ಭೀಕರ ಸುನಾಮಿ ಮತ್ತು ಭೂಕಂಪದಿಂದ ನಿರ್ನಾಮವಾಗಿದ್ದ ಜಪಾನ್, ನೈಸರ್ಗಿಕ ದುರಂತವನ್ನು ಹೇಗೆ ಎದುರಿಸಬೇಕು ಎಂದು ಜಗತ್ತಿಗೆ ತೋರಿಸುತ್ತ ಮಾದರಿ ದೇಶವಾಗಿ ಮರುನಿರ್ಮಾಣವಾಗುತ್ತಿದೆ. ಇತರ ದೇಶಗಳಲ್ಲಿ ಇಂತಹ ಸಮಯದಲ್ಲಿ ನಡೆಯುವ ಲೂಟಿ-ದಂಗೆಗಳು ಜಪಾನ್ ದೇಶದಲ್ಲಿ ಜರುಗಲಿಲ್ಲ. ವಿಕೋಪ ನಿರೋಧಕ ಮನಗಳು ಕೊಚ್ಚಿ ಹೋದರೂ, ಕುಸಿಯಲಿಲ್ಲ. ರಾಕ್ಷಸ ಅಲೆಗಳು ಸಮುದ್ರ ದಡದಲ್ಲಿರುವ ಶಾಲೆಯನ್ನು ನುಂಗುವ ಮುಂಚೆ, ಅಷ್ತು ಮಕ್ಕಳು ಸುರಕ್ಷಿತ ಪ್ರದೇಶ ತಲುಪಿದ್ದರು. ಇಂತಹುದೇ ಅನೇಕ ಸನ್ನಿವೇಶಗಳ ಮೂಲಕ, ಒಂದು ದೇಶವನ್ನು ಸನ್ನದ್ದವಾಗಿ ಹೇಗಿಡಬೇಕೆಂದು ಕಲಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ಕಿಸಿ