• Samvada
  • Videos
  • Categories
  • Events
  • About Us
  • Contact Us
Thursday, February 2, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಹೋರಾಟದ ಅಂಗಣದಲ್ಲಿ ರೂಪುಗೊಂಡ ‘ಬಲಿಷ್ಠರ ಮೋಸ’ದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿ

Vishwa Samvada Kendra by Vishwa Samvada Kendra
March 6, 2021
in Articles, BOOK REVIEW
251
0
ಹೋರಾಟದ ಅಂಗಣದಲ್ಲಿ ರೂಪುಗೊಂಡ ‘ಬಲಿಷ್ಠರ ಮೋಸ’ದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿ
492
SHARES
1.4k
VIEWS
Share on FacebookShare on Twitter

ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ ಶಾಲೆಗಳ ಬಾಗಿಲು ಮುಕ್ತವಾಗಿ ತೆರೆದಿರಲಿಲ್ಲವೋ, ಉನ್ನತ ಹುದ್ದೆಗಳ ಕನಸು ಕಾಣುವ ಅವಕಾಶಗಳೂ ಇಲ್ಲದಿದ್ದ ಕಾಲದಿಂದ ಮೇಲೆದ್ದು, ಪಾರ್ಲಿಮೆಂಟ್, ರಾಜಭವನಗಳ ಘನಪೀಠಗಳು ಯಾರ ಸ್ಪರ್ಶದಿಂದಲೂ ಮೈಲಿಗೆಯಾಗಲಾರದಂತೆ ಮಾಡಿತೋ ಅಂತಹ ಲೋಕೋದ್ಧಾರಕನಿಗೆ ಶತ ಶತ ಪ್ರಣಾಮಗಳು. ಬಾಬಾ ಸಾಹೇಬರ ಕನಸಿದ್ದುದು ಈ ದೇಶದ ಬಡ ದಲಿತರ ಮನೆಯ ಮಕ್ಕಳೂ ದೊಡ್ಡ ಕನಸಿನೊಂದಿಗೆ ಬದುಕು ರೂಪಿಸಿಕೊಳ್ಳಬೇಕು. ಅವರ ಪ್ರತಿಭೆಗೆ ಮೈಲಿಗೆಯ ಭೀತಿ ಇಲ್ಲದೆ , ಆತ್ಮವಿಶ್ವಾಸದಿಂದ ನೆಲದ ಮೇಲೆ ಹೆಜ್ಜೆಯೂರಿ ದಿಗಂತದೆತ್ತರ ತಲೆ ಎತ್ತಿ ನಡೆದಾಡುವಂತೆ ಮಾಡಬೇಕು ಎನ್ನುವುದೇ ಆಗಿತ್ತು. ಹುಟ್ಟಿದ ಜಾತಿಯನ್ನು ಪೂರ್ವಜನ್ಮದ ಕರ್ಮ ಎಂದು ಚಲನಶಿಲತೆಗೆ ಅವಕಾಶವೇ ಇಲ್ಲದಂತೆ ಮಾಡಿ, ಅಸಹ್ಯ ಬದುಕನ್ನು ಜನ್ಮಾಂತರದ ಭಾಗ್ಯವೆಂಬಂತೆ ಬಾಳುವ ರೌರವ ನರಕವನ್ನು ಸೃಷ್ಟಿಸಿದ್ದ ಕಾಲಬಾಹಿರ ಪಿಡುಗಿಗೆ ಮುಕ್ತಿ ನೀಡಬೇಕೆನ್ನುವ ಕನಸು ಭಾರತದ ಸ್ವಾತಂತ್ರ್ಯದ ಕನಸಿನೊಂದಿಗೆ ಸಮೀಕರಣಗೊಂಡಿತ್ತು. ಹಾಗಾಗಿ ಸ್ವಾತಂತ್ರ್ಯವೆನ್ನುವುದು  ಸಮಾನತೆಯ ವೃಕ್ಷದಲ್ಲಿ ಅರಳುವ ಫಲವೆಂದೇ ಭಾವಿಸಲಾಯಿತು. ಸಮಾನತೆಯನ್ನು ಸಾಧಿಸುವ ಮೆಟ್ಟಿಲು ಮೀಸಲಾತಿಯಾಗಿತ್ತು. 

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

ಮೀಸಲಾತಿಯ ಕುರಿತು ಕಾಲಾನಂತರದಲ್ಲಿ ಸಾಕಷ್ಟು ಪರ ವಿರುದ್ಧದ ಚರ್ಚೆಗಳು ನಡೆದಿವೆ.ಇಂದು ಮೀಸಲಾತಿ ಎನ್ನುವುದು ಹಲವು ಸ್ವರೂಪದಲ್ಲಿ ವಿಸ್ತರಿಸಿದೆ. ಮೀಸಲಾತಿ ವಂಚಿತರೆನ್ನುವ ಸಮುದಾಯಗಳಿಗೂ ಮೀಸಲಾತಿಯ ಫಲ ದೊರಕಿದೆ. ಇದರ ನಡುವೆ ಪ್ರಬಲ ಸಮುದಾಯಗಳೂ ಕೂಡ ಮೀಸಲಾತಿಯ ಫಲ ಉಣ್ಣಲು ಹೋರಾಟ ರೂಪಿಸುತ್ತಿರುವುದರ ನಡುವೆಯೇ ಏಳು ದಶಕಗಳ ಪರಿಶಿಷ್ಟ ಜಾತಿ ಮೀಸಲಾತಿಯು ಎತ್ತ ಚಲಿಸುತ್ತಿದೆ? ಅದರ ಲಾಭ ಯಾರಿಗೆ ಸಿಗುತ್ತಿದೆ? ಇನ್ನೂ ಪರಿದಿಯ ಹೊರಗಿರುವವರ ನೋವು, ಹಾಗೆ ತಮ್ಮ ಸಹೋದರ ಸಮಾನರಾದವರೇ ಹೊರಗುಳಿಯಲು ಕಾರಣರಾದ ಬಲಿಷ್ಠರ ಮೋಸದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿಯೊಂದು ಹೋರಾಟದ ಅಂಗಣದಲ್ಲೇ ರೂಪುಗೊಂಡು ಓದುಗರ ಕೈಸೇರಿದೆ. ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಡಾ.ಚಿ.ನಾ.ರಾಮು ಅವರ “ ಬಲಿತ ದಲಿತರ ನಡುವೆ ನನ್ನ ಜನ ಅನಾಥ” ಎನ್ನುವ ಕೃತಿ ಮೀಸಲು ವಂಚಿತ ಕೇರಿ ಅಸ್ಪೃಶ್ಯನ ಆಕ್ರಂಧನವಾಗಿ ಪ್ರಕಟವಾಗಿದೆ. 

ಈ ಕೃತಿಯು ಮೀಸಲಾತಿಯ ಫಲವನ್ನು ಸಮಾನವಾಗಿ ಹಂಚಿಕೊಳ್ಳಬೇಕಾಗಿದ್ದ ಸಮುದಾಯದಲ್ಲಿ  ಬಲಿತರು ಮತ್ತು ಬಡವರು ಎಂಬ ಕಂದಕವನ್ನು ನಿರ್ಮಿಸಿ, ಬಡ ದಲಿತರ ಪಾಲಿಗೆ  ಮೀಸಲಾತಿಯ ಲಾಭವನ್ನು ಕೈಗೆಟುಕದಂತೆ ದೂರವಿರಿಸಿದ ಸಂಗತಿಯ ಆತ್ಮಾವಲೋಕನವೂ ಹೌದು. ಮೀಸಲಾತಿಯ ಉದ್ದೇಶ ಗುರಿ ತಲುಪುವ ಮೊದಲೇ ಅದರ ದಿಕ್ಕು ತಪ್ಪಿಸಿದ, ಚಲನಶೀಲವಾಗಿರಬೇಕಾಗಿದ್ದ ವ್ಯವಸ್ಥೆಯನ್ನು ಜಡ್ಡುಗಟ್ಟುವಂತೆ ಮಾಡಿದ ಸ್ವಹೀತಾಸಕ್ತಿಯ ಶಕ್ತಿಗಳ ಅನಾವರಣವೂ ಹೌದು. ಇಂದಿಗೂ ಮೀಸಲಾತಿಯ ಸ್ಪರ್ಧೆಯಲ್ಲಿ ಸೆಣಸಾಡುವ ಅರ್ಹತೆ ಹಳ್ಳಿಯ ಬಡ ದಲಿತರ ಮಕ್ಕಳಿಗಿದೆಯೇ? ಕಟ್ಟ ಕಡೆಯ ದಲಿತರ ಮಕ್ಕಳಿಗೂ ಮೀಸಲಾತಿಯ ಲಾಭ ಸಿಗಬೇಡವೇ? ಹೀಗಾಗಲು ಕಾರಣರಾರು? ಇವೇ ಮೊದಲಾದ ಪ್ರಶ್ನೆಗಳಿಗೆ ದಾಖಲೆ- ಅಂಕಿಅಂಶಗಳ ಸಹಿತವಾದ ಉತ್ತರವನ್ನು ನೀಡುವ ಕೃತಿ ಇದಾಗಿದೆ. ಮೀಸಲು ವ್ಯವಸ್ಥೆಯ ಒಳಗಿದ್ದರೂ ಅದನ್ನು ಪಡೆಯಲು ಸಾಧ್ಯವಾಗದೇ ಹೋದ ಮೀಸಲು ವಂಚಿತರ ಬಗ್ಗೆ ಮಾತನಾಡುವ, ವಂಚಿತರಾಗಿ ಉಳಿದವರ ಕಣ್ಣಿನಿಂದ ಮೀಸಲು ವ್ಯವಸ್ಥೆಯನ್ನು ನೋಡುವ ಪ್ರಯತ್ನ ಇದಾಗಿದೆ.

ಮೀಸಲಾತಿಯ ಮೂಲಕ ಅಸ್ಪೃಶ್ಯರ ಪಾಲಿಗೆ ಸಮಾನತೆಯ ದಾರಿಯನ್ನು ತೆರೆದ ಕನಸು, ಈ ಕನಸಿನ ಸಾಕಾರದ ದಾರಿಗೆ ಸಂವಿಧಾನದ ರಕ್ಷೆಯನ್ನು ನೀಡಿದ ಅಂಬೇಡ್ಕರ್ ದೂರದೃಷ್ಟಿಗೆ ಸ್ಥಾಪಿತ ಹಿತಾಸಕ್ತಿಗಳು ಅಡ್ಡಗಾಲಾಗಿ ನಿಂತ ನೋವಿನ ವ್ಯಥೆಯನ್ನು ನಿರೂಪಿಸುತ್ತಾರೆ. ಪ್ರಬಲ ಸಮುದಾಯ, ಗುಂಪುಗಳು ವಂಚಿತರಿಂದ ಅವಕಾಶವನ್ನು ಕಸಿದುಕೊಂಡ ಪರಿಣಾಮ, ಮೀಸಲಾತಿಯ ಪ್ರಯೋಜನವನ್ನು ಪಡೆದು ಕೇರಿಯಿಂದ ಮೇಲೆದ್ದು ನಿಲ್ಲಬೇಕಾಗಿದ್ದ ಸಮುದಾಯಗಳು ಕೇರಿಯಲ್ಲೇ ಉಳಿಯುವಂತಾದ  ಸ್ಥಿತಿಯ ವಿಮರ್ಶೆಯನ್ನು ಮಾಡುತ್ತಾರೆ. ಕೆಲವೇ ಕುಟುಂಬಗಳು, ಸಮುದಾಯಗಳು ಮತ್ತೆ ಮತ್ತೆ ಮೀಸಲಾತಿಯ ಫಲವುಂಡ ಕಾರಣದಿಂದ ಅವಕಾಶ ವಂಚಿತರು ವ್ಯವಸ್ಥೆಯಿಂದ ದೂರ ಉಳಿದ ಬಗ್ಗೆ ಮಾತನಾಡಬೇಕಾಗಿದ್ದವರ ಮೌನದ ಹಿಂದಿನ ಕಾರಣಗಳನ್ನು ಬಯಲುಗೊಳಿಸುತ್ತಾರೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಬಂದ ಬಲಿಷ್ಠರು ಮತ್ತು ಅಕಡೆಮಿಕ್ ವಲಯದ ಚಿಂತಕರ ಅವಕಾಶವಾದಿತನದಿಂದ ದಲಿತರು ಕೇರಿಯಲ್ಲೇ ಕಳೆದುಹೋಗುತ್ತಿರುವುದರ ಬಗೆಗಿನ ವಿಷಾದಪೂರ್ಣವಾದ ಧ್ವನಿ ಕೃತಿಯುದ್ದಕ್ಕೂ ವ್ಯಾಪಿಸಿದೆ.ಅಂಬೇಡ್ಕರ್ ಕನಸು ನನಸಾಗದೇ ಉಳಿದುದರ ಕಾರಣದ ಆತ್ಮಾವಲೋಕನಕ್ಕಿದು ಬರೆದ ಮುನ್ನುಡಿಯಾಗಿದೆ.

ಪರಿಶಿಷ್ಟರ ಮೀಸಲಾತಿಯ ಪಟ್ಟಿಯೊಳಗೆ ಪ್ರಬಲ ಜಾತಿಗಳು ಸೇರಿಕೊಂಡು ಹೇಗೆ ವ್ಯವಸ್ಥಿತವಾಗಿ ಅವಕಾಶಗಳಿಗೆ ಕನ್ನ ಹಾಕುತ್ತಿದೆ ಎನ್ನುವುದನ್ನು ಗುರುತಿಸುತ್ತಾ, ಅಸ್ಪೃಶ್ಯತೆಯ  ನೋವನ್ನೇ ಅನುಭವಿಸದ ಜಾತಿಗಳನ್ನು ರಾಜಕೀಯ ಕಾರಣಗಳಿಗಾಗಿ ಅಸ್ಪೃಶ್ಯ ಜಾತಿಗಳ ಪಟ್ಟಿಯೊಳಗೆ  ಸೇರಿಸುತ್ತಾ ಸೇರಿಸುತ್ತಾ ವರ್ಷದಿಂದ ವರ್ಷಕ್ಕೆ ಜಾತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಮೀಸಲಾತಿಯ ಪ್ರಮಾಣ ಹೆಚ್ಚಾಗದೇ ಇದ್ದ ಪರಿಣಾಮವಾಗಿ ಮೂಲ ಅಸ್ಪೃಶ್ಯರಿಗೆ, ಸಣ್ಣ ಪುಟ್ಟ ಜನಾಂಗಗಳಿಗೆ ಮೀಸಲಾತಿಯ ಫಲವೇ ಸಿಗದಂತೆ ನಡೆಯುತ್ತಿರುವ ಮಹಾದ್ರೋಹದ ಹುನ್ನಾರಗಳ ಬಗ್ಗೆ ಬೆಳಕುಚೆಲ್ಲುತ್ತಾರೆ. ಮೀಸಲಾತಿ ಪಡೆದ ಮತ್ತು ಪಡೆಯಲಾರದ ದಲಿತರ ನಡುವೆ ಉಂಟಾಗಿರುವ ಕಂದಕದ ಬಗ್ಗೆ ಇದುವರೆಗೆ ಅದಿಕೃತವಾದ ಅಂಕಿ ಅಂಶಗಳ ಸಹಿತವಾಗಿ ಯಾರೂ ಮಾತನಾಡದೇ ಇದ್ದ ಸಂದರ್ಭದಲ್ಲಿ ಈ ಕೃತಿಯೊಂದು ಮಹತ್ವದ ದಾಖಲೆ ಎನ್ನಬಹುದು. ಶಿಕ್ಷಣ ,ಉದ್ಯೋಗ ಮತ್ತು ರಾಜಕೀಯ ಅಧಿಕಾರ ಪಡೆದುಕೊಂಡವರ ಮುಂದಿನ ತಲೆಮಾರು ಕೂಡ ಅದೇ ಮೀಸಲಾತಿಯ ಸರದಿಯ ಮೊದಲಿಗರಾಗಿ ನಿಂತ ಪರಿಣಾಮವಾಗಿ ‘ಸಮಾನವಾಗಿ ಹಂಚಿ ತಿನ್ನಿ’ ಎನ್ನುವ ಅಂಬೇಡ್ಕರ್ ಮಾತು ಅರಣ್ಯರೋಧನವಾಗಿ ಉಳಿಯುತು. ಹಾಗಾದರೆ ಇದರ ಪರಿಹಾರದ ಸೂತ್ರವೇನು? ಈ ಕೃತಿಯ ಕೇಂದ್ರ ಪ್ರತಿಪಾದನೆ  “ ಮೀಸಲು ಮಹಾಮೋಸಕ್ಕೆ ಕೆನೆಪದರವೇ ನ್ಯಾಯ” ಎನ್ನುವುದು. ಸಬಲರು ಮತ್ತು ದುರ್ಬಲರ ನಡುವಿನ ಕೆನೆಪದರವನ್ನು ಗುರುತಿಸದ ಹೊರತು ಮೀಸಲಾತಿಯ ಉದ್ದೇಶ ಸಫಲವಾಗಲಾರದು. ಉಂಡು ಹೊಟ್ಟೆ ತುಂಬಿ ಬಲಿತವರು ಹಸಿದು ತುಳಿತಕ್ಕೊಳಗಾದವರಿಗೆ ಅವಕಾಶವನ್ನು ನೀಡಲಾರದ ಹೊರತು ಅಂಬೇಡ್ಕರ್ ಕನಸು ಈಡೇರಲಾರದು. ದಲಿತ ಕೆನೆಪದರ ಮೀಸಲಾತಿಯ ಜಾರಿಯ ಅನಿವಾರ್ಯತೆಯನ್ನು ಎತ್ತಿತೋರಿಸುತ್ತಾರೆ. 

ಏಳು ದಶಕಗಳ ಮೀಸಲು ಫಲಾನುಭವಿಗಳು ಮೀಸಲು ಸಿಗದೇ ತಳಮಟ್ಟದಲ್ಲಿ ಉಳಿದವರನ್ನು ಮೇಲೆತ್ತಲು ನಡೆಸಿದ ಪ್ರಯತ್ನ ಶೂನ್ಯವಾದ ಕಾರಣದಿಂದ ಅಸ್ಪೃಶ್ಯರ ನಡುವೆ ಮತ್ತೊಂದು ಅಸ್ಪೃಶ್ಯ  ವರ್ಗ ಸೃಷ್ಠಿಯಾಗಿದೆ.ರಾಜಕಾರಣದಲ್ಲಿ ಮೀಸಲಾತಿಯು ಒಂದು ಮತಗಳಿಕೆಯ ಅಸ್ತ್ರವಾಯಿತು. ಮೀಸಲಾತಿ ಹೋರಾಟಗಳಿಗೆ ಸರ್ಕಾರಗಳನ್ನೇ ಕೆಡಹುವ ಶಕ್ತಿ ಬಂದ ಕಾರಣದಿಂದ ರಾಜಕಾರಣಿಗಳು ಇದನ್ನು ಓಟ್‍ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ.ಇದರ ಪರಿಣಾಮವಾಗಿಯೇ ಪ್ರಬಲ ಜಾತಿಗಳೂ ಮೀಸಲು ಪಟ್ಟಿಯೊಳಗೆ ವ್ಯವಸ್ಥಿತವಾಗಿಯೇ ನುಸುಳಿಕೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಮೀಸಲು ಜೀವಜಲದ ಸ್ಪರ್ಶಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಾ, ಇಂದಿಗೂ ಅಸ್ಪೃಶ್ಯತೆಯ ಕೂಪದಲ್ಲೇ ಸಿಲುಕಿ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದವರ ಧ್ವನಿ ಈ ಕೃತಿಯಾಗಿದೆ. ಮೀಸಲಾತಿಯ ಮುಕ್ತ ಚರ್ಚೆಗಳನ್ನು ಮೀಸಲಾತಿಯನ್ನು ರದ್ದುಗೊಳಿಸುವ ಸಂಚೆಂಬಂತೆ ಬಿಂಬಿಸುತ್ತಾ ಬಂದ ಹುನ್ನಾರವನ್ನು ಎಚ್ಚರದಿಂದ ಗುರುತಿಸುತ್ತಾರೆ. ಅಸಮಾನತೆ, ಅಸ್ಪೃಶ್ಯತೆ  ಸಮಾಜದಲ್ಲಿ ಜೀವಂತ ಇರುವವರೆಗೂ ಮೀಸಲಾತಿಯ ರದ್ದು ಸಾಧ್ಯವಿಲ್ಲ ಎಂಬ ಸತ್ಯದ ಅರಿವಿದ್ದೂ, ಮೀಸಲಾತಿಯ ಕುರಿತ ಆರೋಗ್ಯಪೂರ್ಣವಾದ ಚರ್ಚೆಗೂ ಅವಕಾಶವಿಲ್ಲದಂತೆ ಮಾಡಿದ ಹುನ್ನಾರದ ಪರಿಣಾಮವಾಗಿ ಮೀಸಲಾತಿಯು ಚಲನೆ ಕಳೆದುಕೊಂಡು ನಿಂತ ನೀರಾಗಿರುವಾಗ ಶುದ್ಧೀಕರಣದ ಅಗತ್ಯವನ್ನು ಪ್ರತಿಪಾದಿಸುವುದು ದ್ರೋಹವಾಗುವುದಿಲ್ಲ.

ಮೀಸಲು ನೀತಿಯ ಇತಿಹಾಸ, ಅದರ ಹಿಂದಿನ ಹೋರಾಟ, ವಿವಿದ ಆಯೋಗಗಳು ನೀಡಿದ ವರದಿಗಳು, ಶಿಫಾರಸ್ಸುಗಳು, ಅನುಷ್ಠಾನದ ಸ್ಥಿತಿಗತಿಯ ಬಗ್ಗೆ ನೀಡುವ ವಿವರಗಳು ಅದ್ಭುತವಾದ ಅಧ್ಯಯನ ಸಾಮಾಗ್ರಿಯಾಗಿದೆ.ಮೀಸಲು ಪಟ್ಟಿಗೆ ಸೇರುವ ಪ್ರಬಲರ ಹೋರಾಟ ಮತ್ತು ರಾಜಕೀಯ ದೂರದೃಷ್ಟಿ ಇಲ್ಲದ ಸರ್ಕಾರಗಳ ನಡವಳಿಕೆಗಳನ್ನು ಪ್ರಶ್ನಿಸುತ್ತಾ,ಹೋರಾಟಗಳ ಹಿಂದಿನ ರಾಜಕೀಯ ಲೆಕ್ಕಾಚಾರಗಳನ್ನು ವಿಶ್ಲೇಷನಾತ್ಮಕವಾಗಿ ಮಂಡಿಸುತ್ತಾರೆ. ಹಿಂದುಳಿದ ವರ್ಗಗಳ ಮೀಸಲಾತಿಗೆ ಕೆನೆಪದರವನ್ನು ಅನ್ವಯಿಸಿದಂತೆ ಪರಿಶಿಷ್ಟರ ಮೀಸಲಾತಿಗೆ ಕೆನೆಪದರ ಅನ್ವಯಿಸದ ಕಾರಣ ಅವಕಾಶಗಳು ಹೇಗೆ ಪ್ರಬಲರ ಪಾಲಾಗುತ್ತಿದೆ ಎನ್ನುವ ಅಂಗೈ ಹುಣ್ಣಿಗೆ ಕನ್ನಡಿ ಇಲ್ಲದೆ ತೋರಿಸುತ್ತಾರೆ. ಜನಸಂಖ್ಯಾವಾರು ಮೀಸಲಾತಿಯ ಕುರಿತು, ಮೀಸಲಾತಿಯ ಕೆನೆಪದರ ಪ್ರಸ್ತಾಪವನ್ನು ಮಾಡಿದ ಸದಾಶಿವ ಆಯೋಗದ ವರದಿಯನ್ನು ಮರೆಮಾಚಿ ಕೇವಲ ಒಳ ಮೀಸಲಾತಿಯ ಪ್ರಸ್ತಾಪ , 70 % ಮೀಸಲಾತಿಯಂತಹ ಭ್ರಮೆಯನ್ನು ಶೊಷಿತರ ನಡುವೆ ಬಿತ್ತುತ್ತಾ, ರಾಜಕೀಯ ಗದ್ದುಗೆಯಲ್ಲಿ ಖಾಯಂ ಆಗಿ ಕುಳಿತವರ ಸ್ವ ಹಿತಾಸಕ್ತಿಯ ಆಳ – ಅಗಲಗಳನ್ನು ಚರ್ಚಿಸುತ್ತಾರೆ. ಸಾಕಷ್ಟು ಪ್ರಾತಿನಿಧ್ಯವನ್ನು ಪಡೆದು ಬಲಿತರಾದವರು ಮತ್ತೆ ಮತ್ತೆ ಮೀಸಲಾತಿಯ ಲಾಭವನ್ನು ಪಡೆಯುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಅಪ್ರಸ್ತುತವಲ್ಲ. “ ಮಾನವೀಯ ನೆಲೆಯಲ್ಲಿ ಚಿಂತಿಸದ, ಹಳ್ಳಿಯಲ್ಲಿ ಬಡತನ ಹೊದ್ದು ಮಲಗಿದ ತಮ್ಮವರಿಗಾಗಿ ತ್ಯಾಗ ಮಾಡಲು  ಸಿದ್ಧರಿಲ್ಲದ ಬಲಿತವರ ಮೀಸಲಾತಿ ಅನ್ಯಾಯಕ್ಕೆ ಕೆನೆಪದರವೇ ನ್ಯಾಯ,ಕೆನೆಪದರ ವ್ಯವಸ್ಥೆ ಮೀಸಲು ನ್ಯಾಯವಂಚಿತರು ಸವಲತ್ತು ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಿ, ಅಂತಹವರನ್ನು ಬದಿಗೆ ಸರಿಸುವ ಸಾಧನವೇ ಹೊರತು ಮೀಸಲಾತಿ ಮಣ್ಣುಪಾಲು ಮಾಡುವ ಕೆಟ್ಟ ಉಪಾಯವಲ್ಲ” ಎನ್ನುತ್ತಲೇ, “ಮೀಸಲಾತಿಯ ಪುನರ್ ಪರಿಶೀಲನೆ  ಎಂದರೆ ಯಾರಿಗೆ ನ್ಯಾಯ ದೊರಕಿಲ್ಲವೋ ಅವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿಯೇ ಮೀಸಲಾತಿ ನೀತಿಯನ್ನು ಪುನರುತ್ಥಾನಗೊಳಿಸುವುದು” ಎಂಬ ಮಾತು ವರ್ತಮಾನದ ಅಗತ್ಯವನ್ನು ಉದ್ದೇಶಿಸಿದ್ದಾಗಿದೆ.

ಸ್ವಾತಂತ್ರ್ಯಾ ನಂತರ ಸಿಕ್ಕಿದ ರಾಜಕೀಯ ಮಿಸಲು ಕ್ಷೇತ್ರಗಳು ಹೇಗೆ ವಂಶಪಾರಂಪರ್ಯ ಜಹಗೀರುಗಳಾಗಿದೆ, ಕೆಲವೇ ಬಲಿತವರ ಕೈಹಿಡಿತದಲ್ಲೇ ಉಳಿದು ಬಡ ದಲಿತರು ಅಧಿಕಾರದ ಏಣಿ ಏರುವ ಅವಕಾಶದಿಂದ ವಂಚಿತರಾಗಿದ್ದಾರೆ ಎನ್ನುವುದನ್ನು 1952 ರ ಮೊದಲ ಚುಣಾವಣೆಯಿಂದ ಪ್ರಸ್ತುತ ಸಂದರ್ಭದವರೆಗಿನ ಮೀಸಲು ಕ್ಷೇತ್ರಗಳು ಯಾರ ಪಾಲಾಗಿದೆ? ಒಂದೊಂದು ರಾಜ್ಯದ ಲೋಕಸಭೆ, ವಿಧಾನಸಭೆಗಳಿಗೆ ಒಬ್ಬರೇ ಅಭ್ಯರ್ಥಿಗಳು ನಾಲ್ಕಾರು ಬಾರಿ ಸ್ಪರ್ಧಿಸಿ ಆಯ್ಕೆಯಾಗುತ್ತಾ ಮೀಸಲು ಕ್ಷೇತ್ರಗಳು ವಂಶಪಾರಂಪರ್ಯ ಪಾಳೆಯಗಳಾಗಿ ಬದಲಾಗಿದೆ ಎನ್ನುವ ಅಂಕಿಅಂಶಗಳು ಬೆರಗು ಹುಟ್ಟಿಸುವಂತಿದೆ.ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಬಲ್ಲ ಸಾಮಥ್ರ್ಯವುಳ್ಳವರೂ ಮೀಸಲು ಕ್ಷೇತ್ರಕ್ಕೆ ಮಿಸಲಾದ ಪರಿಣಾಮ ಪರಿಶಿಷ್ಟ ಸಮುದಾಯಗಳಲ್ಲಿ ಹೊಸ ರಾಜಕೀಯ ನಾಯಕತ್ವ ಬೆಳೆಯದಂತೆ ಹೇಗೆ ತಡೆಯಾಗಿದ್ದಾರೆ? ಸಾಮಾನ್ಯ ಕ್ಷೇತ್ರದಲ್ಲೂ ಸ್ಪರ್ಧಿಸಿ ಗೆದ್ದು ಪರಿಶಿಷ್ಟ ಪ್ರಾತಿನಿಧ್ಯ ಹೆಚ್ಚಿಸಲು ಇದ್ದ ಅವಕಾಶವನ್ನು ಹೇಗೆ ಕೈಚೆಲ್ಲಿದ್ದಾರೆ? ಎನ್ನುವುದನ್ನು ವಿಶ್ಲೇಷಿಸುತ್ತಾರೆ.  ಉತ್ತರ ಭಾರತದ 11 ರಾಜ್ಯಗಳು, ಮಧ್ಯ ಭಾರತದ 4 ರಾಜ್ಯಗಳು ,ದಕ್ಷಿಣ ಭಾರತದ 5 ರಾಜ್ಯಗಳ ದಲಿತರ ಸಮಸ್ಯೆಗಳ ವಿವಿಧ ಆಯಾಮ, ಹೋರಾಟ, ಸ್ಪøಶ್ಯ – ಅಸ್ಪøಶ್ಯರ ನಡುವಿನ ಅಂತರ, ಶೈಕ್ಷಣಿಕ ಸ್ಥಿತಿಗತಿ,ಆರ್ಥಿಕ-ರಾಜಕೀಯ ಪರಿಸ್ಥಿತಿ, ಮೀಸಲಾತಿ ಬಳಕೆ-ದುರ್ಬಳಕೆ ಕುರಿತ ಸಮಗ್ರವಾದ ಚಿತ್ರಣವನ್ಮು ನೀಡಿರುವುದು  ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದು ಮುಂದಿನ ಸಂಶೋಧನೆಗೆ ಮಹತ್ವದ ಆಕರವಾಗಬಲ್ಲುದು. 

ಐ ಎ ಎಸ್ / ಐ ಪಿ ಎಸ್   ಅಧಿಕಾರಿಗಳಾಗಿ ಸೇವೆಸಲ್ಲಿಸಿದವರೂ ತಮ್ಮ ಮಕ್ಕಳಿಗೆ ಮತ್ತೆ ಮೀಸಲು ಕೋಟಾದಡಿಯಲ್ಲೇ ಅವಕಾಶ ಕೊಡಿಸುತ್ತಾ ಹೋದ ಪರಿಣಾಮ ಬಡ ದಲಿತ ಮಕ್ಕಳ ಸೋಲಿಗೆ ಹೇಗೆ ಕಾರಣರಾಗಿದ್ದಾರೆ? ಎನ್ನುವುದನ್ನು ನಿದರ್ಶನಗಳ ಸಹಿತ ನೀಡಿದ್ದಾರೆ.ಇಂತಹ ಸನ್ನಿವೇಶದಲ್ಲಿ ನ್ಯಾಯಯುತವಾದ ಪರಿಹಾರವನ್ನು ದಲಿತ ಸಮುದಾಯಗಳಿಗೆ ಒದಗಿಸಿಕೊಡಲು ಹೋರಾಡಬೇಕಾಗಿದ್ದ ದಲಿತ ಹೋರಾಟ, ಸಂಘಟನೆಗಳು ದಾರಿ ತಪ್ಪಿದ್ದು ಹೇಗೆ? ಚಳವಳಿಗಳ ಅವಸಾನಕ್ಕೆ ಕಾರಣರಾರು? ಪೊಳ್ಳು ನಾಯಕರ ಪ್ರಾಯೋಜಿತ ಹೋರಾಟಗಳೇ ದಲಿತ ಹೋರಾಟವೆನ್ನುವ ಭ್ರಮೆಯನ್ನು ಹುಟ್ಟಿಸಿದುದರ ಪರಿಣಾಮವೇನು? ಎನ್ನುವುದನ್ನು ಮನಮುಟ್ಟುವಂತೆ ವಿವರಿಸುತ್ತಾರೆ. 

ಇಂಗ್ಲಿಷ್ ಭಾಷೆಯೂ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿರುವ ಕೃತಿ ನಮ್ಮ ಕಾಲದ ಮಹತ್ವದ ಚರ್ಚೆಯೊಂದಕ್ಕೆ ವೇದಿಕೆಯಾಗಿದೆ.ಈ ಚಿಂತನೆ ವಂಚಿತರ ಪಾಲಿಗೆ ಮುಚ್ಚಿದ ಬಾಗಿಲು ತೆರೆಯಲು ಕೀಲಿಕೈಯಾದರೆ ಹೊಸ ಬೆಳಕೊಂದು ಮೂಡಿದಂತಾಗುತ್ತದೆ.

ಕೃಪೆ: ವಿಜಯ ಕರ್ನಾಟಕ

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!
BOOK REVIEW

ಮೋಟಮ್ಮ ಆತ್ಮಕಥೆ: ಸೋಲು-ಗೆಲುವಿನ ಹೋರಾಟ!

July 7, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
BOOK REVIEW

Conflict resolution : The RSS way

April 21, 2022
Next Post
ವಿಭಿನ್ನ ಶೈಕ್ಷಣಿಕ ಪ್ರಯೋಗಗಳನ್ನು ಪೋಷಿಸಿ ಬೆಳೆಸುವ ಹೊಣೆ ಸಮಾಜದ ಮೇಲಿದೆ : ಮುಕುಂದ

ವಿಭಿನ್ನ ಶೈಕ್ಷಣಿಕ ಪ್ರಯೋಗಗಳನ್ನು ಪೋಷಿಸಿ ಬೆಳೆಸುವ ಹೊಣೆ ಸಮಾಜದ ಮೇಲಿದೆ : ಮುಕುಂದ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS 3rd Year Sangha Shiksh Varg Concludes at Nagpur; Nirmalanandanath Swamiji, Bhagwat addressed

Sri Sri SNirmalanandaNATH Swamiji offerering tributes to Guruji Golwalkar Samadhi at Nagpur June-6-2013

June 11, 2013
ನೇರನೋಟ: ಅಜ್ಮಲ್ ಕಸಬ್‌ನಷ್ಟೇ ಅಪಾಯಕಾರಿ ವ್ಯಕ್ತಿ ಅಜೀಜ್ ಬರ್ನಿ!

ನೇರನೋಟ: ಅಜ್ಮಲ್ ಕಸಬ್‌ನಷ್ಟೇ ಅಪಾಯಕಾರಿ ವ್ಯಕ್ತಿ ಅಜೀಜ್ ಬರ್ನಿ!

August 25, 2019
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
HSSF Bengaluru- Day-3: Gou-Ganga Vandana held; visitors, students pledged to volunteer the social service initiatives

HSSF Bengaluru- Day-3: Gou-Ganga Vandana held; visitors, students pledged to volunteer the social service initiatives

December 11, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In