ಹಿಂದುಗಳನ್ನು ಒಂದುಗೊಡಿಸುವ ಮೂಲಕ, ಹಿಂದು ಧರ್ಮವನ್ನು ಇಡೀ ವಿಶ್ವದಲ್ಲಿ ರಕ್ಷಿಸುವ ಉದ್ದೇಶದೊಂದಿಗೆ, ಋಷಿ-ಮುನಿಗಳ ಆಶಿರ್ವಾದದೊಡನೆ, 29 ಆಗಸ್ಟ್, 1964 ರಂದು ವಿಶ್ವ ಹಿಂದು ಪರಿಷತ್ ನ ಸ್ಥಾಪನೆಯಾಯಿತು. ನಿರಂತರವಾಗಿ ಬೆಳೆಯುತ್ತ, ಇಂದು ವಿ.ಹಿಂ.ಪ, ಲಕ್ಷಾಂತರ ನಗರ-ಗ್ರಾಮಗಳಲ್ಲಿ ಅಸ್ತಿತ್ವ ಹೊಂದಿದೆ. ವಿಶ್ವದೆಲ್ಲೆಡೆ ಹಿಂದು ಚಟುವಟಿಕೆ ನಡೆಸುವ ಮೂಲಕ, ವಿ.ಹಿಂ.ಪ ಒಂದು ಬೄಹತ್ ಹಿಂದು ಸಂಘಟನೆಯಾಗಿ ಮಾರ್ಪಡಾಗಿದೆ.
ಶಿಕ್ಷಣ, ಸ್ವಾವಲಂಬನೆ, ಗ್ರಾಮ ಶಿಕ್ಷಾ ಮಂದಿರ ಎಂಬಿತ್ಯಾದಿ 32,000 ಕ್ಕೊ ಹೆಚ್ಚು ಸೇವಾ ಚಟುವಟಿಕೆಗಳ ಮುಖೇನ, , ವಿ.ಹಿಂ.ಪ ಹಿಂದು ಧರ್ಮದ ಬೇರುಗಳನ್ನು ಸದೄಢಗೊಳಿಸುತ್ತಿದೆ.
ಹಿಂದು ಸಮಾಜಕ್ಕೆ ಅಂಟಿದ ಘೋರ ಕಳಂಕಗಳಾದ, ಅಸ್ಪೃಶ್ಯತೆ, ಜಾತಿಯತೆಗಳನ್ನು ಕಿತ್ತೊಗೆಯಲು ವಿ.ಹಿಂ.ಪ ನಿರಂತರವಾಗಿ ಶ್ರಮಿಸುತ್ತಿದೆ.
ವಿ.ಹಿಂ.ಪ ಶ್ರೀ ರಾಮಜನ್ಮಭೂಮಿ , ಶ್ರೀ ಅಮರನಾಥ ಯಾತ್ರೆ , ಶ್ರೀರಾಮಸೇತು, ಶ್ರೀ ಗಂಗಾ ರಕ್ಷಣೆ, ಗೋ ಮಾತೆಯ ರಕ್ಷಣೆಯಂತಹ ನೂರಾರು ಧರ್ಮರಕ್ಷಣೆಯ ಹೋರಾಟಗಳ ಮುಂದಾಳತ್ವವಹಿಸಿ, ಸನಾತನ ಧರ್ಮದ ಮೂಲ ನಂಬಿಕೆ-ಶ್ರದ್ದೆಗಳಿಗೆ ಘಾಸಿಯಾಗದಂತೆ ರಕ್ಷಿಸಿದೆ.
ವಿಶ್ವ ಹಿಂದು ಪರಿಷತ್ತಿನ ಧ್ಯೇಯೋದ್ದೇಶಗಳು
ವಿ.ಹಿಂ.ಪ ಒಂದು ಸೊಸೈಟಿಯಾಗಿ ನೊಂದಣಿಯಾಗಿದೆ(ಎಸ್-೩೧೦೬). ವಿ.ಹಿಂ.ಪ ದ ಪ್ರಮುಖ ಕಾರ್ಯಕ್ಷೇತ್ರಗಳೆಂದರೆ,
೧. ಶಿಕ್ಷಣ
೨.ಆರೋಗ್ಯ
೩.ಬಡತನ ನಿವಾರಣೆ
೪.ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳು
೫.ವೈಜ್ಞಾನಿಕ ಮತ್ತು ಸಾಮಾಜಿಕ-ಧಾರ್ಮಿಕ ಸಂಶೋಧನೆ.
೬.ಸಾಮಾನ್ಯ ಜನತೆಯ ಅನುಕೂಲಕ್ಕಾಗಿ ಇತರ ಚಟುವಟಿಕೆಗಳು
ಪರಿಷತ್ತಿನ ಉದ್ದೇಶಗಳು
೧. ಸನಾತನ ಧರ್ಮದ ನೈತಿಕ ನೆಲೆಗಟ್ಟಿನ ಆಧಾರದಲ್ಲಿ, ವಿಶ್ವದ ಸಮಸ್ತ ಹಿಂದು ಜನಾಂಗವನ್ನು ಒಂದುಗೂಡಿಸುವುದು, ಸಶಕ್ತಗೊಳಿಸುವುದು ಮತ್ತು ಅವಿನಾಶಿಯಾಗಿಸುವುದು. ಭರತವರ್ಷದ ಸಾಂಸ್ಕೄತಿಕ ಮೌಲ್ಯಗಳನುಗುಣವಾಗಿ, ಮಾನವತೆಯ ಉನ್ನತಿಗಾಗಿ ಶ್ರಮಿಸುವುದು.
೨. ಶಿಕ್ಷಣ, ಆರೋಗ್ಯ ಮತ್ತು ಬಡತನ ನಿರ್ಮೂಲನೆಯ ಕಾರ್ಯಗಳನ್ನು ಪ್ರೋತ್ಸಾಹಿಸುವುದು ಮತ್ತು ಜನತೆಯ ಉಪಯೋಗಕ್ಕಾಗಿ ಸಾಹಿತ್ಯ, ವೈಜ್ಞಾನಿಕ ಮತ್ತು ಸಾಮಾಜಿಕ-ಧಾರ್ಮಿಕ ಸಂಶೋಧನೆಗನ್ನು ಕೈಗೊಳ್ಳುವುದು.
೩. ಧಾರ್ಮಿಕ, ಲೈಂಗಿಕ, ಜಾತಿ, ಬಣ್ಣ ಮತ್ತು ಜನಾಂಗದ ಆಧಾರದ ಮೇಲೆ, ಸಂಸ್ಠೆಯಲ್ಲಿ ಎಂದೂ ಶೋಷಣೆಯಿರದು.
೪. ಮೇಲೆ ಉಲ್ಲೇಖಿಸಿರುವ ಚಟುವತಿಗಳನ್ನು ಕಾರ್ಯಗತಗೊಳಿಸಲು ಹಣದ ಅವಶ್ಯಕತೆ ಬಂದಾಗ, ಪುಸ್ತಕ ಮತ್ತು ಸಾಹಿತ್ಯಗಳ ಮಾರಾಟದ ಮೂಲಕ ಹಣ ಸಂಗ್ರಹಿಸುವುದು. ಮಾರಾಟದ ಬೆಲೆಯನ್ನು ಸಾಧ್ಯವಾದಷ್ಟು ಲಾಭದಾಯವಾಗಿರದಂತೆ ನಿಗದಿಪಡಿಸುವುದು.
Bajarangadal- Service, Security, Sanskar ಭಜರಂಗದಳ- ಸೇವೆ, ಸುರಕ್ಷೆ, ಸಂಸ್ಕಾರ
ವಿಶ್ವ ಹಿಂದು ಪರಿಷತ್ ‘ರಾಮ-ಜಾನಕಿ ರಥಯಾತ್ರೆ’ಯನ್ನು ೧ ಅಕ್ಟೋಬರ್, ೧೯೮೪ರಂದು ನಡೆಸಲು ನಿಶ್ಚಯಿಸಿದಾಗ, ಉತ್ತರ ಪ್ರದೇಶ ಸರ್ಕಾರವು ಅದಕ್ಕೆ ಸುರಕ್ಷೆ ಒದಗಿಸಲು ನಿರಾಕರಿಸಿತು. ಆಗ, ಸಂತರ ಕರೆಗೆ ಓಗೊಟ್ಟು ನೂರಾರು ಯುವಕರು ಅಯೋಧ್ಯೆಯಲ್ಲಿ ಸೇರಿ, ಯಾತ್ರೆಗೆ ಸುರಕ್ಷೆ ನೀಡಿದರು. ಉತ್ತರ ಪ್ರದೇಶದ ಯುವಕರನ್ನು ಓಟ್ಟುಗೂಡಿಸುವ ತಾತ್ಕಾಲಿಕ ಉದ್ದೇಶದಿಂದ ಪ್ರಾರಂಭವಾದ ಭಜರಂಗದಳ, ನಂತರ ದೇಶವ್ಯಾಪಿ ನಿರ್ಮಾಣಗೊಂಡಿತು.
ಶಿಲಾ ಪೂಜನೆ, ರಾಮ ಜ್ಯೋತಿ ಯಾತ್ರೆ, ೧೯೯೦ರ ಕರ ಸೇವೆ ಮತ್ತು ೧೯೯೨ರ ಕರ ಸೇವೆ ಭಜರಂಗದಳದ ಕೆಲವು ಸಾಧನೆಗಳು.
ಭಜರಂಗದಳದ ಕಾರ್ಯವಿಧಾನ
೧. ಸಂಘಟನೆ ಚಟುವಟಿಕೆಗಳು
ವಾರದ ಮಿಲನ್, ಬಾಲೋಪಾಸನೆ, ದೀಕ್ಷಾ ಸಮರೋಪ, ಅಭ್ಯಾಸ ವರ್ಗಗಳು ಮತ್ತು ಹಬ್ಬಗಳ ಆಚರಣೆ-ಅಖಂಡ ಭಾರತ ಸಂಕಲ್ಪ ದಿವಸ(೧೪ ಆಗಸ್ಟ್), ಬಾಲೋಪಾಸನೆ ದಿನ(ಹನುಮಾನ್ ಜಯಂತಿ), ಹುತಾತ್ಮ ಸ್ಮೄತಿ ದಿನ(೩೦ ಅಕ್ಟೋಬರ್-೦೨ ನವೆಂಬರ್), ಶೌರ್ಯ ದಿನ(೬ ಡಿಸಂಬರ್), ಇತ್ಯಾದಿ.
೨. ಹೋರಾಟದ ಚಟುವಟಿಕೆಗಳು
ಕೇಂದ್ರ ನಿರ್ಧರಿಸಿದ ಆಂದೋಲನಗಳ ಜೊತೆಗೆ, ರಾಷ್ಟ್ರಕ್ಕೆ ಒಳಿತಾಗುವ ವಿಷಯಗಳಿಗಾಗಿ ಹೋರಾಟ ನಡೆಸುವುದು. ಅದರೊಂದಿಗೆ ಇತರ ವಿಷಯಗಳಾದ,
(ಅ) ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನ
(ಆ) ಗೋ ರಕ್ಷಣೆ
(ಇ).ಸಾಮಾಜಿಕ ಪಿಡುಗುಗಳಾದ ಅಸ್ಪೄಶ್ಯತೆ, ವರದಕ್ಷಿಣೆ, ಇತ್ಯಾದಿ ಹಾಗೂ ಹಿಂದು ಸಂಸ್ಕೄತಿಗೆ,
ಧರ್ಮಕ್ಕೆ, ನಂಬಿಕೆಗೆ ಅಪಮಾನಿಸಿದರೆ, ಅದನ್ನು ಪ್ರತಿಭಟಿಸುವುದು.
(ಈ) ರಚನಾತ್ಮಕ ಚಟುವಟಿಕೆಗಳು
ಇನ್ನೂ ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ,
‘ಧರ್ಮಶ್ರೀ’
#೯೧, ಶಂಕರಪುರಂ
ಬೆಂಗಳೂರು-೫೬೦೦೦೪
ವೆಬ್ ಸೈಟ್- WWW.vhp.org