ಇಂದೋರ್, 28ಅ 2017 : ಆರೋಗ್ಯ ಭಾರತಿಯು ಯಾವುದೇ ಚಿಕಿತ್ಸಾ ಪದ್ಧತಿಯ ವಿರೋಧಿಯಾಗಿಲ್ಲ. ಪ್ರತಿ ಮನುಷ್ಯನೂ ಆರೋಗ್ಯದಿಂದಿರಲಿ ಎಂಬ ಧ್ಯೇಯದೊಂದಿಗೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದುಆರೆಸ್ಸೆಸ್ ಪ್ರೇರಿತ ಪರಿವಾರ ಸಂಸ್ಥೆಯಾದ ಆರೋಗ್ಯ ಭಾರತಿಯ ಅಖಿಲ ಭಾರತೀಯ ಪ್ರತಿನಿಧಿ ಮಂಡಲ ಬೈಠಕ್ ಉದ್ಘಾಟನಾ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅಭಿಪ್ರಾಯಯ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ನಿಯಮಿತ ವ್ಯಾಯಾಮ, ಹಿತವಾದ ಆಹಾರದ ಸೇವನೆ, ಋತುವಿಗೆ ತಕ್ಕಂತಹ ಆಹಾರ ಸೇವನೆ ಮಾಡುವುದರಿಂದ ವ್ಯಕ್ತಿಯ ಶರೀರವಷ್ಟೇ ಅಲ್ಲದೇ ಅವನ ಬುದ್ಧಿ, ಸ್ವಾಸ್ಥ್ಯವೂ ಆರೋಗ್ಯದಿಂದಿರುತ್ತದೆ. ಮನುಷ್ಯನ ಸಂಸ್ಕಾರಗಳು ಇವೆಲ್ಲದರ ಜೊತೆಗೆ ಪ್ರಮುಖವೆನಿಸುತ್ತದೆ, ಒಳ್ಳೆಯ ಸಂಸ್ಕಾರಗಳನ್ನು ರೂಢಿಸಿಕೊಳ್ಳುವುದರಿಂದ, ಜೀವನ್ ಶೈಲಿಯೂ ಉತ್ತಮವಾಗಿರಲು ಸಾಧ್ಯ. ಸ್ವಸ್ಥ ವ್ಯಕ್ತಿಯ ನಿರ್ಮಾಣದಿಂದ ಸ್ವಸ್ಥ ಪರಿವಾರ, ಸ್ವಸ್ಥ ಗ್ರಾಮ, ಸ್ವಸ್ಥ ರಾಷ್ಟ್ರ ನಿರ್ಮಾಣದ ಕರೆಯನ್ನು ಸರಸಂಘಚಾಲಕರು ಈ ಸಂದರ್ಭದಲ್ಲಿ ನೀಡಿದರು.
ಇದೇ ಸಂದರ್ಭದಲ್ಲಿ ವರಿಷ್ಠ ಮೂಳೆರೋಗ ತಜ್ಞರಾದ ಡಾ|| ಆರ್ ಸಿ ವರ್ಮಾ ರವರಿಗೆ ಮಾಧವರಾವ್ ಧಾಕ್ರಸ್ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಡಾ|| ಮನೋಹರ್ ಭಂಡಾರಿಯವರು ರಚಿಸಿದ ಸ್ವಸ್ಥ ಭಾರತ ಸಮೃದ್ಧ ಭಾರತದ ಲೋಕಾರ್ಪಣೆ ಮಾಡಲಾಯಿತು. ಈ ಬೈಠಕ್ ನಲ್ಲಿ ಆರೋಗ್ಯ ಭಾರತಿಯ ಜೊತೆಗೆ ಜೋಡಿಸಿಕೊಂಡಿರುವ ೭೦೦ಕ್ಕೂ ಹೆಚ್ಚು ವೈದ್ಯರು ಭಾಗವಹಿಸುತ್ತಿದ್ದಾರೆ.