
ಪೂರ್ವ ಯೋಜನೆಯಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ದೇವಾಲಯ ಸಂಕೀರ್ಣ ವಿಸ್ತರಿಸುವ ಸಲುವಾಗಿ ದೇಗುಲಕ್ಕೆ ಹೊಂದಿಕೊಂಡಿರುವ 7,285 ಚದರ ಅಡಿಯಷ್ಟು ಭೂಮಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖರೀದಿಸಿದೆ.
ರಾಮಮಂದಿರ ದೇವಾಲಯ ಸಂಕೀರ್ಣವನ್ನು 70 ಎಕರೆ ಪ್ರದೇಶದಿಂದ 107 ಎಕರೆ ಪ್ರದೇಶಕ್ಕೆ ವಿಸ್ತರಿಸಬೇಕೆಂಬ ಯೋಜನೆಗೆ ಅನುಗುಣವಾಗಿ ರಾಮಜನ್ಮಭೂಮಿ ಪಕ್ಕದಲ್ಲಿರುವ 7,825 ಚ. ಅಡಿ ಭೂಮಿಯನ್ನು, ಚ.ಅಡಿಗೆ ₹1,373 ಬೆಲೆ ನೀಡಿ ಟ್ರಸ್ಟ್ ಖರೀದಿಸಿದೆ. ಈ ಹೆಚ್ಚುವರಿ ಜಾಗದಲ್ಲಿ ಮ್ಯೂಸಿಯಂ, ಗ್ರಂಥಾಲಯ, ರಾಮನ ಜೀವನವನ್ನು ಪ್ರಚುರಪಡಿಸುವ ಫೋಟೋ ಗ್ಯಾಲರಿ ಒಳಗೊಂಡ ಬೃಹತ್ ಸಂಕೀರ್ಣ ನಿರ್ಮಾಣದ ಯೋಜನೆ ರೂಪಿಸಿದೆ. ಮಂದಿರ ನಿರ್ಮಾಣ ಕಾರ್ಯಕ್ಕೆ ಈಗಾಗಲೇ 2100 ಕೋಟಿ ರು. ನಿಧಿ ಸಂಗ್ರಹವಾಗಿದೆ.