• Samvada
  • Videos
  • Categories
  • Events
  • About Us
  • Contact Us
Saturday, January 28, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Photos

ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

Vishwa Samvada Kendra by Vishwa Samvada Kendra
January 6, 2021
in Photos
250
0
ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ
491
SHARES
1.4k
VIEWS
Share on FacebookShare on Twitter

ಚಿತ್ರದುರ್ಗ: ಬಡತನವನ್ನು ಕಾರಣವಾಗಿಸಿಕೊಂಡು ಮಿಷನರಿಗಳು ಆಮಿಷ ಒಡ್ಡಿ ಮತಾಂತರಗೊಳಿಸುತ್ತಿವೆ. ಈ ಕುರಿತು ಸಮುದಾಯದ ಪೀಠಗಳು ಜನರನ್ನು ಜ್ಞಾಗತರನ್ನಾಗಿ ಮಾಡಬೇಕಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯ ನೆಪದಲ್ಲಿ ಮತಾಂತರಗೊಳಿಸಲಾಗುತ್ತಿದೆ ಎಂದು ಭಗೀರಥ ಪೀಠದ  ಡಾ. ಪುರುಷೋತ್ತಮನಂದ ಪುರಿ ಸ್ವಾಮೀಜಿ  ಆರೋಪಿಸಿದರು.

ಅವರು ಭೋವಿ ಗುರುಪೀಠದಲ್ಲಿ ನಡೆದ  ಮತಾಂತರ ಕುರಿತು ಮಠಾಧೀಶರೊಂದಿಗಿನ ಚಿಂತನ ಸಭೆಯಲ್ಲಿ‌ ಮಾತನಾಡುತ್ತಿದ್ದರು.

READ ALSO

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

ಹಿಂದೂ ಧರ್ಮದ ಮೇಲ್ವರ್ಗದ ಜನರು ಮತ್ತು ಮಠ-ಪೀಠಗಳು ಕೆಲವರ್ಗದವರೊಂದಿಗೆ ಸಾಮರಸ್ಯ ವಾತಾವರಣ ಸೃಷ್ಟಿಸಬೇಕು. ಕೆಲವು ಕಡೆ ಜಾತಿ ವ್ಯವಸ್ಥೆಯ ಕೀಳರಿಮೆಯಿಂದ ಮತಾಂತರಕ್ಕೆ ಕಾರಣವಾಗಿದೆ ಎಂದರು.

ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿಯವರು ಮಾತನಾಡಿ, ವಾದ ಮಾಡಿದರೆ ವಾಸ್ತವ ಮರೆಮಾಚುತ್ತದೆ. ಸಂವಿಧಾನ ನಮಗೆ ಎಲ್ಲವನ್ನು ನೀಡಿದೆ.  ಸಂವಿಧಾನದ ಆಶಯ ಜಾರಿಯಾಗಬೇಕು. ಸಮಸಮಾಜ ನಿರ್ಮಾಣಕ್ಕೆ ಸಂವಿಧಾನದ ಸ್ಪಷ್ಟ ಮಾರ್ಗದರ್ಶನವಿದೆ. ಮತಾಂತರಗೊಂಡ ಹಾಗೂ ಮತಾಂತರಗೊಳ್ಳುವ ಜನರೊಂದಿಗೆ ಸಂವಾದ ಮಾಡಿ ಜಾಗೃತಿ ಮೂಡಿಸಬೇಕಾಗಿದೆ. ಭಕ್ತರು ಮತ್ತು ಮಠಾಧೀಶರ ಮಧ್ಯ ಸಂವಹನ ಕೊರತೆಯಿಂದ ಮತಾಂತರ ಹೆಚ್ಚಾಗುತ್ತಿದೆ. ಮತಾಂತರ ವರ್ಗ-ವರ್ಣ  ವಿದ್ಯಾವಂತ-ಅವಿದ್ಯಾವಂತ, ಶ್ರೀಮಂತ-ಬಡವ ಮೀರಿ ಎಲ್ಲರನ್ನು ಮತಾಂತರಗೊಳಿಸುತ್ತಿದ್ದಾರೆ. ವಾಸ್ತವತೆ ಲೋಪವನ್ನು ಒಪ್ಪಿಕೊಂಡು ನಮ್ಮ ಜನರನ್ನು ಅಪ್ಪಿಕೊಳ್ಳೊಣ. ಶಿಕ್ಷಣ ಸಂಸ್ಕಾರದಿಂದ ಸಾಮಾಜಿಕ ನ್ಯಾಯ ಒದಗಿಸಬೇಕು. ಭಾರತ ಸಂವಿಧಾನದಲ್ಲಿ ಆರ್ಥಿಕ ಅಭಿವೃದ್ಧಿ ಅಷ್ಟೇ ಅಲ್ಲದೆ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ. ಅಲ್ಪತೃಪ್ತರಾಗಿ ಮತಾಂತರಗೊಳ್ಳಬೇಡಿ ಎಂದು ತಿಳಿಸಿದರು.

ಹರಳಯ್ಯ ಗುರುಪೀಠದ ಬಸವ ಹರಳಯ್ಯ ಶ್ರೀಗಳು ಮಾತನಾಡಿ,
ಆರ್ಥಿಕ ಸಬಲತೆ, ಜಾತಿ ನಾಶಮಾಡಿ ಜಾತ್ಯತೀತ ರಾಷ್ಟ್ರ ನಿರ್ಮಾಣಗೊಳ್ಳುತ್ತದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ವಿಚಲಿತರಾಗುವುದು ಸಹಜ. ಎಂದರು.ಛಲವಾದಿ ಗುರುಪೀಠದ ಬಸವ ನಾಗೀದೇವ ಶ್ರೀಗಳು ಮಾತನಾಡಿ, ವಿದ್ಯಾವಂತ ಯುವತಿಯರು ಮತಾಂತರಕ್ಕೆ ಒಳಾಗುತ್ತಿದ್ದಾರೆ. ಹಿಂದು ಧರ್ಮದ ಆಚರಣೆಗಳನ್ನು ಮರುಪರಿಶೀಲನೆ ಮಾಡಬೇಕಾಗಿದೆ. ನಮ್ಮ ಆಚರಣೆಗಳು ವೈಜ್ಞಾನಿಕತೆಯಿಂದ ತುಂಬಿದೆ ಅದರ ನೈಜ ಜ್ಞಾನವನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕಾಗಿದೆ. ನಮ್ಮ ಸೌಹಾರ್ದ ಮನೋಭಾವನೆಯಿಂದ ಭಾಗವಹಿಸಿದ್ದ ಅನ್ಯಧರ್ಮದ ಸಭೆಯ ವಿಡಿಯೋ ತುಣುಕನ್ನು ಹಿಡಿದು ನಮ್ಮ ಶಿಷ್ಯರನ್ನು ಮತಾಂತರಗೊಳಿಸಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಕೇರಿಯ ತಿಪ್ಪೇರುದ್ರ ಶ್ರೀಗಳು ಮಾತನಾಡಿ, ನಮ್ಮ ಪರಿಸರದ ಸುತ್ತ ಮತಾಂತರ ಆಗದೇ ಹಾಗೇ ನೋಡಿಕೊಳ್ಳಬೇಕು. ಜಾತ್ಯತೀತ ವಿವಾಹಗಳು ಜಾತಿಯ ಮೇಲೇರಿಮೆ ಕೀಳರಿಮೆಯ ನಾಶ ಮಾಡುತ್ತದೆ. ಹಿಂದು ಧರ್ಮಿಯರಲ್ಲಿ ಜಾತ್ಯತೀತ ವಾತಾವರಣ ನಿರ್ಮಾಣದಿಂದ ಮತಾಂತರ ತಡೆಗಟ್ಟಬಹುದು ಎಂದರು.ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಶ್ರೀಗಳು ಮಾತನಾಡಿ, ನಮ್ಮ ಹುಟ್ಟು ಧರ್ಮ ಸ್ಥಾಪನೆಗೆ ಕಾರಣವಾಗಬೇಕು. ಗ್ರಾಮಮಟ್ಟದ ಧರ್ಮ ಜಾಗೃತಿಯಿಂದ ಮತಾಂತರ ತಡೆಗಟ್ಟಬಹುದು ಎಂದರು.

ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಶ್ರೀಗಳು ಮಾತನಾಡಿ, ಪಠ್ಯ ಪುಸ್ತಕದಲ್ಲಿ ಕೆಲವೊಂದು ಅಂಶಗಳನ್ನು ಬದಲಾಯಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯೇ ಪರೋಕ್ಷವಾಗಿ ಮತಾಂತರಕ್ಕೆ ಇಂಬು ನೀಡುತ್ತದೆ. ದೇವಾಲಯಗಳು ಸಾರ್ವತ್ರಿಕವಾಗಬೇಕು. ದೇವಾಲಯಗಳು ಶೋಷಣೆರಹಿತ ಕೇಂದ್ರವಾಗಬೇಕು. ಮನೆಮನೆಗೆ ಜಾಗೃತಿಯ ಜಾಥವನ್ನು ಮಾಡೋಣ ಎಂದರು.

ಕೊರಟಗೆರೆಯ ಮಹಾಲಿಂಗ ಶ್ರೀಗಳು ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ,  ರಾಜಕೀಯವಾಗಿ, ಸಮಸಮಾಜದ ನಿರ್ಮಾಣವಾದರೆ ಮಾತ್ರ ಮತಾಂತರತಡೆಗಟ್ಟಲು ಸಾಧ್ಯ. ಮತಾಂತರಗೊಂಡ ಒಬ್ಬ ವ್ಯಕ್ತಿ ಇಡೀ ವ್ಯವಸ್ಥೆಯನ್ನು ಬದಲಾಯಿಸುತ್ತಾನೆ ಎಂದರು. ಬಂಜಾರ ಗುರುಪೀಠದ ಸರ್ದಾರ ಸೇವಾಲಾಲ್ ಶ್ರೀಗಳು ಮಾತನಾಡಿ, ಮುಗ್ದರನ್ನು ಮತಾಂತರಗೊಳಿಸುತ್ತಿದ್ದಾರೆ. ಧರ್ಮವುಳಿದರೆ ಮಠಮಾನ್ಯಗಳು ಉಳಿಯುತ್ತದೆ ಎಂದರು.

ಮಡಿವಾಳ ಗುರುಪೀಠದ ಡಾ.ಮಾಚಿದೇವ ಶ್ರೀಗಳು ಮಾತನಾಡಿ, ಮತಾಂತರ ವಿಚಾರದಲ್ಲಿ ಉದಾಸೀನ ಭಾವ ಹೊಂದಿದರೆ,ಈ ವಿಷಮ ಕಾರ್ಯ ಹೆಮ್ಮರವಾಗಿ ಕೋರಾನ ರೀತಿಯಲ್ಲಿ ಗ್ರಾಮ ತಾಲ್ಲೂಕು ಜಿಲ್ಲೆ ರಾಜ್ಯ ರಾಷ್ಟ್ರ ಜಗತ್ತನ್ನು ವ್ಯಾಪಿಸಿಕೊಂಡಿದೆ. ಇದರ ದಿವ್ಯೌಷಧಿಯನ್ನು ಮಠಮಾನ್ಯಗಳ ಮಠಾಧೀಶರು ಭವರೋಗ ವೈದ್ಯರಾಗಿ ನಮ್ಮ ಬಾಂಧವರನ್ನು ನಾವು ಉಳಿಸಿಕೊಳ್ಳಬೇಕೆಂದರು. ಕೇತೇಶ್ವರ ಮಠದ ಇಮ್ಮಡಿ ಕೇತೇಶ್ವರ ಶ್ರೀಗಳು ಮಾತನಾಡಿ, ಬಡತನದ ಬೇಗೆಯಲ್ಲಿ ಅಲ್ಪತೃಪ್ತಾರಾಗಿ ಮತಾಂತರಗೊಳ್ಳುವ ಜನರನ್ನು ಜಾಗೃತಿ ಮಾಡಬೇಕು.

ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀಗಳು ಮಾತನಾಡಿ ,ನಮ್ಮ ಧರ್ಮದ ತಿರಳನ್ನು ಅರ್ಥೈಸಿ ಘರ್ ವಾಪಸಿ ಕಾರ್ಯವನ್ನು ಮಾಡುತ್ತಿದ್ದೇವೆ. ಸರ್ವ ಮಠಾಧೀಶರ  ಸಹಕಾರದ ಅವಶ್ಯಕತೆಯಿದೆ ಎಂದು ಹೇಳುವ ಮೂಲಕ  ಮಠಾಧೀಶರುಗಳು ಮತಾಂತರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ಬಸವರಾಜ್. ಕುಬೇರಪ್ಪ  ಪ್ರಭಂಜನ್. ಓಂಕಾರಣ್ಣ. ಇತರರು ಭಾಗವಹಿಸಿದ್ದರು.

ವರದಿ ಸಹಕಾರ: ಸಂಯುಕ್ತ ವಾಣಿ

  • email
  • facebook
  • twitter
  • google+
  • WhatsApp

Related Posts

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale
ABPS

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale

March 20, 2021
ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ
Photos

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

January 15, 2021
ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?
Articles

ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?

January 2, 2021
ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು
BOOK REVIEW

ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು

February 22, 2021
ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್  ರ ಅರ್ಹತೆ
Articles

ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್ ರ ಅರ್ಹತೆ

December 31, 2020
ಉಜಿರೆಯಲ್ಲಿ ಪಾಕಿಸ್ತಾನ್ ಜಿಂಧಾಬಾದ್ ಘೋಷಣೆ
Photos

ಉಜಿರೆಯಲ್ಲಿ ಪಾಕಿಸ್ತಾನ್ ಜಿಂಧಾಬಾದ್ ಘೋಷಣೆ

December 31, 2020
Next Post
ರಾಮಮಂದಿರ ನಿರ್ಮಾಣಕ್ಕೆ   ಆದಿಚುಂಚನಗಿರಿ ಮಠ ಸಂಪೂರ್ಣವಾಗಿ ಸಹಕರಿಸುತ್ತವೆ : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ರಾಮಮಂದಿರ ನಿರ್ಮಾಣಕ್ಕೆ ಆದಿಚುಂಚನಗಿರಿ ಮಠ ಸಂಪೂರ್ಣವಾಗಿ ಸಹಕರಿಸುತ್ತವೆ : ಡಾ. ನಿರ್ಮಲಾನಂದನಾಥ ಸ್ವಾಮೀಜಿ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS Sarasanghachalak Mohan Bhagwat attends ‘Gunavatta Patha Sanchalan’ Program at Bhopal

RSS Sarasanghachalak Mohan Bhagwat attends ‘Gunavatta Patha Sanchalan’ Program at Bhopal

February 24, 2014
KREEDOTSAVA held at Sanghaniketan in Mangaluru, 1012 swayamsevaks from 89 Shakhas participated

KREEDOTSAVA held at Sanghaniketan in Mangaluru, 1012 swayamsevaks from 89 Shakhas participated

August 23, 2015

Ghosh Tarang: 3 day Ghosh Sibir (Band training camp) of RSS concluded at Andhra

February 11, 2013
Sabitha: First Woman from the Koraga community to be appointed as an Assistant Professor

Sabitha: First Woman from the Koraga community to be appointed as an Assistant Professor

January 8, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In