• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಮರೆತುಹೋದ ಸ್ವಾತಂತ್ರ್ಯ ಸೇನಾನಿ ರಾಣಿ ಗಾಯಿಡಿನ್ಲೂಯಿ!

Vishwa Samvada Kendra by Vishwa Samvada Kendra
January 27, 2022
in Articles
250
0
ಮರೆತುಹೋದ ಸ್ವಾತಂತ್ರ್ಯ ಸೇನಾನಿ ರಾಣಿ ಗಾಯಿಡಿನ್ಲೂಯಿ!
491
SHARES
1.4k
VIEWS
Share on FacebookShare on Twitter

       ಬ್ರಿಟಿಷರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು. ಅಂದಿನ ಸಂಪದ್ಭರಿತ ಭಾರತ ಅವರನ್ನು ಇಲ್ಲೇ ತಳವೂರುವಂತೆ ಮಾಡಿತು. ತಮ್ಮ ಕುಟೀಲ ಬುದ್ಧಿಯಿಂದ 1756ರ ಪ್ಲಾಸಿ ಕದನದಲ್ಲಿ ಗೆದ್ದು ತಮ್ಮ ಮೋಸ ವಂಚನೆಯನ್ನು ಜಗಜ್ಜಾಹಿರ ಮಾಡಿದ್ದು ಇತಿಹಾಸ. ಅವರನ್ನು ಇಲ್ಲಿಂದ ಓಡಿಸಿ ಅವರಿಂದ ಭಾರತವನ್ನು ಮುಕ್ತ ಮಾಡಲು ನಡೆದ ಹೋರಾಟದ ಮಾರ್ಗ ದೀರ್ಘವೂ ಮತ್ತು ಕಂಟಕಮಯವೂ ಆಗಿತ್ತು. ಇದು ಸತತ ಮತ್ತು ರಕ್ತರಂಜಿತ ಸಶಸ್ತ ಹೋರಾಟವಾಗಿತ್ತು. ಈ ಸಂಘರ್ಷ 19ನೇ ಶತಮಾನದ ಆರಂಭದಿಂದಲೇ ಆಗಿದ್ದು ಇತಿಹಾಸದಿಂದ ತಿಳಿಯುತ್ತದೆ. ಈ ಹೋರಾಟವನ್ನು ಇಷ್ಟು ಧೀರ್ಘಕಾಲ ಇರುವಂತೆ ನೋಡಿಕೊಂಡವರು ಸಶಸ್ತ್ತ್ರ ಹೋರಾಟಗಾರರು ಮತ್ತು ಭೂಗತ ಕ್ರಾಂತಿಕಾರಿಗಳು. ಸ್ವಾತಂತ್ರ್ಯ ಸಾಧನೆಗಾಗಿ ಆತ್ಮಾರ್ಪಣೆಯಿಂದ ಶ್ರೇಷ್ಠ ತ್ಯಾಗವನ್ನು ಮಾಡಿದವರು ಅವರು. ದೇಶವ್ಯಾಪಿ ನಡೆದ ಸಂಘರ್ಷ ಇದು. ಕಿತ್ತೂರು ಚನ್ನಮ್ಮ, ನಾನಾ ಸಾಹೇಬ ಪೇಶ್ವೆಯಿಂದ ಹಿಡಿದು ಈ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಒಯ್ದದ್ದು ನೇತಾಜಿ ಸುಭಾಷ್ ಚಂದ್ರಬೋಸ್ ಮತ್ತು ಅವರ ಅಜಾದ್ ಹಿಂದುಸೇನೆ.

     ಈ ಹೋರಾಟದಲ್ಲಿ ಅಸಂಖ್ಯಾ ವನವಾಸಿ ವೀರರು ತಮ್ಮದೇ ಸೈನ್ಯವನ್ನು ಕಟ್ಟಿ ಅಥವಾ ಏಕಾಂಗಿಯಾಗಿ ಬ್ರಿಟಿಷರ ವಿರುದ್ಧ ಪ್ರಬಲವಾದ ಹೋರಾಟವನ್ನು ಮಾಡಿದ್ದರು. ಕೇರಳದ ತಲಕಲ ಚಂದ್, ಕರ್ನಾಟಕದ ಸಿಂಧೂರ ಲಕ್ಷ್ಮಣ, ಆಂಧ್ರದ ಕುಂವರಮ್ ಭೀಮ್, ಅಲ್ಲೂರಿ ಸೀತಾರಾಮ್ ರಾಜು, ಬಿಹಾರದ ಭಗವಾನ್ ಬಿರಸಾ ಮುಂಡ, ರಾಜಸ್ಥಾನದ ತಾತ್ಯಾ ಭೀಲ್, ಮಣಿಪುರದ ಜಾದೋನಾಂಗ ಮತ್ತು ರಾಣಿ ಗಾಯಿಡಿನ್ಲೂ ರೀತಿಯಲ್ಲಿ ಸಹಸ್ರಾರು ವೀರರು ಮತ್ತು ವೀರಾಂಗನೆಯರು ತಮ್ಮ ಸರ್ವಸ್ವವನ್ನು ಈ ದೇಶದ ಸ್ವಾತಂತ್ಯಕ್ಕಾಗಿ ಧಾರೆ ಎರೆದಿದ್ದಾರೆ. ಈ ಯಾವುದೇ ವನವಾಸಿ ದೇಶಭಕ್ತರಿಗೆ, ಸ್ವ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ಇತಿಹಾಸ ಪುಟಗಳಲ್ಲಿ ಸ್ಥಾನ ಸಿಗದಿರುವುದು ನಮ್ಮ ದೌಭಾಗ್ಯ, ಅಂಥವರ ತ್ಯಾಗ, ಬಲಿದಾನಗಳನ್ನು ಸ್ಮರಿಸುವುದು ನಮ್ಮಲ್ಲರ ಆದ್ಯ ಕರ್ತವ್ಯ.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

    ಪೂರ್ವೋತ್ತರ ಭಾರತ ಇಂದಿಗೂ ಉಳಿದ ಭಾರತಕ್ಕೆ ಅಪರಿಚಿತವೇ. 20ನೇ ಶತಮಾನದ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯ ಶಾಂತಿ ಚಳುವಳಿಯನ್ನು ಸಶಸ್ತ್ರ ಹೋರಾಟವಾಗಿ ಈಶಾನ್ಯ ಭಾರತದಲ್ಲಿ  ಪ್ರಾರಂಭಿಸಿದ್ದು ಮಣಿಪುರದ ನಾಗಾ ಜನಜಾತಿಯ ಹಾಯಪು ಜಾದೋನಾಂಗ್ ಅವರು. ಅವರಿಗೆ ಬ್ರಿಟೀಷರಿಂದ ಫಾಂಸಿ (19೩1) ಆದ ನಂತರ ಆ ಸಶಸ್ತ್ರ ಕ್ರಾಂತಿಯನ್ನು ಮುಂದುವರಸಿದ್ದು ಕೇವಲ 16ರ ಬಾಲೆ ಗಾಯಿಡಿನ್ಲೂಯಿ.

ಜನ್ಮ ಬಾಲ್ಯ: ಈ ವಿರಾಂಗನೆಯ ಜನ್ಮ ಇಂದಿನ ಮಣಿಪುರ ರಾಜ್ಯದ ತಮೆಂಗಲೋಂಗ ಜಿಲ್ಲೆಯ ಲಂಕ್ಗಾವೋ ಗ್ರಾಮದಲ್ಲಿ 26ನೇ ಜನವರಿ 1915 ಗುರುವಾರ ರಾಂಗಮಾಯಿ ಜನಜಾತಿಯಲ್ಲಾಯಿತು. ಇವರ ಊರು ಪರ್ವತ ಮತ್ತು ದಟ್ಟವಾದ ಅರಣ್ಯಗಳ ಮಧ್ಯೆ ಇತ್ತು. ತಂದೆ ಲೋಥೊನಾಂಗ್ ಮತ್ತು ತಾಯಿ ಕೆಲುವತಲಿನ್ಲೂಯ ಆಗಿದ್ದರು. 8 ಮಕ್ಕಳಲ್ಲಿ 7ನೇಯ ಮಗಳಾಗಿದ್ದರು ಇವರು.  ಇವರ ಕುಟುಂಬ ಜನಜಾತಿಯ ಆಡಳಿತ ಮತ್ತು ಧಾರ್ಮಿಕ ಸಂಪ್ರದಾಯ ನಡೆಸುವ “ಪಾಮಯಿ” ವರ್ಗಕ್ಕೆ ಸೇರಿದ್ದಾಗಿತ್ತು.

       ಈ ಮಗು ತಾಯಿ ಗರ್ಭದಲ್ಲಿದ್ದಾಗ ಒಮ್ಮೆ ತಾಯಿಯ ಕನಸಿನಲ್ಲಿ ಒಬ್ಬ ದೇವದೂತ ಬಂದು “ಈ ಮಗು ದೊಡ್ಡದಾದ ಮೇಲೆ ನಿಮ್ಮ ಸಮಾಜದ ಕಷ್ಟವನ್ನು ದೂರಗೊಳಿಸುವುದೆಂದು” ಹೇಳಿದ ಮಾತು ಆ ಜನಾಂಗದ ಮಧ್ಯೆ ಹರಿದಾಡುತ್ತಿತ್ತು. ಕುಂಭದ್ರೋಣ ಮಳೆ, ಗುಡುಗು ಸಿಡಿಲುಗಳ ಮಧ್ಯೆ ಈ ಮಗುವಿನ ಜನ್ಮವಾಯಿತು. ಬೆಳೆಯುವ ಪೈರು ಮೊಳೆಕೆಯಲ್ಲಿ ನುಡಿಮುತ್ತು ಸಾರ್ಥಕವಾಯಿತು.      ಬಾಲ್ಯದಿಂದಲೇ ಸ್ವತಂತ್ರ ಮತ್ತು ಸ್ವಾಭಿಮಾನ ಸ್ವಭಾವ ಇವರದ್ದಾಗಿತ್ತು. ಶಾಲೆಗಳಿಲ್ಲದ ಕಾರಣ ಔಪಚಾರಿಕ ಶಿಕ್ಷಣ ಆಗದಿದ್ದರೂ ಮನೆಯ ದೈವಿಕ ವಾತಾವರಣದಲ್ಲಿ ಬೆಳೆದರು. ಅನೇಕ ಮಹಾಪುರುಷರ ಜೀವನ ಇದೇ ರೀತಿಯಲ್ಲಾಗಿದ್ದು ನಮಗೆ ಇತಿಹಾಸದಿಂದ ತಿಳಿಯುತ್ತದೆ.

      ಆರೋಗ್ಯ ಮತ್ತು ಆಕರ್ಷಕ ರೂಪ ಇವರದ್ದಾಗಿತ್ತು. ಬಾಲ್ಯದಲ್ಲೇ ಪೂರ್ಣಿಮ ಚಂದ್ರನನ್ನು ದಿಟ್ಟಿಸುವುದು ಇವರ ಸ್ವಭಾವದಲ್ಲೊಂದು. ಚಂದ್ರನನ್ನು ನೋಡುತ್ತಾ ಧ್ಯಾನವಸ್ಥೆಗೆ ಹಲವು ಬಾರಿ ಹೋಗಿದ್ದನ್ನು ಊರವರು ಗಮನಿಸಿದ್ದರು. ಆಧ್ಯಾತ್ಮ ಹಾಗೂ ಅಂತರ್ಮುಖಿ ಸ್ವಭಾವ ಇವರಲ್ಲಿ ತುಂಬಿತ್ತು.ಅಸಾಧಾರಣ ಪ್ರತಿಭೆಯಿಂದ ಕೂಡಿದ ಬಾಲಕಿಯಾಗಿದ್ದರು.

ಕ್ರಾಂತಿವೀರ ಹಾಯಿಪೂ ಜಾದೂನಾಂಗ ಸಂಪರ್ಕ: ಆ ಸಂದರ್ಭದಲ್ಲಿ ನಾಗಾ ಬೆಟ್ಟಗಳಲ್ಲಿ ಬ್ರಿಟೀಷ್ ಪ್ರೇರಿತ ಚರ್ಚ್ಗಳು ದೊಡ್ಡ ಪ್ರಮಾಣದಲ್ಲಿ ನಾಗಾ ಜನರ ಮತಾಂತರದಲ್ಲಿ ತೊಡಗಿತ್ತು. ಇದರ ವಿರುದ್ಧ ಕ್ರಾಂತಿವೀರ ಹಾಯಿಪೂ ಜಾದೊನಾಂಗ (1906-19೩1) ಎಂಬ ನಾಗಾ ತರುಣ ಸಶಸ್ತ್ರ ಸ್ವಾತಂತ್ರ ಹೋರಾಟ ಪ್ರಾರಂಭಿಸಿದ್ದ. ಈ ವಿಷಯ 13ರ ಬಾಲೆ ಗಾಯಿಡಿನ್ಲೂಯಿ ಕಿವಿಗೂ ಬಿತ್ತು. 192೭ರ ಕೊನೆಯಲ್ಲಿ ಈ ಜನಾಂಗದ ದೈವಿಸ್ಥಾನ “ಭುವನ ಗುಹೆ” ಯಲ್ಲಿ ಇವರಿಬ್ಬರ ಭೇಟಿಯಾಯಿತು. ಹಾಯಿಪೂ ಜಾದೋನಾಂಗ ಅವರು ಸನಾತನ ಧರ್ಮ ಹಾಗೂ ನಾಗಾ ಪರಂಪರೆ ಉಳಿವಾಗಿ ಬ್ರಿಟೀಷರ ವಿರುದ್ಧ ಹೋರಾಡುತ್ತಿರುವ ವಿಷಯದಿಂದ ಗಾಯಿಡಿನ್ಲೂಯಿ ಪ್ರಭಾವಿತರಾದರು. ತಮ್ಮ ಸಮಾಜದವರೆಲ್ಲ ಒಟ್ಟಾಗಿ ಸೇರಿ ವಿದೇಶಿಗಳ ವಿರುದ್ಧ ಹೋರಾಟ ಮಾಡಬೇಕೆಂಬ ಜಾದೋನಾಂಗ ಅವರ ಕರೆ ಇವರ ಮನಸ್ಸಿನಲ್ಲಿ  ಗಟ್ಟಿಯಾಗಿ ನೆಲೆಯಾಯಿತು. ಹಾಯಿಪೂ ಜಾದೋನಾಂಗ ಅವರ ಕಟ್ಟರ್ ಅನುಯಾಯಿಯಾದರು. ಅವರ ಮಾರ್ಗದರ್ಶನದಲ್ಲಿ “ಮೈಬಿ” (ಪೂಜಾರಿನ್) ಯಾಗಿ ಎಲ್ಲಾ ಭೌತಿಕ ಸುಖದಿಂದ ದೂರ ಉಳಿಯಲು ನಿಶ್ಚಯಿಸಿದರು.

     ಅತೀ ಬೇಗದಲ್ಲಿ ಕ್ರಾಂತಿವೀರ ಜಾದೋನಾಂಗ ಜೊತೆಯಲ್ಲಿ  ಈ ಅಣ್ಣ- ತಂಗಿಯ ಘನಿಷ್ಠ ಸಂಬಂಧ ಉಂಟಾಯಿತು. ತಮ್ಮ ಊರಲ್ಲೇ ಜನರನ್ನು ಸೇರಿಸಿ ಒಂದು ದೇವಸ್ಥಾನವನ್ನು ಗಾಯಿಡಿನ್ಯ ಕಟ್ಟಿಸುತ್ತಾರೆ. ಅದರ ಸೇವೆ-ಪೂಜೆ ಎಲ್ಲಾ ಇವರದೆ. 1೩ರ ಬಾಲೆಯಲ್ಲಿ ದೈವಿಕಳೆ ಹಾಗೂ ದೈವಿಶಕ್ತಿ ಆಹ್ವಾನೆಯಾಗಿ ಸುತ್ತಮುತ್ತಲಿನ ಊರಿನವರು ಇವರ ಬಗ್ಗೆ ವಿಶೇಷ ಗೌರವ- ಪ್ರೀತಿ ತೋರಿಸ ತೊಡಗುತ್ತಾರೆ.

     ಸುತ್ತಮುತ್ತಲ ಊರಿಗೂ ಇವರು ಭೇಟಿಕೊಟ್ಟು ಜಾದೋನಾಂಗರ ವಿಚಾರ ಬ್ರಿಟೀಷರ ಮತ್ತು ಚರ್ಚ್ಗಳ ವಿರುದ್ಧ ಹೋರಾಟಕ್ಕೆ ಜನರನ್ನು ಪ್ರೇರೆಪಿಸುವ ಪ್ರವಚನಗಳನ್ನು ಮಾಡುತ್ತಾರೆ. ಇದರಿಂದಾಗಿ ಅವರ ಖ್ಯಾತಿ ದೂರ ದೂರಕ್ಕೂ ಹರಡುತ್ತದೆ. ಬಿಹಾರದಲ್ಲಿ ಇದಕ್ಕೂ ಮೊದಲು 1890ರ ದಶಕದಲ್ಲಿ ದೇಶದ ಬುಡಕಟ್ಟು ಜನರ ಐಕಾನ್ ಕ್ರಾಂತಿವೀರ ಭಗವಾನ್ ಬಿರಸಾ ಮುಂಡಾರ ಜೀವನದಲ್ಲಿ 17 ವರ್ಷಕ್ಕೆ ಅವರು ಈ ರೀತಿ ಖ್ಯಾತಿಯನ್ನು ಅವರು ಪಡೆದಿದ್ದರು.

     ಒಮ್ಮೆ  ಇವರು ಸ್ವಾತಂತ್ರ ಸೇನಾನಿ ಜಾದೋನಾಂಗ ಅವರ ಊರಾದ ‘ಕಂಬಿರಾನ್’ಗೂ ಹೋಗಿ ಅವರ ಊರಿನ ದೇವಾಸ್ಥಾನದಲ್ಲೂ ಪೂಜೆ ಮಾಡಿ ಅಲ್ಲಿ ಕೆಲವು ದಿನ ಉಳಿದು ಸ್ವಾತಂತ್ರ ಹೋರಾಟದ ಸಶಸ್ತ್ರ ತರಬೇತಿಯನ್ನು ಪಡೆದು ಬರುತ್ತಾರೆ. 1927ರ ಕೊನೆಯಲ್ಲಿ ಅಸ್ಸಾಂನ ಶಿಲ್ಲಾಂಗಗೆ ಮಹಾತ್ಮಾ ಗಾಂಧೀಜಿ ಬಂದಾಗ ಅವರ ಇಬ್ಬರೂ ಹೋಗಿ ದೂರದಿಂದ ನೋಡಿ ಬರುತ್ತಾರೆ. ಒಮ್ಮೆ ಕ್ರಾಂತಿವೀರ ಜಾದೋನಾಂಗ ಇವರ ಊರಾದ ಲಂಕ್ಗಾವೋಗೂ ಬಂದು ಜನರಿಗೆ ಸನಾತನ ಧರ್ಮದ ಉಳಿವಿಗಾಗಿ ಸ್ವಾತ್ರಂತ್ಯ  ಹೋರಾಟದ ಮಹತ್ವವನ್ನು ತಿಳಿಸಿಕೊಡುತ್ತಾರೆ. ಈ ರೀತಿಯಾಗಿ ಇವರ ಘನಿಷ್ಠ ಸಂಬಂಧವಾಗಿ ಜಾದೋನಾಂಗ್ ಅವರನ್ನು ತಮ್ಮ ಆಧ್ಯಾತ್ಮಿಕ ಗುರುವಾಗಿ ಮತ್ತು ಸ್ವಾತಂತ್ರ ಸಂಗ್ರಾಮದ ‘ಪಥದರ್ಶಕ’ ರಾಗಿ ಸ್ವೀಕರಿಸುತ್ತಾರೆ. ನಂತರದಲ್ಲಿ ಮುಂದಿನ 2 ವರ್ಷ 1929 ಮತ್ತು 30ರಲ್ಲಿ ಜನಾಂಗದ ದೈವಿ ಪೂಜೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಇವರ ಭೇಟಿಯಾಗಿ ಯೋಜನೆಗಳನ್ನು ರೂಪಿಸುತ್ತಾರೆ. ಆ ರೀತಿ ಯೋಜನೆಯಂತೆ 15 ವರ್ಷದ ಧೀರ ಕನ್ಯೆ ಗಾಯಿಡಿನ್ಲೂಯಿ ಅವರು ತಮ್ಮದೇ ಸೈನ್ಯಪಡೆ ರಚಿಸಿಕೊಂಡು ನಿರಂತರ ಸಂಚರಿಸುತ್ತಾ ಕಾಡು- ಗುಡ್ಡ ಪರ್ವತ ಪ್ರದೇಶಗಳಲ್ಲಿ ತಿರುಗುತ್ತಾ ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಜನರನ್ನು ಪ್ರೇರೇಪಿಸುತ್ತಾರೆ. ಯಾವುದೇ ಆರ್ಥಿಕ ಸಹಾಯವಿಲ್ಲ. ರಾಜಮನೆತನದ ಬೆಂಬಲವಿಲ್ಲ. ದುರ್ಗಮ ಪ್ರದೇಶದಲ್ಲಿ ವಾಸವಿದ್ದರೂ ದೇಶಭಕ್ತಿ, ಧರ್ಮಭಕ್ತಿಯ ಪ್ರಬಲ, ಇಚ್ಛೆ ಇದ್ದರೆ ಸಾಧನೆಗೆ ಅಡ್ಡಿಯಾಗದು ಎಂಬುದನ್ನು ನಾವು ಇವರಿಂದ ಮನಗಾಣಬಹುದು. ಆದರೆ ಇಂಥ ಪ್ರಾತಃಸ್ಮರಣಿರನ್ನು ಮರೆತು ನಾವು ಘೋರ ಅಪಚಾರ ಮಾಡುತ್ತಿಲ್ಲವೇ?

ಬ್ರಿಟೀಷರ ವಿರುದ್ಧ ಸೈನ್ಯ ಸಂಘಟನೆ:- ಈಗಾಗಲೇ 15ರ ವೀರಾಂಗನೆಗೆ ಬ್ರಿಟೀಷರ ಛಲ, ಕಪಟ ಮಾರ್ಗ, ಚರ್ಚುಗಳ ಮತಾಂತರ ಚಟುವಟಿಕೆ ಮೋಸ- ದಗಾಲ್‌ಬಾಜಿ ಎಲ್ಲದರ ಅರಿವು ಆಗತೊಡಗಿತ್ತು. ನೂರಾರು ಊರುಗಳ ಸಂಪರ್ಕವಾಗುತ್ತಿದ್ದಂತೆ ಇವರ ಧಾರ್ಮಿಕ ಪ್ರವೃತ್ತಿ, ಸದ್‌ವ್ಯವಹಾರ, ಸದ್ವಿಚಾರಗಳಿಂದ ಜನರನ್ನು ಪ್ರಭಾವಗೊಳಿಸತೊಡಗಿತ್ತು. ಎಲ್ಲಾ ಊರುಗಳ ಜನರು ಇವರನ್ನು ತಮ್ಮ ಧರ್ಮಗುರು, ಸಾಮಾಜಿಕ  ಮಾರ್ಗದರ್ಶಕರು ಎಂದು ತಿಳಿಯತೊಡಗಿದ್ದರು. ನಾಗಾ ಜನಜಾತಿಯ ಸಂಪ್ರದಾಯ-ಆಚರಣೆ ಉಳಿವಿಗಾಗಿ ಜಾದೋನಾಂಗ್ ಸ್ಥಾಪಿಸಿದ ಹರಕ್ಕಾ ಹೋರಾಟದ ಮುಂಚೂಣಿಯಲ್ಲೂ ಇವರದೇ ಮುಖ್ಯಪಾತ್ರವಾಯಿತು. ಜನರು  ಇದರ ದರ್ಶನಕ್ಕಾಗಿಯೇ ಹೋದಲೆಲ್ಲಾ ಸೇರತೊಡಗಿದರು. ಇವರ ಕೈಯಿಂದ ಜಲ ಸ್ವೀಕರಿಸಿದರೆ ತಮ್ಮ ಕಷ್ಟ-ನಷ್ಟ-ನೋವು ದೂರವಾಗುದೆಂಬ ಭಾವನೆ ಜನರಲ್ಲಿ ಗಟ್ಟಿಯಾಗತೊಡಗಿತು. ಹಾಗೆಯೇ ಇವರಿಂದ ಜಲವನ್ನು ಸ್ವೀಕರಿಸಿಯೇ ಜನ ಇವರ ರಾಷ್ಟ್ರ- ಧರ್ಮಭಕ್ತಿಯಿಂದ ಕೂಡಿದ ಪ್ರವಚನ ಕೇಳಿ ಹೋಗತೊಡಗಿದರು.

     ದೇಶಧರ್ಮಕ್ಕಾಗಿ ಇವರ ಸ್ಪಷ್ಟವಿಚಾರದಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಇವರೊಂದಿಗೆ ಹೋರಾಟಕ್ಕೆ ಅಣಿಯಾದರು. ಪ್ರಾಣ ಕೊಡುವುದಕ್ಕೂ ತಯಾರಾದರು. ಇವರ ಕಠಿಣ ಪರಿಶ್ರಮ, ಮೃದುನುಡಿ, ಪ್ರಖರ ದೇಶಭಕ್ತಿ, ನೇತೃತ್ವ ಕೌಶಲ್ಯ, ನಗುಮುಖ ಇವುಗಳಿಂದ ಅತೀ ಶೀಘ್ರದಲ್ಲಿ ಯಾರೇ ಆದರೂ ಇವರ ಪ್ರಭಾವಕ್ಕೆ ಒಳಗಾಗಲೇಬೇಕು. ಹಾಗೆಯೇ ಆಗ ತೊಡಗಿತು.

     15ರ ವೀರಾಂಗನೆ ಗಾಯಿಡಿನ್ಲೂಯಿ. ಅವರು ಒಂದು ಭಾಷಣದ ತುಣುಕು ಹೀಗಿದೆ- “ನಮ್ಮ ಸನಾತನದ ಧರ್ಮವು ಅಪಾಯದಲ್ಲಿದೆ. ಇದರ ಮೇಲೆ ನಾಲ್ಕೂ ಕಡೆಯಿಂದ ಆಕ್ರಮಣಗಳಾಗುತ್ತಿವೆ. ನಾವು ಬ್ರಿಟೀಷರ ಶಾಸನದಡಿಯಲ್ಲಿ ಗುಲಾಮರಾಗಿ ಬದುಕುತ್ತಿದ್ದೇವೆ. ಈ ಬಿಳಿಯರನ್ನು ಇಲ್ಲಿಂದ ಓಡಿಸಿ ನಮ್ಮ ಧರ್ಮಸಂಸ್ಕೃತಿಯ ಗುರುತನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ. ಇದಕ್ಕಾಗಿ ನಮ್ಮೆಲ್ಲಾ ವೈಯಕ್ತಿಕ ಕೆಲಸದಿಂದ ಮೇಲೇದ್ದು ಹೋರಾಟ ಮಾಡಬೇಕಾಗಿದೆ. ಇದರಿಂದಾಗಿ ನಾವು ಸ್ವತಂತ್ರರಾಗುತ್ತೇವೆ. ಹಾಗೆಯೇ ನಮ್ಮ ಧರ್ಮ ಸಂಸ್ಕೃತಿಗಳು ಉಳಿಯುತ್ತದೆ. ಇದೂ ವಾಸ್ತವವಾಗಿ ನಮ್ಮ ಗುರಿಯಾಗಬೇಕು. ನಾವು ರೂ.3/- ಮನೆಗಂದಾಯ ಕೊಡಬಾರದು. ಈ ಹಣದಿಂದಲೇ ಅವರು ಕೊಬ್ಬಿದ್ದಾರೆ. ನಮ್ಮ ಗ್ರಾಮಗಳಿಗೆ ಅವರನ್ನು ಬರಲಿಕ್ಕೆ ಬಿಡಬಾರದು. ನಮ್ಮ ಶೋಷಣೆ ಮತ್ತು ಮತ ಪರಿವರ್ತನೆಯಲ್ಲಿ ತೊಡಗಿದ್ದಾರೆ. ಇವರಿಗೆ ನಾವು ಯಾವುದೇ ರೀತಿಯಲ್ಲಿ ಸಹಕರಿಸಬಾರದು. ಸಶಸ್ತ್ರ ಹೋರಾಟಕ್ಕೆ ನೀವೆಲ್ಲಾ ನಮ್ಮೊಂದಿಗೆ ಕೈ ಜೋಡಿಸಬೇಕು” ಎಂಥ ವೀರವಾಣಿ – ಭವಿಷ್ಯದ ಚಿಂತನೆ, ರಾಷ್ಟ್ರದ ಚಿಂತನೆ,  ಧಾರ್ಮಿಕ ಮಾತುಗಳನ್ನು ಕೇಳುತ್ತಿದ್ದ ಜನರನ್ನು ಇವರ ಹೋರಾಟಕ್ಕೆ ಸೇರುವಂತೆ ಮಾಡಿತು. 4000 ಜನರ, ಸದಾ ತಯಾರಿರುವ ಸಶಸ್ತ್ತ್ರ ಸೈನಿಕರ ಪಡೆ ತಯಾರಾಯಿತು. ಇನ್ನೂ ದೊಡ್ಡ ಸಂಖ್ಯೆಯಲ್ಲಿ ನೂರಾರು ಗ್ರಾಮಗಳಲ್ಲಿ ಇವರ ಅನುಯಾಯಿಗಳ ಸಂಖ್ಯೆ ಬೆಳಯತೊಡಗಿತು. ಇದು 1930ರ ಸಮಯ.

ಸೇನಾನಿ ಜಾದೋನಾಂಗ ಬಂಧನ ಮತ್ತು ಫಾಂಸಿ:

 ಇಡೀ ದೇಶದಲ್ಲಿ ಸ್ವಾತಂತ್ರ್ಯದ ಕಾವು ಒಂದು ಕಡೆ ಸಶಸ್ತ್ರ ಹೋರಾಟ ಕ್ರಾಂತಿಕಾರಿಗಳಿಂದ ಮತ್ತೋಂದೆಡೆ ಮಹಾತ್ಮ ಗಾಂದೀಜಿಯ ನೇತೃತ್ವದಲ್ಲಿ ಶಾಂತಿ ಪೂರ್ವಕ ಆಂದೋಲನ. ಆದರೆ ಈ ರೀತಿಯ ಒಂದು ಸಶಸ್ತ್ರ ಹೋರಾಟ ಈಶಾನ್ಯ ಭಾರತದ ದುರ್ಗಮ ಪ್ರದೇಶದಲ್ಲಿ ಕ್ರಾಂತಿವೀರ ಜಾದೋನಾಂಗ ಮತ್ತು ವೀರಾಂಗನೆ ಗಾಯಿಡಿನ್ಲೂಯಿ ಇವರ ನೇತೃತ್ವದಲ್ಲಿ ನಡೆಯುತ್ತಿದೆ ಎಂಬುದು ಇಡೀ ದೇಶಕ್ಕೆ ತಿಳಿದಿರಲಿಲ್ಲ. ಎಂಥಹ ವಿಪರ್ಯಾಸ ಇಂದಿಗೂ ಆ ಸಂಘರ್ಷದ ಇತಿಹಾಸ ಕತ್ತಲೆಯಲ್ಲೇ ಉಳಿದಿದೆ!!

     25ರ ತರುಣ ಜಾದೋನಾಂಗ ಹುಟ್ಟು ಹೋರಾಟಗಾರ. ಜನಪ್ರಿಯ ಧಾರ್ಮಿಕ ನಾಯಕ, ಬ್ರಿಟೀಷರ ವಿರುದ್ಧ ಸೈನ್ಯವನ್ನು ಕಟ್ಟಿ ಸಶಸ್ತ್ರ ಕ್ರಾಂತಿಗಿಳಿದ ಕ್ರಾಂತೀವೀರ. ಬ್ರಿಟೀಷರ ಸಾಕಷ್ಟು ಪ್ರಯತ್ನದ ನಂತರವು ಇವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ತನ್ನ 21ನೇ ವಯಸ್ಸಿನ್ನಿಂದ ನಿರಂತರ ಹೋರಾಟ ಸಂಘರ್ಷ ಮಾಡುತ್ತಿದ್ದವನ ಎದುರು ಎಲ್ಲಾ ಸಂದರ್ಭದಲ್ಲೂ ಬ್ರೀಟೀಷ ಸೈನ್ಯ ಖಾಲಿ ಕೈಯಲ್ಲಿ ಹಿಂದಿರುಗುತ್ತಿತ್ತು. ಈಗ ಅವರು ಒಳಮಾರ್ಗದಿಂದ ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದರು. 28 ಜನವರಿ 1931ರಲ್ಲಿ ಅವರನ್ನು ಕಪಟದಿಂದ ಬಂಧಿಸಲಾಯಿತು. ಕೈ ಕಾಲಿಗೆ ಬೇಡಿ ಹಾಕಿ ಕರೆದೊಯ್ಯಲಾಯಿತು. ಹೋಗುವಾಗ ತಮ್ಮ ಅನುಯಾಯಿಗಳಿಗೆ ಸೇನಾನಿ ಜಾದೋನಾಂಗ ಅವರು ಈ ರೀತಿ ಹೇಳಿದರು. “ನಮ್ಮ ಶರೀರ ನಿಮ್ಮಿಂದ ದೂರವಿದ್ದರೂ ನಮ್ಮ ಆತ್ಮ ನಿಮ್ಮೊಂದಿಗೆ ಇರುತ್ತದೆ. ಈ ಸ್ವತಂತ್ರ ಸಂಗ್ರಾಮ ನಡೆಯುತ್ತಿರಲಿ.  ಲೆಂಗ್ವಾಂಗ(ಭಗವಾನ್) ನಮ್ಮ ಜೊತೆಗೆ ಇದ್ದಾನೆ ಹಾಗಾಗಿ ಜಯ ನಮ್ಮದೆ” ಆ ಸಂದರ್ಭದಲ್ಲಿ ವೀರಕುವರಿ ಗಾಯಿಡಿನ್ಲೂಯಿ ಕೂಡ ಹಾಜರಿದ್ದರು ಮತ್ತು ತಾನು ಈ ಸಶಸ್ತ್ರ  ಹೋರಾಟವನ್ನು ಮುಂದುವರೆಸುತ್ತೇನೆಂದು ಕ್ರಾಂತಿವೀರ ಜಾದೋನಾಂಗ ಭರವಸೆ ನೀಡುತ್ತಾರೆ.

     ಬ್ರಿಟೀಷರು ಸ್ವಾತಂತ್ರ ಸೇನಾನಿ ಜಾದೋನಾಂಗ್  ಅವರನ್ನು ಪೋಲೀಸ್ ಕಸ್ಟಡಿಯಿಂದ ಸಿಲ್ಚ್ಬರ್ ಜೈಲಿಗೆ ವರ್ಗಾವಣೆ ಮಾಡಿ ಕೂಡಿಡುತ್ತಾರೆ. ಗಾಯಿಡಿನ್ಲೂಯಿ ಆಯ್ದ ಯುವಕ ಯುವತಿಯರನ್ನು ಸೇರಿಸಿ ವೇಷ ಮರೆಸಿಕೊಂಡು ಹೋಗಿ ಸಿಲ್ಚ್ಬರ್ ಜೈಲಲ್ಲಿ ಜಾದೋನಾಂಗರನ್ನು ಭೇಟಿ ಮಾಡುತ್ತಾರೆ. ಅವರೊಂದಿಗೆ ಮುಂದಿನ ರಣನೀತಿ ಕ್ರಾಂತಿಯೋಜನೆ ಹೇಗಿರಬೇಕೆಂದು ಚರ್ಚಿಸಿ ಮಾರ್ಗದರ್ಶನ ಪಡೆದು ಬರುತ್ತಾರೆ. “ನಿಮ್ಮ ಜೀವನ ನಮಗೆ ಆದರ್ಶ, ನಿಮ್ಮ ವಾಣಿ ನಮಗೆ ಆದೇಶ”ವೆಂದು ನಮ್ರತೆಯಿಂದ ಮಂಡಿಯೂರಿ ನಮಿಸಿ ಹಿಂದಿರುಗುತ್ತಾರೆ. ಆಗಸ್ಟ್ 29,1931 ರಂದು ಕ್ರಾಂತಿವೀರ ಜಾದೋನಾಂಗಗೆ ಬ್ರಿಟಿಷ್ ಕಟುಕರು ಇಂಫಾಲ ಜೈಲಲ್ಲಿ ಫಾಂಸಿ ಶಿಕ್ಷೆ ನೀಡುತ್ತಾರೆ. ಈ ರೀತಿಯಲ್ಲಿ ಒಬ್ಬ ಮಹಾನ್ ಕ್ರಾಂತಿಪುರುಷನ ಬಲಿದಾನವಾಗುತ್ತದೆ.

ಗಾಯಿಡಿನ್ಲೂಯಿ ಅವರಿಂದ ಗೆರಿಲ್ಲಾ ಮಾದರಿ ಯುದ್ಧ:

 ಕ್ರಾಂತಿವೀರ ಜಾದೋನಾಂಗ್ ಅವರ ಬಲಿದಾನದ ನಂತರ ಇನ್ನೂ ಜೋರಾಗಿ ಸಂಘರ್ಷ ಗಾಯಿಡಿನ್ಲೂಯಿ ನೇತೃತ್ವದಲ್ಲಿ  ಮುಂದುವರಿಯಿತು. ಸಿಲ್ಚ್ಬರ್ ಜೈಲಲ್ಲಿ ಜಾದೋನಾಂಗ ಭೇಟಿ ಮಾಡಿದ ಯುವತಿ ಅತ್ಯಂತ ಅಪಾಯಕಾರಿ ಸಶಸ್ತ್ರ ಹೋರಾಟಗಾರ್ತಿ ಎಂಬ ಗುಪ್ತಚಾರ ವಾರ್ತೆ ಬ್ರಿಟಿಷರಿಗೆ ಮತ್ತು ಚರ್ಚ್ಗೆ ತಲುಪಿತು. ನಾಗಾ ಪರ್ವತ ಪ್ರದೇಶಗಳಲ್ಲಿ ಸ್ವತಂತ್ರ ಸಂಗ್ರಾಮದ ಹೋರಾಟವು ಕ್ಷಿಪ್ರಗತಿಯಲ್ಲಿ ಬೆಳೆಯತೊಡಗಿತು. ಒಂದೇ ಗುರಿ ಬ್ರಿಟೀಷರ ಕ್ರೂರ ಶಾಸನದ ಅಂತ್ಯ  ಮತ್ತು ಕ್ರಿಶ್ಚಿಯನ್ ಮಿಶನರಿಗಳಿಂದ ಸನಾತನ ಧರ್ಮವನ್ನು ರಕ್ಷಿಸುವುದು.  16 ವರ್ಷದ ಗಾಯಿಡಿನ್ಲೂಯಿ ತನ್ನ ಎಲ್ಲಾ ವೈಯ್ಯಕ್ತಿಕ ಆಸೆಗಳಿಗೆ ಕಡಿವಾಣ ಹಾಕಿದರು. ವನವಾಸಿ ಮಹಿಳೆಯರ ಶೃಂಗಾರ ವಸ್ತುಗಳನ್ನು ತೆಗೆದಿಟ್ಟು ಸಾಮಾನ್ಯ ಯೋಧರ (ಸೈನಿಕರ) ವೇಷ ತೊಟ್ಟರು. ಯುವಕ-ಯುವತಿಯರಿಗೆ ಯುದ್ಧ ಹೋರಾಟಕ್ಕಾಗಿ ಕರೆ ಕೊಡಲಾರಂಭಿಸಿದರು. ಸೇರಿದವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವ ಕೆಲಸ ಪ್ರಾರಂಭವಾಯಿತು.

      ಬ್ರಿಟೀಷ್ ಗುಪ್ತಚಾರರು ಇವರ ಬಗ್ಗೆ ಮಾಹಿತಿ ಸಂಗ್ರಹಿಸಲು ಅಲ್ಲಲ್ಲಿ ಕಾಣತೊಡಗಿದರು. ಕೂಡಲೇ ಅವರು ವೀರ ಸೈನಿಕರ ಪಡೆಯೊಂದಿಗೆ ಭೂಗತರಾದರು. ತಮ್ಮ ಊರನ್ನು ಬಿಟ್ಟು ನೂರಾರು ಕಿ.ಮೀ ದೂರದ ಕಾಡಲ್ಲಿ ವಾಸ ಪ್ರಾರಂಭವಾಯಿತು. ಕೆಲವು ದೇಶಭಕ್ತ ವ್ಯಾಪಾರಿಗಳು ಇವರ ಸಂಘರ್ಷದ ಮಹತ್ವವನ್ನು ಅರಿತಿದ್ದರಿಂದ ದೊಡ್ಡ ಪ್ರಮಾಣದ ಆರ್ಥಿಕ ಸಹಾಯವನ್ನು ಇವರಿಗೆ ಮಾಡುತ್ತಿದ್ದರು. ಗಾಯಿಡಿನ್ಲೂಯಿ ತಮ್ಮ ಸೈನಿಕರಿಗೆ ಹೇಳುತ್ತಿರುತ್ತಿದ್ದರು- “ಇಲ್ಲಿರುವ ನಾವೆಲ್ಲರೂ ಒಬ್ಬ ವೀರ ಜಾದೋನಾಂಗರಾಗಿದ್ದೇವೆ. ದುಃಖಿಸುವ , ಸುಮ್ಮನಿರುವ ಸಮಯ ಇದಲ್ಲ. ಜಾದೋನಾಂಗ ಮುಖಾಂತರ ಪ್ರಾರಂಭವಾದ ಸ್ವಾತಂತ್ರ ಆಂದೋಲನವನ್ನು ಮುಂದುವರಿಸುವುದು ಮತ್ತು ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗುವುದು ಇಂದಿನ ನಮ್ಮ ಕರ್ತವ್ಯ ಎಚ್ಚರಾಗಿ, ಎದ್ದು ನಿಲ್ಲಿ, ಸ್ವತಂತ್ರ ಸಂಗ್ರಾಮದ ಉರಿಯುತ್ತಿರುವ ಮಹಾಸಾಗರಕ್ಕೆ ಧುಮುಕಿ” ಈ ರೀತಿಯ ವಾಣಿಯಿಂದ ಸೈನಿಕರ ಉತ್ಸಾಹ ಇಮ್ಮುಡಿಯಾಗುತ್ತಿತ್ತು. ಒಂದು ಸ್ಥಾನದಲ್ಲಿ ಅವರು ಹೆಚ್ಚು ಸಮಯ ಇರುತ್ತಿರಲಿಲ್ಲ. ಗೆರಿಲ್ಲಾ ಮಾದರಿ ಯುದ್ಧದಲ್ಲಿ ಬ್ರಿಟೀಷರಿಗೆ ಸರಿಯಾದ ಪೆಟ್ಟನ್ನು ಕೊಟ್ಟು ಇವರು ಮರೆಯಾಗುತ್ತಿದ್ದರು. ಸ್ವತಃ ಪರ್ವತ ಪ್ರದೇಶದವರು ಹಾಗೂ ಆ ಪ್ರದೇಶಗಳ ಚಿರಪರಿತರು. ಹಲವು ಬಾರಿ ಈ ರೀತಿಯ ಗೆರಿಲ್ಲಾ ಮಾದರಿ ಯುದ್ಧಗಳಲ್ಲಿ ಬ್ರಿಟೀಷರು ಪೆಟ್ಟು ತಿನ್ನ ತೊಡಗಿದರು. ಇವರು ಬೆಟ್ಟ ಗುಡ್ಡಗಳಲ್ಲಿ ಅದೃಷ್ಯರಾಗುತ್ತಿದ್ದರು. ಇನ್ನೂ ಸಾಕಷ್ಟು ಇತರೆ ನಾಗಾ ಜನಜಾತಿಯ ಊರುಗಳು ಇವರ ಸಂಪರ್ಕಕ್ಕೆ ಬಂದವು. ಅಲ್ಲೆಲ್ಲಾ ಇವರ ವಿಚಾರ ಕಾವೇರತೊಡಗಿತು. ಈಗಿನ ಮಣಿಪುರ, ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಹೆಚ್ಚಿನ ಭಾಗ ಇವರ ಹೋರಾಟದಲ್ಲಿ ಪಾಲ್ಗೊಂಡಿತ್ತು.

       ಗಾಯಿಡಿನ್ಲೂಯಿ ರಕ್ಷಣಾ ಕವಚ 3 ರೀತಿಯಾಗಿತ್ತು  50 ಶಸ್ತ್ರಧಾರಿ ಸೈನಿಕರು ಇವರನ್ನು ಸದಾ ಹತ್ತಿರದಿಂದ ಸುತ್ತುವರಿದಿರುತ್ತಿದ್ದರು. ಹಗಲು ರಾತ್ರಿ ಇವರು ಪಹರೆ ಕಾಯುತ್ತಿದ್ದರು. 2ನೇ ಗುಂಪು ಕೆಲವು ಕಿ.ಮೀ ದೂರದಲ್ಲಿ ಗಸ್ತು ಮಾಡುತ್ತಿದ್ದು ಶತ್ರುಗಳ ಬಗ್ಗೆ ನಿಗಾವಹಿಸಿ ಅಪಾಯ ಸಂದರ್ಭದಲ್ಲಿ ಕೂಡಲೇ ಸುದ್ದಿ ಮುಟ್ಟಿಸುತ್ತಿದ್ದರು. ಅವಶ್ಯಕತೆ ಬಂದರೆ ಇವರೇ ಶತ್ರುಗಳೊಂದಿಗೆ ಗೆರಿಲ್ಲಾ ಹೋರಾಟ ಮಾಡುತ್ತಿದ್ದರು. 3ನೇ ಸೈನ್ಯ ಸಾಧಾರಣಾ ಉಡುಪಲ್ಲಿರುವ ಶಸ್ತ್ರಧಾರಿ ಯುವಕ-ಯುವತಿಯರು ಸದಾ ತಯಾರಿಯಲ್ಲಿರುವ ಗ್ರಾಮ ಗ್ರಾಮಗಳಲ್ಲಿ ಇವರ ಪಡೆ. ಇವರು ಗುಪ್ತಚಾರರ ಕೆಲಸವನ್ನು ಮಾಡುತ್ತಿದ್ದರು. ಇಂದಿನವರಿಗೆ ಆಶ್ಚರ್ಯ ಉಂಟು ಮಾಡುವ ರಣನೀತಿ!! ಇವರ ಗುಪ್ತಚಾರರು ಬ್ರಿಟೀಷರ ಒಂದೊಂದು ಚಲನೆಯನ್ನು ತಮ್ಮ ನಾಯಕಿಗೆ ತತ್‌ಕ್ಷಣ ತಲುಪಿಸುತ್ತಿದ್ದರು. ಹಗಲು ರಾತ್ರಿ ಈ ಸೈನ್ಯದ ಪರಾಕ್ರಮ ನಡೆಯುತ್ತಲೇ ಇತ್ತು.

ಹಂಗ್ರಾಮ ಯುದ್ಧ: 16 ಮಾರ್ಚ್ 1932ರಲ್ಲಿ ಅಸ್ಸಾಂನ ಹಂಗ್ರಾಮ ಗ್ರಾಮದಲ್ಲಿ ಬ್ರಿಟೀಷರ ಸೈನ್ಯ ಅಸ್ಸಾಂ ರೈಫಲ್ಸ್ ಮತ್ತು ಗಾಯಿಡಿನ್ಲೂಯಿ ಸೈನ್ಯದ ಮುಖಾಮುಖಿಯಾಯಿತು. ಈ ಯುದ್ಧದಲ್ಲಿ ಬ್ರಿಟೀಷ್ ಸೈನ್ಯದ ನೂರಾರು ಸೈನಿಕರಿಗೆ ಗತಿ ಕಾಣಿಸಲಾಯಿತು. ದೇಶೀ ಸೈನ್ಯದ 7ಜನ ವೀರರ ಬಲಿದಾನವಾಯಿತು. ಕತ್ತಲೆಯಲ್ಲೇ ದೇಶೀ ಸೈನ್ಯ ಮಾಯವಾಯಿತು. ಸಿಟ್ಟಾದ ಬ್ರಿಟೀಷ್ ಅಧಿಕಾರಿ ಆ ಊರಿಗೆ ಬೆಂಕಿ ಇಟ್ಟು, ಬೆಳೆದ ಫಸಲಿಗೆ ಬೆಂಕಿ ಹಚ್ಚಿಸಿದನು. ಜನರನ್ನು ಬಂಧಿಸಿ ಅವರಿಗೆ ಘೋರ ನರಕಯಾತನೆ ನೀಡಲಾಯಿತು.

       ಗಾಯಿಡಿನ್ಲೂಯಿ ಅವರಲ್ಲಿ ಮೊದಲೇ ದೈವಿಶಕ್ತಿಯಿತ್ತು. ಈಗ ದೇಶಭಕ್ತಿಯು ಅವರನ್ನು ಇನ್ನೂ ಪ್ರಬಲರನ್ನಾಗಿ ಮಾಡಿತ್ತು. ಇವರು ದೇಶಭಕ್ತಿ ಗೀತೆ ಮತ್ತು ಭಜನೆಗಳನ್ನು ರಚಿಸಿ ಸೈನ್ಯದಲ್ಲಿ ಹಾಡಿಸ ತೊಡಗಿದರು. ಇವರನ್ನು ಹಿಡಿದು ಕೊಟ್ಟವರಿಗೆ ದೊಡ್ಡ ಪ್ರಮಾಣದ ಮೊತ್ತವನ್ನು ಬ್ರಿಟೀಷ್ ಸರಕಾರ ಘೋಷಿಸಿತು. ಆದರೆ ಎಲ್ಲವೂ ವ್ಯರ್ಥ ನಾಗಾ ಹಿಲ್ಸ್ ಡೆಪ್ಯೂಟಿ ಕಮಿಷನರ್ ಅವರ ನೇತೃತ್ವದಲ್ಲಿ ಅಸ್ಸಾಂ ರೈಫಲ್ಸ್ ನ ಒಂದು ಕಂಪನಿ ಗಾಯಿಡಿನ್ಲೂಯಿ ಅವರನ್ನೂ ಬಂಧಿಸುವ ಸಲುವಾಗಿ ನಾಗಾ ಪರ್ವತದ ಗ್ರಾಮ ಗ್ರಾಮಗಳಲ್ಲಿ ಸುತ್ತ ತೊಡಗಿತ್ತು. ಇದರಿಂದ ಉಲ್ಟಾ ಪ್ರಭಾವ ಆಗತೊಡಗಿತ್ತು. ಯಾವ ಯಾವ ಗ್ರಾಮಕ್ಕೆ ಬ್ರಿಟೀಷ್ ಸೈನ್ಯ ಹೋಗುತ್ತಿತ್ತೋ ಆ ಗ್ರಾಮಗಳೆಲ್ಲಾ ದೇಶೀ ಸೈನ್ಯಕ್ಕೆ ಹೆಚ್ಚು ಬೆಂಬಲ ನೀಡಲು ಪ್ರಾರಂಭಿಸಿದರು.

   ಅಸ್ಸಾಂನ ರಾಜ್ಯಪಾಲರು ಕ್ರಾಂತಿಕಾರಿ ಸೇನಾನಿ ಗಾಯಿಡಿನ್ಲೂಯಿ ಅವರನ್ನು ಜೀವಂತ ಅಥವಾ ಮರಣಾಂತ ಸೆರೆ ಹಿಡಿಯಲು ಅನುಮತಿ ನೀಡಿದ್ದರು. ೩ ಬ್ಯಾಟಾಲಿಯನ್ ಸೇನೆಯನ್ನು ಶಸ್ತ್ತ್ರ ಸಹಿತವಾಗಿ ಕಳಿಸಲಾಯಿತು. ನಾಲ್ಕೂ ಕಡೆ ಗಾಯಿಡಿನ್ಲೂಯಿ ಅವರನ್ನು ಹುಡುಕುವ ಕೆಲಸ ಪ್ರಾರಂಭವಾಯಿತು.  ಸ್ಥಾನಗಳಲ್ಲಿ ಸಶಸ್ತ್ತ್ರ ಹೋರಾಟ ಎರಡು ಕಡೆ ನಡೆಯಿತು. ಪ್ರತಿ ಸಲವೂ ದೇಶೀ ಸೈನ್ಯ, ಗೆರಿಲ್ಲಾ ಮಾದರಿಯಲ್ಲಿ ಅದೃಶ್ಯವಾಗುತ್ತಿತ್ತು. ಜನರ ಬಾಯಲ್ಲಿ ಗಾಯಿಡಿನ್ಲೂಯಿ ಅವರ ವೀರಗಾಥೆ ಕಥೆ ಹಾಗೂ ಹಾಡಿನ ರೂಪದಲ್ಲಿ ಎಲ್ಲೆಲ್ಲೂ ಹರಿದಾಡತೊಡಗಿತು. ಆಗಿನ್ನೂ ಕೇವಲ 16 ವರ್ಷದ ಯುವತಿ ಈ ದೇಶೀ ಸೈನ್ಯದ ಸೇನಾನಿ ಆಗಿದ್ದರು. ಬ್ರಿಟೀಷರಿಗೆ ಈಗ ಅರ್ಥವಾಗತೊಡಗಿತು. ಈ ಸಂಘರ್ಷವನ್ನು ಇಲ್ಲಿಗೆ ತಡೆಯದಿದ್ದರೆ ಇಡೀ ಪೂರ್ವೋತ್ತರ ಭಾರತಕ್ಕೆ ಹಬ್ಬಿದರೆ ತಾವು  ಈ ಪ್ರದೇಶ ಬಿಡಬೇಕಾಗಬಹುದು. ಇದನ್ನು ಇಲ್ಲಿಯೇ ತಡೆದು ಈ ಯುವ ಸೇನಾನಿಯನ್ನು ಮುಗಿಸಲೇ ಬೇಕೆಂಬುದು ಅವರ ನಿಷ್ಕರ್ಷೆಯಾಯಿತು.

      ಎಲ್ಲಾ ಪ್ರಮುಖ ಸ್ಥಾನಗಳಲ್ಲಿ ಸೈನ್ಯದ ಔಟ್‌ಪೋಸ್ಟ್ ಹಾಕಲಾಯಿತು. ಎಲ್ಲಾ ಕಡೆ ಸೈನಿಕ ಪಹರೆ ಅವರ ವಾಹನಗಳ ಓಡಾಟ ಪ್ರಾರಂಭವಾಯಿತು. ಗಾಯಿಡಿನ್ಲೂಯಿ ವಯಸ್ಸಿನ ಎಲ್ಲಾ ಹುಡುಗಿಯರನ್ನು ತಪಾಸಣೆ – ವಿಚಾರಣೆ ಮಾಡುವುದು ಪ್ರಾರಂಭವಾಯಿತು. ನೋಡುವುದಕ್ಕೆ ಒಂದೇ ರೀತಿ ಕಾಣುತ್ತಿರುವುದರಿಂದ ಬ್ರಿಟೀಷರಿಗೂ ಗೊಂದಲ, ಹಿಂದೊಮ್ಮೆ ಹೀಗೆಯೇ ಹಿಡಿದಾಗ ಸ್ವತಃ ಗಾಯಿಡಿನ್ಲೂಯಿ ತಾನು ಅವಳಲ್ಲ್ಲ ಅವಳು ಹಿಂದ ಬರುತ್ತಿದ್ದಾಳೆ ಎಂದು ತಪ್ಪಿಸಿಕೊಂಡಿದ್ದರು.

     ಮತ್ತೊಂದು ಕುಟಿಲ ನೀತಿಯನ್ನು ಬ್ರಿಟೀಷರು ಪ್ರಯೋಗ ಮಾಡಿ, ಒಬ್ಬ ಸುಂದರ ಅಧಿಕಾರಿಯೊಂದಿಗೆ ಮದುವೆ ಪ್ರಸ್ತಾಪ ಹಾಗೂ ಅವರ ಎಲ್ಲ ತಪ್ಪುಗಳಿಗೂ ಕ್ಷಮೆ ಎಂದು ಹೇಳಿತು. ಆದರೆ ಇದಕ್ಕೆ ಗಾಯಿಡಿನ್ಲೂಯಿ ತಕ್ಷಣ  ಒಪ್ಪಿದ್ದಿದ್ದು ಮತ್ತು ಅದರಲ್ಲಿ ಸೇರಿದ ತಮ್ಮ ವ್ಯಕ್ತಿಗಳನ್ನು ದೇಶದ್ರೋಹಿಗಳೆಂದು ಸಾರಿದರು. ದೇಶಕ್ಕಾಗಿ ಎಂಥ ತ್ಯಾಗ!!! ಮಳೆಗಾಲದಲ್ಲಿ  ತಿಂಗಳು ತನ್ನ ಸೈನಿಕರೊಂದಿಗೆ ಬೆಟ್ಟಗಳಲ್ಲೇ ಉಳಿಯಬೇಕಾದ ಅನಿವಾರ್ಯತೆ ಗಾಯಿಡಿನ್ಲೂಯಿಗೆ ಆಯಿತು. ಎಲ್ಲಾ ಕಡೆ ಬ್ರಿಟೀಷರ ಬಲವಾದ ಕಾವಲು, ಗನ್ನು-ತೋಪು ಸಹಿತ ಬ್ರಿಟೀಷ್ ಸೈನಿಕರು ಕನಸಲ್ಲೂ ಇವರ ಹೆಸರು ಕೇಳಿದರೆ ಹೆದರುತ್ತಿದ್ದರು. ಅಂಥಹ ಪರಿಸ್ಥಿತಿ ಉಂಟಾಯಿತು. ಗಾಯಿಡಿನ್ಲೂಯಿ ಸಂಪರ್ಕಿತ ಗ್ರಾಮಗಳ ಶಸ್ತ್ತ್ರಗಳನ್ನು ಜಮಾ ಮಾಡಲಾಯಿತು. ಆಗ್ರಾಮಗಳಿಗೆ ರೂ.3000/- ರವರೆಗೆ ದಂಡ ವಿಧಿಸಲಾಯಿತು. ಬ್ರಿಟೀಚರ ಕ್ರೂರ ವರ್ತನೆ ಮಿತಿಮೀರಿತ್ತು. ಜನ ದುರ್ದಸೆಯಲ್ಲಿದ್ದರು.

ವೀರ ಸೇನಾನಿ ರಾಣಿ ಗಾಯಿಡಿನ್ಲೂಯಿ ತನ್ನ ಗುಪ್ತಚರರನ್ನು ಎಲ್ಲಾ ಸೈನಿಕ ಛಾವಣಿ ಹಾಗೂ ಕೊಹಿಮಾ, ಇಂಫಾಲ್, ಹಾಫ್‌ಲಾಂಗ್, ಸಿಲ್‌ಚರ್‌ನಂತಹ ದೊಡ್ಡ ಪಟ್ಟಣಗಳಲ್ಲಿರುವ ವೈರಿ ಸೈನ್ಯಗಳ ತಯಾರಿಯ ಮಾಹಿತಿಗಳನ್ನು ತಿಳಿಯಲು ಕಳಿಸಿದ್ದರು. ಇನ್ನೊಂದೆಡೆ ವಿವಿಧ ಜನಜಾತಿಯ ನಾಗಪ್ರಮುಖರು ಅಂಗಾಮಿ, ಮಾವೋ ಮತ್ತು ಮಾರಮ್ ಜನರನ್ನು ತನ್ನ ಸಂಗ್ರಾಮದಲ್ಲಿ ಸೇರಿಸಲು ಪ್ರಯತ್ನ ಪ್ರಾರಂಭಿಸಿದ್ದರು. ಹಿಂದೆ 18೭9-80ರಲ್ಲಿ ಅಂಗಾಮಿ ನಾಗಜನರ ದೇಶಿ ಸೈನ್ಯವು ಬ್ರಿಟಿಷರೊಂದಿಗೆ ಯುದ್ಧ ಮಾಡಿರುವ ವಿಷಯ ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರಿಗೆ ತಿಳಿದಿತ್ತು. ಇಷ್ಟು ಸಣ್ನ ವಯಸ್ಸಿನಲ್ಲಿ ಎಷ್ಟು ವಿಶಾಲ ಯೋಜನೆ ಮಾಡಿದ್ದನ್ನು ನಾವು ಊಹಿಸಬಹುದು. 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಅಂದಿನ ಸೇನಾನಿ ನಾನಾ ಸಾಹೇಬ ಈ ರೀತಿ ದೇಶವ್ಯಾಪಿ ಯೋಜನೆ ಮಾಡಿದ್ದರು. ಆದರೆ ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರಿಗೆ 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ ಹೋರಾಟದ ಅರಿವಿರಲಿಲ್ಲ. 

ಚರ್ಚಿನ ದಗಾಬಾಜಿ:

ಚರ್ಚ್ ಈಗ ಜಾಗೃತವಾಯಿತು. ತನ್ನ ಮತಾಂತರ ಕಾರ್ಯಕ್ಕೆ ಹಿನ್ನಡೆಯಾಗುವುದರ ಕಾರಣ ಸೇನಾನಿ ರಾಣಿ ಗಾಯಿಡಿನ್ಲೂಯಿ ಎಂಬುದು ಮನವರಿಕೆಯಾಯಿತು. ಅವರನ್ನು ಬಂಧಿಸಲು ಬ್ರಿಟಿಷರಿಗೆ ಸಹಾಯ ಮಾಡಲು ಟೊಂಕಕಟ್ಟಿತು. ಕೆಲವು ಮತಾಂತರಿತ ನಾಗಾಗಳಿಗೆ ಆಸೆ ಅಮಿಷ ತೋರಿಸಲಾಯಿತು. ಕೆಲವು ವೃದ್ಧ ಮತಾಂತರಿತ ನಾಯಕರನ್ನು ಈ ಕೆಲಸದಲ್ಲಿ ತೊಡಗಿಸಲಾಯಿತು.  ಆ ವೃದ್ಧರು ಎಲ್ಲರೂ ಕ್ರಿಶ್ಚಿಯನ್ನು ನಾಗಾಗಳು.  ಜೇಮಿ, ಲಿಂಗಮಾಯಿ ಮತ್ತು ರಂಗ್‌ಮಾಯಿ ಗ್ರಾಮಗಳಲ್ಲಿ ತಿರುಗುತ್ತಾ ವೀರಾಂಗನೆ ಗಾಯಿಡಿನ್ಲೂಯಿರವರನ್ನು ಹುಡುಕ ತೊಡಗಿತು. ಇವರೆಲ್ಲಾ ಸನಾತನ ಧರ್ಮದ ಘೋರ ವಿರೋಧಿಗಳಾಗಿ ಮಾರ್ಪಟ್ಟಿದ್ದರು.

        ಪುಲೋಮಿ ಗ್ರಾಮದಲ್ಲಿ 5000 ಸೈನಿಕರಿಗೆ ವಸತಿ ಹೋರಾಟಕ್ಕಾಗಿ ಸೇನಾನಿ ರಾಣಿ ಗಾಯಿಡಿನ್ಲೂಯಿರವರು ಗುಟ್ಟಾಗಿ ಒಂದು ಕಟ್ಟಿಗೆಯ ಕೋಟೆ ಕಟ್ಟಿಸತೊಡಗಿದ್ದರು.  ದುರಾದೃಷ್ಟವಶಾತ್ ಈ ಕೋಟೆಯ ಕೆಲಸ ಮುಗಿಯುವ ಮೊದಲೇ ಬ್ರಿಟಿಷರಿಗೆ ಗುಪ್ತಚರರ ಮೂಲಕ ಸೇನಾನಿ ರಾಣಿ ಗಾಯಿಡಿನ್ಲೂಯಿ ಈ ಗ್ರಾಮದಲ್ಲಿ ಇರುವ ವಿಷಯ ತಿಳಿಯಿತು. 

ಅಂತಿಮಯುದ್ಧ ಬ್ರಿಟಿಷರಿಂದ ಆಪರೇಷನ್ ಗಾಯಿಡಿನ್ಲೂಯಿ: ಬ್ರಿಟಿಷರು ಸೇನಾನಿ ರಾಣಿ ಗಾಯಿಡಿನ್ಲೂಯಿ ರವರ ಸುಳಿವು ಕೊಟ್ಟವರಿಗೆ ದೊಡ್ಡ ಬಹುಮಾನ ಮತ್ತು 10 ವರ್ಷದ ಕರಮಾಫ್ ಮಾಡುವುದಾಗಿ ಘೋಷಿಸಿದ್ದರು. ಮತಾಂತರಿತ ನಾಗಾ ಇಸೆಜಿಂಗ್ಬೆ ಬ್ರಿಟಿಷರ ಗುಢಾಚಾರನಾಗಿದ್ದು ಸೇನಾನಿ ರಾಣಿ ಗಾಯಿಡಿನ್ಲೂಯಿರವರ ಜೊತೆ ಸೇರಿಕೊಂಡಿದ್ದನು.  ಪುಲೋಮಿ ಗ್ರಾಮದಲ್ಲಿ ರಾಣಿ ಗಾಯಿಡಿನ್ಲೂಯಿರವರು ಇರುವುದು ಹಾಗೂ ಅವರ ಎಲ್ಲಾ ಯೋಜನೆಗಳನ್ನು ಈ ಗೂಡಾಚಾರ ಬ್ರಿಟಿಷರಿಗೆ ವರದಿ ಸಲ್ಲಿಸಿದನು. ಬ್ರಿಟಿಷರು ಬಹಳ ಗುಪ್ತವಾಗಿ  ದಿ: 16-10-1932ರಂದು ದೊಡ್ಡ ಸೈನ್ಯವನ್ನು ಕಟ್ಟಿಕೊಂಡು ರಾತ್ರಿ ಸಮಯದಲ್ಲಿ ಪ್ರಯಾಣಿಸಿ ಪುಲೋಮಿ ಗ್ರಾಮದ ಹತ್ತಿರ ಬೆಟ್ಟ ಸೇರಿಕೊಂಡರು. ದಿ: 17-10-1932ರ ರಾತ್ರಿ ಅಲ್ಲಿಂದ ಪ್ರಯಾಣಿಸಿ ಬೆಳಗಿನ ಜಾವ 4.00 ಗಂಟೆಗೆ ಪುಲೋಮಿ ಗ್ರಾಮವನ್ನು ಸುತ್ತುವರಿದರು. ಬೆಳಗಾಗುತ್ತಲೇ ಎಲ್ಲಿ ಹುಡುಕಿದರೂ ಸೇನಾನಿ ರಾಣಿ ಗಾಯಿಡಿನ್ಲೂಯಿರವರು ಪತ್ತೆಯಾಗಲಿಲ್ಲ. ಆಗ ಊರಿನ ಹಿರಿಯರನ್ನು ಕರೆಯಿಸಿ ಅವರನ್ನು ಕೇಳಲಾಯಿತು. ಅವರು ಹೇಳದೆ ಸುಮ್ಮನಿದ್ದರು. ಅವರನ್ನೆಲ್ಲಾ ಬಂಧಿಸಿ ಕೈಬೇಡಿ ಹಾಕಿ ಚಿತ್ರಹಿಂಸೆ ನೀಡಲಾಯಿತು. ಬ್ರಿಟಿಷ್ ಅಧಿಕಾರಿ ಮೆಕ್‌ಡೊನಾಲ್ಡ್ ನೇತೃತ್ವದಲ್ಲಿ ಈ ಅಭಿಯಾನ ನಡೆದಿತ್ತು. ವೀರಾಂಗನೆ ಸೇನಾನಿ ರಾಣಿ ಗಾಯಿಡಿನ್ಲೂಯಿ ಇರುವ ಮನೆ ಗೊತ್ತಾದ ಮೇಲೆ ಆ ಮನೆ ಸೈನಿಕರಿಂದ ಸುತ್ತುವರೆಯಲ್ಪಟ್ಟಿತು. ರಾಣಿ ಗಾಯಿಡಿನ್ಲೂಯಿರವರು ತಮ್ಮ ಸೈನಿಕರ ಪ್ರಾಣಹಾನಿ ಹಾಗೂ ಇಡೀ ಊರಿಗೆ ಹಾನಿಯಾಗುವುದನ್ನು ತಪ್ಪಿಸಲು ಕೈಯಲ್ಲಿ ರೈಫಲ್‌ಹಿಡಿದು ತನ್ನ ಕಮಾಂಡರ್ ಜೊತೆಗೆ ಹೊರಗೆ ಬಂದು ಯುದ್ಧಕ್ಕೆ ಅಣಿಯಾದರು. ಆಗ ನಾಗಹಿಲ್ಸ್ನ ಸಹಾಯಕ ಆಯುಕ್ತ ಹರಿ ಬ್ಲಾಹ 17ರ ಸೇನಾನಿಗೆ ತನ್ನ ಸೈನ್ಯದ ಬಲ ಹಾಗೂ ಯುದ್ಧ ನಡೆದರೆ ನಷ್ಟವಾಗುವುದನ್ನು ತಿಳಿಸಿದ.  ಶರಣಾದರೆ ನೇರವಾಗಿ ಹೈಕೋರ್ಟಿನಿಂದ ವಿಚಾರಣೆ ನಡೆಯುವುದೆಂದು ತಿಳಿಸಿದ. ಈ ರೀತಿ ವಂಚನೆ ಮತ್ತು ಚರ್ಚಿನ ದಗಾಬಾಜಿನಿಂದ ಸೇನಾನಿ ರಾಣಿ ಗಾಯಿಡಿನ್ಲೂಯಿರವರ ಬಂಧನ ದಿ: 18-10-1932ರಂದು ಆಯಿತು.

                2 ತಿಂಗಳವರೆಗೆ ಅವರನ್ನು ಕೊಹಿಮಾ ಜೈಲಿನಲ್ಲಿ ಇಡಲಾಯಿತು. ಅವರೊಂದಿಗೆ ಅವರ 6 ಜನ ಕಮಾಂಡರುಗಳು ಜೈಲು ಸೇರಿದರು. ಕೆಲವು ಪ್ರಮುಖ ಕಮಾಂಡರುಗಳು ಹೊರಗೆ ಉಳಿದರು. ಅಲ್ಲಿಂದ ವಿಚಾರಣೆಗೆ ಅವರನ್ನು ಇಂಫಾಲ್‌ಗೆ ಕರೆತರಲಾಯಿತು. ಮಣಿಪುರದ ರಾಜಕೀಯ ಏಜೆಂಟ್ ಜೆ.ಸಿ ಹಿಗ್ಸನ್  ಇವರ ವಿಚಾರಣೆಯ ನಾಟಕ ಮಾಡಿದ. ಹಿಂದೆ ನಡೆದ 4 ಜನ ಮಣಿಪುರ ಹತ್ಯೆ ಕೇಸಲ್ಲಿ ಇವರಿ ಆಜೀವ ಕಾರವಾಸ ಶಿಕ್ಷೆಯಾಯಿತು. ಹಿಂದೆ ಇದೇ ಸುಳ್ಳು ಕೇಸಲ್ಲಿ ಕ್ರಾಂತೀವೀರ ಜಾದೋವ್‌ನಾಂಗ್ ಅವರಿಗೂ ಬ್ರಿಟಿಷ್ ಸರ್ಕಾರ ಫಾಸಿ ಶಿಕ್ಷೆ ವಿಧಿಸಿತ್ತು. ಈ ರೀತಿ 17ವರ್ಷದ ಸಿಂಹಿಣಿಗೆ ಆಜೀವ ಕಾರವಾಸ ಶಿಕ್ಷೆ !!. ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಸಾಮ್ರಾಜ್ಯಕ್ಕೆ ನಾಚಿಕೆಯ ಪರಿಧಿ ಇಲ್ಲದ್ದನ್ನು ಇಡೀ ವಿಶ್ವ ನೋಡಿ ನಕ್ಕಿತು. ಭಾರತದಲ್ಲಿ ಮಾತ್ರ ಯಾವುದೇ ಪ್ರತಿಭಟನೆ ಅಥವಾ ವಿರೋಧ ಕಂಡುಬಂದಿಲ್ಲ.

                5 ತಿಂಗಳ ಕಾಲ ಇಂಫಾಲ್ ಜೈಲಿನಲ್ಲಿದ್ದು ನಂತರ ಈ ಧೀರ ಯುವತಿ ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರನ್ನು ಗುವಾಹಾಟಿ ಜೈಲಿಗೆ ಸ್ಥಳಾಂತರಿಸಲಾಯಿತು.  ಅಲ್ಲಿ 1 ವರ್ಷ ನಂತರ 6 ವರ್ಷ ಷಿಲಾಂಗ್ ಜೈಲಲ್ಲಿ ಮುಂದೆ 3 ವರ್ಷ ಅಯಜೋಲ್ ಜೈಲಲ್ಲಿ (ಮಿಜೋರಾಂ), ಉಳಿದ ಸಮಯ ತೂರಾ ಜೈಲಲ್ಲಿ ಕಳೆದು ತಮ್ಮ ಸ್ವಾತಂತ್ರ ಸಂಗ್ರಾಮದ ಆಹುತಿಯನ್ನು ಕೊಟ್ಟರು.

                ಇವರ ಹೋರಾಟವನ್ನು ಬಲಹೀನ ಗೊಳಿಸುವ ದೃಷ್ಟಿಯಿಂದ ಬ್ರಿಟಿಷರು ಇವರ ಹೋರಾಟದ ಭೂಭಾಗವನ್ನು 3 ಭಾಗ ಮಾಡಿದರು. ಮಣಿಪುರ ಸ್ಟೇಟ್, ನಾಗಾಹೀಲ್ಸ್ ಮತ್ತು ಢೀಮಾ ಹಸಾವೋ ಜಿಲ್ಲೆ. ಹರಕ್ಕಾ ಆಂದೋಲನಾ ಮತ್ತು ಸನಾತನ ಧರ್ಮಕ್ಕಾಗಿ ಹೋರಾಡಿದ ಗ್ರಾಮಗಳನ್ನು ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳಿಂದ ದೂರ ಉಳಿಸಲಾಯಿತು. ಅಲ್ಲಿ ಕೇವಲ ಬಡತನ, ಅನಕ್ಷರತೆ, ಸೌಲಭ್ಯರಹಿತ ಮತ್ತು ಅತ್ಯಂತ ಹಿಂದುಳಿಯುವಂತೆ ನೋಡಿಕೊಳ್ಳಲಾಯಿತು. ಎಲ್ಲಿಯವರೆಗೆ ಅವರು ಮತಾಂತರವಾಗುವುದಿಲ್ಲವೋ ಅಲ್ಲಿಯವರೆಗೆ ಇದೇ ಸ್ಥಿತಿ ಇರುವುದೆಂದು ಚರ್ಚ್ ಸಾರಿತು.

ಸ್ವತಂತ್ರ ಆಂದೋಲನ ಪುನಃ ಪ್ರಾರಂಭ :

 ಕ್ರಾಂತಿವೀರ ಜಾದೋನಾಂಗ್‌ಗೆ ಪಾಸೀ ಶಿಕ್ಷೆ ಹಾಗೂ ವೀರಾಂಗನೆ ಸೇನಾನಿ ರಾಣಿ ಗಾಯಿಡಿನ್ಲೂಯಿಗೆ ಜೀವಾವಧಿ ಶಿಕ್ಷೆಯಾಗಿದ್ದು ಬಹುಸಂಖ್ಯಾತ ಹಿಂದೂ ನಾಗಜನರಲ್ಲಿ ಹೋರಾಟದ ಸ್ವಾಭೀಮಾನ ಜಾಗೃತವಾಯಿತು. ಸೇನಾನಿ ರಾಣಿ ಗಾಯಿಡಿನ್ಲೂಯಿರವರ 3 ಜನ ಪ್ರಮುಖ ಕಮಾಂಡರುಗಳು ಇನ್ನೂ ಹೊರಗೆ ಇದ್ದರು. ಅವರು ಆಗಾಗ್ಗೆ ಜೈಲಿಗೆ ಹೋಗಿ ಗುಪ್ತವಾಗಿ ತಮ್ಮ ನಾಯಕಿಯನ್ನು ಭೇಟಿ ಮಾಡಿ ಸಂಘರ್ಷಕ್ಕೆ ಬೇಕಾದ ಮಾಹಿತಿಯನ್ನು ತಮ್ಮ ನಾಯಕಿಯಿಂದ ಪಡೆದು ಬರುತ್ತಿದ್ದರು. ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರ ಮನೋಬಲವನ್ನು ಹೆಚ್ಚಿಸುತ್ತಿದ್ದರು. ಆ ಮೂರು ಜನ ಕಮಾಂಡರುಗಳೇ ದಿಕ್ಕಿಯೋ, ಘ್ರಮಿಯೋ ಮತ್ತು ಮಾಸಾಂಗ್ ಎಂಬ ಬಿಸಿರಕ್ತ ತರುಣರು. ಅವರಾದರೋ ಮೃತ್ಯುಪರ್ಯಂತ ಬ್ರಿಟಿಷರ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದ್ದರು. ಹಾಗಾಗಿ ಇಡೀ ನಾಗಸಮಾಜ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರೆಸಿತು.

                1935ರಲ್ಲಿ ಪ್ರಾಂತೀಯ ಸ್ವಶಾಸನ ಜಾರಿಯಾದ ಮೇಲೆ ದೇಶದ ಜೈಲಲ್ಲಿದ್ದ ಎಲ್ಲಾ ದೊಡ್ಡ ನಾಯಕರನ್ನು ಹಾಗೂ ಇತರರನ್ನು ಬಿಡುಗಡೆ ಮಾಡಲಾಯಿತು. ವಿಪರ್ಯಾಸವೆಂದರೆ ಸ್ವತಂತ್ರ ಸೇನಾನಿ ರಾಣಿ ಗಾಯಿಡಿನ್ಲೂಯಿರವರನ್ನು ಎಲ್ಲರೂ ಮರೆತರು. ಅವರು ಜೈಲಲ್ಲೇ ಉಳಿಯಬೇಕಾಯಿತು.

                193೭ರಲ್ಲಿ ಪಂಡಿತ್ ನೆಹರೂರವರ ಪ್ರವಾಸ ಅಸ್ಸಾಂನಲ್ಲಿತ್ತು. ಪ್ರವಾಸದಲ್ಲಿ ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ನಡೆದ ವಿಷಯ ಮತ್ತು ಅವರಿಗೆ ಜೀವಾವಧಿ ಶಿಕ್ಷೆಯಾದ ಸುದ್ಧಿ ನೆಹರೂರವರಿಗೆ ಮರ್ಮಾಘಾತ ಉಂಟು ಮಾಡಿತು. ಕೇವಲ 17ವರ್ಷದ ಬಾಲಕಿಗೆ ಜೀವಾವಧಿಯಂತಹ ಕಠೋರ ಶಿಕ್ಷೆ !! ನೆಹರೂರವರು ಅವರ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಂಡರು. ಇನ್ನೂ ಹೋರಾಟ ಇವರ ಕಮಾಂಡರ್ ಮೂಲಕ ನಡೆಯುತ್ತಿದೆ ವಿಷಯವು ಅವರಿಗೆ ತಿಳಿಯಿತು. ಅದೇ ವರ್ಷ ಪುನಃ ಅವರು ಅಸ್ಸಾಂಗ್ ಬರುವಂತಾಯಿತು. ಅವರಿಗೆ ಸ್ವಾತಂತ್ರ ಸೇನಾನಿ ರಾಣಿ ಗಾಯಿಡಿನ್ಲೂಯಿ ವಿಷಯ ನೆನಪಿನಲ್ಲಿತ್ತು. ಅವರ ಬಗ್ಗೆ ಇನ್ನೂ ಹೆಚ್ಚು ತಿಳಿಯುವ ದೃಷ್ಟಿಯಿಂದ ಶಿಲ್ಲಾಂಗ್ ಜೈಲಲ್ಲಿ 22 ವರ್ಷದ ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರನ್ನು ಭೇಟಿ ಮಾಡಿದರು. ಅವರ ಹೋರಾಟದ ವಿಷಯ ಕೇಳಿ ನೆಹರೂಜೀ ಬಹಳ ಪ್ರಭಾವಿತರಾದರು. ಬಹಳ ಗೌರವ ಮತ್ತು ಶ್ರದ್ಧೆಯಿಂದ ನೆಹರೂಜೀರವರು ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರನ್ನು ‘ನಾಗಾಗಳ ರಾಣಿ’ ಎಂದು ಗೌರವದಿಂದ ಸಂಬೋಧಿಸಿ ಅವರಿಗೆ ಆದರ ಪ್ರಕಟ ಪಡಿಸಿದರು ಮತ್ತು ಪೂರ ಶಕ್ತಿ ಹಾಕಿ ಅವರನ್ನು ಜೈಲಿಂದ ಬಿಡಿಸುವ ಬಗ್ಗೆ ಅಶ್ವಾಸನೆ ನೀಡಿದರು. ಅಲ್ಲಿಂದ ವೀರಾಂಗನೆ ಗಾಯಿಡಿನ್ಲೂಯಿ ಹೆಸರು ಸೇನಾನಿ ರಾಣಿ ಗಾಯಿಡಿನ್ಲೂಯಿ ಎಂದು ಪ್ರಚಾರವಾಯಿತು.

     ಪಂಡಿತ್ ನೆಹರೂ ಅಲ್ಲಿಂದ ದೆಹಲಿಗೆ ವಾಪಾಸ್ಸಾದ  ಮೇಲೆ ಸಾಕಷ್ಟು ಪತ್ರ ವ್ಯವಹಾರವನ್ನು ಇಲ್ಲದೆ ಬ್ರಿಟೀಷ್ ಸರಕಾರ ಹಾಗೇಯೇ ಎಂ.ಪಿ ಗಳೊಂದಿಗೆ ಪತ್ರ ವ್ಯವಹಾರ ಮಾಡಿದ್ದರು. ಆದರೂ ಸಫಲರಾಗಲಿಲ್ಲ. ಇಲ್ಲಿನ ಸರಕಾರ ಹಾಗೂ ಲಂಡನ್ನಿನ ಸರಕಾರ ಎರಡೂ ಕಡೆ ಸಾಕಷ್ಟು ಚರ್ಚೆ ನಡೆದ ನಂತರ ಅಂತಿಮವಾಗಿ ಅಂದಿನ ಬ್ರಿಟೀಷ್ ಭಾರತ ಸರ್ಕಾರದ ಸೆಕ್ರೇಟರಿ ಅವರು ಗಾಯಿಡಿನ್ಲೂಯಿ ಅವರನ್ನು ಜೈಲಿಂದ ಬಿಡುಗಡೆ ಮಾಡಿದರೆ ಇಡೀ ಈಶಾನ್ಯ ಭಾರತದಲ್ಲಿ ಸಂಘರ್ಷ ಹೆಚ್ಚಾಗಿ ತಮ್ಮ ಕಂಟ್ರೋಲ್‌ನಲ್ಲಿ ಹೊರಗಿಳಿಯುವದರಿಂದಾಗಿ ಅವರನ್ನು ಬಿಡುಗಡೆ ಮಾಡುವುದು ಅಸಾಧ್ಯವೆಂದು ತಿಳಿಸಿದರು. ಇದರಿಂದಾಗಿ 22 ವರ್ಷ ರಾಣಿ ಗಾಯಿಡಿನ್ಲೂಯಿ ಬಗ್ಗೆ ಬ್ರಿಟೀಷರಿಗೆ ಎಷ್ಟು ಭಯವಿತ್ತು ಎಂಬುದು ತಿಳಿಯುತ್ತದೆ.

ಜೈಲಿಂದ ಬಿಡುಗಡೆ:  1942 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ  ಭಾಗವಹಿಸಿದ ನಾಯಕರ ಮತ್ತು ಇತರರನ್ನು 1944ರ ಅಂತಿಮದಲ್ಲಿ ಬ್ರಿಟಿಷ್ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿತು.  ಆದರೆ ಆ ಸಂದರ್ಭದಲ್ಲೂ ರಾಣಿ ಗಾಯಿಡಿನ್ಲೂಯಿ ಅವರಿಗೆ ಆ ಭಾಗ್ಯ ಸಿಗಲಿಲ್ಲ.  1947ರ ದೇಶದ ಸ್ವಾತಂತ್ರದ ಸಮಯದಲ್ಲಿ ಇಡೀ ದೇಶ ಅವರನ್ನು ಮರೆಯಿತು. ಸ್ವತಂತ್ರ ಭಾರತದಲ್ಲೂ ಅವರು ಜೈಲಲ್ಲೇ ಉಳಿದರು. ಒಂದು ದಾಖಲೆ ಪ್ರಕಾರ ದೇಶದ ಸ್ವಾತಂತ್ರದ 4 ತಿಂಗಳ ನಂತರ ಡಿಸೆಂಬರ್‌ನಲ್ಲಿ ಅವರ ಬಿಡುಗಡೆಯಾಯಿತು.

18 ಆಕ್ಟೋಬರ್ 1932ರಿಂದ ಡಿಸೆಂಬರ್ 1947ಅಂದರೆ ಪೂರ್ತಿ 15 ವರ್ಷಗಳ ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಆಗ ಅವರಿಗೆ 33 ವರ್ಷ ಮುಗಿಯುವ ಹಂತದಲ್ಲಿತ್ತು. ಭಾರತದ ಸ್ವಾತಂತ್ರ ಹೋರಾಟದಲ್ಲಿ ಇಷ್ಟು ದೀರ್ಘ ಸಮಯ ಜೈಲಲ್ಲಿ ಶಿಕ್ಷೆ ಅನುಭವಿಸಿದವರು ಯಾರೂ ಇರಲಿಕ್ಕಿಲ್ಲ. ಇದ್ದರೂ ಅಂತವರು ಅಂಡಮಾನಿನ ಸೆಲೂಲರ್ ಜೈಲಲ್ಲಿ ಅನಾಮಧೇಯರಾಗಿ ಉಳಿದವರಾಗಿರಬಹುದು. ಇಂತಹ ವೀರ ಸೇನಾನಿಯನ್ನು ಸ್ವತಂತ್ರ ಭಾರತ ಸರ್ಕಾರ ಹಾಗೂ ಅಂದಿನ ಇಂದಿನ ಇತಿಹಾಸಕಾರರು ಹೇಗೆ ಮರೆತರು? ನಮ್ಮ ಪ್ರಮುಖ ಇತಿಹಾಸಕಾರರು ತಮ್ಮ ಪುಟಗಳಲ್ಲಿ ಇವರಿಗೇಕೆ ಸ್ಥಳ ನೀಡಲಿಲ್ಲ? ಇಷ್ಟು ಘೋರ ಅಪಸವ್ಯ ಹೇಗಾಯಿತು? ಇದಕ್ಕೆ ಕ್ಷಮೆ ಉಂಟೇ? ಖಂಡಿತಾ ಇಂದಿನ ಪೀಳಿಗೆ ಹಾಗೂ ಮುಂದಿನ ತಲೆಮಾರುಗಳು ಇವರನ್ನು ಕ್ಷಮಿಸಲಾರರು.

ಜೈಲಿಂದ ಬಿಡುಗಡೆಯಾದ ರಾಣಿ ಗಾಯಿಡಿನ್ಲೂಯಿ ಅವರಿಗೆ ಅಸ್ಸಾಂ ಸರ್ಕಾರ ಅವರ ತಮ್ಮ ಕ್ಷೇತ್ರವಾದ ಜಲಿಯಾಂಗರಾಂಗ್ ಕ್ಷೇತ್ರವನ್ನು ಪ್ರವೇಶಿಸಲು ಬಿಡಲಿಲ್ಲ, ನಿರ್ಭಂದ ಹಾಕಿತು. ಆ ಸಮಯದಲ್ಲಿ ನಾಗ, ಮೀಜೋ, ಗಾರೋ ಮತ್ತು ಖಾಸೀ ಕ್ಷೇತ್ರಗಳಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಯುತ್ತಿತ್ತು. ರಾಣಿ ಗಾಯಿಡಿನ್ಲೂಯಿ ಹೋರಾಡಿದ್ದು ಸನಾತನ ಧರ್ಮದ ಉಳವಿಗಾಗಿ ಹಾಗೂ ಭಾರತದ ಸ್ವಾತಂತ್ರಕ್ಕಾಗಿ, ಇವರ ಮತ್ತು ಅಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಕಾರ್ಯಗಳ ಅಂತರವನ್ನು ಅಂದಿನ ಅಸ್ಸಾಂ ಸರ್ಕಾರಕ್ಕೆ ಅರ್ಥವಾಗದಿರುವುದು ವಿಷಾದನೀಯ. ಇವರು ಒಬ್ಬ ಭಾರತಭಕ್ತ ಸೇನಾನಿಯಾಗಿದ್ದರು. ಚರ್ಚ್ ಪ್ರೇರಿತ ಮತಾಂತರದ ವಿರೋಧಿಯಾಗಿದ್ದರು. ಇದನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಭಾರತ ಸರ್ಕಾರದ ಆಗ್ರಹದ ನಂತರವೂ ಕೂಡಾ ಕೆಲವು ಷರತ್ತನ್ನು ರಾಣಿ ಗಾಯಿಡಿನ್ಲೂಯಿ ಮೇಲೆ ಅಸ್ಸಾಂ ಸರ್ಕಾರ ವಿಧಿಸಿತು. ಆ ಪ್ರಕಾರ ಮಣಿಪುರ, ನಾಗಹಿಲ್ಸ್ ಉತ್ತರ ಕಛಾರ್, ಮಿಶಿರ್ ಹಿಲ್ಸ್ (ಕಾರವಿ ಆಂಗಲಾಂಗ್) ಮತ್ತು ಕಛಾರ್ ಪ್ರದೇಶಗಳಲ್ಲಿರುವ ಜೆಮಿ, ಲಿಯಾಂಗ್‌ಮಯಿ ಮತ್ತು ರಾಂಗ್ಮೋಯಿಗಳ ಮಧ್ಯೆ ಹೋಗುವುದಕ್ಕೆ ನಿರ್ಬಂಧ ಹೇರಿತು. ದೇಶಭಕ್ತರು ಮತ್ತು ರಾಷ್ಟçವಿರೋಧಿಗಳನ್ನು ಗುರುತಿಸಿವುದರಲ್ಲಿ ಅಂದಿನ ಅಸ್ಸಾಂ ಸರ್ಕಾರ ಎಡವಿತು. ಇದರಿಂದಾಗಿ ದೇಶಕ್ಕೆ ದೊಡ್ಡ ನಷ್ಟವಾಯಿತು ಜೊತೆಗೆ ವೈಯಕ್ತಿಕವಾಗಿ ರಾಣಿ ಗಾಯಿಡಿನ್ಲೂಯಿ ಅವರಿಗೂ ಕಷ್ಟನಷ್ಟ ಎದುರಿಸುವಂತಾಯಿತು. ಅಲ್ಲಿಯ ತನಕ ದೊಡ್ಡ ಪ್ರಮಾಣದಲ್ಲಿ ನಾಗಗಳ ಮತಾಂತರ ನಡೆದು ಹೋಗಿತ್ತು.

ರಾಣಿ ಗಾಯಿಡಿನ್ಲೂಯಿ ಇವರು ಛಾಂಗ್ ಜನಜಾತಿ ವಾಸಿಸುವ ‘ಯಿಮರೂಮ್’ ಗ್ರಾಮಕ್ಕೆ ಬಂದು ತಲುಪಿದರು. ಇದು ಮೋಕೋಕ್ಚುಂಗ್ ಜಿಲ್ಲೆಯ ಟ್ವೆನ್‌ಸಾಂಗ್ ಉಪಮಂಡಲದಲ್ಲಿ ಬರುವ ಒಂದು ಗ್ರಾಮವಾಗಿದ್ದು ಅಲ್ಲಿ ಅವರ ಕೊನೆ ತಮ್ಮ ಸರ್ಕಾರಿ ಕಾರ್ಯಾಲಯದಲ್ಲಿ ಒಂದು ಸಣ್ಣ ನೌಕರಿಯಲ್ಲಿದ್ದರು. ತಮ್ಮನ ಜೊತೆಗೆ ಅವರು ಉಳಿದರು.  ಅವರು ಯಿಮರೊಮ್ ಗ್ರಾಮಕ್ಕೆ ಬಂದಾಗ ನೂರಾರು ಊರುಗಳಿಂದ ಸಾವಿರಾರು ಜನರು ಅವರನ್ನು ಸ್ವಾಗತಿಸಲು ಬಂದಿದ್ದರು. ದೇಶ ಅವರನ್ನು ಮರೆತಿತ್ತು. ದೇಶದ್ರೋಹಿಗಳ ಸಾಲಲ್ಲಿ ತಮ್ಮನ್ನು ನಿಲ್ಲಿಸಿ ಮಂಗಳಾರತಿ ಮಾಡಿದ್ದು ಅವರಿಗೆ ತೀವ್ರತರವಾದ ದುಃಖವನ್ನು ಉಂಟು ಮಾಡಿತ್ತು. ಇಡೀ ದೇಶ ಅವರು ಸ್ವಾತಂತ್ರಕ್ಕಾಗಿ ಮಾಡಿದ ಸಂಘರ್ಷವನ್ನು ಮರೆತು, ಅವರನ್ನು ಅನಾಥರನ್ನಾಗಿ ಮಾಡಿ ತಮ್ಮ ಊರಿಗೂ ಹಾಗೂ ತಮ್ಮ ಜನರ ಮದ್ಯೆ ಹೋಗದಂತೆ ಮಾಡಿದ್ದಕ್ಕೆ ಇಡೀ ದೇಶವೂ ಮೌನ ಸಮ್ಮತಿ ನೀಡಿದ್ದು ಅವರಿಗೆ ಮತ್ತಷ್ಟು ದುಃಖವನ್ನು ಉಂಟು ಮಾಡಿತ್ತು.

1952ರ ಹೊತ್ತಿಗೆ ಆ ಭಾಗದಲ್ಲಿ ನಡೆಯುತ್ತಿದ್ದ ನಾಗಗಳ ಹೋರಾಟ ಸ್ವಲ್ಪ ಕಡಿಮೆಯಾದಾಗ ರಾಣಿ ಗಾಯಿಡಿನ್ಲೂಯಿ ಅವರು ಮಣಿಪುರದ ರಾಜಧಾನಿ ಇಂಫಾಲ್‌ಗೆ 9 ಮೇ 1952ರಲ್ಲಿ ಬಂದು ಒಂದು ವಾರ ಉಳಿದರು. ಅಲ್ಲಿಯವರೆಗೆ ಅವರಿಗೆ ಯಾವುದೇ ರೀತಿಯ ಆರ್ಥಿಕ ಸಹಾಯವನ್ನು ಮಾಡಲಿಲ್ಲ. ಸ್ವಾತಂತ್ರ ಹೋರಾಟಗಾರ್ತಿ ಎಂಬುದನ್ನು ಗುರ್ತಿಸಲಿಲ್ಲ. ಅದೇ ಸಂದರ್ಭದಲ್ಲಿ ಭಾರತದ ಪ್ರಥಮ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದ್‌ರವರು ಇಂಫಾಲ್‌ಗೆ ಬಂದಿದ್ದರು. ಆಗ ರಾಣಿ ಗಾಯಿಡಿನ್ಲೂಯಿ ಅವರು ಸನ್ಮಾನ್ಯ ರಾಷ್ಟ್ರಪತಿ ಗಳನ್ನು ಭೇಟಿಯಾಗಿ ತಮ್ಮ ಸಮುದಾಯದ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. 1953ರಲ್ಲಿ ಭಾರತದ ಪ್ರಧಾನ ಮಂತ್ರಿ ನೆಹರೂ ಅವರು ಮಣಿಪುರ ಮತ್ತು ನಾಗಪ್ರದೇಶಕ್ಕೆ ಭೇಟಿ ನೀಡಿದಾಗ ಅವರನ್ನು ಕೂಡಾ ಭೇಟಿಮಾಡಿ ಅಲ್ಲಿನ ಸಮಾಜದ ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿಗಳಿಗೆ ವಿವರಿಸಿದ್ದರು. ಆದರೆ ಅದರಿಂದ ಏನೂ ಲಾಭವಾಗಲಿಲ್ಲ. ರಾಷ್ಟ್ರ ವಿರೋಧಿ ಚಟುವಟಿಕೆ ಮುಂದುವರಿದೆ ಇತ್ತು. ಅವರಿಗೆ ಅಲ್ಲಿ ಹೋಗಲು ನಿರ್ಭಂದವಿತ್ತು. 12 ವರ್ಷಗಳ ದೀರ್ಘ ಸಮಯದ ನಂತರ 1959ರಲ್ಲಿ ಅವರಿಗೆ ತಮ್ಮ ಊರಿಗೆ ಹೋಗಲು ಸಾಧ್ಯವಾಯಿತು.

ಸ್ವತಂತ್ರ ನಾಗಪ್ರದೇಶಕ್ಕಾಗಿ ಚರ್ಚ್ ಹಾಗೂ ಉಗ್ರವಾದಿ ರಾಷ್ಟçವಿರೋಧಿ ಸಂಘಟನೆಯಾದ ನಾಗ ನ್ಯಾಷನಲ್ ಕೌನ್ಸಿಲ್ (ಓ.ಓ.ಅ) ಪ್ರಮುಖನಾದ ಫಿಜೋ ನೇತೃತ್ವದಲ್ಲಿ ಭಾರತದ ವಿರುದ್ಧ ಸಶಸ್ತ್ತ್ರ ಹೋರಾಟ ಪ್ರಾರಂಭವಾಗಿತ್ತು. ಇಡೀ ಈಶಾನ್ಯ ಭಾರತದಲ್ಲಿ ಮತಾಂತರವೂ ಜೋರಾಗಿಯೇ ನಡೆದಿತ್ತು. ಸನಾತನ ಧರ್ಮ ಹಾಗೂ ಜಲಿಯಾನ್‌ರಾಂಗ್ ನಾಗಸಂಪ್ರದಾಯಗಳ ಉಳವಿಗಾಗಿ ರಾಣಿ ಗಾಯಿಡಿನ್ಲೂಯಿ ಪುನಃ 1960ರಲ್ಲಿ ಭೂಗತರಾಗಬೇಕಾಯಿತು. 1960ರಲ್ಲಿ ತಮ್ಮ ಕಮಾಂಡರುಗಳ ಜೊತೆಗೆ ತಮ್ಮ ಊರಾದ ಲಂಕ್ಗಾವೋನಿಂದ ಕಣ್ಮರೆಯಾಗಿ ಚರ್ಚ್ ಹಾಗೂ (ಓ.ಓ.ಅ) ವಿರುದ್ಧ ಸಶಸ್ತ್ತ್ರ ಹೋರಾಟಕ್ಕೆ ಇಳಿದರು. 1000 ಜನ ಸೈನಿಕರ ಪಡೆ ಇವರೊಂದಿಗಿತ್ತು. ನಾಗಾಲ್ಯಾಂಡ್ ಭಾರತದ ಅಭಿನ್ನ ಅಂಗವೆಂದು ಇವರು ಘೋಷಿಸಿದರು.  ಬ್ರಿಗೇಡಿಯರ್ ಸ್ತರದ ಕಮಾಂಡರ್ ಇವರ ಸೇನೆಯಲ್ಲಿದ್ದರು.  ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದ ‘ಜಲಿಯಾಂಗ್‌ರಾಂಗ್’ ಜನಜಾತಿಯ ಕ್ಷೇತ್ರದಲ್ಲಿ ಇವರ ಪ್ರಭಾವ ಮೊದಲೇ ಇತ್ತು. ಈಗ ಪುನಃ ಹೆಚ್ಚಾಯಿತು. ಚರ್ಚ್ ಮತ್ತು (ಓ.ಓ.ಅ) ಇವರ ವಿರುದ್ಧ ಯುದ್ಧಕ್ಕೆ ನಿಂತವು ಹಾಗೂ ಇವರ ಮೇಲೆ ಹಲವಾರು ಬಾರಿ ದಾಳಿ ಮಾಡಿದವು. ಎರಡೂ ಕಡೆ ಸಾಕಷ್ಟು ಸಾವು ನೋವುಗಳಾದವು. ಬದಲಾದ ಪರಿಸ್ಥಿತಿಯಲ್ಲಿ ಅಸ್ಸಾಂ ರೈಫಲ್ಸ್ ಇವರಿಗೆ ಗುಪ್ತವಾಗಿ ಸಮರ್ಥನೆ ನೀಡುತ್ತಿತ್ತು.

1964ರಲ್ಲಿ (ಓ.ಓ.ಅ) ಮತ್ತು ಭಾರತ ಸರ್ಕಾರದ ಮಧ್ಯೆ ಒಪ್ಪಂದ ಹಾಗೂ ಸಂಘರ್ಷ ವಿರಾಮದ ಘೋಷಣೆಯಾಯಿತು. ಚರ್ಚ್ ಕೂಡಾ ಇದರಲ್ಲಿ ಸೇರಿಕೊಂಡಿತು. ಸರ್ವೋದಯ ನಾಯಕ ಮಾನ್ಯ ಜಯಪ್ರಕಾಶ್ ನಾರಾಯಣ್ ಇವರು ಈ ಒಪ್ಪಂದ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1965ರಲ್ಲಿ (ಓ.ಓ.ಅ) ಯ ಉಗ್ರವಾದಿಗಳು ಇವರ ಸಂಪರ್ಕಿತ ಊರುಗಳಿಗೆ ಜಬರ್‌ದಸ್ತಿ ಹಣ ಸಂಗ್ರಹಣೆ ಮಾಡಲು ಬಂದಾಗ 9 ಜನ ಉಗ್ರವಾದಿಗಳನ್ನು ಊರವರು ಹಾಗೂ ರಾಣಿ ಗಾಯಿಡಿನ್ಲೂಯಿ ಸೈನಿಕರು ಕೊಂದರು. ಸರ್ಕಾರ ಪೇಚಿಗೆ ಸಿಲುಕಿತು. ಕೋಹಿಮಾ ಕಮಿಷನರ್ ಸುಬೋದ ಚಂದ್ರದೇವ್ ಅವರ ಪ್ರಯತ್ನದಿಂದ ರಾಣಿ ಗಾಯಿಡಿನ್ಲೂಯಿ ಮತ್ತು ಅವರ ಸೈನ್ಯ 20 ಜನವರಿ 1966ರಂದು ತಮ್ಮ ಎಲ್ಲಾ ಶಸ್ತ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿತು ಮತ್ತು ಸಾಮಾಜಿಕ ಜೀವನಕ್ಕೆ ಕಾಲಿಟ್ಟಿತು. ಆ ಎಲ್ಲಾ ಶರಣಾದ ಸೈನಿಕರನ್ನು ನಾಗಾಲ್ಯಾಂಡ್ ಆರ್ಮ್ಡ ಪೋಲಿಸ್  ನಲ್ಲಿ ಭರ್ತಿಮಾಡಿಕೊಳ್ಳಲಾಯಿತು.

ಸ್ವಾತಂತ್ರ ಸೇನಾನಿ ರಾಣಿ ಗಾಯಿಡಿನ್ಲೂಯಿ ಅವರು ಘೋಷಣೆ ಮಾಡಿದರು. “ನಾನು ಒಬ್ಬ ಭಾರತೀಯ ನಾಗರೀಕಳಾಗಿದ್ದೇನೆ. ಭಾರತ ನಮ್ಮ ದೇಶ. ನಾನು ಹಿಂದೂ ಮತ್ತು ಸನಾತನ ಧರ್ಮದ ಅನುಯಾಯಿಯಾಗಿದ್ದೇನೆ’’.

     ರಾಣಿ ಗಾಯಿಡಿನ್ಲೂಯಿ ಅವರಿಗೆ ಸರ್ಕಾರದ ವತಿಯಿಂದ ವಿಶೇಷ ಗೌರವ ನೀಡಲಾಯಿತು. ಸರ್ಕಾರ ಅವರಿಗೆ ನಾಗಲ್ಯಾಂಡ್ ರಾಜಧಾನಿಯಾದ ಕೊಹಿಮಾದಲ್ಲಿ ಫಾರೆಸ್ಟ್ ಕಾಲೋನಿಯಲ್ಲಿ ಟೈಪ್-5 ಒಂದು ದೊಡ್ಡ ಮನೆಯನ್ನು ನೀಡಿತು. ಒಬ್ಬ ಕಮಾಂಡರ್ ಸಹಿತ 10 ಜನ ಸುರಕ್ಷಾ ಗಾರ್ಡ್, 2 ಮಹಿಳಾ ಸೇವಕರು, ಒಬ್ಬ ಅಪ್ಪರ್ ಡಿವಿಜನ್ ಕ್ಲರ್ಕ್, ಒಬ್ಬ ಆಪ್ತಸಚಿವ, ಒಬ್ಬ ಟೈಪ್‌ರೈಟರ್ ಹಾಗೂ ಡ್ರೆöÊವರ್ ಸಹಿತ ಒಂದು ಜೀಪ್ ಕೊಡಲಾಯಿತು. ತಿಂಗಳಿಗೆ 2 ಕ್ವಿಂಟಾಲ್ ಅಕ್ಕಿ ಹಾಗೂ ರೂ. 800ನ್ನು ಅವರಿಗೆ ಪೆನ್‌ಷನ್ ರೂಪದಲ್ಲಿ ಒದಗಿಸಿತು, ಸ್ವತಂತ್ರ ಭಾರತದ 19 ವರ್ಷದ ನಂತರ!!!.

                1969ರಲ್ಲಿ ಅಸ್ಸಾಂನ ಜೋರಾಹಟ್‌ನಲ್ಲಿ ನಡೆದ ವಿಶ್ವಹಿಂದು ಪರಿಷತ್ತಿನ ಹಿಂದೂ ಸಮ್ಮೇಳನದಲ್ಲಿ ರಾಣಿ ಗಾಯಿಡಿನ್ಲೂಯಿ ಅವರು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘ ಚಾಲಕರಾದ ಪರಮಪೂಜನೀಯ ಗುರೂಜಿಯವರು ಉಪಸ್ಥಿತರಿದ್ದರು. ರಾಣಿ ಗಾಯಿಡಿನ್ಲೂಯಿ ಅವರು ತಮ್ಮ ಪ್ರದೇಶದಲ್ಲಿ ಹಿಂದುಗಳ ಮತಾಂತರ ತಡೆಯುವಂತೆ ಗುರೂಜಿಯವರಲ್ಲಿ ವಿನಂತಿಸಿಕೊಂಡಿದ್ದರು. ಇಡೀ ಹಿಂದೂ ಸಮಾಜ ಈ ಬಗ್ಗೆ ಚಿಂತಿಸಬೇಕೆಂತಲೂ ಅವರು ವಿನಂತಿಸಿದ್ದರು.

                1978ರಲ್ಲಿ ತಮ್ಮದೇ ಜನಜಾತಿಯ ಜಲಿಯಾನ್‌ರಾಂಗ್ ಹರಕ್ಕಾ ಸಮ್ಮೇಳನವನ್ನು ಡೀಮಾಪುರದಲ್ಲಿ ಹಮ್ಮಿಕೊಂಡಿದ್ದರು. ಯಾರಿಗೂ ಜಗ್ಗದೇ ಬಗ್ಗದೇ ದೇಶಕ್ಕಾಗಿ ಧರ್ಮಕ್ಕಾಗಿ ಸದಾ ಮುನ್ನುಗ್ಗಿ ಹೋರಾಡಿದ ವೀರಮಹಿಳೆ ಸ್ವಾತಂತ್ರ ಸೇನಾನಿ ರಾಣಿ ಗಾಯಿಡಿನ್ಲೂಯಿ.

    ಇದೇ ಸಂದರ್ಭದಲ್ಲಿ ಅವರು ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ಸ್ಥಾಪಕರಾದ ಮಾನ್ಯ ಬಾಳ ಸಾಹೇಬ್ ದೇಶಪಾಂಡೆ ಅವರನ್ನು ಭೇಟಿ ಮಾಡಿದ್ದರು. 1985ರಲ್ಲಿ ಭಿಲಾಯಿಯಲ್ಲಿ ನಡೆದ ರಾಷ್ಟ್ರೀಯ ವನವಾಸಿ ಮಹಿಳಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 1986ರಲ್ಲಿ ಆರ್.ಎಸ್.ಎಸ್.ನ ಸರಕಾರ್ಯವಾಹರಾಗಿದ್ದ ಮಾನ್ಯ ಹೊ.ವೆ. ಶೇಷಾದ್ರಿಗಳನ್ನು ಇವರು ಭೇಟಿಯಾಗಿದ್ದರು.

                ತಮ್ಮ ಇಡೀ ಜೀವನವನ್ನು ದೇಶಧರ್ಮಕ್ಕಾಗಿ ಗಂಧದಂತೆ ತೇದ ಈ ಮಹಾನ್ ಸೇನಾನಿ ರಾಣಿ ಗಾಯಿಡಿನ್ಲೂಯಿ ತಮ್ಮ ಯೌವನದ 15 ವರ್ಷಗಳ ದೀರ್ಘಕಾಲ ಬ್ರಿಟಿಷ್ ಜೈಲಲ್ಲಿ ಕಳೆದರು. ಸಂಘರ್ಷದ ನೇತೃತ್ವ ವಹಿಸಿ ಪಡಬಾರದ ಕಷ್ಟಪಟ್ಟರು.  ದೇಶದ ಸ್ವಾತಂತ್ರದ ನಂತರ ಯಾವುದೇ ಗೌರವ ಸಿಗದಿದ್ದಾಗ್ಯೂ ಬೇಸರಿಸದೆ ಧರ್ಮರಕ್ಷಣೆಗಾಗಿ ಪುನಃ ಶಸ್ತ್ತ್ರ ಹಿಡಿದು ಭೂಗತರಾದರು.  ನಂತರ ಸಮಾಜ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿಷ್ಕಾಮ ಸೇವೆ ಮಾಡಿದರು. ಇಂತಹ ವಿಭೂತಿ ಪುರುಷರನ್ನು ಕ್ರಾಂತಿಕಾರಿಗಳನ್ನು ಸದಾ ನೆನಪಿನಲ್ಲಿಡುವುದು ದೇಶವಾಸಿಗಳ ಕರ್ತವ್ಯ.

ಇವರಿಗೆ ಸಂದ ಗೌರವಗಳು:

             1972ರಲ್ಲಿ ಸ್ವಾತಂತ್ರ ಸೇನಾನಿ ತಾಮ್ರಪತ್ರ ಕೊಡಲ್ಪಟ್ಟಿತು.

             1982ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.

             1983ರಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸನ್ಮಾನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.

             1996ರಲ್ಲಿ ಮರಣೋಪರಾಂತದ ಭಗವಾನ್ ಬಿರಸಾ ಮುಂಡ ಪ್ರಶಸ್ತಿ ನೀಡಲಾಯಿತು.

             1996ರಲ್ಲಿ ಭಾರತೀಯ ಅಂಚೆ ಕಛೇರಿ ಇವರ ಸ್ಮೃತಿಯಲ್ಲಿ ರೂ. 1ರ ಅಂಚೆ ಚೀಟಿಯನ್ನು ಜಾರಿ ಮಾಡಿದೆ.

             2000ರಲ್ಲಿ ಅಂದಿನ ಕೇಂದ್ರ ಸರ್ಕಾರ ಇವರ ಹೆಸರಲ್ಲಿ ರಾಷ್ಟಿçÃಯ ಸ್ತಿçÃಶಕ್ತಿ ಪುರಸ್ಕಾರ 1 ಲಕ್ಷ ರೂ. ಕೊಡುತ್ತಿದೆ.

             2015ರ ಅವರ ಜನ್ಮಶತಮಾನೋತ್ಸವದಲ್ಲಿ ಇಂದಿನ ಕೇಂದ್ರ ಸರ್ಕಾರ ಅವರ ನೆನಪಿಗಾಗಿ ರೂ. 100ರ ನಾಣ್ಯ ಹಾಗೂ ರೂ. 5ರ ನಾಣ್ಯವನ್ನು ಚಲಾವಣೆಗೆ ತಂದಿತು.

             ಹಿಂದಿನ ವರ್ಷ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ವಿಶ್ವವಿದ್ಯಾನಿಲಯಗಳಲ್ಲಿ ಇವರ ಹೆಸರಲ್ಲಿ ಒಂದು ಪೀಠವನ್ನು ಪ್ರಾರಂಭಿಸಿದೆ.

     17ಫೆಬ್ರುವರಿ 1993ರಲ್ಲಿ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು. ಇದು ದೇಶದಲ್ಲಿ ಎಲ್ಲೂ ಚರ್ಚೆಯಾಗಲಿಲ್ಲ. ಪ್ರಚಾರಕ್ಕೂ ಬರಲಿಲ್ಲ. ಸರ್ಕಾರಿ ಕಾರ್ಯಕ್ರಮಗಳು ನಡೆಯಲಿಲ್ಲ.ಎಂಥಾ ವಿಪರ್ಯಾಸ !!.

                 

            

                           

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post

ಒಳ್ಳೆಯ ಕೆಲಸಗಳನ್ನು ಮಾಡುವುದು ನಮ್ಮ ಧರ್ಮ - ಶ್ರೀ ದತ್ತಾತ್ರೇಯ ಹೊಸಬಾಳೆ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Politicisation of Education: Rajnath Sing writes

Politicisation of Education: Rajnath Sing writes

February 11, 2013
Kasaragod: One lakh people participated in massive protest rally against demolition of Kumble Temple

Kasaragod: One lakh people participated in massive protest rally against demolition of Kumble Temple

January 24, 2012
Bajarangadal demands arrest of Prashanth Bhushan प्रशांत भूषण की गिरफ़्तारी के लिये बजरंग दल का प्रदर्शन

Bajarangadal demands arrest of Prashanth Bhushan प्रशांत भूषण की गिरफ़्तारी के लिये बजरंग दल का प्रदर्शन

January 8, 2014

ರಾಮ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪರಮ ಪೂಜನೀಯ ಸರಸಂಘಚಾಲಕರಾದ ಡಾ. ಮೋಹನ ಭಾಗವತರ ಉದ್ಬೋಧನ

August 5, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In