ಅನಾನುಕೂಲಗಳೇ ಹೆಚ್ಚು.”
ಪ್ರಶ್ನೆ: ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳೇನು?
ಶ್ರೀರಾಮನ ವಿಗ್ರಹಗಳು ೧೯೪೯ರಲ್ಲಿ ಬಾಬ್ರಿ ಮಸೀದಿಯಲ್ಲಿ ಕಂಡ ಬಳಿಕ ನ್ಯಾಯಾಲಯಗಳು ಹಿಂದೂಗಳಿಗೆ ಅಲ್ಲಿ ಪೂಜೆಯನ್ನು ಮಾಡುವ ಅಧಿಕಾರ ನೀಡಿತು. ಅಲ್ಲದೆ ವಿಗ್ರಹಗಳನ್ನು ತೆರವುಗೊಳಿಸುವುದನ್ನು ನಿರಾಕರಿಸಿ, ವಿಗ್ರಹಗಳಿರುವ ೨೦೦ ಅಡಿಗಳ ಸುತ್ತಲಿನಲ್ಲಿ ಮುಸಲ್ಮಾನರಿಗೆ ನಿಷೇಧ ಹೇರಿತು. ೧೯೮೬ರ ತೀರ್ಪಿನ ಅನ್ವಯ ಶ್ರೀ ರಾಮಜನ್ಮಭೂಮಿಯಲ್ಲಿ ರಾಮ ಲಲ್ಲಾನನ್ನು ಪೂಜಿಸಲು ಕೋರ್ಟ್ ಅನುಮತಿ ನೀಡಿತು. ಈ ಸಮಸ್ಯೆಯನ್ನು ಬಗೆಹರಿಸಲು ಈ ವರೆಗೆ ಭಾರತದ ಮೂರು ಪ್ರಧಾನಿಗಳಾದ ಶ್ರೀ ವಿ ಪಿ ಸಿಂಗ್, ಶ್ರೀ ಚಂದ್ರಶೇಖರ್, ಶ್ರೀ ನರಸಿಂಹ ರಾವ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಶ್ರೀ ಚಂದ್ರಶೇಕರ ಅವರು ಪ್ರಧಾನಿಯಾಗಿದ್ದಾಗಿನ ಸಮಯದಲ್ಲಿ ಸಮಸ್ಯೆಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಪ್ರಶ್ನೆ : ಶ್ರೀ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ಕೋಮು ಗಲಭೆ ಸೃಷ್ಟಿಯಾಗಬಹುದೇ?
ಶ್ರೀ ರಾಮಜನ್ಮಭೂಮಿ ಆಂದೋಲನಕ್ಕೂ ಮುನ್ನವೇ ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಹಲವಾರು ದೇವಸ್ಥಾನಗಳನ್ನು ಒಡೆದುಹಾಕಲಾಗಿದೆ. ‘ಲಜ್ಜಾ’ ಎಂಬ ಕಾದಂಬರಿಯಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ವಿವರಿಸಲಾಗಿದೆ. ೧೯೮೬ರಲ್ಲಿ ಕಾಶ್ಮೀರದಲ್ಲಿ ಹಿಂದೂ ಮಂದಿರಗಳನ್ನು ಒಡೆದುಹಾಕಿದ ನಿದರ್ಶನಗಳಿವೆ.
ಶ್ರೀ ರಾಮಜನ್ಮಭೂಮಿಯಲ್ಲಿ ಹಿಂದೂಗಳಿಗೆ ಕಾನೂನುಬದ್ಧವಾದ ಹಕ್ಕುಗಳಿರುವುದು ಸ್ಪಷ್ಟ. ಹಿಂದೂಗಳು ಈ ಸಮಸ್ಯೆಯನ್ನು ಬಗೆಹರಿಸಲು ಹಲವಾರು ಸಮಾಲೋಚನೆ, ಮಾತುಕತೆಗಳಿಗೆ ಆಹ್ವಾನಿಸಿದೆ. ಆದರೆ ಸಮಯ ವ್ಯರ್ಥವಲ್ಲದೆ ಈ ನಿಟ್ಟಿನಲ್ಲಿ ಬೇರೇನೂ ನಡೆದಿಲ್ಲ.
ಪ್ರಶ್ನೆ: ಶ್ರೀರಮಜನ್ಮಭೂಮಿ, ಸೋಮನಾಥ ದೇವಾಲಯಗಳ ಸಂಗತಿಗಳಲ್ಲಿ ಸಾಮ್ಯತೆ ಇದೆಯೇ?
ಈ ಎರಡೂ ಪುಣ್ಯ ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿ ಮಂದಿರಗಳನ್ನು ಒಡೆಯಲಾಗಿತ್ತು. ಹಿಂದೂಗಳಿಗೆ ಇವು ಶ್ರದ್ಧೆಯ ಕೇಂದ್ರವಾಗಿದ್ದರಿಂದ, ಶಾಂತಿಯುತವಾಗಿ ಆ ಭೂಮಿಯನ್ನು ಮರುಪಡೆದುಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡಿತು.
ರಾಮಜನ್ಮಭೂಮಿಯಲ್ಲಿ ಬಾಬ್ರಿ ಮಸೀದಿಯಂತಲ್ಲದೆ ಸೋಮನಾಥ ದೇವಸ್ಥಾನದ ಆವರಣದಲ್ಲಿ ಚಿಕ್ಕ ಮಸೀದಿಯನ್ನು ನಿರ್ಮಿಸಲಾಗಿತ್ತು.
ಪ್ರಶ್ನೆ: ಬಾಬ್ರಿ ಮಸೀದಿಯನ್ನು ಮುಸಲ್ಮಾನರು ಶ್ರದ್ಧಾ ಕೇಂದ್ರವಾಗಿ ಬಳಸುತ್ತಿದ್ದರೆ?
ಶ್ರೀ ರಾಮಜನ್ಮಭೂಮಿ ಸ್ಥಳದಲ್ಲಿ ಮುಸಲ್ಮಾನರು ೧೯೩೦ರ ನಂತರ ನಮಾಜ್ ನಿಲ್ಲಿಸಿಬಿಟ್ಟರು. ೧೬ನೇ ಶತಮಾನದಿಂದಲೂ ಸೀತಾ ಕಿ ರಸೋಯಿ, ರಾಮ ಚಬೂತರ್ ಗಳಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದರು. ೧೯೪೯ರಿಂದ ರಾಮ ಲಲ್ಲಾನ ಪೂಜೆಯನ್ನೂ ಹಿಂದೂಗಳು ಮಾಡುತ್ತಿದ್ದಾರೆ. ಈ ಪೂಜೆಗೆ ನ್ಯಾಯಾಲಯದ ಅನುಮತಿಯೂ ಇತ್ತು. ಪ್ರಸ್ತುತ ಉದ್ದೇಶವಿರುವುದು ಶ್ರೀರಾಮನ ವೈಭವವನ್ನು ಮೆರೆಯುವ ಆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಸಲುವಾಗಿ.