• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಧರಂಪಾಲ್ ತೋರಿಸಿದ ಭಾರತೀಯ ಜ್ಞಾನದ ಬೆಳಕು

Vishwa Samvada Kendra by Vishwa Samvada Kendra
June 12, 2021
in Articles
250
0
ಧರಂಪಾಲ್ ತೋರಿಸಿದ ಭಾರತೀಯ ಜ್ಞಾನದ ಬೆಳಕು
491
SHARES
1.4k
VIEWS
Share on FacebookShare on Twitter

ಭಾರತೀಯ ವಿಜ್ಞಾನ-ತಂತ್ರಜ್ಞಾನದ ಅಮೋಘ ಸಾಧನೆಗೆ ಬೆಳಕು ಹಿಡಿದ ಸಂಶೋಧನೆ.

ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಗಾಗುವ ಪೂರ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಏನು? ಎಂಬ ಪ್ರಶ್ನೆ ಕೆಲವರಿಗೆ ಕುತೂಹಲವಾಗಿ ಕಾಣಬಹುದು. ಅಷ್ಟಕ್ಕೂ 18ನೇ ಶತಮಾನದ ಭಾರತದಲ್ಲಿ ವಿಜ್ಞಾನವಾಗಲೀ ತಂತ್ರಜ್ಞಾನವಾಗಲೀ ಇದ್ದಿತೇ? ಎನ್ನುವ ಕುಹಕದ ಪ್ರಶ್ನೆಯೂ ಕೆಲವರಲ್ಲಿ ಹುಟ್ಟಬಹುದು. ಯಾಕೆಂದರೆ ನಾವು ಬಹುಕಾಲದಿಂದ ಭಾರತದ ಬಗೆಗೆ ನಕಾರಾತ್ಮಕವಾದ ಚಿತ್ರಣಗಳನ್ನು ನೀಡುವ ಚರಿತ್ರೆಯನ್ನೇ ಓದಿಕೊಂಡು ಬಂದಿದ್ದೇವೆ. ಅದರಲ್ಲೂ ಬ್ರಿಟಿಷರು ತಮ್ಮ ಸಾಮ್ರಾಜ್ಯಶಾಹಿ ಪ್ರಭುತ್ವವನ್ನು ಕಟ್ಟಿಕೊಂಡಾಗ ಈ ದೇಶದ ಸಂಸ್ಕೃತಿ ಪರಂಪರೆಗಳ ಬಗೆಗೆ ಕಟ್ಟಿದ ಚಿತ್ರಣ, ನಿರೂಪಣೆಗಳು ಜನರ ನೈತಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವಲ್ಲಿ, ಈ ದೇಶದಲ್ಲಾದ ತಮ್ಮ ಆಕಸ್ಮಿಕ ಹುಟ್ಟಿಗಾಗಿ ಕೀಳರಿಮೆಯನ್ನು ಹೊಂದುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದೆ.ಯಾವ ದೇಶ ಸಾವಿರಾರು ವರ್ಷಗಳಿಂದ ವ್ಯವಸ್ಥಿತವಾದ ಕ್ರಮದಿಂದ ತನ್ನನ್ನು ತಾನು ವಿಕಸಿಸಿಕೊಂಡು ಬಂದಿತ್ತೋ, ಯಾವ ದೇಶ ಜಗತ್ತಿಗೆಲ್ಲಾ ಮಾನವತೆಯ ಬೆಳಕನ್ನು, ಜ್ಞಾನದ ಗಣಿಯನ್ನು ನೀಡಿತ್ತೋ ಅಂತಹ ಭಾರತವನ್ನು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಕಗ್ಗತ್ತಲೆಯ ಖಂಡ ಎಂದು ಹೇಳುವ ಮೂಲಕ ಇಲ್ಲಿನ ಸಾಧನೆಯನ್ನು ಶೂನ್ಯವಾಗಿ ಬಿಂಬಿಸಲು ಪ್ರಯತ್ನಿಸಲಾಗಿತ್ತು.ಮೊದಲ ಹಂತದಲ್ಲಿ ಭಾರತದ ಬೌದ್ಧಿಕ ,ಸಾಂಸ್ಕೃತಿಕ ಉನ್ನತಿಗೆ ಕಾರಣವಾದ ವ್ಯವಸ್ಥೆಗಳೆಲ್ಲವನ್ನೂ ಬೇರು ಸಹಿತ ನಾಶಮಾಡುವ ಸಂಚನ್ನು ರೂಪಿಸಲಾಯಿತು. ಕಗ್ಗತ್ತಲೆಯ ಖಂಡವೆನ್ನುವುದು ಮನಸ್ಸಿನಾಳದಲ್ಲಿ ಚಿತ್ರಿತವಾದ ಪರಿಣಾಮ ವಿಜ್ಞಾನ, ತಂತ್ರಜ್ಞಾನ, ಕಲೆ,ಸಾಹಿತ್ಯ ಇವೇ ಮೊದಲಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆಯನ್ನು ಕುರಿತಾಗಿ ವಿಶೇಷವಾಗಿ ಚಿಂತನೆ ಮಾಡದ ಹಲವು ಪೀಳಿಗೆಗಳೇ ಕಳೆದುಹೋಗಿದೆ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಕಾರಣದಿಂದಲೇ ನಾವು ನಾಗರಿಕರಾದೆವು, ನಮ್ಮಲ್ಲಿ ಆಧುನಿಕತೆಯ ಪ್ರವೇಶವಾಯಿತು, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಾಯಿತು ಎನ್ನುವ ತಿಳುವಳಿಕೆಯೂ ಬ್ರಿಟಿಷರೇ ಹುಟ್ಟುಹಾಕಿದ ಗುಲಾಮಿ ಮಾನಸಿಕತೆಯ ಪ್ರತಿಬಿಂಬವಾಗಿದೆ. ಹಾಗಾದರೆ ಭಾರತದ ನಿಜವಾದ ಚಿತ್ರಣ ಯಾವುದು? ಅದರಲ್ಲೂ ಬ್ರಿಟಿಷರು ಆಕ್ರಮಣ ಮಾಡುವ ಪೂರ್ವದ ಭಾರತದಲ್ಲಿ ವಿಜ್ಞಾನದ ಬೆಳವಣಿಗೆ ಹೇಗಿತ್ತು? ತಂತ್ರಜ್ಞಾನದ ಬಳಕೆ ಯಾವ ಸ್ವರೂಪದಲ್ಲಿತ್ತು? ನಿಧಾನವಾಗಿ ಬ್ರಿಟಿಷರು ಅವೆಲ್ಲವನ್ನೂ ಹೇಗೆ ನಾಶಮಾಡಿದರು? ಎನ್ನುವುದನ್ನು ತಿಳಿಯುವ ದಾರಿ ಯಾವುದು? ಈ ಕುರಿತ ತಿಳುವಳಿಕೆಯ ಆಕರ ಯಾವುದು? ಎಂಬ ಕುತೂಹಲ ಉಳ್ಳವರು ಅಧ್ಯಯನ ಮಾಡಲೇ ಬೇಕಾದ ಒಂದು ಕೃತಿ ಎಂದರೆ “INDIAN SCIENCE AND TECHNOLOGY IN THE EIGHTEENTH CENTURY”. ಇದು ಬ್ರಿಟಿಷ್ ಪೂರ್ವದ ಭಾರತದ ಕುರಿತು ಆಳವಾಗಿ ಅಧ್ಯಯನ ಮಾಡಿದ ಸಂಶೋಧಕರಲ್ಲಿ ಓರ್ವರಾದ ಶ್ರೀ ಧರಂಪಾಲ್ ಅವರ ಶೋಧದಿಂದ ರೂಪುಗೊಂಡ ಗ್ರಂಥಗಳಲ್ಲೊಂದು.ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಏರಿದ್ದ ಎತ್ತರವನ್ನು ದಾಖಲೆಗಳ ಸಹಿತವಾಗಿ ಇಲ್ಲಿ ವಿವರಿಸಲಾಗಿದೆ.

ಬ್ರಿಟಿಷ್ ಯುಗದ ಭಾರತದ ಕುರಿತಾಗಿ ಬಿತ್ತಲಾದ ಬಹು ಪ್ರಸಿದ್ಧ ಚಿತ್ರಣಗಳು ಇಲ್ಲಿನ ನೈಜ ಬಿಂಬಗಳಾಗಿರಲಿಲ್ಲ. ನಾವು ಅನಾಗರಿಕರೂ ಆಗಿರಲಿಲ್ಲ. ಭಾರತ ಕಗ್ಗತ್ತಲೆಯ ಖಂಡವೂ ಆಗಿರಲಿಲ್ಲ. ಸಾಮ್ರಾಜ್ಯಶಾಹಿ ಬ್ರಿಟಿಷರು ಭಾರತವನ್ನು ನಕಾರಾತ್ಮಕವಾಗಿ ಚಿತ್ರಿಸುವ ಕೆಲಸವನ್ನು ಮಾಡಿದರೂ 17-18ನೇ ಶತಮಾನದಲ್ಲಿ ಭಾರತಕ್ಕೆ ಬೇಟಿಕೊಟ್ಟ ಬ್ರಿಟನ್ನಿನ ಕೆಲವು ಸ್ವತಂತ್ರ ವಿದ್ವಾಂಸರು, ಆಡಳಿತದ ಹೊಣೆಗಾರಿಕೆಯ ಮೇಲೆ ಭಾರತಕ್ಕೆ ಬಂದರೂ ಈ ದೇಶದ ಕುರಿತು ವಿಶೇಷ ಕುತೂಹಲವನ್ನು ಹೊಂದಿದ್ದ ಅಧಿಕಾರಿಗಳು ತಮ್ಮ ಸ್ವಂತ ಆಸಕ್ತಿಗೆ ಅನುಸಾರವಾಗಿ ಅಥವಾ ಬ್ರಿಟಿಷ್ ಮೇಲಾಧಿಕರಿಗಳ ಅದೇಶಕ್ಕೆ ಅನುಗುಣವಾಗಿ ಭಾರತೀಯ ಸಮಾಜ, ಇಲ್ಲಿನ ಬದುಕು,ವೈಜ್ಞಾನಿಕ ಪ್ರಗತಿ ಮೊದಲಾದ ವಿಚಾರಗಳನ್ನು ಸಂಗ್ರಹಿಸಿದ್ದರು. ಅಂತಹ ದಾಖಲೆಗಳು ಬ್ರಿಟಿಷ್ ಪೂವದ ಭಾರತದ ಕುರಿತು ನೀಡುವ ಚಿತ್ರಣಗಳೇ ಬಹು ಆಸಕ್ತಿದಾಯಕವಾಗಿದೆ. ಈ ದಾಖಲೆಗಳ ಆಧಾರದಲ್ಲೇ 18ನೇ ಶತಮಾನದ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಹೇಗೆ ಅತ್ಯುನ್ನತ ಮಟ್ಟದ ಬೆಳವಣಿಗೆಯನ್ನು ಸಾಧಿಸಿತ್ತು ಎನ್ನುವುದರ ನಿರೂಪಣೆಯೇ ಈ ಕೃತಿ.

1720-1820ರ ನಡುವೆ ಭಾರತದಲ್ಲಿ ಕರ್ತವ್ಯ ನಿರ್ವಹಿಸಿದ ಬ್ರಿಟಿಷ್ ಮಿಲಿಟರಿ ಕಮಾಂಡರ್‌ಗಳು, ಸರ್ಕಾರಿ ಸೇವೆಗೆ ನಿಯೋಜಿತರಾಗಿದ್ದ ಪ್ರಖ್ಯಾತ ಗಣಿತಜ್ಞರು, ವೈದ್ಯರು, ಇಂಜಿನಿಯರ್‌ಗಳೂ ಸೇರಿದಂತೆ ಬೇರೆ ಬೇರೆ ವ್ಯಕ್ತಿಗಳು ತಮ್ಮ ಪ್ರತ್ಯಕ್ಷ ಅನುಭವಗಳನ್ನು ದಾಖಲಿಸಿದ್ದು, ಈ ದಾಖಲೆಗಳಲ್ಲಿ ಅನೇಕವು, ಅಂದಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ವರದಿಗಳಾಗಿ, ಲೇಖನಗಳಾಗಿ ಪ್ರಕಟವಾಗಿವೆ. ಈ ಬರವಣಿಗೆಗಳು ಭಾರತದ ಪ್ರತ್ಯಕ್ಷ ವರದಿಗಳಾಗಿದ್ದು ಬ್ರಿಟಿಷರು ತಾವು ಬರುವ ಕಾಲಕ್ಕೆ ಭಾರತೀಯ ಸಮಾಜ ಹೇಗೆ ಕೆಲಸ ನಿರ್ವಹಿಸುತ್ತಿತ್ತು, ಇಲ್ಲಿ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ಹೇಗಾಗಿತ್ತು ಎನ್ನುವ ವಿವರಗಳಿವೆ.

ಯುರೋಪಿನ ದೇಶಗಳು ಭಾರತವನ್ನು ಪ್ರವೇಶಿಸುವ ಮೊದಲೆ ಇಲ್ಲಿ ಅವರಿಗಿಂತಲೂ ಮುಂದುವರಿದ ತಂತ್ರಜ್ಞಾನದ ಬಳಕೆಯಾಗುತ್ತಿರುವುದನ್ನು ಕಾಣುತ್ತಾರೆ. ಪಶ್ಚಿಮ ದೇಶಗಳು ತಾವು ಸಾಧಿಸಿದ ವಿಜ್ಞಾನದ ಪ್ರಗತಿಯೇ ಶ್ರೇಷ್ಠವಾದುದು ಎಂಬ ಅರಿವಿನಲ್ಲಿದ್ದವರು ಭಾರತದ ಖಗೋಳಶಾಸ್ತ್ರಜ್ಞರು ಸಾಧಿಸಿದ ಪ್ರಗತಿಯನ್ನು ಕಂಡು ಬೆರಗಾಗುತ್ತಾರೆ. ಖಗೋಳ ವಿಜ್ಞಾನದಲ್ಲಿ ಇಷ್ಟೊಂದು ನಿಖರವಾದ ಲೆಕ್ಕಾಚಾರವನ್ನು ಹೊಂದಿರಬೇಕಾದರೆ ಅದಕ್ಕೆ ಅತ್ಯಂತ ಆಳವಾದ ರೇಖಾಗಣಿತ, ಅಂಕಗಣಿತಗಳ ಜ್ಞಾನವೂ ಅಗತ್ಯವಿದೆ. ಅಂದರೆ ಭಾರತೀಯರು ಖಗೋಳ ವಿಜ್ಞಾನ ಮತ್ತು ಗಣಿತ ಕ್ಷೇತ್ರಗಳಲ್ಲಿ ಪಶ್ಚಿಮದ ದೇಶಗಳು ಸಾಧಿಸಿದ ಪರಿಣತಿಗಿಂತಲೂ ಮಿಗಿಲಾದುದನ್ನು ಗಳಿಸಿಕೊಂಡಿದ್ದಾರೆ ಎನ್ನುವುದರ ಅರಿವಾಗುತ್ತದೆ. ಪಶ್ಚಿಮ ದೇಶಗಳಿಗಿಂತಲೂ ಹೆಚ್ಚು ಶಕ್ತಿಯುತವಾದ ಉಪಕರಣಗಳನ್ನು ಈ ದೇಶ ಬಳಸಿಕೊಂಡ ಕಾರಣದಿಂದಲೇ ಇಷ್ಟೊಂದು ಅಧಿಕೃತವಾದ ಜ್ಞಾನ ಗಳಿಸಲು ಸಾಧ್ಯವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ. ಗ್ರಹಗಳ ಚಲನೆಯ ನಿಖರವಾದ ಅರಿವಿರದೆ ಗ್ರಹಣದ ಲೆಕ್ಕಾಚಾರ ಸಾಧ್ಯವಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳು ಕುತೂಹಲದಿಂದ ಒಂದು ಹಳ್ಳಿಯ ಮೂಲೆಯ ಓರ್ವ ಜ್ಯೋತಿಷಿಯನ್ನು ಬೇಟಿಯಾಗಿ ಆತನ ಬಳಿ ಗ್ರಹಣದ ಕುರಿತು ವಿಚಾರಿಸಿದಾಗ ಆತನು ತನ್ನ ಬಳಿಯಲ್ಲಿರುವ ತಾಳೆಗರಿಯ ಕಟ್ಟನ್ನು ಬಿಡಿಸಿ, ಲೆಕ್ಕಾಚಾರ ಮಾಡಿ ಗ್ರಹಣವನ್ನು ಕುರಿತು ಸ್ಫುಟವಾಗಿ ಹೇಳುವುದನ್ನು ಕೇಳಿ ಬ್ರಿಟಿಷರು ಆಚ್ಚರಿಗೊಳ್ಳುತ್ತಾರೆ. ಇಷ್ಟೊಂದು ತಿಳಿವು ಇರಬೇಕಾದರೆ ಅವರಿಗಿರಬೇಕಾದ ಖಗೋಳ ಮತ್ತು ಗಣಿತದ ಜ್ಞಾನ ಅಸಾಮಾನ್ಯವಾಗಿದ್ದಿರಬೇಕು. “The observations on which the astronomy of India is founded, were made more than three thousand years before the Christian era; and, in particular, the places of the sun and the moon, at the beginning of the Calyougham, were determined by actual observation.” (88) ಮುಂದುವರಿದು “The construction of these tables implies a great knowledge of geometry, arithmetic, and even of the theoretical part of astronomy”.(91) ಎನ್ನುತ್ತಾರೆ.ಅಂತಹ ಜ್ಞಾನವನ್ನು ಹೊಂದಿರುವುದರ ಬಗ್ಗೆ ಬ್ರಿಟಿಷರು ನಿಶ್ಚಿತವಾಗಿಯೂ ಬೆರಗಾಗುತ್ತಾರೆ.

ರೋಗನಿವಾರಣೆಗಾಗಿ ಶರೀರಕ್ಕೆ ಸರ್ಜರಿಯನ್ನು ಮಾಡಬೇಕಾದ ಸಂದರ್ಭದಲ್ಲಿ ಬಳಸುವ ಸೂಕ್ಷ್ಮವಾದ ಉಪಕರಣಗಳನ್ನು ಭಾರತೀಯರು ತಾವೇ ಅಭಿವೃದ್ದಿ ಪಡಿಸಿಕೊಂಡಿದ್ದರೆನ್ನುವುದನ್ನು ದಾಖಲಿಸುತ್ತಾರೆ. ಕೃಷಿಗೆ ಬೇಕಾದ ಅತ್ಯುತ್ತಮ ನೀರಾವರಿ ವ್ಯವಸ್ಥೆ, ಭೂಮಿಯ ಉಳುಮೆಗಾಗಿ ರೂಪಿಸಿಕೊಂಡಿದ್ದ ನೇಗಿಲಿನ ತಂತ್ರಜ್ಞಾನವೂ ಸೇರಿದಂತೆ ಕೃಷಿಯಲ್ಲಿ ಅತ್ಯುನ್ನತವಾದ ಸಾಧನೆಯನ್ನು ಸಾಧಿಸಲು ಬೇಕಾದ ಎಲ್ಲ ತಂತ್ರಜ್ಞಾನಗಳನ್ನೂ ಭಾರತ ತಾನೇ ರೂಪಿಸಿಕೊಂಡಿತ್ತೆನ್ನುವುದು ಬ್ರಿಟಿಷರ ಅಚ್ಚರಿಗೆ ಕಾರಣವಾಗುತ್ತದೆ. ಕೃತಕವಾಗಿ ಐಸ್ ತಯಾರಿಸಬಹುದೆನ್ನುವುದು ಇನ್ನೂ ಬ್ರಿಟಿಷರಿಗೆ ಗೊತ್ತೇ ಇಲ್ಲದಿದ್ದ ಕಾಲಕ್ಕೆ ಭಾರತೀಯರು ಐಸ್ ತಯಾರಿಸುತ್ತಿದ್ದರು ಎನ್ನುವುದನ್ನು ಬ್ರಿಟಿಷರೇ ಒಪ್ಪಿಕೊಳ್ಳುತ್ತಾರೆ. ಭಾರತೀಯರು ತಯಾರಿಸುತ್ತಿದ್ದ ಸ್ಟೀಲ್‌ನ ಗುಣಮಟ್ಟ ಅದನ್ನು ತಯಾರಿಸುವ ಪ್ರಕ್ರಿಯೆಯ ಕಾರಣದಿಂದ ಅದು ಬ್ರಿಟನ್‌ನ ಸ್ಟೀಲ್‌ಗಿಂತ ಉತ್ಕೃಷ್ಟ ದರ್ಜೆಯದ್ದಾಗಿತ್ತು. ಈ ಎಲ್ಲಾ ಸಂಗತಿಗಳನ್ನು ಬ್ರಿಟಿಷರು ಸ್ವತಃ ಪರಿಶೀಲಿಸುತ್ತಾರೆ, ಪ್ರಯೋಗಗಳಿಗೆ ಒಳಪಡಿಸುತ್ತಾರೆ. (ಬ್ರಿಟಿಷ್ ಆಳ್ವಿಕೆಯ ಪರಿಣಾಮದಿಂದ ಕೆಲವೇ ವರ್ಷಗಳಲ್ಲಿ ಭಾರತ ಉಕ್ಕಿಗಾಗಿ ಬ್ರಿಟನ್‌ನ ಗ್ರಾಹಕ ದೇಶವಾಗುವಂತಾದುದು ದುರಂತ). ದೋಣಿ,ಹಡಗುಗಳನ್ನು ನಿರ್ಮಾಣ ಮಾಡುವ , ಅದರ ವಿನ್ಯಾಸಗಳನ್ನು ತಯಾರಿಸುವಲ್ಲಿ ಭಾರತದ ತಜ್ಞತೆ, ತಂತ್ರಜ್ಞಾನದ ಅರಿವನ್ನು ಕಂಡು ಬ್ರಿಟಿಷರು ಅವುಗಳನ್ನು ಪಡೆದುಕೊಂಡು ತಮ್ಮ ದೇಶದ ಹಡಗು ತಯಾರಿಕೆಯಲ್ಲಿ ಬಳಸಿಕೊಂಡರು. ಆ ಕಾಲದಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕವಾಗಿ ಹರಡುತ್ತಿದ್ದ ಸಿಡುಬು ( Smallpox) ರೋಗದ ವಿರುದ್ದ ಲಸಿಕೆಯನ್ನು ನೀಡುವ ಪ್ರಯೋಗವನ್ನು ಬ್ರಿಟಿಷರು ಮೊದಲ ಬಾರಿಗೆ ಭಾರತದಲ್ಲಿ ಕಂಡಿದ್ದರು.ಇಪ್ಪತ್ತನೇ ಶತಮಾನದ ವಿಜ್ಞಾನಿಗಳೂ ಕೂಡ ಭಾರತದ ಈ ಪ್ರಯೋಗದ ಬಗ್ಗೆ ಬರೆಯುತ್ತಾ “Preventive inoculation against the smallpox, which was practised in China from the eleventh century, apparently came from India” ( ಉಲ್ಲೇಖ : Kurt Pollak) ಎನ್ನುತ್ತಾರೆ.

ಅವರು ಮೊದಲ ಬಾರಿಗೆ ಭಾರತದಲ್ಲಿನ ವಿಜ್ಞಾನದ ಪ್ರಯೋಗಗಳನ್ನಾಗಲೀ, ತಂತ್ರಜ್ಞಾನದ ಬಳಕೆಯನ್ನಾಗಲೀ ಕಂಡಾಗ ಅವುಗಳನ್ನು ದೇಶದ ಬೇರೆ ಬೇರೆ ಭಾಗಗಗಳ ಪ್ರಯೋಗಗಳ ಜತೆಗೆ ಹೋಲಿಸಿ ನೊಡುತ್ತಾರೆ. ಉದಾಹರಣೆಗೆ ಖಗೋಳ ವಿಜ್ಞಾನಕ್ಕೆ ಸಂಬAಧಿಸಿದAತೆ ಅವರು ಬನಾರಸ್‌ನಲ್ಲಿ ಕಂಡ ಮೊದಲ ಪ್ರಯೋಗ, ಅಲ್ಲಿ ಬಳಸಿದ ಕಾಲಗಣನೆಯ ಕ್ರಮ ,ಬಳಸಿದ ವಿಧಾನಗಳನ್ನು ಇನ್ನಿತರ ಭಾಗಗಳಲ್ಲಿ ಬಳಸುತ್ತಿರುವ ವಿಧಾನಗಳ ಜತೆಗೆ ಹೋಲಿಸಿ ವ್ಯತ್ಯಾಸ ಮತ್ತು ಸಮಾನ ರೂಪಗಳನ್ನು ಗುರುತಿಸುತ್ತಾರೆ. ದೇಶದೊಳಗೆ ಮಾತ್ರವಲ್ಲ, ಉದಾಹರಣೆಗೆ ಕೃಷಿಯ ಬಹು ಪ್ರಧಾನ ಸಲಕರಣೆಗಳಲ್ಲಿ ಒಂದಾದ ನೇಗಿಲಿನ ಬಗೆಗೆ ಚರ್ಚೆಯನ್ನು ಮಾಡುವಾಗ ಸಮಕಾಲೀನ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಬಳಕೆಯಲ್ಲಿರುವ ಮಾದರಿಗಿಂತ ಭಾರತದ ಮಾದರಿ ಹೇಗೆ ಭಿನ್ನವೂ ಉತ್ಕೃಷ್ಟವೂ ಆಗಿದೆ ಎನ್ನುತ್ತಾರೆ. ಸಿಡುಬಿನ ಲಸಿಕಾಕರಣದ ಬಗೆಗೆ ತಿಳಿಯುತ್ತಿದ್ದಂತೆ ಲಸಿಕೆಯ ತಯಾರಿ, ಲಸಿಕೆ ನೀಡುತ್ತಿದ್ದ ವಿಧಾನ , ಆ ಸಂದರ್ಭದಲ್ಲಿ ಪಾಲಿಸುತ್ತಿದ್ದ ಆಹಾರ ಪಥ್ಯಗಳ ಬಗೆಗೂ ವಿವರಗಳನ್ನು ದಾಕಲಿಸುತ್ತಾರೆ. ಬಾರತದಲ್ಲಿ ತಯಾರಾಗುತ್ತಿದ್ದ ಸ್ಟೀಲ್‌ನ ಬಗ್ಗೆ , ಪೇಪರ್‌ನ ಬಗೆಗೆ , ಕಟ್ಟಡಗಳನ್ನು ಕಟ್ಟುತ್ತಿದ್ದ ಗಾರೆಯ ಬಗೆಗೆ ಮಾತನಾಡುವ ವಿದ್ವಾಂಸರು ಆ ಪ್ರಕ್ರಿಯೆಯ ಸಮಗ್ರ ವಿವರಗಳ ದಾಖಲಾತಿಯನ್ನು ತೋರಿಸಿಕೊಟ್ಟಿರುವುದು ಅಂದಿನ ಕಾಲಮಾನದಲ್ಲಿ ಜಗತ್ತಿನ ಉಳಿದ ದೇಶಗಳಿಗಿಂತ ಈ ಮಾದರಿ ಹೇಗೆ ಶ್ರೇಷ್ಟವಾಗಿತ್ತು ಎನ್ನುವುದನ್ನು ತಿಳಿಯಲೂ ಒಂದು ದಾರಿಯಾಗಿದೆ. ಕಬ್ಬಿಣದ ಅದಿರು ತೆಗೆಯುತ್ತಿದ್ದ ಸ್ಥಳಗಳಿಂದ ಹಿಡಿದು, ಅದನ್ನು ತೆಗೆಯುತ್ತಿದ್ದ ರೀತಿ, ಅದಕ್ಕಾಗಿ ಬಳಕೆಯಾಗುತ್ತಿದ್ದ ತಂತ್ರಜ್ಞಾನ, ಅದನ್ನು ಶುದ್ದೀಕರಿಸುವ ರಿಪೈನರಿ ವಿಧಾನಗಳನ್ನು ಹೇಳುತ್ತಲೇ ಹೇಗೆ ಅದು ಅತ್ಯುತ್ತಮ ಉಕ್ಕಾಗಿ ತಯಾರಾಗುತ್ತಿತ್ತು ಎನ್ನುವುದನ್ನು, ಗಾರೆಯನ್ನು ತಯಾರಿಸಲು ಬಳಸುತ್ತಿದ್ದ ಕಚ್ಛಾವಸ್ತುಗಳನ್ನಾಗಲೀ, ಅದನ್ನು ತಯಾರಿಸಿ, ಬಳಸುವ ಕ್ರಮಗಳನ್ನಾಗಲೀ,ಆ ಕಾರಣದಿಂದಲೇ ಭಾರತದಲ್ಲಿ ಹೇಗೆ ಅತ್ಯಂತ ದೊಡ್ಡ ದೊಡ್ಡ ದೇವಾಲಯಗಳನ್ನು, ಕಟ್ಟಡಗಳನ್ನು ರಚಿಸಲು ಸಾಧ್ಯವಾಯಿತು ಎನ್ನುವುದನ್ನು ಕೂಡ ಹೇಳುತ್ತಾರೆ. ಈ ದೇಶ ಇಷ್ಟೆಲ್ಲಾ ಸಾಧನೆಯನ್ನು ಮಾಡಲು ಕಾರಣವಾದ ಸಂಗತಿಗಳನ್ನೂ ಅವರು ಗುರುತಿಸುತ್ತಾರೆ. “Another reason why the sciences were perfected in India is the Indians having been much longer civilised than any other nation, and we know that when people are civilised they begin to study the arts.”(Reuben Burrow-1783).

ಇಷ್ಟೆಲ್ಲಾ ಸಾಧನೆಯನ್ನು ದಾಖಲಿಸಿದ್ದ ಭಾರತದ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳು ಮುಂದಿನ ಕೆಲವೇ ವರ್ಷಗಳಲ್ಲಿ ವಿನಾಶದ ಕಡೆಗೆ ಸಾಗಿತು.ಇದಕ್ಕೆಲ್ಲಾ ಮುಖ್ಯ ಕಾರಣ ಬ್ರಿಟಿಷ್ ಆಳ್ವಿಕೆ. ಭಾರತದ ಸ್ವಯಂಮಾಡಳಿತ ಎನ್ನುವುದು ನಾಶವಾಯಿತು. ಬ್ರಿಟಿಷ್ ಆಡಳಿತ ಈ ದೇಶದ ಶ್ರೇಷ್ಠ ಕೃಷಿಯ ಪದ್ಧತಿಯನ್ನು ನಾಶಮಾಡಿತು, ತೆರಿಗೆಯ ರೂಪದಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ತನ್ನ ಕೈಹಿಡಿತಕ್ಕೆ ತೆಗೆದುಕೊಂಡಿತು. ಪರಿಣಾಮವಾಗಿ ಕೇವಲ ಅರ್ಥವ್ಯವಸ್ಥೆ ಮಾತ್ರ‍್ರ ಕುಸಿಯಲಿಲ್ಲ, ಸ್ವತಂತ್ರವಾಗಿ ನಡೆಯುತ್ತಿದ್ದ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಸಾಧನೆಗಳೆಲ್ಲಾ ಆಡಳಿತದ ಪೋಷಣೆಯ ಕೊರತೆಯಿಂದ ಸ್ಥಗಿತಗೊಳ್ಳುತ್ತಾ ವಿನಾಶದತ್ತ ಸಾಗಿತು. ಅಂತಿಮವಾಗಿ ಭಾರತ ಪ್ರತಿಯೊಂದು ತಂತ್ರಜ್ಞಾನಕ್ಕೂ ಬ್ರಿಟನ್‌ನ್ನು ಅವಲಂಭಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಜತೆಗೆ ಭಾರತೀಯರ ಬುದ್ಧಿಗೂ ಮಂಕು ಕವಿಯಿತು. ವಿಜ್ಞಾನ ತಂತ್ರಜ್ಞಾನದ ತವರು ನೆಲವೆಂದರೆ ಪಶ್ಚಿಮ ದೇಶಗಳೇ ಎಂದು ನಾವು ನಮ್ಮತನವನ್ನು ಮರೆತೇ ಉರುಹೊಡೆದೆವು.

ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ವ್ಯಕ್ತಿಗಳು ಬರೆದ ವಿವರಗಳನ್ನು ಇಂಗ್ಲೆಂಡಿನ ಆರ್ಕೈವ್‌ಗಳಿಂದ ಹುಡುಕಿ ಸಂಕಲಿಸಿದ ಶ್ರೀ ಧರಂಪಾಲ್ ಅವರ ಶ್ರಮವನ್ನು ನೆನಪಿಸಿಕೊಂಡರೆ ಮೈರೋಮಾಂಚನವಾಗುತ್ತದೆ. 1971ರಲ್ಲಿ ಮೊದಲಬಾರಿಗೆ ಪ್ರಕಟವಾದ ಈ ಕೃತಿಯನ್ನು ರಚಿಸುವುದಕ್ಕಾಗಿ ವರ್ಷಗಳ ಕಾಲ ಇಂಗ್ಲೆಂಡಿನ ಗ್ರಂಥಾಲಯಗಳಲ್ಲಿ ಕಳೆದಿದ್ದಾರೆ. ಸಾವಿರಾರು ಪುಟಗಳ ದಾಖಲೆಗಳನ್ನು ಸ್ವತಃ ಪರಿಶೀಲಿಸಿ ತಮ್ಮದೇ ಕೈಯಿಂದ ಟಿಪ್ಪಣಿಗಳನ್ನು ಮಾಡಿಕೊಂಡಿದ್ದರು. ಅಂತಹ ಮಹಾನ್ ವ್ಯಕ್ತಿಯ ಪರಿಶ್ರಮದಿಂದ ಭಾರತದ ನೈಜ ಚಿತ್ರಣವನ್ನು ನಾವು ಅರಿಯಲು ಸಾಧ್ಯವಾಗಿದೆ ಎಂದರೆ ಅವರ ಪರಿಶ್ರಮವನ್ನು ನಾವು ಸದಾ ಜ್ಞಾಪಿಸಿಕೊಳ್ಳಬೇಕಾಗಿದೆ.

ಡಾ.ರೋಹಿಣಾಕ್ಷ ಶಿರ್ಲಾಲು, ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

  • email
  • facebook
  • twitter
  • google+
  • WhatsApp
Tags: dharmapala

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಪೂರ್ವಗ್ರಹವಿಲ್ಲದೆ ಚರ್ಚೆಗೆ ತೆರೆದುಕೊಳ್ಳುವ ವ್ಯಕ್ತಿತ್ವ ಡಾ. ಸಿದ್ಧಲಿಂಗಯ್ಯ ಅವರದ್ದು.

ಪೂರ್ವಗ್ರಹವಿಲ್ಲದೆ ಚರ್ಚೆಗೆ ತೆರೆದುಕೊಳ್ಳುವ ವ್ಯಕ್ತಿತ್ವ ಡಾ. ಸಿದ್ಧಲಿಂಗಯ್ಯ ಅವರದ್ದು.

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಏ.2ರಿಂದ  ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಓದು-ಬರಹ ಅಭಿಯಾನ

ಏ.2ರಿಂದ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಓದು-ಬರಹ ಅಭಿಯಾನ

March 30, 2021
SIMI member planned to attack Ayodhya case judge

SIMI member planned to attack Ayodhya case judge

December 10, 2011
Banning his entry to Bengaluru; Dr Pravin Togadia writes on ‘the Ban Conspiracy’

Banning his entry to Bengaluru; Dr Pravin Togadia writes on ‘the Ban Conspiracy’

February 4, 2015
Spectacular RSS Patha Sanchalan held along with the shore of Uppala

Spectacular RSS Patha Sanchalan held along with the shore of Uppala

December 23, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In