
ಭಾರತದ ಇಂದಿನ ಸಮಸ್ಯೆಗಳಿಗೆ ಸ್ವಾತಂತ್ರ್ಯಾನಂತರ ದೇಶದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕರುಗಳ ನೀತಿಗಳೇ ಕಾರಣ ಎಂದು ಇತಿಹಾಸ ಸ್ಪಷ್ಟವಾಗಿ ತಿಳಿಸುತ್ತದೆ. ಅಂತಹ ಒಂದು ಸಮಸ್ಯೆ ಚೈನಾ. ಸ್ವಪ್ರತಿಷ್ಠೆಗಾಗಿ ಪ್ರಥಮ ಪ್ರಧಾನಿ ನೆಹರು ಭದ್ರತಾ ಮಂಡಳಿ ಸದಸ್ಯತ್ವ ಚೀನಾಕ್ಕೆ ಧಾರೆ ಎರೆದ ಉದಾಹರಣೆ ನಮಗೆಲ್ಲಾ ತಿಳಿದೇ ಇದೆ. ಅಂತಹದ್ದೇ ಒಂದು ಸಮಸ್ಯೆ ಅರುಣಾಚಲ ಪ್ರದೇಶದ್ದು.
ಅರುಣಾಚಲ ಪ್ರದೇಶ ಹಾಗೂ ಚೀನಾ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದು ಬಾಹ್ಯಾಕಾಶದಲ್ಲಿ ಚಿತ್ರಗಳಲ್ಲಿ ಸೆರೆಯಾಗಿದೆ. 101ಕ್ಕೂ ಹೆಚ್ಚು ಮನೆಗಳನ್ನು ಈ ಗ್ರಾಮದಲ್ಲಿ ಕಟ್ಟಿಕೊಳ್ಳಲಾಗಿದ್ದು, ಭಾರತದ 4.5 ಕಿ. ಮೀ. ವ್ಯಾಪ್ತಿಯ ಗಡಿಯನ್ನು ಚೀನಾ ಸೇನೆ ಅತಿಕ್ರಮಿಸಿರುವ ಆರೋಪ ಕೇಳಿ ಬಂದಿದೆ. ಈ ಆರ
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೋ ಅವರು ಇಂದಿನ ಈ ಸಮಸ್ಯೆಗೆ ಕಾಂಗ್ರೆಸ್ ಕಾರಣ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “1980ರಿಂದಲೂ ಚೀನಾದವರು ಗಡಿಯಲ್ಲಿ ರಸ್ತೆ ಕಾಮಗಾರಿಯನ್ನು ನಡೆಸುತ್ತಲೇ ಬಂದಿದ್ದಾರೆ. ಅವರು ಲೊಂಗ್ಜುದಿಂದ ಮಾಜಾವರೆಗೂ ರಸ್ತೆ ಕಾಮಗಾರಿ ನಡೆಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅವಧಿಯಲ್ಲಿ ತವಾಂಗ್ ನಲ್ಲಿರುವ ಸಮ್ದೊರೊಂಗ್ ಚು ಕಣಿವೆಯನ್ನು ಅತಿಕ್ರಮಿಸಿಕೊಂಡಿತು. ಚೀನಾ ಲಿಬರೇಷನ್ ಆರ್ಮಿಯನ್ನು ಹಿಮ್ಮೆಟ್ಟಿರುವ ಕಾರ್ಯಾಚರಣೆ ಆರಂಭಿಸುವುದಕ್ಕೆ ಅಂದಿನ ಭಾರತೀಯ ಸೇನಾ ಮುಖ್ಯಸ್ಥರು ಅನುಮತಿ ಕೋರಿದರು.ರಾಜೀವ್ ಗಾಂಧಿಯವರು ಅಂದು ಭಾರತೀಯ ಸೇನೆಗೆ ಅನುಮತಿ ನೀಡಿರಲಿಲ್ಲ” ಎಂದಿರುವ ಅವರು ಅಂದಿನ ಕಾಂಗ್ರೆಸ್ ಸರ್ಕಾರವು ತೋರಿದ ಅಸಡ್ಡೆ ಪರಿಣಾಮದಿಂದಾಗಿ ಇಂದು ಗಡಿಯಲ್ಲಿನ ಚಿತ್ರಣವು ಬದಲಾಗುವಂತಾಗಿದೆ ಎಂದು ದೂಷಿಸಿದ್ದಾರೆ.