ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ : ಗೋವಂಶ ರಕ್ಷಣೆ ಮತ್ತು ಗ್ರಾಮಾಭಿವೃದ್ಧಿಯ ಸಾರ್ಥಕ ಪ್ರಯತ್ನ
(ನಿರ್ಣಯ-೧)
ಪೂಜ್ಯ ಸಾಧು-ಸಂತರು ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅ. ಭಾ. ಪ್ರತಿನಿ ಸಭೆಯು ದೇಶಾದ್ಯಂತದ ಎಲ್ಲ ಸಾಧು-ಸಂತರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಅಲ್ಲದೆ ಈ ಯಾತ್ರೆಗೆ ದೊರಕಿದ ಅಪೂರ್ವ ಜನ-ಸಹಕಾರಕ್ಕಾಗಿ ದೇಶದ ಜನತೆ ಹಾಗೂ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳನ್ನು ಹಾರ್ದಿಕವಾಗಿ ಅಭಿನಂದಿಸುತ್ತದೆ. ಅಭಿವೃದ್ಧಿಯ ಇಂದಿನ ಪರಿಕಲ್ಪನೆಯಿಂದ ಪರ್ಯಾವರಣಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಇಂದು ಇಡೀ ಜಗತ್ತು ಗಂಭೀರವಾಗಿ ಚಿಂತಿಸುತ್ತಿರುವಾಗ, ಈ ಯಾತ್ರೆಯು ಪ್ರಕೃತಿಗೆ ಅನುಕೂಲವಾದ ಮತ್ತು ಗೋವಂಶ ಮತ್ತು ಗ್ರಾಮ ಕೇಂದ್ರಿತ ಅಭಿವೃದ್ಧಿಯ ಪರ್ಯಾಯ ಕಾರ್ಯ ಯೋಜನೆಯನ್ನು ಜಾರಿಗೊಳಿಸುವ ಅವಶ್ಯಕತೆಗೆ ಪುನಃ ಒತ್ತು ನೀಡಿದೆ.
೨೮ ಸೆಪ್ಟೆಂಬರ್ ೨೦೦೯ ರಿಂದ ೧೭ ಜನವರಿ ೨೦೧೦ ರ ನಡುವೆ ಆಯೋಜಿಸಿದ್ದ ಈ ಯಾತ್ರೆಯ ಮುಖ್ಯ ಮತ್ತು ಉಪಯಾತ್ರೆಗಳಿಗೆ ಒಳಪಟ್ಟು ದೇಶದ ೪. ೧೧ ಲಕ್ಷ ಗ್ರಾಮಗಳನ್ನು ಸಂಪರ್ಕಿಸಲಾಗಿದೆ. ಒಟ್ಟು ೨. ೩೪ ಲಕ್ಷ ಸ್ಥಳಗಳಲ್ಲಿ ನಡೆದ ಸಭೆಗಳಲ್ಲಿ ಸುಮಾರು ಒಂದೂವರೆ ಕೋಟಿ ಜನ ಭಾಗವಹಿಸಿದ್ದಾರೆ. ಗೋವಂಶ ರಕ್ಷಣೆಯ ಬೇಡಿಕೆಯನ್ನು ಬೆಂಬಲಿಸಿ ಸುಮಾರು ಎಂಟೂವರೆ ಕೋಟಿ ಜನ ಸಹಿ ಮಾಡಿದ್ದು, ಅದರಲ್ಲಿ ಎಲ್ಲ ಮತ-ಪಂಥಗಳಿಗೆ ಸೇರಿದ ಜನರ ಸಹಿತ ಭಾರೀ ಸಂಖ್ಯೆಯಲ್ಲಿ ವಿವಿಧ ಪಕ್ಷಗಳ ಸಾಂಸದರು ಮತ್ತು ಶಾಸಕರೂ ಇದ್ದಾರೆ. ಗೋವಂಶ ರಕ್ಷಣೆಯ ಪರವಾಗಿ ಅದೆಷ್ಟು ವ್ಯಾಪಕ ಜನಬೆಂಬಲವಿದೆ ಎಂಬುದು ಈ ವಿಶಾಲ ಸಹಿಸಂಗ್ರಹ ಅಭಿಯಾನದಿಂದ ನಿಚ್ಚಳವಾಗಿದೆ ಎಂದು ಪ್ರತಿನಿ ಸಭೆ ಭಾವಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಗೋವಂಶ ರಕ್ಷಣೆ ಮತ್ತು ಗೋ-ಕೇಂದ್ರಿತ ಗ್ರಾಮಾಭಿವೃದ್ಧಿಯ ವ್ಯಾಪಕ ಕಾರ್ಯಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವುಗಳ ಹೊಣೆಗಾರಿಕೆಯನ್ನು ಒತ್ತಿ ಹೇಳುತ್ತದೆ.
ರಾಸಾಯನಿಕ ಕೃಷಿಯಿಂದ ಲಾಭವಿಲ್ಲದಿರುವುದು, ಆರೋಗ್ಯಕ್ಕೆ ಹಾನಿ ಹಾಗೂ ಅದರಿಂದ ಭೂಮಿ ಬಂಜರಾಗುತ್ತಿರುವುದು, ಗ್ರಾಮಗಳಲ್ಲಿ ಶಿಕ್ಷಣ-ಚಿಕಿತ್ಸೆಗಳಂತಹ ಜೀವನದ ಮೂಲ ಸೌಕರ್ಯಗಳ ಅಭಾವ ಮತ್ತು ನೀರಾವರಿಗೆ ನೀರಿನ ಕೊರತೆ ಇತ್ಯಾದಿ ಕಾರಣಗಳಿಂದ ಗ್ರಾಮಗಳಿಂದ ವಲಸೆಯ ದೃಷ್ಟಿಯಿಂದ ಗ್ರಾಮಾಭಿವೃದ್ಧಿಗೆ ಮೊದಲ ಆದ್ಯತೆಯಿರಬೇಕಾಗುತ್ತದೆ. ಇದಕ್ಕಾಗಿ ಸರಕಾರಗಳು ಗ್ರಾಮಗಳಲ್ಲಿ ಉಚ್ಚ ಗುಣಮಟ್ಟದ ಶಿಕ್ಷಣ, ಚಿಕಿತ್ಸೆ, ಸಾರಿಗೆ ಇತ್ಯಾದಿ ಸೌಕರ್ಯಗಳ ವಿಸ್ತರಣೆ ಹಾಗೂ ಗುಡಿಕೈಗಾರಿಕೆ, ಸಣ್ಣ ಉದ್ದಿಮೆ ಮತ್ತು ಗ್ರಾಮೋದ್ಯೋಗಗಳ ಮೂಲಕ ಉದ್ಯೋಗಗಳ ಅವಕಾಶಗಳನ್ನು ಅಭಿವೃದ್ಧಿಗೊಳಿಸಬೇಕು. ಸಮತೋಲದ ಬೆಳೆ ಚಕ್ರ, ಜೈವಿಕ, ಪ್ರಾಕೃತಿಕ ಮತ್ತು ಪರ್ಯಾವರಣ ಪೋಷಕವಾದ ಕೃಷಿ, ಪಾರಂಪರಿಕ ಜಲ ಸ್ರೋತಗಳು ಮತ್ತು ನವೀಕರಿಸಬಲ್ಲ ಇಂಧನ ಸ್ರೋತಗಳ ಅಭಿವೃದ್ದಿಯ ಮೂಲಕವೇ ಸ್ವಾವಲಂಬಿ ಗ್ರಾಮ ವ್ಯವಸ್ಥೆಯಿಂದ ಆರ್ಥಿಕ ಮತ್ತು ಪರ್ಯಾವರಣದ ವಿಪತ್ತುಗಳ ಸಂಪೂರ್ಣ ಪರಿಹಾರ ಸಾಧ್ಯವಿದೆ. ಇದಕ್ಕಾಗಿ ಗ್ರಾಮಗಳ ಭೂ-ಸಂಪತ್ತು, ಜಲಸಂಪತ್ತು, ಗೋ ಸಂಪತ್ತು ಮತ್ತಿತರ ಜೀವ ಸಂಪತ್ತಿನ ರಕ್ಷಣೆ ಮತ್ತು ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ದೇಶವು ಖಾದ್ಯ ವಸ್ತುಗಳ ವಿಷಯದಲ್ಲಿ ಸ್ವಾವಲಂಬಿಯಾಗಿರಲು ಕೃಷಿಭೂಮಿಯ ವಿಸ್ತೀರ್ಣ ಕಡಿಮೆಯಾಗದಿರುವು ದನ್ನು ಖಚಿತಪಡಿಸಿಕೊಳ್ಳಬೇಕು. ಪಂಚಗವ್ಯದಿಂದ ನಿತ್ಯದ ಬಳಕೆಗೆ ವಿವಿಧ ಉತ್ಪಾದನೆಗಳು ಮತ್ತು ಔಷಗಳನ್ನು ತಯಾರಿಸುವುದರಿಂದ ಗ್ರಾಮೀಣ ಜನರ ಆದಾಯ ವೃದ್ಧಿಸಬಹುದು. ಇದೇ ರೀತಿ ಸೆಗಣಿ ಅನಿಲ ಮತ್ತು ಎತ್ತು-ಚಾಲಿತ ಇಂಧನ ಉತ್ಪಾದನಾ ಸಂಯಂತ್ರಗಳಿಂದ ಇಂಧನ ಅವಶ್ಯಕತೆಗಳು ಪೂರೈಸಬಲ್ಲವು . ಗೋಕೇಂದ್ರಿತ ಗ್ರಾಮಾಭಿವೃದ್ಧಿಯಿಂದ ಗ್ರಾಮಗಳನ್ನು ಸಮೃದ್ಧಿಯ ಕಡೆ ಒಯ್ಯಬಹುದಾಗಿದೆ. ಆದ್ದರಿಂದ ಈ ಸಂಪೂರ್ಣ ಗೋ ಆಧಾರಿತ ವಿಜ್ಞಾನ ಮತ್ತು ಉದ್ದಿಮೆಗಳ ಸಂಶೋಧನೆಯ ವ್ಯಾಪಕ ಪ್ರಸಾರ ಹಾಗೂ ಪಠ್ಯಕ್ರಮದಲ್ಲಿ ಸೇರ್ಪಡೆ ಆಗಬೇಕಾಗಿದೆ.
ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಕಾರ್ಯಕರ್ತರು ಮತ್ತು ವಿಜ್ಞಾನಿಗಳು ಈ ನಿಟ್ಟಿನಲ್ಲಿ ಉಲ್ಲೇಖನೀಯ ಕಾರ್ಯ ಮಾಡಿದ್ದು, ಅದರಿಂದಾಗಿ ಗೋಶಾಲೆಗಳ ಪಾರಂಪರಿಕ ಉತ್ಪಾದನೆಗಳೊಂದಿಗೇ ಪಂಚಗವ್ಯ ಆಧಾರಿತ ವಿವಿಧ ನೂತನ ಉತ್ಪಾದನೆಗಳು ಮತ್ತು ಉಪಕರಣಗಳ ಅಭಿವೃದ್ಧಿಗೂ ಯತ್ನಿಸಲಾಗುತ್ತಿದೆ. ಭಾರತೀಯ ಮೂಲದ ಗೋವಂಶದ ಅದ್ಭುತ ಗುಣಗಳ ದೃಷ್ಟಿಯಿಂದ ಅದರ ರಕ್ಷಣೆ, ಅಭಿವೃದ್ಧಿ ಮತ್ತು ತಳಿ ಸುಧಾರಣೆಯ ಪ್ರಯತ್ನವು ಬಹು ಲಾಭಕರವಾಗಿದೆ ಎಂಬುದೂ ಇವೆಲ್ಲ ಪ್ರಯತ್ನಗಳಿಂದ ವಿಶದಗೊಳ್ಳುತ್ತದೆ. ಇವೆಲ್ಲ ಪ್ರಯತ್ನಗಳನ್ನು ಅಕ ಸುವ್ಯವಸ್ಥಿತ ಮತ್ತು ಸಂಘಟಿತಗೊಳಿಸುವ ಅವಶ್ಯಕತೆಯಿದೆ ಎಂಬುದು ಪ್ರತಿನಿ ಸಭೆಯ ಅಭಿಪ್ರಾಯ. ಕೆಲವು ಪ್ರಾಂತಗಳಲ್ಲಿ ಜೈವಿಕ ಕೃಷಿಯ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಆರಂಭಿಕ ಪ್ರಯತ್ನಗಳನ್ನು ಮತ್ತಷ್ಟು ವ್ಯಾಪಕಗೊಳಿಸಬೇಕು. ಗೋಶಾಲೆಗಳಿಗೆ ಪ್ರತಿ ಗೋವು , ಪ್ರತಿದಿನದ ದರದಲ್ಲಿ ನೀಡಬೇಕಾದ ಅನುದಾನದ ಕುರಿತು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ತೀರ್ಪು ಸಹ ಎಲ್ಲ ರಾಜ್ಯಗಳಿಗೆ ಗೋವಂಶ ರಕ್ಷಣೆಯ ನಿಟ್ಟಿನಲ್ಲಿ ಒಂದು ಅನುಸರಣೀಯ ಕ್ರಮವಾದೀತು.
ನಮ್ಮ ಸಂವಿಧಾನದ ನೀತಿ ನಿರ್ದೇಶಕ ತತ್ತ್ವಗಳಲ್ಲಿ ಗೋಹತ್ಯೆಯನ್ನು ತಡೆಗಟ್ಟುವ ನಿರ್ದೇಶದೊಂದಿಗೇ ಪರ್ಯಾವರಣ, ಜಲಸ್ರೋಪಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ಸಂವರ್ಧನೆಯನ್ನು ಸರಕಾರ ಮತ್ತು ಜನರ ಕರ್ತವ್ಯವೆಂದು ತಿಳಿಸಿ, ಪ್ರಾಣಿ ಸಂಕುಲದ ಬಗ್ಗೆ ಕರುಣೆಯ ನಿರ್ದೇಶ ನೀಡಲಾಗಿದೆ. ಗುಜರಾತ್ ಸರಕಾರವು ಸಂಪೂರ್ಣ ಗೋವಂಶ ಹತ್ಯೆಯನ್ನು ನಿಷೇಸಲು ಮಾಡಿದ್ದ ಕಾನೂನನ್ನು ಸರ್ವೋಚ್ಚ ನ್ಯಾಯಾಲಯದ ಏಳು ಸದಸ್ಯರ ಪೀಠವು ತನ್ನ ೨೦೦೫ರ ಐತಿಹಾಸಿಕ ತೀರ್ಪಿನಿಂದ ಸಮರ್ಥಿಸಿ ಈ ನೀತಿ ನಿರ್ದೇಶಕ ತತ್ವವನ್ನು ಬಲಗೊಳಿಸಿದೆ. ಇಂದು ಗೋವಂಶ ರಕ್ಷಣೆಯ ಕಾನೂನಿರುವ ರಾಜ್ಯಗಳು ಅವುಗಳನ್ನು ಮತ್ತಷ್ಟು ಪ್ರಭಾವಿಗೊಳಿಸಿ ಅವುಗಳನ್ನು ಬಿಗುವಾಗಿ ಜಾರಿಗೊಳಿಸಬೇಕು. ಕರ್ನಾಟಕ ಸರಕಾರವು ಇತ್ತೀಚೆಗೆ ಮಂಡಿಸಿದ ಗೋರಕ್ಷಣೆ ಕುರಿತ ವಿಧೇಯಕವು ಎಲ್ಲ ರಾಜ್ಯಗಳಿಗೆ ಅನುಸರಣೀಯ ಪ್ರಾರೂಪವೆನಿಸಿದೆ. ಕೇಂದ್ರ ಸರಕಾರವೂ ಗೋವಂಶದ ಮಾಂಸ-ರಫ್ತಿಗೆ ನೀಡುತ್ತಿರುವ ಅನುದಾನವನ್ನು ಕೊನೆಗೊಳಿಸಿ ಅದರ ರಫ್ತು ಮತ್ತು ಗೋಹತ್ಯೆಯ ಮೇಲೆ ಪೂರ್ಣ ಪ್ರತಿಬಂಧ ವಿಸಬೇಕು.
ಸಂವಿಧಾನದ ನೀತಿ ನಿರ್ದೇಶಕ ತತ್ವಗಳು, ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ವಿಶ್ವ ಮಂಗಲ ಗೋಗ್ರಾಮ ಯಾತ್ರೆಯಿಂದಾದ ಜನ ಭಾವನೆಗಳ ಪ್ರಬಲ ಪ್ರಕಟೀಕರಣದ ಬಳಿಕವೂ , ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದರೆ, ಇದು ಪ್ರಜಾತಂತ್ರ ಮತ್ತು ಸಂವಿಧಾನದ ಭಾವನೆಗಳ ಅಕ್ಷಮ್ಯ ಅವಹೇಳನೆಯಾದೀತು ಎಂಬುದು ಅ. ಭಾ. ಪ್ರತಿನಿ ಸಭೆಯ ಸ್ಪಷ್ಟ ಅಭಿಪ್ರಾಯ. ಪ್ರತಿನಿ ಸಭೆಯು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳಿಗೆ ಕೆಳಕಂಡಂತೆ ಆಗ್ರಹಿಸುತ್ತದೆ-
೧. ಸಂಪೂರ್ಣ ಗೋವಂಶ ಹತ್ಯೆ ನಿಷೇಧ ಕಾನೂನಿನ ವಿಧೇಯಕವನ್ನು ರಚಿಸಿ, ಅದರ ಪ್ರಭಾವೀ ಜಾರಿಯ ಬಗ್ಗೆ ಗಮನಿಸಿ ನೆರೆದೇಶಗಳಿಗೂ ಆಗುತ್ತಿರುವ ಗೋವಂಶದ ರಫ್ತು ಮತ್ತು ಕಳ್ಳಸಾಗಣೆಯನ್ನು ತಡೆಗಟ್ಟಲು ಪ್ರಭಾವೀ ಕ್ರಮಗಳನ್ನು ಕೈಗೊಳ್ಳಬೇಕು.
೨. ಭಾರತೀಯ ತಳಿಯ ಗೋವಂಶವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿ, ಅದರ ತಳಿ ಶುದ್ಧತೆಯನ್ನು ಕಾಪಾಡಲು ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು.
೩. ಗೋಶಾಲೆಗಳು, ದೇಶೀ ಗೋವಂಶ, ಗೋಚರ ಭೂಮಿ, ಸೆಗಣಿ ಅನಿಲ ಜನಿತ ಮತ್ತು ಎತ್ತು-ಚಾಲಿತ ಇಂಧನ ಉತ್ಪಾದನೆ, ಜೈವಿಕ ಮತ್ತು ಪ್ರಾಕೃತಿಕ ಕೃಷಿ ಮತ್ತು ಪಂಚಗವ್ಯ ಚಿಕಿತ್ಸೆಯಂತಹ ಗೋ-ಸಂವರ್ಧನೆಯ ವಿವಿಧ ಆಯಾಮಗಳ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಬೇಕು.
೪. ದೇಶದ ಗ್ರಾಮಗಳು ಸ್ವಾವಲಂಬಿ ಮತ್ತು ಸಮೃದ್ಧಗೊಳ್ಳಲು ಅಲ್ಲಿ ಶಿಕ್ಷಣ, ಚಿಕಿತ್ಸೆ, ಸಾರಿಗೆ ಇತ್ಯಾದಿ ಸಾಕಷ್ಟು ಸೌಕರ್ಯಗಳನ್ನು ದೊರಕಿಸಬೇಕು ಹಾಗೂ ಭೂ ಮತ್ತು ಜಲಸಂರಕ್ಷಣೆಯ ಎಲ್ಲ ಉಪಾಯಗಳ ಸಹಿತ ಗ್ರಾಮೋದ್ಯೋಗಗಳು ಮತ್ತು ಇಂಧನದ ನವೀಕರಿಸಬಲ್ಲ ಸಂಪನ್ಮೂಲಗಳನ್ನು ಪ್ರಚಾರಗೊಳಿಸಲು ಮತ್ತು ಅಭಿವೃದ್ಧಿ ಗೊಳಿಸಲು ಪ್ರಯತ್ನಿಸಬೇಕು.
ಗ್ರಾಮಾಭಿವೃದ್ಧಿ ಮತ್ತು ಗೋವಂಶದ ರಕ್ಷಣೆಗಾಗಿ ಈ ಯಾತ್ರೆಯಲ್ಲಿ ನೀಡಲಾಗಿರುವ ‘ನಡೆಯೋಣ ಗ್ರಾಮಗಳ ಕಡೆಗೆ, ನಡೆಯೋಣ ಗೋವಿನ ಕಡೆಗೆ ಮತ್ತು ನಡೆಯೋಣ ಪ್ರಕೃತಿಯ ಕಡೆಗೆ’ ಎಂಬ ಸಂದೇಶವನ್ನು ಸಕ್ರಿಯವಾಗಿ ಕಾರ್ಯರೂಪಕ್ಕೆ ತಂದು ಸಾರ್ಥಕಗೊಳಿಸಬೇಕೆಂದು ಅ. ಭಾ. ಪ್ರತಿನಿ ಸಭೆಯು ಸಮಸ್ತ ದೇಶವಾಸಿಗಳು ಮತ್ತು ವಿಶೇಷವಾಗಿ ಸ್ವಯಂಸೇವಕರಿಗೆ ಕರೆ ನೀಡುತ್ತದೆ.
ಜಮ್ಮೂ-ಕಾಶ್ಮೀರ : ಶಾಶ್ವತ ಪರಿಹಾರಕ್ಕಾಗಿ ರಾಷ್ಟ್ರೀಯ ಸರ್ವಾನುಮತವನ್ನು ಗೌರವಿಸಬೇಕು
(ನಿರ್ಣಯ-೨ )
ಕಳೆದ ಕೆಲವು ವರ್ಷಗಳಿಂದ ಜಮ್ಮೂ-ಕಾಶ್ಮೀರ ರಾಜ್ಯದ ಪರಿಸ್ಥಿತಿಯು ದಿಕ್ಕೆಟ್ಟು ಹೋಗುತ್ತಿರುವುದರ ಬಗ್ಗೆ ಅ. ಭಾ. ಪ್ರತಿನಿ ಸಭೆಯು ಕಳವಳ ವ್ಯಕ್ತಪಡಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಂಡಿರುವ ಕ್ರಮಗಳು ಅದನ್ನು ಮತ್ತಷ್ಟು ಸ್ವಾಯತ್ತತೆ ಮತ್ತು ಪ್ರತ್ಯೇಕತಾವಾದದ ಕಡೆ ತಳ್ಳುತ್ತಿವೆ.
ಅ. ಭಾ. ಪ್ರ. ಸಭೆಯು ಜಮ್ಮೂ-ಕಾಶ್ಮೀರ ಸರಕಾರದ ಪ್ರಜಾತಂತ್ರವಿರೋ, ಪರಿಶಿಷ್ಟ ಜಾತಿ ವಿರೋ, ಮಾನವಾಕಾರ ವಿರೋ ಮಹಿಳಾ ವಿರೋ ಮತ್ತು ಪ್ರತ್ಯೇಕತಾವಾದ ಬೆಂಬಲಿಸುವ ಮಾನಸಿಕತೆಯನ್ನು ಬಲವಾಗಿ ಖಂಡಿಸುತ್ತದೆ. ಸರಕಾರವು ವಿಧಾನಸಭೆಯಂತಹ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ನಿರ್ಲಜ್ಜವಾಗಿ ದುರುಪಯೋಗಿಸುತ್ತ ಕೆಲವು ರಾಜಕೀಯ ಪಕ್ಷಗಳ ಜೊತೆಗೂಡಿ ರಾಜ್ಯದ ರಾಷ್ಟ್ರಭಕ್ತ ಜನತೆಯ ಬಗ್ಗೆ ದ್ವೇಷದ ರಾಜಕಾರಣ ನಡೆಸುತ್ತಿರುವುದು ಒಂದು ವಿಡಂಬನೆಯಾಗಿದೆ. ಕಾಶ್ಮೀರಿ ಪಂಡಿತರ ಸುರಕ್ಷಿತ, ಗೌರವಯುತ ಹಾಗೂ ಘನತೆಯಿಂದ ಹಿಂತಿರುಗುವ ಯಾವ ಸಾಧ್ಯತೆಯೂ ಕಾಣದಿರುವುದರಿಂದ ಅವರ ವೇದನೆಗಳಿಗೆ ಕೊನೆಯೇನೂ ತೋರುತ್ತಿಲ್ಲ,. ಪಶ್ಚಿಮ ಪಾಕಿಸ್ತಾನದಿಂದ ಬಂದಿರುವ ಎರಡು ಲಕ್ಷ ನಿರ್ವಸಿತರು, ಛಂಬ್‌ನಿಂದ ನಿರ್ವಸಿತರಾದ ಒಂದು ಲಕ್ಷ ಜನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದಿರುವ ಎಂಟು ಲಕ್ಷ ನಿರ್ವಸಿತರು ಇಂದಿಗೂ ದಶಕಗಳ ನಿರ್ಲಕ್ಷ್ಯ ಮತ್ತು ಮೂಲಭೂತ ಅಕಾರಗಳಿಂದ ವಂಚಿತರಾಗಿ ಯಾತನೆಪಡುತ್ತಿದ್ದಾರೆ.
ರಾಜ್ಯದ ಪರಿಶಿಷ್ಟ ಜಾತಿಯ ಹಿಂದುಗಳು ದೀರ್ಘ ಕಾನೂನು ಸಂಘರ್ಷದ ಬಳಿಕವೇ ಮೀಸಲಾತಿಯ ಅಕಾರ ಗಳಿಸಿದ್ದಾರೆ. ಈಗ ರಾಜ್ಯ ಸರಕಾರವು ಅವರ ಈ ಕಾನೂನುಪ್ರಾಪ್ತ ಅಕಾರಗಳನ್ನು ಹಿಂದಿನ ಬಾಗಿಲಿನಿಂದ ಕಸಿದುಕೊಳ್ಳಲು ಕಾನೂನು ರಚಿಸುತ್ತಿದ್ದು, ಅದರಿಂದಾಗಿ ಜಮ್ಮೂಕ್ಷೇತ್ರದ ಪರಿಶಿಷ್ಟ ಜಾತಿಗಳವರು ಕಣಿವೆಯ ಮೀಸಲಾತಿಯಿಂದ ಲಾಭ ಪಡೆಯಲು ಸಾಧ್ಯವಾಗದು.
ರಾಜಕೀಯ ಪ್ರಭುತ್ವವು ಪ್ರತ್ಯೇಕತಾವಾದಿ ಶಕ್ತಿಗಳನ್ನು ಪ್ರೋತ್ಸಾಹಿಸಲು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ದುರುಪಯೋಗಿಸುತ್ತಿದೆ. ಅದು ೨೦ ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಹೋಗಿದ್ದ ಭಯೋತ್ಪಾದಕರನ್ನು ಪುನರ್ವಾಸದ ನಿರ್ಣಯದೊಂದಿಗೆ ಮರಳಿ ತರುವಂತಹ ‘ಶರಣಾಗತಿ ಧೋರಣೆ’ಯ ಮಾತನ್ನಾಡುತ್ತಿದೆ. ಆ ಮೃತಪ್ರಾಯವಾದ ವಿಧೇಯಕವನ್ನು -ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ (ಡಿಸ್‌ಕ್ವಾಲಿಪಿಕೇಶನ್) ಬಿಲ್- ಪುನರ್ಜೀವಿತ ಗೊಳಿಸುವ ಮಾತನ್ನಾಡುತ್ತಿದ್ದು, ಅದರ ಪ್ರಕಾರ ಉಳಿದ ಭಾರತದ ಯಾವೊಬ್ಬ ವ್ಯಕ್ತಿಯನ್ನೂ ವಿವಾಹವಾಗುವ ಮಹಿಳೆಯರ ನಾಗರಿಕತ್ವವನ್ನು ಕೊನೆಗೊಳಿಸಲಾಗುವುದು. ಇಂತಹ ಕ್ರಮವು ಕೇವಲ ಮಹಿಳೆಯರ ಮೂಲ ಅಕಾರಗಳ ವಿರುದ್ಧವಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಾನ್ಯತೆಗಳ (ಇಟ್ಞqಛ್ಞಿಠಿಜಿಟ್ಞo) ಉಲ್ಲಂಘನೆಯೂ ಆಗಿದೆ.
ಅ. ಭಾ. ಪ್ರ. ಸಭೆಯು ಕಾಶ್ಮೀರ ಸಮಸ್ಯೆಯ ಬಗ್ಗೆ ಕೇಂದ್ರ ಸರಕಾರದ ದೃಷ್ಟಿಕೋನ ಮತ್ತು ಕ್ರಮಗಳನ್ನು ಖಂಡಿಸುತ್ತದೆ. ಇವುಗಳಿಂದ ಜಮ್ಮು-ಕಾಶ್ಮೀರ ಸರಕಾರದ ಒಳಗಿನ ಮತ್ತು ಹೊರಗಿನ ಪ್ರತ್ಯೇಕತಾವಾದಿ ಶಕ್ತಿಗಳಿಗೇ ಸಹಾಯವಾಗಿದೆ. ಪ್ರಧಾನಿಯು ರಚಿಸಿದ ಕಾರ್ಯಪಡೆಯ ಅಧ್ಯಕ್ಷ ಜಸ್ಟೀಸ್ ಸಗೀರ್ ಅಹ್ಮದ್ ಅವರ ವರದಿಯು ೩೭೦ ನೇ ವಿಯನ್ನು ಶಾಶ್ವತಗೊಳಿಸುವ, ರಾಜ್ಯ ವಿಧಾನಸಭೆಯಿಂದ ರಾಜ್ಯಪಾಲರ ಚುನಾವಣೆ ಹಾಗೂ ರಾಜ್ಯಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡುವಂತಹ ವಿಷಯಗಳಿಗೆ ಬಹಿರಂಗ ಬೆಂಬಲದಿಂದ ಪ್ರತ್ಯೇಕತಾವಾದಿ ಸ್ವರಗಳಿಗೇ ಬಲ ನೀಡುತ್ತದೆ.
ಜಮ್ಮೂ-ಕಾಶ್ಮೀರ ಸಮಸ್ಯೆಯು “ಒಂದು ವಿಶಿಷ್ಟ ರಾಜಕೀಯ ಸಮಸ್ಯೆಯಾಗಿದ್ದು ಅದರ ವಿಶೇಷ ಪರಿಹಾರದ ಅವಶ್ಯಕತೆಯಿದೆ” ಎಂಬ ಕೇಂದ್ರ ಗೃಹಮಂತ್ರಿಯ ಹೇಳಿಕೆಯಿಂದ ಅದರಲ್ಲಡಗಿದ ಭ್ರಮೆ ಮತ್ತು ಪರಿಸ್ಥಿತಿಯ ಅಲ್ಪಜ್ಞತೆಯ ಅರಿವಾಗುತ್ತದೆ. ಜಮ್ಮೂ-ಕಾಶ್ಮೀರ ಸಮಸ್ಯೆಯು ಮೂಲತಃ ಗಡಿಯಾಚೆಯ ಪಾಕಿಸ್ತಾನದ ಪ್ರೋತ್ಸಾಹ ಮತ್ತು ಸಹಕಾರದಿಂದ ನಡೆಯುತ್ತಿರುವ ಪ್ರತ್ಯೇಕತಾವಾದವೆಂದು ಪ್ರತಿನಿ ಸಭೆಯು ಒತ್ತಿ ಹೇಳುತ್ತದೆ. ಇದರೊಂದಿಗೆ ಕಠಿಣವಾಗಿ ವ್ಯವಹರಿಸಬೇಕು. ಕೇಂದ್ರ ಸರಕಾರವು ಈ ಸಮಸ್ಯೆಯನ್ನು ‘ಸದ್ದಿಲ್ಲದ ಕೂಟನೀತಿ’ (ಕ್ಠಿಜಿಛಿಠಿ bಜಿmಟಞZqs)ಯ ಮೂಲಕ ಪರಿಹರಿಸಲು ಇಚ್ಛಿಸುತ್ತಿರುವುದು ದುರ್ಭಾಗ್ಯಕರ. ಸರಕಾರವು ಜಮ್ಮೂ-ಕಾಶ್ಮೀರದ ಬಗ್ಗೆ ಪಾರದರ್ಶಕವಾಗಿ ವರ್ತಿಸಬೇಕೆಂದು ಪ್ರತಿನಿ ಸಭೆಯು ಆಗ್ರಹಿಸುತ್ತದೆ.
ಕೇಂದ್ರ ಸಕಾರದ ದುರ್ಬಲ ಧೋರಣೆಯಿಂದ ಪ್ರತ್ಯೇಕತಾವಾದಿಗಳು ಮತ್ತು ಅವರ ಆಕಾಂಕ್ಷೆಗಳ ಮನೋಬಲವನ್ನು ರ್ವಸಿರುವ ಬಗ್ಗೆ ಅ. ಭಾ. ಪ್ರತಿನಿ ಸಭೆಯು ತೀವ್ರ ಕಳವಳ ವ್ಯಕ್ತಪಡಿಸುತ್ತದೆ. ಹುರ್ರಿಯತ್ ಮತ್ತು ಇತರ ಭಾರತ ವಿರೋ ಗುಂಪುಗಳ ನಾಯಕರಿಗೆ ಫೆಬ್ರವರಿ ೨೦೧೦ ರಲ್ಲಿ ದಿಲ್ಲಿಯಲ್ಲಿ ಪಾಕ್ ವಿದೇಶಾಂಗ ಮಂತ್ರಿಯನ್ನು ಭೇಟಿಯಾಗಲು ಅನುಮತಿ ನೀಡಲಾಯಿತು, ಅವರಿಗೆ ಪಾಕ್ ದೂತಾವಾಸದ ಭೋಜನಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು. ಹಾಗೂ ಇಸ್ಲಾಮೀ ರಾಷ್ಟ್ರಗಳ ಸಂಘ (ಓ.ಐ.ಸಿ.)ದ ಸಭೆಯಲ್ಲಿ ಭಾಗವಹಿಸಲು ವಿದೇಶಕ್ಕೆ ಹೋಗಲು ಸಹ ಅನುಮತಿ ನೀಡಲಾಯಿತು. ಇಂತಹ ಘೋರ ರಾಷ್ಟ್ರವಿರೋ ಚಟುವಟಿಕೆ ಗಳಿಗೆ ಅನುಮತಿ ನೀಡಲು ಸರಕಾರಕ್ಕೆ ಯಾವ ವಿವಶತೆಯಿತ್ತು ಎಂಬುದನ್ನು ಪ್ರತಿನಿ ಸಭೆಯು ತಿಳಿಯಲು ಇಚ್ಛಿಸುತ್ತದೆ.
ಇಂತಹ ಡೋಲಾಯಮಾನ ನಿಲುವಿನಿಂದಾಗಿ ಕಳೆದ ಕೆಲವು ತಿಂಗಳಲ್ಲಿ ಕಣಿವೆಯಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆಯ ಘಟನೆಗಳು ಹೆಚ್ಚಾಗಿವೆ. ಅಕ್ರಮ ಪ್ರವೇಶಿಗರ ಸಂಖ್ಯೆಯಲ್ಲಿ ಉಲ್ಲೇಖನೀಯ ವೃದ್ಧಿಯುಂಟಾಗಿದೆ ಎಂದು ಸೈನ್ಯವೂ ಕಂಡುಕೊಂಡಿದೆ. ಸೈನ್ಯ ಮತ್ತು ಅರೆಸೈನಿಕ ಪಡೆಗಳು ‘ಆಂದೋಲನಾತ್ಮಕ ಭಯೋತ್ಪಾದನೆ’ಯ ರೂಪದಲ್ಲಿ ಪಾಕ್ ಪ್ರಾಯೋಜಿತ ನೂತನ ಕುಚಕ್ರವನ್ನು ಉಲ್ಲೇಖಿಸಿವೆ. ಅಕ್ರಮಕ ಪ್ರದರ್ಶನಕಾರರ ಕೈಯಲ್ಲಿ ಕಳೆದ ಕೆಲವು ತಿಂಗಳಲ್ಲಿ ೧೫೦೦ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್ ಜವಾನರು ಗಾಯಗೊಂಡಿದ್ದು, ಅವರ ೪೦೦ಕ್ಕೂ ಹೆಚ್ಚು ವಾಹನಗಳು ಹಾನಿಗೀಡಾಗಿವೆ.
ರಾಜ್ಯದಲ್ಲಿ ನಮ್ಮ ರಕ್ಷಣಾ ಪಡೆಗಳ ಮನೋಬಲ ಕುಂದಿಸುವ ಪ್ರಯತ್ನಗಳ ಬಗ್ಗೆ ಅ. ಭಾ. ಪ್ರತಿನಿ ಸಭೆಯು ಕಳವಳ ವ್ಯಕ್ತಪಡಿಸುತ್ತದೆ. ಕಣಿವೆಯಿಂದ ೩೫,೦೦೦ ಸೈನಿಕರ ವಾಪಸಾತಿಯಿಂದ ರಕ್ಷಣಾ ಪಡೆಗಳ ಮನೋಬಲದ ಮೇಲೆ ಪ್ರತಿಕೂಲ ಪರಿಣಾಮವುಂಟಾಗಿದೆ. ಸುಳ್ಳು ಶೋಪಿಯಾನ್ ಅತ್ಯಾಚಾರ ಪ್ರಕರಣ ಮತ್ತು ಶ್ರೀನಗರ ಫೈರಿಂಗ್‌ನಂತಹ ಘಟನೆಗಳಲ್ಲಿ ರಕ್ಷಣಾ ಪಡೆಗಳನ್ನು ಸಿಲುಕಿಸುವ ಪ್ರಯತ್ನಗಳಿಂದ ಸಶಸ್ತ್ರ ಪಡೆಗಳ ಮನೋಬಲ ಮತ್ತಷ್ಟು ಕುಸಿಯುತ್ತಿದೆ. ಈ ವೈಖರಿಯು ಅದೆಷ್ಟು ಗಂಭೀರ ಸ್ಥಿತಿ ಮುಟ್ಟಿದೆಯೆಂದರೆ ಬಿ. ಎಸ್.ಎಫ್.ನ ಒಬ್ಬ ಕಮಾಂಡಂಟನನ್ನು ಭಯೋತ್ಪಾದಕರ ಗುಂಪಿನ ಮೇಲೆ ಅಶ್ರುವಾಯು ಷೆಲ್ ಪ್ರಯೋಗಿಸುವ ಆದೇಶ ನೀಡಿದ ಆರೋಪದ ಮೇಲೆ ಬಂಸಿ ಜಮ್ಮೂ-ಕಾಶ್ಮೀರ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಕೇಂದ್ರ ಸರಕಾರವು ಭಾರತ-ಪಾಕ್ ಸಂಬಂಧಗಳ ಬಗ್ಗೆ ತನ್ನ ಧೋರಣೆಯನ್ನು ಸುಸಂಗತ ಮತ್ತು ಸ್ಪಷ್ಟಗೊಳಿಸಬೇಕು ಎಂದು ಪ್ರತಿನಿ ಸಭೆಯು ಆಗ್ರಹಿಸುತ್ತದೆ. ಗಿಲ್ಗಿಟ್-ಬಾಲ್ಟಿಸ್ತಾನವನ್ನು ತನ್ನ ದೇಶದ ಐದನೇ ಪ್ರಾಂತವೆಂದು ಘೋಷಿಸುವ ನಿರ್ಣಯದಿಂದ ಪಾಕಿಸ್ತಾನದ ಹಟಮಾರಿತನ ಹೆಚ್ಚುತ್ತಿರುವುದು ಕಂಡುಬಂದಿದೆ. ಭಾರತ ಸರಕಾರವು ಇದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಬೇಕು, ಕಾರಣ, ಈ ಪ್ರದೇಶವು ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದು ನಮ್ಮ ದೇಶದ ಅಂಗವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಪೂರ್ಣವಾಗಿ ಭಾರತಕ್ಕೆ ಸೇರ್ಪಡೆಗೊಳಿಸುವುದಾಗಿ, ಸಂಸತ್ತು ೨೨ ಫೆಬ್ರವರಿ ೧೯೯೪ ರಂದು ಸರ್ವಾನುಮತದಿಂದ ಸಂಕಲ್ಪದ ನಿರ್ಣಯ ಸ್ವೀಕರಿಸಿದ್ದನ್ನು ಈ ಸಭೆಯು ಸ್ಮರಿಸಲು ಇಚ್ಛಿಸುತ್ತದೆ.
ಸರಕಾರವು ಜಮ್ಮೂ-ಕಾಶ್ಮೀರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ, ಈ ನಿರ್ಣಯದಲ್ಲಿ ವ್ಯಕ್ತವಾಗಿದ್ದ ರಾಷ್ಟ್ರೀಯ ಸರ್ವಾನುಮತದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅ. ಭಾ. ಪ್ರತಿನಿ ಸಭೆಯು ಕರೆ ನೀಡುತ್ತದೆ. ಈ ಸಂದರ್ಭದಲ್ಲಿ ಸರಕಾರವು ಕೆಳಕಂಡ ಅಂಶಗಳನ್ನು ಗಮನದಲ್ಲಿಡಬೇಕು.
ಭಾರತದಲ್ಲಿ ಜಮ್ಮೂ-ಕಾಶ್ಮೀರದ ವಿಲೀನವು ಅಂತಿಮವಾಗಿದ್ದು, ಯಾವ ರೀತಿಯ ಒಪ್ಪಂದ-ಮಾತುಕತೆಗಳನ್ನೂ ಮೀರಿದ್ದಾಗಿದೆ.
ಜಮ್ಮೂ-ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಮತ್ತು ಧ್ವಜವು ಭಾರತದ ಅಖಂಡತೆಗೆ ವಿರುದ್ಧವಾಗಿದೆ. ಇದು ನಮ್ಮ ಸಂವಿಧಾನದ ಭಾವನೆಗಳು, ಪ್ರಜಾತಾಂತ್ರಿಕ ಹಿತಗಳು ಹಾಗೂ ಜನತೆಯ ಮೂಲಭೂತ ಅಕಾರಗಳಿಗೂ ವಿರುದ್ಧವಾಗಿವೆ. ಆದ್ದರಿಂದ ಇವು ಕೊನೆಗೊಳ್ಳಲೇಬೇಕು.
ನಮ್ಮ ಸಂವಿಧಾನದಲ್ಲಿ ಸೇರಿಸಿರುವ ೩೭೦ನೇ ವಿಯು ಒಂದು ತಾತ್ಕಾಲಿಕ ಮತ್ತು ಪರಿವರ್ತನಕಾಲದ ವ್ಯವಸ್ಥೆಯಾಗಿತ್ತು. ಆದರೆ ಕೊನೆಗೊಳ್ಳುವ ಬದಲು ಇದು ಇಂದಿಗೂ ಪ್ರತ್ಯೇಕತಾವಾದಿ ಶಕ್ತಿಗಳ ಶಸ್ತ್ರವಾಗಿಬಿಟ್ಟಿದೆ.
ಶರಣಾಗತಿ ಧೋರಣೆ,ಮುಕ್ತ ಗಡಿಭಾಗಗಳು, ಎ.ಎಫ್.ಎಸ್.ಪಿ. (ಆರ್ಮ್ ಫೋರ್ಸಸ್ ಸ್ಪೆಶಲ್ ಪವರ್ಸ್) ಕಾನೂನನ್ನು ರದ್ದುಗೊಳಿಸು ವಂತಹ ವಿಚಾರಗಳನ್ನು , ಪಾಕ್-ಅಫ್ಘಾನ್ ಗಡಿಭಾಗದಲ್ಲಿ ಸಂಭವಿಸುತ್ತಿರುವ ಘಟನೆಗಳು ಹಾಗೂ ಭಾರತದ ರಕ್ಷಣೆಯ ಮೇಲಾಗುತ್ತಿರುವ ಅವುಗಳ ಪ್ರಭಾವಗಳಂತಹ ವ್ಯಾಪಕ ಸಂದರ್ಭಗಳಲ್ಲಿ ನೋಡಬೇಕು.
ಜಮ್ಮೂ-ಕಾಶ್ಮೀರದಿಂದ ಸೈನ್ಯದ ವಾಪಸಾತಿ ಮತ್ತು ರಕ್ಷಣಾ ಪಡೆಗಳ ಮನೋಬಲವನ್ನು ಕುಂದಿಸುವುದರಿಂದ ನಮ್ಮ ಆಂತರಿಕ ಮತ್ತು ಅಂತಾರಾಷ್ಟ್ರೀಯ ಸ್ಥಿತಿಯು ದುರ್ಬಲಗೊಂಡೀತು.
ಜಮ್ಮೂ-ಕಾಶ್ಮೀರದ ಬಗ್ಗೆ ಯಾವ ತಪ್ಪು ನಿರ್ಣಯ ಅಥವಾ ಒಪ್ಪಂದವನ್ನೂ ರಾಷ್ಟ್ರವು ಸಹಿಸದು ಎಂದು ಅ. ಭಾ. ಪ್ರತಿನಿ ಸಭೆಯು ಸರಕಾರಕ್ಕೆ ಎಚ್ಚರಿಕೆ ನೀಡುತ್ತದೆ.
ಎಲ್ಲ ನಿರ್ವಸಿತ ಜನರಿಗೂ ಕೂಡಲೇ ಪೂರ್ಣ ನಾಗರಿಕತ್ವದ ಅಕಾರಗಳನ್ನು ನೀಡಬೇಕು ಎಂದು ಪ್ರತಿನಿ ಸಭೆ ಆಗ್ರಹಿಸುತ್ತದೆ. ಜಮ್ಮೂ ಮತ್ತು ಲಡಾಖ್ ಪ್ರದೇಶದ ಅಭಿವೃದ್ಧಿಯ ಕಾನೂನು ವ್ಯವಸ್ಥೆ ಮಾಡುವುದರೊಂದಿಗೇ ಕೂಡಲೇ ಪುನರ್ಸೀಮಾಂಕನ (ಈಛ್ಝಿಜಿಞಜಿಠಿZಠಿಜಿಟ್ಞ) ಕಾರ್ಯವನ್ನೂ ಪೂರ್ಣಗೊಳಿಸಬೇಕು. ಅದರಿಂದಾಗಿ ಜಮ್ಮೂ- ಮತ್ತು ಲಡಾಖ್ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯ ಕೊನೆಗೊಳ್ಳಬೇಕು. ಜಮ್ಮೂ ಮತ್ತು ಲಡಾಖ್‌ನ ಜನತೆ ಮತ್ತು ಕಾಶ್ಮೀರಿ ಪಂಡಿತರ ಸಹಿತ ಎಲ್ಲ ನಿರ್ವಸಿತ ಹಿಂದುಗಳಿಗೆ ಉಚಿತ ಪಾತ್ರವಿದ್ದರೇನೇ, ಜಮ್ಮೂ-ಕಾಶ್ಮೀರ ಸಮಸ್ಯೆಯ ಯಾವ ಪರಿಹಾರವೂ ಸಾಧ್ಯವಾದೀತು.
ಜಮ್ಮೂ-ಕಾಶ್ಮೀರದ ಪ್ರಜಾತಂತ್ರದ ಅಳಿವು ಹಾಗೂ ಅದರ ಪರಿಣಾಮವಾಗಿ ಅಲ್ಲಿಯ ದೇಶಭಕ್ತ ಜನತೆಯ ದುರ್ದಶೆಯ ಬಗ್ಗೆ ದೇಶವಾಸಿಗಳನ್ನು ಜಾಗೃತಗೊಳಿಸಬೇಕು, ಅದರಿಂದ ಅವರ ಕಷ್ಟನಷ್ಟಗಳನ್ನು ದೂರಗೊಳಿಸಲು ಇಡೀ ರಾಷ್ಟ್ರವು ಎದ್ದು ನಿಲ್ಲುವಂತಾಗಬೇಕು ಎಂದು ಅ. ಭಾ. ಪ್ರತಿನಿ ಸಭೆಯು ಸ್ವಯಂಸೇವಕರಿಗೆ ಕರೆ ನೀಡುತ್ತದೆ.