• Samvada
Wednesday, May 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಸುರಾಜ್ಯದ ಸಾಕಾರಪುರುಷ ಶಿವಾಜಿ

Vishwa Samvada Kendra by Vishwa Samvada Kendra
April 3, 2021
in Articles
250
0
ಸುರಾಜ್ಯದ ಸಾಕಾರಪುರುಷ ಶಿವಾಜಿ
491
SHARES
1.4k
VIEWS
Share on FacebookShare on Twitter

ಒಬ್ಬ ನಾಯಕ – ಆತ ಜನಸಾಮಾನ್ಯನಾಗಿರಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿರಲಿ – ಆತನ ಪ್ರಥಮ ಕರ್ತವ್ಯ ಸಮಾಜವನ್ನು ಪ್ರಗತಿಯೆಡೆಗೆ ಒಯ್ಯುವುದು. ಇದಕ್ಕೆ ’ಉತ್ತಮ ಆಡಳಿತ’ದ ವ್ಯಾಖ್ಯೆ, ಹಾಗೆಂದರೇನು ಎನ್ನುವುದರ ಅರಿವು ಇರುವುದು ಅವಶ್ಯ. ಉತ್ತಮ ಆಡಳಿತ ಒಂದು ಕಲ್ಪನೆ ಮಾತ್ರವಲ್ಲ, ಅದನ್ನು ವಾಸ್ತವದಲ್ಲೂ ಸಾಧ್ಯವಾಗಿಸಬಹುದು.

ಪ್ರಜಾಕೇಂದ್ರಿತ ಅಭಿವೃದ್ಧಿಯೇ ಉತ್ತಮ ಆಡಳಿತದ ಮೂಲತತ್ತ್ವ. ಜನಸಾಮಾನ್ಯರನ್ನು ವಿಕಾಸದ ಕೇಂದ್ರವಾಗಿ, ಪಾಲುದಾರರನ್ನಾಗಿ ಮಾಡಿದಾಗಲೆಲ್ಲ ಆ ರಾಷ್ಟ್ರ ಸಫಲತೆಯ, ಸಮೃದ್ಧಿಯ ಉನ್ನತ ಎತ್ತರಕ್ಕೇರಿರುವುದು ಇತಿಹಾಸದಲ್ಲಿ ಸಾಬೀತಾಗಿದೆ. ಪ್ರಜೆಗಳ ಭಾಗವಹಿಸುವಿಕೆಯ ಹೊರತಾಗಿ ಯಾವುದೇ ರಾಷ್ಟ್ರವೂ ಪ್ರಗತಿ ಕಂಡಿಲ್ಲ; ಈ ಸತ್ಯವನ್ನು ನಮ್ಮ ಎಲ್ಲ ಮಹಾನ್ ನಾಯಕರು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು.

ಶತಮಾನಗಳ ಹಿಂದೆ ಅಂತಹ ಮಹಾನ್ ನಾಯಕರಿದ್ದರು. ಶಿವಾಜಿ ಮಹಾರಾಜರು ಅಂತಹವರ ಸಾಲಿಗೆ ಸೇರಿದವರು. ’ಉತ್ತಮ ಆಡಳಿತ’ಕ್ಕೆ ಶಿವಾಜಿಯ ಆಡಳಿತ ಅತ್ಯುತ್ತಮ ನಿದರ್ಶನ. ಮಹಾನ್ ಸಾಮ್ರಾಜ್ಯದ ಸ್ಥಾಪಕನಾದ ಶಿವಾಜಿ ಕುಶಲ ರಾಜನೀತಿಜ್ಞ ಹಾಗೂ ಆಡಳಿತಗಾರ; ಉತ್ತಮ ಆಡಳಿತದ ಮೂಲಕವೇ ಪ್ರಜಾಜೀವನದಲ್ಲಿ ಸುಧಾರಣೆಯನ್ನು ತಂದವನು. ಉತ್ತಮ ಆಡಳಿತದ ಆಧಾರದ ಮೇಲೆ ಸಮಾಜಸ್ಥಾಪನೆ ಮಾಡಿ ಇತಿಹಾಸದಲ್ಲಿ ತನ್ನ ಹೆಸರನ್ನು ಅಜರಾಮರವಾಗಿಸಿದ ಶಿವಾಜಿ ಶತಮಾನಗಳಿಂದ ಮೂರೂವರೆ ಪೀಳಿಗೆಗಳ ಸ್ಫೂರ್ತಿಯೂ ಹೌದು.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಉತ್ತಮ ಆಡಳಿತವು ಅಂದಿನ – ಇಂದಿಗೂ ಅಗತ್ಯವಾಗಿದೆ.

’ಕಠಿಣ ಪರಿಸ್ಥಿತಿಯಲ್ಲೇ ಮಹಾನ್ ನೇತೃತ್ವದ ಉದಯವಾಗುತ್ತದೆ’ ಎನ್ನುವ ಮಾತಿದೆ. ಶಿವಾಜಿಯ ಜೀವನವನ್ನು ಅವಲೋಕಿಸಿದಾಗಲೂ ಈ ಮಾತು ನಿಜವೆನ್ನಿಸುತ್ತದೆ. ಆತ ತನ್ನ ಬಾಲ್ಯಕಾಲದಿಂದಲೂ ಮಾತೃಭೂಮಿಯನ್ನು ಸ್ವತಂತ್ರವನ್ನಾಗಿಸುವ ಕನಸು ಕಾಣುತ್ತಿದ್ದ. ತನ್ನ ಹದಿನಾರನೇ ವಯಸ್ಸಿನಲ್ಲೇ ಮೊದಲ ಯುದ್ಧ ಮಾಡಿ ತೋರಣದುರ್ಗದ ಮೇಲೆ ಜಯ ಸಾಧಿಸಿದ. ಈ ವಿಜಯದಿಂದ ಆತನ ಮನೋಬಲ ಸದೃಢವಾಯಿತು. ಆ ಬಳಿಕ ಆತ ಒಂದಾದಮೇಲೊಂದು ಕೋಟೆಯ ಮೇಲೆ ವಿಜಯ ಗಳಿಸುತ್ತಲೇ ಸಾಗಿದ. ಅಫಜಲ್‌ಖಾನನಂತಹ ಸೇನಾಪತಿಯನ್ನು ಸೋಲಿಸಿದ ಶಿವಾಜಿ ಮರಾಠಾ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ. ಆತನ ನೇತೃತ್ವದಲ್ಲಿ ಸೈನಿಕರು ನಿಷ್ಟೆಯಿಂದ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಣೆ ಮಾಡಿದರು. ಆತನ ಪ್ರಭಾವಶಾಲಿ ವ್ಯಕ್ತಿತ್ವವು ಸಾಧಾರಣ ವ್ಯಕ್ತಿಗಳಿಗೆ ಅಸಾಧಾರಣ ಕಾರ್ಯ ಮಾಡಲು ಪ್ರೇರಣೆ ನೀಡಿತು. ಶಿವಾಜಿಯಲ್ಲಿ ಇತರರ ಪ್ರತಿಭೆಯನ್ನು ಗುರುತಿಸುವ ಅದ್ಭುತ ಸಾಮರ್ಥ್ಯವಿತ್ತು; ಅದರಿಂದಲೇ ಅನೇಕ ಪ್ರತಿಭಾಶಾಲಿಗಳನ್ನು ಆತ ಬೆಳೆಸಿದ.

ರಾಮ, ಕೃಷ್ಣ, ಬುದ್ಧ, ಗಾಂಧಿ, ಸರ್ದಾರ್ ಪಟೇಲರಂತಹ ಮಹಾನ್ ವ್ಯಕ್ತಿತ್ವಗಳಲ್ಲಿ ಕೆಲವು ಅಪರೂಪದ ಗುಣಗಳಿರುವುದನ್ನು ಇತಿಹಾಸವು ತೋರಿಸಿದೆ. ಈ ಗುಣಗಳಿಂದಾಗಿಯೇ ಅವರು ಸಾಮಾನ್ಯರಿಗಿಂತ ಭಿನ್ನವಾಗಿ ತೋರಿದುದು. ಅಂತಹ ವ್ಯಕ್ತಿಗಳು ಆರಿಸಿಕೊಂಡ ಹಾದಿಗಳು ಸರಳವಾಗೇನೂ ಇರಲಿಲ್ಲ. ತೀವ್ರ ಕಠಿಣ ಪರಿಸ್ಥಿತಿಯನ್ನು ಅವರುಗಳು ಎದುರಿಸಬೇಕಾಯಿತು. ಯಾವುದೇ ವ್ಯಕ್ತಿಯ ಯೋಗ್ಯತೆ ಸಾಮರ್ಥ್ಯದ ವೃದ್ಧಿಯ ಜೊತೆಯಲ್ಲೇ ಕಠಿಣ ಪರಿಸ್ಥಿತಿಗಳು ಸಹ ಹೆಚ್ಚುತ್ತಲೇ ಇರುತ್ತವೆ; ಅವುಗಳ ಮೇಲೆ ಅವರು ಸಾಧಿಸುವ ವಿಜಯವೂ ಅದಕ್ಕಿಂತ ಮಹತ್ತರದ್ದಾಗಿ ಇರುತ್ತದೆ. ಶಿವಾಜಿಯ ಕಠಿಣ ಪರಿಸ್ಥಿತಿಗಳ ಮೇಲಿನ ವಿಜಯವೇ ಆತ ವರ್ತಮಾನದಲ್ಲೂ ಪ್ರಸ್ತುತನಾಗಲು ಕಾರಣವಾದದ್ದು. ಇಂದು ಯಾವಾಗ ನಮ್ಮ ದೇಶ ಉತ್ತಮ ಆಡಳಿತದ ಶೋಧದಲ್ಲಿದೆಯೋ ಅದೇ ಸಂದರ್ಭದಲ್ಲಿ ಶತಮಾನಗಳ ಹಿಂದೆಯೇ ಶಿವಾಜಿಯ ಸಾಮ್ರಾಜ್ಯದ ಸ್ಥಾಪನೆ ಉತ್ತಮ ಆಡಳಿತದ ಮೇಲೆ ನಿರ್ಮಾಣವಾಗಿತ್ತು. ಆದ್ದರಿಂದ ಶಿವಾಜಿಯ ಆಡಳಿತರೀತಿ, ಅವನ ಮಂತ್ರಿಮಂಡಲ, ಅವನು ಸಾಮಾಜಿಕ ಸಮಸ್ಯೆಗಳ ಹಾಗೂ ಆಡಳಿತವನ್ನು ಅರ್ಥೈಸಿಕೊಳ್ಳುವ ವಿಧಾನದ ವಿಸ್ತೃತ ಅಧ್ಯಯನದ ಅಗತ್ಯವಿದೆ. ಒಂದು ರಾಷ್ಟ್ರವು ಸದಾಚಾರದಿಂದ, ದಕ್ಷತೆಯಿಂದ ಹಾಗೂ    ಜೊತೆಗೆ ಕಾರ್ಯನಿರ್ವಹಿಸುವಂತೆ ಉತ್ತಮ ಆಡಳಿತವು ಪ್ರೇರಣೆ ನೀಡುತ್ತದೆ.

ಉತ್ತಮ ಆಡಳಿತ ಎಂದರೇನು?

ಉತ್ತಮ ಆಡಳಿತದ ವ್ಯಾಖ್ಯಾನ ತುಂಬ ಕಠಿಣ. ಕೆಲವರ ಪ್ರಕಾರ ಇದು ನ್ಯಾಯಪ್ರಾಪ್ತಿ, ಸಶಕ್ತೀಕರಣ ಹಾಗೂ ಸೇವೆಗಳನ್ನು ಒದಗಿಸುವ, ಉದ್ಯೋಗ ನೀಡುವಂತಹ ಕುಶಲ ವಿಧಾನ. ಅದೇ ಇನ್ನು ಕೆಲವರು ಅದನ್ನು ವ್ಯಾಪಾರ, ರಾ? ಹಾಗೂ ಸಮಾಜವನ್ನು ಒಂದುಗೂಡಿಸುವ ಸೂತ್ರವೆಂದು ಹೇಳುತ್ತಾರೆ. ಉತ್ತಮ ಆಡಳಿತವನ್ನು ನ್ಯಾಯದ ಆಚರಣೆ, ಹೊಣೆಗಾರಿಕೆ, ಪಾರದರ್ಶಕತೆ, ಏಕರೂಪತೆ, ಮಾನವಾಧಿಕಾರವನ್ನು ಸಮ್ಮಾನಿಸುವ ವ್ಯವಸ್ಥೆಯ ರೂಪದಲ್ಲೂ ನೋಡಬಹುದು. ಏಶಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಅನುಸಾರ ಉತ್ತಮ ಆಡಳಿತವು ಹೊಣೆಗಾರಿಕೆ, ಪಾರದರ್ಶಕತೆ, ದೂರದೃಷ್ಟಿ ಸಾಮರ್ಥ್ಯ ಮತ್ತು ಸಹಭಾಗಿತ್ವ ಎನ್ನುವ ನಾಲ್ಕು ಘಟಕಗಳನ್ನು ಒಳಗೊಂಡಿದೆ. ವ್ಯಾವಹಾರಿಕ ದೃಷ್ಟಿಕೋನದಿಂದ ನೋಡುವುದಾದರೆ ಉತ್ತಮ ಆಡಳಿತವು ಅಭಿವೃದ್ಧಿಯ ಪರವಾದ ಶಿಕ್ಷಣದ ಸಂವಹನವನ್ನು ಆಧರಿಸಿದ್ದು, ಇದರ ಪ್ರಭಾವ ಜನಸಾಮಾನ್ಯರ ನಿತ್ಯಜೀವನದಲ್ಲಿ ಪ್ರತಿಫಲಿತಗೊಳ್ಳಬೇಕು. ಈ ಅಂಶವನ್ನು ಶಿವಾಜಿಯ?ಚೆನ್ನಾಗಿ ಯಾರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆತ ಉತ್ತಮ ಆಡಳಿತದ ವಿಭಿನ್ನ ಆಧಾರಸಂಗತಿಗಳನ್ನು ತನ್ನ ಸಾಮ್ರಾಜ್ಯದ ಆಡಳಿತ ನೀತಿಗೆ ಆಧಾರವಾಗಿರಿಸಿಕೊಂಡಿದ್ದವನು.

ಉತ್ತಮ ಆಡಳಿತವು ಕಾರ್ಯಸಾಧ್ಯವಾದದ್ದಾಗಿದ್ದು, ಸರ್ಕಾರವು ಸಕ್ರಿಯವಾಗಿ ತನ್ನ ಕಾರ್ಯದಲ್ಲಿ ಅದನ್ನು ಅಳವಡಿಸಿಕೊಳ್ಳಬಹುದಾಗಿದೆ. ಪ್ರಜಾತಂತ್ರದಲ್ಲಿ ನಮ್ಮ ಗಮನ ಕೇವಲ ಉತ್ತಮ ಆಡಳಿತದ ಮೇಲೆ ಮಾತ್ರವಲ್ಲ; ಬದಲಾಗಿ ಪ್ರಜಾತಾಂತ್ರಿಕ ಉತ್ತಮ ಆಡಳಿತದ ಮೇಲೆ ಇರಬೇಕಾದ ಆವಶ್ಯಕತೆಯಿದೆ. ವಿಕಾಸ ಪ್ರಕ್ರಿಯೆಯಲ್ಲಿ ಪ್ರಜಾತಾಂತ್ರಿಕ ಉತ್ತಮ ಆಡಳಿತವು ಜನರನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಪ್ರಜಾತಾಂತ್ರಿಕ ಉತ್ತಮ ಆಡಳಿತವನ್ನು ಜನತೆಯ ಇಚ್ಛೆಗನುಸಾರ ಅವರನ್ನು ಜೊತೆಗೂಡಿಸಿಕೊಂಡು ಸ್ಥಾಪಿಸುವುದೇ ಸರಿಯಾದ ಕ್ರಮ.

ಚಿಕ್ಕಂದಿನಿಂದಲೂ ನಾವು ರಾಮರಾಜ್ಯವೆಂಬ ಪದವನ್ನು ಕೇಳುತ್ತಲೇ ಇದ್ದೇವೆ. ಯಾವ ಪರಿಕಲ್ಪನೆಯನ್ನು ಕೃ?ನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಹೇಳಿದನೋ ಅದೂ ಉತ್ತಮ ಆಡಳಿತದ ಪರಿಕಲ್ಪನೆಯೇ ಆಗಿದೆ. ಇದರ ಮುಖಾಂತರ ನಾವು ಸರಿ-ತಪ್ಪು, ನ್ಯಾಯ-ಅನ್ಯಾಯ, ನೈತಿಕ-ಅನೈತಿಕ ಇವುಗಳ ನಡುವಿನ ಅಂತರವನ್ನು ಗುರುತಿಸುವುದು ಸುಲಭಸಾಧ್ಯವಾಗುತ್ತದೆ. ಕೌಟಲ್ಯನೂ ಸಹ ಅರ್ಥಶಾಸ್ತ್ರದಲ್ಲಿ ಒಬ್ಬ ಯೋಗ್ಯ ಶಾಸಕನ ಸಫಲತೆಯು ಆತನ ಪ್ರಜೆಗಳ ಸರ್ವಾಂಗೀಣ ಉನ್ನತಿಯಲ್ಲೇ ಅಡಗಿದೆ ಎಂದು ಹೇಳಿದ್ದಾನೆ.

ಇವೆಲ್ಲ ಪರಿಕಲ್ಪನೆಗಳನ್ನು ಕ್ರಿಯಾಶೀಲವಾಗಿಸುವಲ್ಲಿ ಶಿವಾಜಿಯ ಕೊಡುಗೆ ಅನುಕರಣೀಯವೆನ್ನಬಹುದು. ತನ್ನ ವ್ಯಕ್ತಿತ್ವದಲ್ಲೇ ಒಬ್ಬ ಮಹಾನ್ ಆಡಳಿತಗಾರನ ಗುಣಗಳನ್ನು ಅಳವಡಿಸಿಕೊಂಡು ಅದರ ಸಾಮರ್ಥ್ಯದಿಂದಲೇ ರಾ?ಕ್ಕೆ ಸ್ವಾತಂತ್ರ್ಯ ತಂದುಕೊಟ್ಟವನು ಆತ; ತನ್ನ ಜೊತೆಗಾರರಿಗೆ ವಿರೋಧಿಗಳ ಜೊತೆಗೆ ಇಂs?ಂಂಔ ಪ್ರಬಲವಾಗಿ ಹೋರಾಡಲು ಸ್ಫೂರ್ತಿ ನೀಡಿದವನು; ಇದೆಲ್ಲದರ ಜೊತೆಗೆ ಪರಿವಾರದವರ ಕ್ಷೇಮವನ್ನೂ ಸಹ ಗಮನದಲ್ಲಿರಿಸಿಕೊಂಡಿದ್ದವನು. ಶಿವಾಜಿ ಪ್ರಜೆಗಳನ್ನು ಅದೆಷ್ಟು ಪ್ರೀತಿಸಿದ್ದನೆಂದರೆ ಎಲ್ಲ ಸಂಪನ್ಮೂಲಗಳನ್ನೂ ನಿಃಸ್ವಾರ್ಥಭಾವನೆಯಿಂದ ಅವರ ಕಲ್ಯಾಣಕ್ಕಾಗಿಯೇ ಸಮರ್ಪಣೆ ಮಾಡಿದ್ದನು. ಇವೆಲ್ಲ ಗುಣಗಳಿಂದಾಗಿಯೇ ಶಿವಾಜಿ ಒಬ್ಬ ನಿಃಸ್ವಾರ್ಥ ಜನನಾಯಕನ ರೂಪದಲ್ಲಿ ಪ್ರಸಿದ್ಧನಾದದ್ದು.

ಶಿವಾಜಿಯ ಪ್ರಸಿದ್ಧಿ ಆತನ ಸಾಮ್ರಾಜ್ಯ ಅಥವಾ ಭಾರತವ?ಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಎಂಬುದು ಗಮನಾರ್ಹ. ಪೋರ್ತುಗಲ್‌ನ ವೈಸ್‌ರಾಯ್ ಕಾಲ್ ದ ಸೆಂಟ್ ವಿನ್ಸೆಂಟ್ ಶಿವಾಜಿಯನ್ನು ಸಿಕಂದರ್ ಹಾಗೂ ಜ್ಯೂಲಿಯಸ್ ಸೀಸರ್ ಅಂತಹ ಸಾಮ್ರಾಟರೊಡನೆ ಹೋಲಿಕೆ ಮಾಡಿದ್ದಾನೆ. ’ಶಿವಾಜಿಯು ಮರಾಠರ  ಉಜ್ಜ್ವಲ ಭವಿ?ದ ಸ್ಫೂರ್ತಿಯಾಗಿ, ಮುಂದಾಳಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ, ಮೊಘಲರಿಗೆ ಆತನ ಪ್ರಾಪಂಚಿಕ ಪ್ರಜ್ಞೆ ಭಾರೀ ಹೊಡೆತ ನೀಡಿತ್ತು’ ಎಂದು ಬ್ರಿಟಿ? ಇತಿಹಾಸಜ್ಞ ಜೇಮ್ಸ್ ಗ್ರಾಂಟ್ ಡಫ್  ಬರೆದಿದ್ದಾನೆ. ಶಿವಾಜಿಯ ಶೌರ್ಯ ಸಾಮರ್ಥ್ಯ ಎಷ್ಟು ಪ್ರಸಿದ್ಧವಾಗಿತ್ತೆಂದರೆ ಆತನ ವಿಮರ್ಶಕರೂ  ಆತನನ್ನು ಪ್ರಶಂಸಿಸುತ್ತಿದ್ದರು. ಇರಾನಿನ ಬಾದ್ ಷ ಅಬ್ಬಾಸನು ಮೊಘಲ ಸಾಮ್ರಾಟ್ ಔರಂಗಜೇಬನಿಗೆ ಶಿವಾಜಿಯು ಮೊಘಲ ಸಾಮ್ರಾಜ್ಯಕ್ಕೆ ಅಪಾಯವಾಗಿ ಪರಿಣಮಿಸಬಹುದೆಂದು ಎಚ್ಚರಿಕೆ ನೀಡಿದ್ದನು. ಕೆಲವರಿಗೆ ಒಗಟಾಗಿದ್ದ ಶಿವಾಜಿ, ತನ್ನ ಜೊತೆಗಾರರಿಗೆ ಭರವಸೆಯ, ಬದಲಾವಣೆಯ, ಅಭಿವೃದ್ಧಿಯ ಪ್ರತೀಕವಾಗಿದ್ದನು. ತನ್ನ ಸಾಮ್ರಾಜ್ಯದ ಸಾಮಾನ್ಯಜನರನ್ನು ಕ್ರಿಯಾಶೀಲರನ್ನಾಗಿಸಿ ಅಭಿವೃದ್ಧಿಯ ಪಥದಲ್ಲಿ ತೊಡಗಿಸಿದ ಶ್ರೇಯಸ್ಸು ಶಿವಾಜಿಗೆ ಸಲ್ಲುತ್ತದೆ.

ಉತ್ತಮ ಆಡಳಿತದ ಮೂಲತತ್ತ್ವ

ಇಂದಿನ ಸನ್ನಿವೇಶದಲ್ಲೂ ಕೂಡ ಪ್ರಜಾತಾಂತ್ರಿಕ ಉತ್ತಮ ಆಡಳಿತದಲ್ಲಿ ಜನಸಾಮಾನ್ಯರು ಕೇವಲ ವಿ?ಯವಸ್ತುಗಳಾಗದೆ, ಸಕ್ರಿಯ ಭಾಗೀದಾರರೂ ಹೌದು. ಕಾನೂನು, ನ್ಯಾಯಾಂಗ, ಆಡಳಿತಾಧಿಕಾರ, ಖಾಸಗಿ ವಲಯ, ಸಮಾಜ ಮತ್ತು ಸಮಸ್ತ ನಾಗರಿಕರಂತಹ ಎಲ್ಲ ಪಾಲುದಾರರಿಗೂ ಉತ್ತಮ ಆಡಳಿತದ ಈ ಪರಿಕಲ್ಪನೆಯು ಉಪಯುಕ್ತವಾಗಿದೆ. ನಾನು ವೈಯಕ್ತಿಕವಾಗಿ ಪಿ-2 ಜಿ-2, ಅರ್ಥಾತ್ ’ಪಾಪ್ಯುಲರ್ ಪ್ರೋ-ಆಕ್ಟಿವ್ ಗುಡ್ ಗವರ್ನನ್ಸ್’ನಲ್ಲಿ ವಿಶ್ವಾಸ ಇರಿಸಿರುವವನು. ಈ ಮಾದರಿಯ ಮೂಲತತ್ತ್ವ ಸದೃಢ ಅಭಿವೃದ್ಧಿಯತ್ತ ಪ್ರತಿಬದ್ಧತೆ; ಅದರಲ್ಲೂ ಮಾನವೀಯ ಅಭ್ಯುದಯಕ್ಕಾಗಿ ಒಂದು ಸ್ಪ-ದೃಷ್ಟಿಕೋನವನ್ನೂ, ಲಕ್ಷ್ಯವನ್ನೂ ನಿರ್ಧರಿಸಬೇಕಾದ್ದು ಆವಶ್ಯಕ. ಇದೇ ಕಾರಣದಿಂದಲೇ ನಮ್ಮ ಗಮನವನ್ನು ಕನಿಷ್ಟ ಸರ್ಕಾರ, ಗರಿಷ್ಟ ಆಡಳಿತದ ಮೇಲೆ ಕೇಂದ್ರಿಕರಿಸಲಾಗಿದೆ.

ಸಾಮಾನ್ಯವಾಗಿ ಆಡಳಿತ-ಅಧಿಕಾರವೆಂದರೆ ಕೊಳಕು ರಾಜಕಾರಣವೆಂದೇ ನಂಬಲಾಗಿದೆ. ರಾಜನೀತಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಸಹ  ಉತ್ತಮ ಆಡಳಿತವೆಂಬುದು ಕಲ್ಪನೆಯಷ್ಟೇ ವಿನಾ ಅದು ವಾಸ್ತವದಲ್ಲಿ ಕಠಿಣಸಾಧ್ಯ ಎಂದೇ ಯೋಚಿಸುತ್ತಿದ್ದಾರೆ.

ನಾವು ಮೊದಲು ಇಂತಹ ಮಾನಸಿಕತೆಯಿಂದ ಹೊರಬರಬೇಕು. ನಮ್ಮ ಯೋಚನೆಯು ’ಉತ್ತಮ ಆಡಳಿತವೇ ಸಮರ್ಥ ರಾಜಕಾರಣ’ ಎಂದು ಯೋಚಿಸುವ ದಿಕ್ಕಿನಲ್ಲಿ ಇರಬೇಕು. ಸರ್ಕಾರಗಳು ಚುನಾವಣೆಯನ್ನೇ ಕೇಂದ್ರವಾಗಿಟ್ಟುಕೊಂಡು ಬಹಳಷ್ಟು ಕಾರ್ಯಗಳನ್ನು ಮಾಡುತ್ತವೆ ನಿಜ. ಆದರೆ ’ಉತ್ತಮ ಆಡಳಿತ’ಕ್ಕೆ ಇರುವ ಮೊದಲ ಷರತ್ತು ಜನರ ಹೃದಯವನ್ನು ಗೆಲ್ಲುವುದು, ಆದರೆ ಅದು ವೋಟಿಗಾಗಿ ಅಲ್ಲ. ಇದನ್ನು ಸಾಧಿಸಲು ಮೊದಲು ಸಮಾಜದಲ್ಲಿ ಯೋಗ್ಯ ಸ್ಥಾನ ಗಳಿಸುವುದು ಆದ್ಯತೆಯಾಗಬೇಕು.

ಶಿವಾಜಿ ’ಮರ್ಜಿ’ ಹಿಡಿಯುವುದರ ತೀವ್ರ ವಿರೋಧಿಯಾಗಿದ್ದ. ಒಂದು ಸಮಯದಲ್ಲಿ ಸುಮಾರು ಮುನ್ನೂರು ಕೋಟೆಗಳ ಮೇಲೆ ಶಿವಾಜಿಯ ಆಧಿಪತ್ಯವಿತ್ತಾದರೂ ಒಂದೇ ಒಂದು ಕೋಟೆಗೂ ಅವನ ಸಂಬಂಧಿಗಳು ಕಿಲ್ಲೆದಾರರಾಗಿರಲಿಲ್ಲ. ವರ್ತಮಾನದಲ್ಲಿ ಸ್ಥಿತಿ ಸಂಪೂರ್ಣ ಭಿನ್ನವೇ ಆಗಿದೆ. ದೇಶವು ವಂಶರಾಜಕಾರಣದಿಂದ ಪೀಡಿತವಾಗಿದೆ. ಹಾಗೆಂದು ಎಲ್ಲ ಆಡಳಿತಕಾಲದಲ್ಲೂ ಹೀಗೆ ಇತ್ತೆಂದು ಇದರರ್ಥವಲ್ಲ. ಕೆಲವು ಕೇಂದ್ರಸರ್ಕಾರಗಳು ಬಹಳಷ್ಟು ಶ್ಲಾಘನೀಯ ಕಾರ್ಯಗಳನ್ನು ನಡೆಸಿವೆ. ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತಕಾಲದಲ್ಲಿ ಜಾರಿಗೊಂಡ ’ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ’ ಇದಕ್ಕೆ ಒಂದು ಉತ್ತಮ ನಿದರ್ಶನ. ಈ ಯೋಜನೆಯಲ್ಲಿ ಅಟಲ್‌ಜೀಯವರ ನಿಃಸ್ವಾರ್ಥ ಕಾರ್ಯ ಪ್ರತಿಫಲಿಸಿದೆ. ಎಲ್ಲಿಯವರೆಗೆಂದರೆ ಯೋಜನೆಯ ನಾಮಕರಣದಲ್ಲಿ ಕೂಡ ತಮ್ಮ ಹೆಸರನ್ನು ಸೇರಿಸದೆ ತಮ್ಮ ಸ್ಥಾನದ ಹೆಸರಿನಲ್ಲಿ ಆ ಯೋಜನೆಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ.

ಉತ್ತಮ ಆಡಳಿತವನ್ನು ಸಾಕಾರಗೊಳಿಸಲು ಮಾನವಸಂಪನ್ಮೂಲಗಳ ಅಭಿವೃದ್ಧಿ; ಶಿಕ್ಷಣ, ಭದ್ರತೆ  ಹಾಗೂ ಜೀವನಶೈಲಿಯಲ್ಲಿ ಸುಧಾರಣೆ – ಇವು  ಸಹಕಾರಿ. ಗುಜರಾತಿನಲ್ಲಿ ಪಂಚಾಮೃತದ ಆಧಾರದ ಅಭಿವೃದ್ಧಿ ಯೋಜನೆಗಳು ಐದು ಶಕ್ತಿಗಳಾದ ಜ್ಞಾನಶಕ್ತಿ, ಇಂಧನಶಕ್ತಿ, ಜನಶಕ್ತಿ ಹಾಗೂ ರಕ್ಷಣಾಶಕ್ತಿ ಇವುಗಳ ಮೇಲೆ ಕೇಂದ್ರೀಕೃತವಾಗಿವೆ.

ಪ್ರಜಾಪ್ರಭುತ್ವದ ಮೂಲಸಾರ

ಆಡಳಿತದ ನಿಜವಾದ ಶಕ್ತಿ ಜನತೆಯ ಕೈಯಲ್ಲಿರಬೇಕು ಎನ್ನುವುದು ನನ್ನ ದೃಢವಿಶ್ವಾಸ. ಇದೇ ಪ್ರಜಾತಂತ್ರದ ಮೂಲಸಾರ. ಪಾರದರ್ಶಕ ಪ್ರಕ್ರಿಯೆ ಹಾಗೂ ಹೊಣೆಗಾರಿಕೆಯನ್ನು ಸದೃಢಗೊಳಿಸುವತ್ತ ನನ್ನ ಅವಿಶ್ರಾಂತ ಪ್ರಯತ್ನ ನಡೆದೇ ಇರುತ್ತದೆ. ಸಾಮೂಹಿಕ ಗುಂಪು ಕಲ್ಪನೆ, ಆಡಳಿತದಲ್ಲಿ ಸ್ಪ?ತೆ ಹಾಗೂ ಜನತೆಯ ಪಾಲುದಾರಿಕೆಯೇ ಉತ್ತಮ ಆಡಳಿತದ ಮೂಲಮಂತ್ರ ಎನ್ನುವುದು ನನ್ನ ನಂಬಿಕೆ.

ಶತಮಾನಗಳ ಹಿಂದಿನ ಶಿವಾಜಿಯ ಕಾಲಕ್ಕೆ ಹೋಲಿಸಿದರೆ ತಾಂತ್ರಿಕವಾಗಿ ಮುಂದುವರಿದ ನಾವು ಸಾಕಷ್ಟು ಸಜ್ಜುಗೊಂಡಿದ್ದೇವೆ. ತಂತ್ರಜ್ಞಾನವು ಉತ್ತಮ ಆಡಳಿತವನ್ನು ಸಾಕಾರಗೊಳಿಸುವಲ್ಲಿ ಸಹಕರಿಸಬಲ್ಲದು. ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಮಾಧ್ಯಮದ ನೆರವಿನಿಂದ ಪಾರದರ್ಶಕತೆಯನ್ನೂ ಜನಸಶಕ್ತೀಕರಣವನ್ನೂ ಸಾಧಿಸಬಹುದಾಗಿದೆ. ಗುಜರಾತ್ ಸರ್ಕಾರವು ಈ ವಿಷಯದಲ್ಲಿ ಸಾಕಷ್ಟು ಮುಂದಿದೆ. ಇಂತಹ ಹಲವಾರು ವ್ಯವಸ್ಥೆಗಳನ್ನೂ ತಂತ್ರಜ್ಞಾನವನ್ನೂ ಬಳಸಿಕೊಂಡು ನಾವು ಜನರನ್ನು ಆಡಳಿತದ ಕೇಂದ್ರಬಿಂದುಗಳನ್ನಾಗಿ ಮಾಡಲು ಸಾಧ್ಯವಿದೆ.

ಅಭಿವೃದ್ಧಿಯನ್ನು ಜನಾಂದೋಲನವನ್ನಾಗಿ ಮಾಡುವುದು ಹಾಗೂ ನಾನು ಈ ಮೊದಲೇ ಹೇಳಿದಂತೆ ಸ್ಪಷ್ಟತೆ ಹಾಗೂ ಜನರ ಭಾಗೀದಾರತ್ವವೂ ಸಹ ಉತ್ತಮ ಆಡಳಿತದ ಒಂದು ಭಾಗ. ಜನರು ಆಡಳಿತ ಪ್ರಕ್ರಿಯೆಯಲ್ಲಿ, ಅಲ್ಲಿ ಎದುರಾಗುವ ತೊಂದರೆ, ತೊಡಕುಗಳ ಸಂಭಾವ್ಯ ಅರಿವನ್ನು ಹೊಂದಿರಬೇಕು. ಇದರಿಂದಾಗುವ ಪ್ರಯೋಜನವೆಂದರೆ ಒಂದೋ ಅವರು ಪರಿಸ್ಥಿತಿಯ ಅನುಕೂಲಕರ ಲಾಭವನ್ನು ಪಡೆಯುತ್ತಾರೆ ಅಥವಾ ಸಂಭಾವ್ಯ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಆಡಳಿತವು ಜನತೆಯ ಎದುರು ಸತ್ಯವನ್ನು ಮುಚ್ಚಿಟ್ಟು ಪರಿಸ್ಥಿತಿಯು ಸಹಜವಾಗಿದೆ ಎಂದು ತೋರಿಸಿಕೊಳ್ಳುತ್ತದೆ. ಆದರೆ ಜನರ ಎದುರು ವಾಸ್ತವಿಕ ತೊಂದರೆಯನ್ನು ತೆರೆದಿಡುವುದು, ತಿಳಿವಳಿಕೆ ನೀಡುವುದು ಉತ್ತಮವೆನ್ನುವುದು ನನ್ನ ಅಭಿಪ್ರಾಯ. ಹಾಗೆ ಮಾಡಿದರೆ ಜನರು ತಮ್ಮೆದುರಿಗಿರುವ ತೊಂದರೆಗಳನ್ನು ಸರಿಯಾಗಿ ತಿಳಿದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ. ಉದಾಹರಣೆಗೆ, ನೀರಿನ ಬರವಿದೆ ಎಂದಿಟ್ಟಕೊಳ್ಳಿ. ಈ ವ? ಮಳೆ ಸರಿಯಾಗಿ ಬಂದಿಲ್ಲ, ಕಡಮೆ ಬಿದ್ದಿದೆ, ನೀರಿನ ತೊಂದರೆ ಆಗಿದೆ ಎಂದು ತಿಳಿಸಿದರೆ ಅವರೂ ಪರಿಸ್ಥಿತಿಯ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇದೇ ಪ್ರಜಾತಾಂತ್ರಿಕ ಆಡಳಿತದ ಹೊಂದಾಣಿಕೆ.

ಒಬ್ಬ ನಾಯಕ – ಆತ ಜನಸಾಮಾನ್ಯನಾಗಿರಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿರಲಿ – ಆತನ ಪ್ರಥಮ ಕರ್ತವ್ಯ ಸಮಾಜವನ್ನು ಪ್ರಗತಿಯೆಡೆಗೆ ಒಯ್ಯುವುದು. ಇದಕ್ಕೆ ’ಉತ್ತಮ ಆಡಳಿತ’ದ ವ್ಯಾಖ್ಯೆ, ಹಾಗೆಂದರೇನು ಎನ್ನುವುದರ ಅರಿವು ಇರುವುದು ಅವಶ್ಯ. ಉತ್ತಮ ಆಡಳಿತ ಒಂದು ಕಲ್ಪನೆ ಮಾತ್ರವಲ್ಲ, ಅದನ್ನು ವಾಸ್ತವದಲ್ಲೂ ಸಾಧ್ಯವಾಗಿಸಬಹುದು ಎನ್ನುವುದೇ ಶಿವಾಜಿಯ ಆಡಳಿತವು ನಮಗೆ ತಿಳಿಸುವ ಬಹುಮುಖ್ಯ ಪಾಠ. ನಮ್ಮ ನಾಯಕರು, ಆಡಳಿತಾಧಿಕಾರಿಗಳು, ಉದ್ಯೋಗಿಗಳು ಹಾಗೂ ಯುವಜನರು ಶಿವಾಜಿಯ ಆಡಳಿತದ ಕುರಿತ ಅರಿವನ್ನು ಹೊಂದಿದ್ದರೆ ಶಿವಾಜಿಯ ಮೂಲಕ ಸಾಕಾರಗೊಂಡ ಉತ್ತಮ ಆಡಳಿತದ ಮೂಲಮಂತ್ರವೂ, ಪಾಠದ ಅವಲೋಕನವೂ ಸಾಧ್ಯವಾಗುತ್ತದೆ. ಸಮಾಜದ ಉದ್ಧಾರದ, ಭಾರತವನ್ನು ಹೊಸ ಎತ್ತರಕ್ಕೆ ಒಯ್ಯುವ ಕನಸು ಕಂಡ ಶಿವಾಜಿಯು ಹಲವಾರು ಪೀಳಿಗೆಗಳಿಗೆ ಸ್ಫೂರ್ತಿಯೂ ಮಾರ್ಗದರ್ಶಕನೂ ಹೌದು.

ಬನ್ನಿ, ನಾವೆಲ್ಲರೂ ಸೇರಿ ದೇಶದಲ್ಲಿ ಉತ್ತಮ ಆಡಳಿತದ ಸಂಸ್ಕೃತಿಯನ್ನು ನೆಲೆಗೊಳಿಸುವ, ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ನಮ್ಮ ಕೊಡುಗೆಗಳನ್ನು ನೀಡೋಣ.

(ದಿ. ಅನಿಲ್ ಮಾಧವ ದವೆ ಅವರ ’ಶಿವಾಜಿ ಔರ್ ಸುರಾಜ್’ ಗ್ರಂಥದ ಪ್ರಸ್ತಾವನೆಯಿಂದ ಉದ್ದೃತ)

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಭಾರತದ ಹೆಮ್ಮೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ

ಭಾರತದ ಹೆಮ್ಮೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಲಾಕ್​ಡೌನ್: ಏಕಾಂತ ಸಾಧನೆ, ಲೋಕಾಂತ ಸೇವೆ;  ಆರೆಸ್ಸೆಸ್ ಸಾಹಸರಕಾರ್ಯವಾಹರಾದ ದತ್ತಾಜಿ ಅವರ ಲೇಖನ

ಲಾಕ್​ಡೌನ್: ಏಕಾಂತ ಸಾಧನೆ, ಲೋಕಾಂತ ಸೇವೆ; ಆರೆಸ್ಸೆಸ್ ಸಾಹಸರಕಾರ್ಯವಾಹರಾದ ದತ್ತಾಜಿ ಅವರ ಲೇಖನ

May 2, 2020
सरकार अल्पमत में : नया जनादेश लेना उचित : मा. गो. वैद्य

सरकार अल्पमत में : नया जनादेश लेना उचित : मा. गो. वैद्य

August 25, 2019

NEWS IN BRIEF – DEC 13, 2011

December 13, 2011
ಹಿಂದು ವಿರೋಧಿ ಮಸೂದೆಯ ವಿರುದ್ಧ ನವೆಂಬರ್ 10 ರಿಂದ  ಆರೆಸ್ಸೆಸ್ ರಾಜ್ಯಾದ್ಯಂತ ಪ್ರತಿಭಟನೆ

ಹಿಂದು ವಿರೋಧಿ ಮಸೂದೆಯ ವಿರುದ್ಧ ನವೆಂಬರ್ 10 ರಿಂದ ಆರೆಸ್ಸೆಸ್ ರಾಜ್ಯಾದ್ಯಂತ ಪ್ರತಿಭಟನೆ

November 8, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In