• Samvada
Wednesday, May 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial

Samvada
Home Photos

ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ

Vishwa Samvada Kendra by Vishwa Samvada Kendra
December 20, 2020
in Photos
250
0
ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ
491
SHARES
1.4k
VIEWS
Share on FacebookShare on Twitter

ಹಿಂದೂ ಸಮಾಜದಲ್ಲಿದ್ದ ಅಸೃಶ್ಯತೆಯನ್ನು ನಿವಾರಿಸಿ ಸಶಕ್ತ ಸುದೃಢಗೊಳಿಸುವ ನಿಮಿತ್ತ ದೇಶದ ಹಲವೆಡೆ ದಲಿತರ ಕಾಲೊನಿಗಳಿಗೆ ಭೇಟಿ ನೀಡಿ ಕ್ರಾಂತಿಕಾರ್ಯ ನಡೆಸಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಂಚಲನ ಮೂಡಿಸಿದ್ದರು.
ಇದೀಗ ಅವರ ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥರೂ ಗುರುವಿನ ದಾರಿಯಲ್ಲಿ ಹೆಜ್ಜೆ ಹಾಕುವ ಮಹತ್ವದ ನಿರ್ಧಾರ ಕೈಗೊಂಡಿದ್ದು  ಭಾನುವಾರ *ಉಡುಪಿಯ ಕೊಡವೂರು ಗ್ರಾಮದ ಪಾಳೆಕಟ್ಟೆ* ಎಂಬಲ್ಲಿ ಪರಿಶಿಷ್ಟರ ಬಡಾವಣೆಗೆ ತಮ್ಮ ಮೊದಲ ಭೇಟಿ ನೀಡಿ ಹಿಂದೂ ಸಮಾಜ ಸಂಘಟನೆಗೆ ತಾವೂ ಸಿದ್ಧ ಎಂದಿದ್ದಾರೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಭಾರತದಲ್ಲಿ ಹಿಂದೂ ಸಮಾಜವನ್ನು ಸಂಘಟನಾತ್ಮಕವಾಗಿ ಸಶಕ್ತ ಮತ್ತು ಸುದೃಢಗೊಳಿಸಬೇಕಾಗಿದೆ . ಈ ಆಶಯದೊಂದಿಗೆ ಸುಮಾರು 120 ಮನೆಗಳನ್ನು ಹೊಂದಿರುವ ಈ ಬಡಾವಣೆಗೆ ಭೇಟಿ ನೀಡಿ 400 ರಷ್ಟು ದಲಿತ ಬಂಧುಗಳಲ್ಲಿ ಹಿಂದವಃ ಸೋದರಾ ಸರ್ವೇ ಎಂಬ ಗುರು ವಿಶ್ವೇಶತೀರ್ಥ ಸಂದೇಶದಂತೆ ವಿಶ್ವಾಸ ತುಂಬಿದರು . 
ಶ್ರೀಗಳು ಆಗಮಿಸುವ ಬಗ್ಗೆ ಸ್ಥಳೀಯ ನಗರಸಭಾ ಸದಸ್ಯ ಮತ್ತು ಸಂಘ ಪರಿವಾರದ ಸ್ವಯಂ ಸೇವಕ ವಿಜಯ  ಮತ್ತು  ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಎರಡು ದಿನಗಳ ಮೊದಲೇ ಕಾಲೊನಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದರು . ಅದರಂತೆ ಉತ್ಸಾಹ ಮತ್ತು ಸಂತೋಷದಿಂದ ನಿವಾಸಿಗಳು ಕಾಲೊನಿಯ ರಸ್ತೆಗಳಲ್ಲಿ ತಳಿರು ತೋರಣ ರಂಗೋಲಿ ಹಾಕಿ ಸಿಂಗರಿಸಿದ್ದರು .ಸಾಮೂಹಿಕ ಭಜನೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು . ಬಳಿಕ ಅಲ್ಲಿನ ಮೂರು ಮನೆಗಳಿಗೆ ಭೇಟಿ ನೀಡಿ ರಾಮದೀಪಗಳನ್ನು ಬೆಳಗಿಸಿ ಮನೆ ಮಂದಿಯೊಂದಿಗೆ ಕುಶಲೋಪರಿ ನಡೆಸಿದ ಶ್ರೀಗಳು ಶ್ರೀರಾಮ ಜಯರಾಮ ಜಯಜಯರಾಮ ಮಂತ್ರದೀಕ್ಷೆ ಕೊಟ್ಡು ನಿತ್ಯ ಶುದ್ಧ ಮನಸ್ಸಿನಿಂದ ಈ ಮಂತ್ರ ಜಪಿಸುವಂತೆ ತಿಳಿಸಿದರು . ಮೂರು ಮನೆಯವರು ಶ್ರೀಗಳಿಗೆ ಫಲ ಪುಷ್ಟ ಸಹಿತ ಭಕ್ತಿ ಗೌರವ ಅರ್ಪಿಸಿದರು .‌ ಶ್ರೀ ಮಠದ ವತಿಯಿಂದ ಎಲ್ಲ ಮನೆಗಳಿಗೆ ದೀಪ ಒದಗಿಸಿ ರಾಮದೀಪ ಬೆಳಗಿಸಲಾಯಿತು . ಅಲ್ಲಿಂದ ಬಡಾವಣೆಯ ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ ಬಂದು ಶ್ರೀ ದೇವಿಯ ಮುಂಭಾಗದಲ್ಲಿ ದೀಪ ಹಚ್ಚಿ ಮಂಗಳಾರತಿ ಬೆಳಗಿದರು .‌ ಮುಂಭಾಗದ ಅಂಗಣದಲ್ಲಿ ಸಮಸ್ತ ನಿವಾಸಿಗಳಿಗೆ ಸಂದೇಶ ನೀಡಿ  ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಮಸ್ತ ಹಿಂದೂ ಸಮಾಜದ ಸಹಕಾರ ಸಹಭಾಗಿತ್ವ ಪಡೆಯಲು ಎಲ್ಲ ಸ್ತರಗಳ ಹಿಂದೂ ಬಂಧುಗಳನ್ನು ಭೇಟಿಯಾಗುತ್ತಿದ್ದೇವೆ ಅದರಂತೆ ಇಲ್ಲಿಗೆ ಆಗಮಿಸಿದ್ದೇವೆ .  ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆದು ಇಡೀ ದೇಶಕ್ಕೆ ರಾಮನ ಕೃಪೆಯಾಗಿ ಶಾಂತಿ  ಸುಭಿಕ್ಷೆ ಸಮೃದ್ಧಿ ನೆಲೆಸಲು ನಾವೆಲ್ಲ ಪ್ರತೀನಿತ್ತ ಮನೆಮನೆಗಳಲ್ಲಿ ರಾಮನಿಗಾಗಿ ದೀಪ ಬೆಳಗಿ  ರಾಮಂತ್ರಜಪ ರಾಮ ಭಜನೆ ನಡೆಸಬೇಕು . ಪ್ರತಿಯೊಬ್ಬರಲ್ಲಿ ರಾಮನ ಜೀವನಾದರ್ಶಗಳು ನೆಲೆಗೊಳ್ಳಬೇಕು .‌ನಾವೆಲ್ಲ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು . ಎಲ್ಲರಿಗೂ ರಾಮ ಮಂತ್ರ ಬೋಧಿಸಿದರು . ಸುಬ್ರಹ್ಮಣ್ಯ ಷಷ್ಠೀಯಾದ್ದರಿಂದ ಶ್ರೀ ಮಠದ ಅಧೀನದಲ್ಲಿರುವ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಮಾಡಿಸಿ ತಂದಿದ್ದು ಎಲ್ಲರಿಗೂ ಶ್ರೀಗಳು ನೀಡಿ ಆಶೀರ್ವದಿಸಿದರು. 
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ವಿಧಿವಶರಾಗಿ ಒಂದು ವರ್ಷದೊಳಗೆ ಶ್ರೀಮಠದ ಎಲ್ಲ ಜವಾಬ್ದಾರಿಗಳಿಗೆ ಹೆಗಲು ಕೊಟ್ಟ ಶ್ರೀವಿಶ್ವಪ್ರಸನ್ನತೀರ್ಥರು ಗುರುಗಳು ನಿರ್ವಹಿಸಿದ್ದ ಸಾಮಾಜಿಕ ಕಾರ್ಯಗಳನ್ನೂ ಮುನ್ನಡೆಸುವ ಸಂಕಲ್ಪ ಮಾಡಿರುವುದು ಅತ್ಯಂತ ಶ್ಲಾಘನೀಯ ಎಂದು ವಿಜಯ ಪೂಜಾರಿ ತಿಳಿಸಿದರು .ವಿಹಿಂಪ‌ ಜಿಲ್ಲಾದ್ಗಕ್ಷ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು

READ ALSO

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

  • email
  • facebook
  • twitter
  • google+
  • WhatsApp

Related Posts

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale
ABPS

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale

March 20, 2021
ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ
Photos

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

January 15, 2021
ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ
Photos

ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

January 6, 2021
ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?
Articles

ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?

January 2, 2021
ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು
BOOK REVIEW

ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು

February 22, 2021
ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್  ರ ಅರ್ಹತೆ
Articles

ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್ ರ ಅರ್ಹತೆ

December 31, 2020
Next Post
ತಮಿಳುನಾಡಿನ ಉತಿರಾಮೆರೂರ್ ನಲ್ಲಿದೆ 10ನೇ ಶತಮಾನದಷ್ಟು ಹಳೆಯ ಪ್ರಜಾಪ್ರಭುತ್ವದ ಮಾದರಿ

ತಮಿಳುನಾಡಿನ ಉತಿರಾಮೆರೂರ್ ನಲ್ಲಿದೆ 10ನೇ ಶತಮಾನದಷ್ಟು ಹಳೆಯ ಪ್ರಜಾಪ್ರಭುತ್ವದ ಮಾದರಿ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

VHP turns 50: RSS Sararanghachalak Bhagwat, VHP Chief Togadia, Pejawar Seer attended Inaugural Ceremony

VHP turns 50: RSS Sararanghachalak Bhagwat, VHP Chief Togadia, Pejawar Seer attended Inaugural Ceremony

August 18, 2014
ಮುಸ್ಲಿಂ ಮಹಿಳೆಯರಿಗೆ ಬಗೆವ ಮಹಾದ್ರೋಹ ‘ತ್ರಿವಳಿ ತಲಾಖ್’

ಮುಸ್ಲಿಂ ಮಹಿಳೆಯರಿಗೆ ಬಗೆವ ಮಹಾದ್ರೋಹ ‘ತ್ರಿವಳಿ ತಲಾಖ್’

March 4, 2021
Veteran Swayamsevak Sri Champaknath passed away today

Veteran Swayamsevak Sri Champaknath passed away today

November 7, 2018
Day7 : Western feminism in Bharat has damaged portrayal of women #MyBharat

Day7 : Western feminism in Bharat has damaged portrayal of women #MyBharat

August 8, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In