29, ಜುಲೈ2017, ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲೆಯ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭವು ಬಾರ್ಕೂರನಲ್ಲಿ ನಡೆಯಿತು. ಸಮಾರಂಭದಲ್ಲಿ ರಾ .ಸ್ವ. ಸಂಘದ ಮಂಗಳೂರು ವಿಭಾಗದ ಸಹ ಸೇವಾ ಪ್ರಮುಖ ಮಾಣಿ ಸುಬ್ರಹ್ಮಣ್ಯ ಅವರು ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು
ಬಾರ್ಕೂರಿನ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದಲ್ಲಿ ಜುಲೈ 19ರಿಂದ 27ರ ವರೆಗೆ ನಡೆದ ಈ ವರ್ಗದಲ್ಲಿ ಜಿಲ್ಲೆಯ 37 ಸ್ಥಾನಗಳಿಂದ 95 ಉದ್ಯೋಗಿ ಸ್ವಯಂಸೇವಕರು ಭಾಗವಹಿಸಿದ್ದರು ವರ್ಗ ಪ್ರಮುಖರಾಗಿ ಮಾಣಿ ಸುಬ್ರಹ್ಮಣ್ಯ ಮತ್ತು ವರ್ಗ ಕಾರ್ಯವಾಹರಾಗಿ ಉಡುಪಿ ಜಿಲ್ಲಾ ಉದ್ಯೋಗಿಕಾರ್ಯ ಪ್ರಮುಖ ವಿಜಯ ಕೊಡವೂರು ಜವಾಬ್ದಾರಿ ನಿರ್ವಹಿಸಿದರು.