ಅ. ಭಾ. ಪ್ರತಿನಿ ಸಭಾ ಬೈಠಕ್‌ನಲ್ಲಿ ಸರಕಾರ‍್ಯವಾಹರು ನೀಡಿದ ವರದಿಯ ಸಂಕ್ಷಿಪ್ತ ಸಾರ
ಅನೇಕ ವರ್ಷಗಳಿಂದ ಯಾರ ಸಾನ್ನಿಧ್ಯದಿಂದ ನಮಗೆ ಪ್ರೇರಣೆ ಲಭಿಸುತ್ತಿತ್ತೋ ಅಂತಹ ಶ್ರೇಷ್ಠ ಕರ್ಮಯೋಗಿ ಶ್ರದ್ಧೇಯ ನಾನಾಜಿ ದೇಶಮುಖ್ ಅವರು ತಮ್ಮ ೯೩ ವರ್ಷಗಳ ಜೀವನ ಯಾತ್ರೆಯಿಂದ ಧನ್ಯರಾದರು. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ತಮ್ಮ ಚಿಂತನ, ಅಧ್ಯಯನ ಮತ್ತು ಅನುಭವಗಳನ್ನು ಸಾಮಾಜಿಕ ಪುನರ್‌ರಚನಾ ಕಾರ್ಯಕ್ಕೆ ಸಮರ್ಪಿಸಿ, ತಮ್ಮ ದೇಹದಾನ ಮಾಡಿ ಅವರು ತಮ್ಮ ಆದರ್ಶವನ್ನು ಬೆಳಗಿಸಿದರು. ಚಿತ್ರಕೂಟ ಮತ್ತು ಗೊಂಡಾ ಪ್ರಕಲ್ಪಗಳು ಅವರ ಸ್ಮೃತಿಯನ್ನು ಜಾಗೃತವಾಗಿಡುವವು.
ಹಿಂದೆ ಅ. ಭಾ. ಸಹ-ಬೌದ್ದಿಕ್ ಪ್ರಮುಖ್ ಹಾಗೂ ಮಹಾರಾಷ್ಟ್ರ ಪ್ರಾಂತದ ಕಾರ್ಯವಾಹರಾಗಿ ದೀರ್ಘಕಾಲದವರೆಗೆ ನಮಗೆ ಮಾರ್ಗದರ್ಶನ ಮಾಡುತ್ತಿದ್ದ ಡಾ. ಶ್ರೀಪತಿ ಶಾಸ್ತ್ರಿಯವರು ಪುಣೆಯಲ್ಲಿ ಸ್ವರ್ಗಸ್ಥರಾದರು. ಡಾ. ಶ್ರೀಪತಿ ಶಾಸ್ತ್ರಿಯವರ ಚಿಂತನ, ಅಧ್ಯಯನ, ವಕ್ತೃತ್ವ, ಕರ್ತೃತ್ವ ಇವೆಲ್ಲ ಸಂಘಕಾರ್ಯಕ್ಕೆ ಮುಡಿಪಾಗಿದ್ದವು. ಮಹಾರಾಷ್ಟ್ರದಲ್ಲಿ , ವಿಶೇಷವಾಗಿ ಪುಣೆಯ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ವಿಶೇಷ ಯೋಗದಾನವಿದೆ. ಅವರ ಸ್ನೇಹಕ್ಕೆ ಯಾವ ಸೀಮೆಯೂ ಇರಲಿಲ್ಲ. ಇಂತಹ ಪ್ರೇರಕ ವ್ಯಕ್ತಿತ್ವ ಇಂದು ನಮ್ಮೊಡನಿಲ್ಲ.
ದಕ್ಷಿಣ ಕರ್ನಾಟಕ ಪ್ರಾಂತದ ಮಾನ್ಯ ಸಹ ಪ್ರಾಂತ ಸಂಘಚಾಲಕ ಡಾ. ಕೃಷ್ಣಮೂರ್ತಿಯವರು ತಮ್ಮ ಸರಳ ಜೀವನಶೈಲಿ, ಮೃದು ಮತ್ತು ಸ್ನೇಹಸ್ವಭಾವದಿಂದ ಪ್ರಭಾವಿಸುವವರಾಗಿದ್ದರು, ಅಲ್ಪಾಯುವಿನಲ್ಲಿಯೇ ಕ್ಯಾನ್ಸರ್‌ರೋಗದೊಡನೆ ಸೆಣಸುತ್ತ ನಮ್ಮನ್ನು ಅಗಲಿದರು.
ಸಂಗೀತ ಕ್ಷೇತ್ರದಲ್ಲಿ ತಮ್ಮ ಸಾಧನೆಯಿಂದ ಸ್ವನಾಮಧನ್ಯರಾದ ಶ್ರೀ ಅಶ್ವತ್ಥ್ ಮತ್ತು ಕರ್ನಾಟಕ ಸಿನಿಮಾ ಜಗತ್ತಿನ ಶ್ರೀ ವಿಷ್ಣುವರ್ಧನ್ ಇವರು ಇಂದು ನಮ್ಮೊಡನಿಲ್ಲ.
ಇಂತಹ ಎಲ್ಲಾ ದಿವಂಗತ ಬಂಧುಗಳಿಗೆ ನಾವು ಕೃತಜ್ಞತೆಯಿಂದ ಮೌನ ಶ್ರದ್ಧಾಂಜಲಿ ಅರ್ಪಿಸುತ್ತೇವೆ ಹಾಗೂ ಆ ಬಂಧುಗಳೆಲ್ಲರ ಕುಟುಂಬದವರು, ಸಹ ಯಾತ್ರಿಕರ ಅಂತಃಕರಣದ ವೇದನೆಯ ಬಗ್ಗೆ ಹಾರ್ದಿಕ ಸಹಾನುಭೂತಿ ವ್ಯಕ್ತಪಡಿಸುತ್ತೇವೆ.
ಕಾರ್ಯಸ್ಥಿತಿ
ಪ್ರತಿವರ್ಷದಂತೆ ಮೇ-ಜೂನ್ ೨೦೦೯ ರಲ್ಲಿ ದೇಶಾದ್ಯಂತ ೬೮ ಸ್ಥಾನಗಳಲ್ಲಿ ಸಂಘ ಶಿಕ್ಷಾವರ್ಗಗಳು ನಡೆದುವು. ಪ್ರಥಮ ವರ್ಷದ ಪ್ರಶಿಕ್ಷಣ ವರ್ಗ ಪ್ರಾಂತಗಳ ಯೋಜನೆಗನುಸಾರ ಮತ್ತು ದ್ವಿತೀಯ ವರ್ಷದ ವರ್ಗವು ಕ್ಷೇತ್ರದ ಯೋಜನೆಗನುಸಾರ ನಡೆದುವು. ಕೆಲವು ಕ್ಷೇತ್ರಗಳಲ್ಲಿ, ದಕ್ಷಿಣ ಮಧ್ಯ ಮತ್ತು ಪೂರ್ವಕ್ಷೇತ್ರಗಳಲ್ಲಿ ಭಾಷೆಗಳ ಕಠಿಣತೆಯನ್ನು ಗಮನಿಸಿ ಭಾಷಾನುಸಾರ ವರ್ಗಗಳನ್ನು ಆಯೋಜಿಸಲಾಯಿತು.
೪೭ ಸ್ಥಾನಗಳಲ್ಲಿ ನಡೆದಿದ್ದ ಪ್ರಥಮ ವರ್ಷ ವರ್ಗಗಳಲ್ಲಿ ೭೦೭೮ ಸ್ಥಾನಗಳಿಂದ ೧೦,೬೨೩ ಶಿಕ್ಷಾರ್ಥಿಗಳು ಹಾಗೂ ೧೩ ಸ್ಥಾನಗಳಲ್ಲಿ ನಡೆದಿದ್ದ ದ್ವಿತೀಯ ವರ್ಷ ವರ್ಗಗಳಲ್ಲಿ ೨೧೧೬ ಸ್ಥಾನಗಳಿಂದ ೨೫೮೧ ಶಿಕ್ಷಾರ್ಥಿಗಳು ಭಾಗವಹಿಸಿದ್ದರು. ತೃತೀಯ ವರ್ಷದ ವರ್ಗಕ್ಕೆ ೮೫೯ ಸ್ಥಾನಗಳಿಂದ ೯೨೩ ಶಿಕ್ಷಾರ್ಥಿಗಳು ಬಂದಿದ್ದರು. ಪ್ರಥಮ ವರ್ಷ ವಿಶೇಷ ವರ್ಗಗಳು ೭ ಸ್ಥಾನಗಳಲ್ಲಿ ನಡೆದಿದ್ದು, ಅವುಗಳಲ್ಲಿ ೨೮೯ ಸ್ಥಾನಗಳಿಂದ ೩೪೬ ಶಿಕ್ಷಾರ್ಥಿಗಳು ಭಾಗವಹಿಸಿದ್ದರು. ಈ ವರ್ಷ ಡಿಸೆಂಬರ್‌ನಲ್ಲಿ ತೃತೀಯ ವರ್ಷ ವಿಶೇಷ ವರ್ಗವನ್ನೂ ಆಯೋಜಿಸಲಾಗಿದ್ದು ಅದರಲ್ಲಿ ೨೫೧ ಸ್ಥಾನಗಳಿಂದ ೩೧೦ ಶಿಕ್ಷಾರ್ಥಿಗಳು ಭಾಗವಹಿಸಿದ್ದರು. ಕಳೆದ ವರ್ಷ ದ್ವಿತೀಯ ವರ್ಷ ವಿಶೇಷ ವರ್ಗವನ್ನು ಆಯೋಜಿಸಿರಲಿಲ್ಲ. ಈ ವರ್ಷ ಮೇ-ಜೂನ್‌ನಲ್ಲಿ ದೇಶಾದ್ಯಂತದ ಆಯ್ಕೆಯ ಸ್ಥಾನಗಳಲ್ಲಿ ದ್ವಿತೀಯ ವರ್ಷ ವಿಶೇಷ ವರ್ಗಗಳನ್ನು ಆಯೋಜಿಸಲಾಗುವುದು.
ಇಂದು ದೇಶಾದ್ಯಂತ ೨೭,೦೮೯ ಸ್ಥಾನಗಳಲ್ಲಿ ೩೯,೮೨೩ ಶಾಖೆಗಳು ನಡೆಯುತ್ತಿವೆ. ೭೩೫೬ಸ್ಥಾನಗಳಲ್ಲಿ ಸಾಪ್ತಾಹಿಕ ಮಿಲನ್ ಹಾಗೂ ೬೯೪೯ ಸ್ಥಾನಗಳಲ್ಲಿ ಸಂಘ ಮಂಡಲಿಯ ರೂಪದಲ್ಲಿ ಏಕತ್ರೀಕರಣ ನಡೆಯುತ್ತಿದೆ.
ಪ.ಪೂ. ಸರಸಂಘಚಾಲಕರ ಪ್ರವಾಸ
ನಮ್ಮ ಪರಂಪರೆಯಂತೆ ಪರಮ ಪೂಜ್ಯ ಸರಸಂಘಚಾಲಕರ ಹೊಣೆ ವಹಿಸಿದ ಬಳಿಕ ಮಾನ್ಯ ಮೋಹನ್‌ಜೀ ಭಾಗವತ್ ಅವರು ದೇಶದ ಪ್ರಮುಖ ಸ್ಥಾನಗಳಿಗೆ ಪ್ರವಾಸ ಮಾಡುವ ಯೋಜನೆಯನ್ನು ಮಾಡಲಾಯಿತು. ಈ ಪ್ರವಾಸದಲ್ಲಿ ಸಂಘಟನೆಯ ದೃಢತೆಯ ದೃಷ್ಟಿಯಿಂದ ಸರಸಂಘಚಾಲಕ್ ಪ್ರಣಾಮ್ ಕಾರ್ಯಕ್ರಮ ಹಾಗೂ ಸಾಮಾಜಿಕ ಸದ್ಭಾವನಾ ಬೈಠಕ್‌ಗಳನ್ನು ಆಯೋಜಿಸಬೇಕು ಮತ್ತು ಆಯ್ಕೆ ಸ್ಥಾನಗಳಲ್ಲಿ ಸುದ್ದಿಗೋಷ್ಠಿಗಳು ಆಗಬೇಕೆಂದು ಯೋಚಿಸಲಾಗಿತ್ತು.
ಎಲ್ಲೆಡೆಯೂ ಕಾರ್ಯಕರ್ತರು ಪರಿಶ್ರಮದಿಂದ ಆಯೋಜನೆ ಮಾಡಿದರು. ವಿಶೇಷವಾಗಿ ದಿಲ್ಲಿ, ಮಹಾಕೌಶಲ್ ಮತ್ತು ಕೇರಳದ ಕಾರ್ಯಕ್ರಮಗಳನ್ನು ಬಹು ಪ್ರಭಾವಿಯಾಗಿದ್ದವು. ಕೇರಳದ ಕಾರ್ಯಕ್ರಮವು ಪ್ರಾಯಶಃ ಇದುವರೆಗಿನ ಎಲ್ಲಕ್ಕೂ ವಿಶಾಲ ಕಾರ್ಯಕ್ರಮವಾಗಿದೆ. ಒಂದೇ ಸ್ಥಾನದಲ್ಲಿ ಸುಮಾರು ೯೨,೦೦೦ ಗಣವೇಷಧಾರಿ ಸ್ವಯಂಸೇವಕರ ಉಪಸ್ಥಿತಿಯು ಅದಾಗಿಯೇ ಒಂದು ವಿಶೇಷವಾಗಿದೆ. ಎಲ್ಲ ಪ್ರಸಾರ ಮಾಧ್ಯಮಗಳು ಸೂಕ್ತ ಪ್ರಸಿದ್ಧಿ ನೀಡಿ ಸಂಘದ ಶಕ್ತಿಯನ್ನು ಗೌರವಿಸಿವೆ.
ದೇಶಾದ್ಯಂತ ಎಲ್ಲ ಕಾರ್ಯಕ್ರಮಗಳಲ್ಲಿ ೨,೬೦,೨೩೧ ಸ್ವಯಂಸೇವಕರು ಗಣವೇಷದಲ್ಲಿ ಮತ್ತು ಬೃಹತ್ ಸಂಖ್ಯೆಯಲ್ಲಿ ಮಾತಾ-ಭಗಿನಿಯರು ಹಾಗೂ ಸಜ್ಜನರ ಉಪಸ್ಥಿತಿಯಿತ್ತು. ಬಹಿರಂಗ ಕಾರ್ಯಕ್ರಮಗಳಲ್ಲಿ ಭುವನೇಶ್ವರ ಮತ್ತು ತಿರುವನಂತಪುರದ ಕಾರ್ಯಕ್ರಮಗಳು ಬಹು ಉಚ್ಚಮಟ್ಟದ್ದಾಗಿದ್ದವು. ಸದ್ಭಾವನಾ ಬೈಠಕ್‌ಗಳು : ಪಂಥ, ಸಂಪ್ರದಾಯ ಮತ್ತು ವಿವಿಧ ಜಾತಿ-ಪಂಗಡಗಳ ಪ್ರಮುಖರ ಬೈಠಕ್‌ಗಳನ್ನು ಆಯೋಜಿಸಲಾಗಿತ್ತು. ೩೦೦೦ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.
ಮುಂಬಯಿಯಲ್ಲಿ ವಿವಿಧ ಭಾಷಿಕರ ಸಮುದಾಯಗಳಿವೆ, ಆದ್ದರಿಂದ ಅಲ್ಲಿಯೇ ಸಮುದಾಯಗಳ ಪ್ರಭಾವೀ ನೇತೃತ್ವ ವಹಿಸುವ ವ್ಯಕ್ತಿಗಳ ವಿಶೇಷ ಬೈಠಕ್ ಆಯೋಜಿಸಲಾಗಿತ್ತು. ಜಮ್ಮೂ-ಕಾಶ್ಮೀರದ ವಿಶೇಷ ಪರಿಸ್ಥಿತಿಯನ್ನು ಗಮನಿಸಿ ಅಲ್ಲಿ ವಿಶೇಷ ರೀತಿಯಲ್ಲಿ ಆಯೋಜಿಸಲಾಗಿದ್ದ ಬೈಠಕ್‌ನಲ್ಲಿ ೧೦೦೦ಕ್ಕೂ ಹೆಚ್ಚು ಗಣ್ಯರು ಉಪಸ್ಥಿತರಿದ್ದರು. ೯ ಸ್ಥಾನಗಳಲ್ಲಿ ಪೂಜ್ಯ ಸಂತರು ಸಾಮೂಹಿಕವಾಗಿ ಸೇರುವ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ೧೫೦ ಪೂಜ್ಯ ಸಂತರು ಉಪಸ್ಥಿತರಿದ್ದರು. ಈ ರೀತಿಯಾಗಿ ಎಲ್ಲ ಸ್ತರಗಳಲ್ಲೂ ಮಾತುಕತೆಯ ಪ್ರಕ್ರಿಯೆ ನಡೆಯುವಂತೆ ಪ್ರಯತ್ನಿಸಲಾಯಿತು. ‘ನಾವೆಲ್ಲರೂ ಒಂದೇ ಮಾತೆಯ ಪುತ್ರರು’ಎಂಬ ಭಾವನೆ ವ್ಯಕ್ತವಾಯಿತು. ನಮ್ಮ ಸಮಾಜವನ್ನು ಒಡೆದು ತುಂಡುತುಂಡಾಗಿಸಲು ಯತ್ನಿಸುವವರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು. ಇಂತಹ ವಿಚ್ಛಿದ್ರಕಾರಿ ಷಡ್ಯಂತ್ರಗಳಿಂದ ನಮ್ಮ ಸಮಾಜವನ್ನು ನಾವು ರಕ್ಷಿಸಬೇಕು, ಎಂಬ ಭಾವನೆಯೇ ಈ ಸಾಮಾಜಿಕ ಸದ್ಭಾವನಾ ಬೈಠಕ್‌ಗಳಲ್ಲಿ ವ್ಯಕ್ತವಾಯಿತು.
ರಾಷ್ಟ್ರೀಯ ಸೇವಾ ಭಾರತಿಯಿಂದ
‘ಸೇವಾ ಸಂಗಮ’ ಆಯೋಜನೆ
೬, ೭ ಮತ್ತು ೮ ಫೆಬ್ರವರಿ ೨೦೧೦, ಬೆಂಗಳೂರಿನಲ್ಲಿ ಸೇವಾ ಸಂಗಮವನ್ನು ಆಯೋಜಿಸಲಾಯಿತು. ಸೇವಾ ವಿಭಾಗದ ಕಾರ್ಯ ಆರಂಭವಾಗಿ ೨೦ ವರ್ಷ ಪೂರ್ಣಗೊಂಡಿವೆ. ಸೂಕ್ತ ಸಮಯದಲ್ಲಿಯೇ ಈ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು. ೧೦ ವಿವಿಧ ಅಖಿಲ ಭಾರತೀಯ ಸಂಸ್ಥೆಗಳಿಂದ ದೇಶದಲ್ಲಿ ಇಂದು ೧ ಲಕ್ಷ ೫೬ ಸಾವಿರ ಸೇವಾ ಕಾರ್ಯಗಳು ನಡೆಯುತ್ತಿವೆ. ಸುಮಾರು ೬೦,೦೦೦ ಸೇವಾಕಾರ್ಯಗಳನ್ನು ನಗರ ಮತ್ತು ಜಿಲ್ಲಾ ಮಟ್ಟಗಳಲ್ಲಿ ರಚಿಸಿರುವ ನ್ಯಾಸಗಳು ನಡೆಸುತ್ತಿವೆ. ಇಂತಹ ನ್ಯಾಸಗಳ ಸಮನ್ವಯ, ಪ್ರಶಿಕ್ಷಣ, ಪ್ರಚಾರ-ಪ್ರಸಾರಗಳ ಉದ್ದೇಶದಿಂದಲೇ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಸೇವಾ ಭಾರತಿ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ರಾಷ್ಟ್ರೀಯ ಸೇವಾಭಾರತಿಯ ಆಶ್ರಯದಲ್ಲಿಯೇ ‘ಸೇವಾ ಸಂಗಮ’ವನ್ನು ಆಯೋಜಿಸಲಾಯಿತು.
ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತದ ೪೫೨ ಸಂಸ್ಥೆಗಳ ೯೩೦ ಪ್ರತಿನಿಗಳು ಉಪಸ್ಥಿತರಿದ್ದರು. ಅವರಲ್ಲಿ ೭೫ ಮಹಿಳೆಯರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಪೂರ್ವ ಸರಸಂಘಚಾಲಕ ಮಾನ್ಯ ಸುದರ್ಶನ್‌ಜಿ ಮತ್ತು ಪೂಜ್ಯ ಶ್ರೀ ಶ್ರೀ ರವಿಶಂಕರ್ ಅವರ ಉಪಸ್ಥಿತಿಯು ಪ್ರೇರಕವಾಗಿತ್ತು. ಬೆಂಗಳೂರಿನ ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ ಬಹಿರಂಗ ಕಾರ್ಯಕ್ರಮ ನಡೆಯಿತು. ಪ. ಪೂ. ಸರಸಂಘಚಾಲಕ ಮಾನ್ಯ ಮೋಹನ್‌ಜಿ ಭಾಗವತ್ ಮತ್ತು ಯೋಗಗುರು ಪೂಜ್ಯ ಶ್ರೀ ರಾಮದೇವ್‌ಜಿಯವರ ಮಾರ್ಗದರ್ಶನ ಲಭಿಸಿತು. ಕರ್ನಾಟಕದ ಮುಖ್ಯಮಂತ್ರಿಯು ವಿಶೇಷವಾಗಿ ಉಪಸ್ಥಿತರಿದ್ದರು.
ಇತರ ಸಮಾವೇಶಗಳಲ್ಲಿ ಸಹಸರಕಾರ್ಯವಾಹ ಶ್ರೀದತ್ತಾತ್ರೇಯ ಹೊಸಬಾಳೆ ಮತ್ತು ಶ್ರೀ ಮದನದಾಸ್‌ಜಿಯವರ ಮಾರ್ಗದರ್ಶನ ಲಭಿಸಿತು.
ಸಮಾರೋಪದಲ್ಲಿ ಮಾನ್ಯ ಸರಕಾರ್ಯವಾಹ ಶ್ರೀ ಭಯ್ಯಾಜಿ ಜೋಶಿ ಉಪಸ್ಥಿತರಿದ್ದರು. ಈ ಸೇವಾಸಂಗಮವು ಭವಿಷ್ಯದ ಕಾರ್ಯವೃದ್ದಿಯ ದೃಷ್ಟಿಯಿಂದ ಮೈಲಿಗಲ್ಲೆನಿಸೀತು. ಸಂಖ್ಯಾತ್ಮಕ ಮತ್ತು ಗುಣಾತ್ಮಕ ವೃದ್ಧಿಯ ಸಂಕಲ್ಪದೊಂದಿಗೆ ಕಾರ್ಯಕರ್ತರು ತೆರಳಬೇಕೆಂದು ಸಮಾರಂಭದ ಸಂದೇಶವಾಗಿತ್ತು.
ಸೇವಾಕಾರ್ಯ
ಉಜ್ಜೈನಿಯಲ್ಲಿ ಸ್ವಯಂಸೇವಕರಿಂದ ಕ್ಷಿಪ್ರಾನದಿಯ ಸ್ವಚ್ಛತೆ : ಮಳೆಯ ಅಭಾವ ಮತ್ತು ಕಶ್ಮಲಗಳಿಂದಾಗಿ ಕ್ಷಿಪ್ರಾದಂತಹ ಪವಿತ್ರ ನದಿಯ ಪ್ರವಾಹಕ್ಕೆ ಅಡ್ಡಿಯುಂಟಾಗಿತ್ತು. ಇದರಿಂದ ಜಲಸಂಗ್ರಹ ಸಾಮರ್ಥ್ಯ ಕಡಿಮೆಯಾಗಿತ್ತು. ಆಗ ಉಜ್ಜೈನಿಯ ಸ್ವಯಂಸೇವಕರು ಸಮಾಜದ ಜೊತೆಗೂಡಿ ಕ್ಷಿಪ್ರಾ ನದಿಯ ಸ್ವಚ್ಛತೆಯ ಭಗೀರಥ ಕಾರ್ಯವನ್ನು ಮಾಡಲು ಸಂಕಲ್ಪಿಸಿದರು.
ಪ್ರಥಮ ಹಂತದಲ್ಲಿ ೯೦೦ ಮೀಟರಿನ ಸ್ವಚ್ಛತಾ ಕಾರ್ಯವನ್ನು ಪೂರೈಸಲಾಯಿತು. ಸ್ವಯಂಸೇವಕರ ಈ ಕಾರ್ಯದಲ್ಲಿ ಉಜ್ಜೈನಿ ಮಹಾನಗರದ ವಿವಿಧ ಸಾಮಾಜಿಕ, ರಾಜಕೀಯ, ಸೇವಾನಿರತ ಸಂಸ್ಥೆಗಳನ್ನು ಜೊತೆಗೂಡಿಸಲಾಯಿತು. ೧೯೦ ಸ್ವಯಸೇವಾ ಸಂಘಟನೆಗಳ ಸಹಕಾರದಿಂದ ೧೧,೯೫೦ ಶ್ರಮದಾನಿ ಕಾರ್ಯಕರ್ತರು ಕೆಲಸ ಮಾಡಿದರು. ೨೧ ದಿನಗಳ ಅಭಿಯಾನ ನಡೆಯಿತು. ಅದರಿಂದ ೪೧,೯೯೮ ಘನ ಮೀಟರ್ ಆಳ ಅಗೆಯಲಾಯಿತು. ಇದೊಂದು ಅಭಿನವ ಪ್ರಯೋಗವಾಗಿದೆ.
ಹರಿದ್ವಾರದಲ್ಲಿ ನಡೆದ ರಾಷ್ಟರಕ್ಷಾ ಸಮ್ಮೇಳನ
‘ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಶನಲ್ ಸೆಕ್ಯೂರಿಟಿ’ ಆಶ್ರಯದಲ್ಲಿ ನಡೆದ ರಾಷ್ಟ್ರ ರಕ್ಷಾ ಸಮ್ಮೇಳನದಲ್ಲಿ ೭೦೦ ಕ್ಕೂ ಹೆಚ್ಚು ವಿಶೇಷಜ್ಞರು ಭಾಗವಹಿಸಿದ್ದರು. ಆಡಳಿತಾತ್ಮಕ ಸೇವೆ ಮತ್ತು ರಕ್ಷಣೆಗೆ ಸಂಬಂಸಿದ ವಿಶೇಷಜ್ಞರ ಉಪಸ್ಥಿತಿ ಉಲ್ಲೇಖನೀಯವಾಗಿತ್ತು. ಮಾರ್ಚ್ ೯, ೧೦ ರಂದು ನಡೆದ ಈ ಸಮ್ಮೇಳನದಲ್ಲಿ ಪುಣೆಯ ಘಟನೆಯೊಂದಿಗೇ (ಇದು ಮತ್ತೊಮ್ಮೆ ಮುಂಬಯಿ ಹಲ್ಲೆಯ ಗಾಯಗಳನ್ನು ಸೀಳಿತು) ಇಂದಿನ ರಕ್ಷಣಾ ವ್ಯವಸ್ಥೆಯ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. ವಿಶೇಷಜ್ಞರು ತಮ್ಮ ತಮ್ಮ ಅಧ್ಯಯನ-ಲೇಖನಗಳನ್ನು ಮಂಡಿಸಿದರು. ಸರಕಾರ, ಸ್ವಯಂಸೇವಾ ಸಂಸ್ಥೆಗಳು, ವಿಜ್ಞಾನಿಗಳು, ರಕ್ಷಣೆಗೆ ಸಂಬಂಸಿದ ಸಂಸ್ಥೆಗಳ ನಿಲುವಿನ ಕುರಿತು ವಿಶೇಷಜ್ಞರು ತಮ್ಮ ವಿಚಾರ, ಗಾಢ ಚಿಂತನೆ, ತಜ್ಞರ ಅಭಿಪ್ರಾಯ, ದೃಷ್ಟಿಕೋನ ಇವನ್ನು ಮಂಡಿಸಿದರು. ‘ಫಿನ್ಸ್’ ಆಯೋಜಿಸಿದ ಈ ಸಮ್ಮೇಳನದಲ್ಲಿ ಬಂದಿದ್ದ ಸಲಹೆ ಮತ್ತು ಅಭಿಪ್ರಾಯಗಳನ್ನು ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸುವುದು ಅಗತ್ಯ.
ಮಣಿಪುರದ ಇಂದಿನ ಚಿಂತಾಜನಕ ಸ್ಥಿತಿ
ಮಣಿಪುರದ ಇಂದಿನ ಹದಗೆಟ್ಟ ಪರಿಸ್ಥಿತಿಯಿಂದಾಗಿ ದೇಶಾದ್ಯಂತದ ಜನ ಚಿಂತಿತರಾಗಿದ್ದಾರೆ. ೧೯೮೦ ರಲ್ಲಿ ನಡೆದ ಹತೋಟಿ ಮೀರಿದ ಉಗ್ರವಾದಿ ಘಟನೆಗಳಿಂದ ಅಲ್ಲಿಯ ಸಾಮಾನ್ಯ ಜನಜೀವನವೂ ವಿಪತ್ತಿಗೀಡಾಗಿದೆ. ೨೦೦೫ ರಲ್ಲಿ ಅಮೂಲ್ಯ ಗ್ರಂಥಗಳ ಮತ್ತು ಪಾಂಡುಲಿಪಿಗಳ ಕೇಂದ್ರ ಪುಸ್ತಕಾಲಯವನ್ನು ಸುಟ್ಟುಹಾಕಲಾಗಿತ್ತು. ಗೋವಿಂದಜಿ ಮತ್ತು ಇಂಫಾಲ್‌ನ ದೇವಸ್ಥಾನಗಳಲ್ಲಿ ಬಾಂಬು ಸೋಟಿಸಿ ಹಿಂದುಗಳನ್ನು ಹತ್ಯೆ ಮಾಡಲಾಯಿತು. ಉಗ್ರಗಾಮಿಗಳ ಆದೇಶದಂತೆ ಜುಲೈ ೨೦೦೯ ರಿಂದ ಜನವರಿ ೨೦೧೦ರ ವರೆಗೆ ಹಿಂದೂ ಕ್ಷೇತ್ರಗಳ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಯಿತು. ಹಾಗೂ ನಾಲ್ಕು ಲಕ್ಷಕ್ಕೂ ಹೆಚ್ಚು. ವಿದ್ಯಾರ್ಥಿಗಳ ಭವಿಷ್ಯ ವಿಪತ್ತಿಗೀಡಾಯಿತು.
ಈ ರೀತಿಯಾಗಿ ಮಣಿಪುರದ ವೈಷ್ಣವ-ಹಿಂದೂ ಜನರು ಮಣಿಪುರ ಬಿಟ್ಟು ಹೋಗುವಂತೆ ಬೆದರಿಕೆ ಒಡ್ಡಲಾಗುತ್ತಿದೆ.
ಹಿಂದುಗಳು ನಿರಂತರವಾಗಿ ಪಲಾಯನಗೈಯುತ್ತಿರುವುದು, ಕಾಶ್ಮೀರ ಕಣಿವೆಯ ಬಳಿಕ ಎರಡನೆಯದಾಗಿ ಮಣಿಪುರ ಪ್ರಾಂತದಿಂದಲೇ. ಉಗ್ರಗಾಮಿಗಳು ಅಕ್ರಮವಾಗಿ ವಸೂಲು ಮಾಡುತ್ತಿರುವುದರಿಂದ ಎಲ್ಲ ರೀತಿಯ ಆರ್ಥಿಕ ಅಭಿವೃದ್ಧಿಯು ಕುಂಠಿತವಾಗಿದೆ. ರಕ್ಷಣಾ ವ್ಯವಸ್ಥೆ ಅದೆಷ್ಟು ದುರ್ಬಲವಾಗಿದೆಯೆಂದರೆ ರಾಜಭವನ ಮತ್ತು ಮುಖ್ಯಮಂತ್ರಿಯ ಕಚೇರಿಗಳಲ್ಲಿಯೂ ಸೋಟಗಳಾಗಿವೆ. ಕೇಂದ್ರ ಗೃಹಮಂತ್ರಿಯವರೂ ಅಲ್ಲಿಯ ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡಿದ್ದಾರೆ.
ಮಣಿಪುರದ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಸಾಧ್ಯವಿದ್ದಷ್ಟೂ ಪ್ರಯತ್ನಿಸಬೇಕು ಎಂಬುದು ಎಲ್ಲ ರಾಷ್ಟ್ರವಾದಿ ಶಕ್ತಿಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಮ್ಮ ಆಗ್ರಹವಾಗಿದೆ.
ಕರೆ
ನಮ್ಮ ಕಾರ್ಯದ ಯಶಸ್ಸು ಅನುಕೂಲ-ಪ್ರತಿಕೂಲ ವಾತಾವರಣವನ್ನು ಅವಲಂಬಿಸಿಲ್ಲ. ಕೇವಲ ಕಾರ್ಯಪದ್ಧತಿಯನ್ನೂ ಅವಲಂಬಿಸಿಲ್ಲ. ಸಮರ್ಪಿತ ಮತ್ತು ಪ್ರತಿಬದ್ಧತೆಯ ಕಾರ್ಯಕರ್ತರು ಯಾವುದೇ ಪರಿಸ್ಥಿತಿಯಲ್ಲಿಯೂ ಪರಿಣಾಮ ಸಾಸಬಲ್ಲರು. ಇದಂತೂ ಎಲ್ಲ ಕಡೆ ಅನುಕೂಲತೆಯ ವಾತಾವರಣವಿದೆ, ಆದರೆ ಪರಿಶ್ರಮವಿಲ್ಲದೆ ಯಾವ ಕಾರ್ಯವೂ ಯಶಸ್ವಿಯಾಗದು, ಯಶಸ್ಸಿಗೆ ಕಾರಣವಾದ ಮೌಲ್ಯವನ್ನು ತೆರಲೇಬೇಕಾಗುತ್ತದೆ. ಸಹಜತೆಯಿಂದ, ನಿರಹಂಕಾರಿ ಪ್ರವೃತ್ತಿಯಿಂದ, ಮುಗುಳಗುತ್ತ ತಮ್ಮ ಸ್ವಯಂಸ್ವೀಕೃತ ಮಾರ್ಗದಲ್ಲಿ ನಿರಂತರತೆ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿರಬೇಕು ಎಂಬುದೇ ಎಲ್ಲರಿಂದ ಅಪೇಕ್ಷೆ, ಪುರುಷಾರ್ಥವಾದರೂ ಇದೆ.
ಸ್ವಾಮಿ ವಿವೇಕಾನಂದರ ಆ ಶಬ್ದಗಳನ್ನು ನಾವು ಸ್ಮರಿಸೋಣ.ಅವರು ಹೇಳುತ್ತಾರೆ, “ಅವರು ರೌದ್ರತೆಯನ್ನು ಪೂಜಿಸುತ್ತಾರೆ, ವಿಪತ್ತುಗಳಲ್ಲಿ ಜೀವಿಸುವುದು ಅವರಿಗೆ ಪ್ರಿಯವೇ. ಸ್ನಾಯುಗಳಲ್ಲಿ ತಾರುಣ್ಯದ ಪುಟಿದೇಳುವ ಶಕ್ತಿ ಮತ್ತು ಕಣ್ಣುಗಳಲ್ಲಿ ಧ್ಯೇಯವಾದದ ಹೊಳಪಿನೊಂದಿಗೆ ಮೋಹಪಾಶಗಳು ಮತ್ತು ಪ್ರತಿಕೂಲತೆಗಳ ಎಲ್ಲ ಬಿರುಗಾಳಿಗಳಲ್ಲೂ ದೃಢವಾಗಿ ನಿಂತು, ತಮ್ಮ ನಾಲ್ದಿಶೆಗಳಲ್ಲೂ ಪ್ರೇರಣೆಯ ಕಿರಣಗಳನ್ನು ಬೀರುತ್ತ ವಿಜಿಗೀಷು ಭಾವನೆಯಿಂದ ಮುನ್ನಡೆಯುತ್ತಾರೆ. ಅವರು ತಮ್ಮ ಸ್ವಪ್ನಗಳ ಗುರಿ ಮುಟ್ಟುವವರೆಗೂ ಒಂದರ ಮೇಲೊಂದು ಯಶಸ್ಸು ಸಾಸುತ್ತ ಮುಂದಕ್ಕೇ ನಡೆಯುತ್ತಿರುತ್ತಾರೆ.”