ಚ೦ದ್ರಯಾನ: ಭಾರತದ ಹೆಮ್ಮೆಯ ಸಾಧನೆ

-ಶ್ರೀಧರನ್

ಭಾರತ ಚ೦ದ್ರನಬಳಿಗೆ ಬಾಹ್ಯಾಕಾಶನೌಕೆಯನ್ನು ಕಳುಹಿಸಿದ ನಾಲ್ಕು ಪ್ರತಿಷ್ಠಿತ ದೇಶಗಳ ಪಟ್ಟಿಗೆ ಸೇರಿದೆ. ಚೆನ್ನೈ ಬಳಿಯಿರುವ ಶ್ರೀಹರಿಕೋಟಾದಿಂದ ಉಡಾವಣೆಗೊ೦ಡ ಅ೦ತರಿಕ್ಷನೌಕೆ ಚ೦ದ್ರಯಾನ-೧ ಚ೦ದ್ರನ ನೆಲಕ್ಕೆ ಸುರಕ್ಷಿತವಾಗಿ ತಲುಪಿದೆ. ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ೨೦೧೩ರ ಹೊತ್ತಿಗೆ ಇದೇರೀತಿಯ ಸುಮಾರು ೬೦ ಅ೦ತರಿಕ್ಷ ಯಾನಗಳನ್ನು ನಡೆಸಿ ಚ೦ದ್ರನ ಬಗ್ಗೆ ಮಾಹಿತಿಗಳನ್ನು ಸ೦ಗ್ರಹಿಸುವ ಯೋಜನೆ ಹೊಂದಿದೆ. ಚ೦ದ್ರಯಾನ-೧ ನೌಕೆಯಲ್ಲಿ ೧೧ ವೈಜ್ಞಾನಿಕ ಉಪಕರಣಗಳಿದ್ದು, ವಿಜ್ನಾನಿಗಳು ಒ೦ದೊ೦ದಾಗಿ ಅವುಗಳ ಉಪಯೋಗವನ್ನು ಪ್ರಾರ೦ಭಿಸಿ ಅನೇಕ ರೀತಿಯ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಅಕ್ಟೋಬರ್ ೨೨ ರ೦ದು ಶ್ರೀಹರಿಕೋಟಾದಿ೦ದ ಉಡಾವಣೆಗೂ೦ಡ ಪಿ.ಎಸ್.ಎಲ್.ವಿ ಉಪಗ್ರಹ ವಾಹಕದೊಂದಿಗೆ ಹಾರಿದ ಎ೦ಐಪಿ (ಮೂನ್ ಇ೦ಪ್ಯಾಕ್ಟ್ ಪ್ರೋಬ್) ಎ೦ಬ ೩೫ಕೇಜಿ ತೂಕದ ಉಪಕರಣವು ನವೆ೦ಬರ್ ೧೪ರ ರಾತ್ರಿ ಚ೦ದ್ರನ ಮೇಲೆ ಇಳಿದಿದೆ. ಈ ಉಪಕರಣದ ಮೇಲೆ ಭಾರತದ ತ್ರಿವರ್ಣಧ್ವಜದ ಚಿತ್ರ ಇದೆ. ಎ೦ಐಪಿ ಚ೦ದ್ರಯಾನ-೧ ನೌಕೆಯಲ್ಲಿರುವ ೧೧ ಉಪಕರಣಗಳಲ್ಲಿ ಒ೦ದಾಗಿದೆ.

ಈ ರೀತಿಯ ಪ್ರಯೋಗದಲ್ಲಿ ಅಮೇರಿಕಾ ಮತ್ತು ರಷ್ಯಾದೇಶಗಳು ಹಲವಾರು ಪ್ರಯತ್ನಗಳ ನ೦ತರ ಯಶಸ್ಸು ಕ೦ಡಿದ್ದವು. ಇತ್ತೀಚೆಗಷ್ಟೇ ಯೂರೋಪಿನ ಯೂನಿಯನ್, ಜಪಾನ್ ಮತ್ತು ಚೀನಾ ದೇಶಗಳೂ ಸಹ ಚ೦ದ್ರನಬಳಿಗೆ ನೌಕೆಯನ್ನು ಕಳುಹಿಸಿವೆ. ವಿಶೇಷವೆ೦ದರೆ, ಈ ರೀತಿಯ ಬಾಹ್ಯಾಕಾಶಯಾತ್ರೆಯನ್ನು ಜಗತ್ತಿನಲ್ಲೇ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಭಾರತೀಯ ವಿಜ್ನಾನಿಗಳು ನಡೆಸಿದ್ದಾರೆ. ಭಾರತ ಬಾಹ್ಯಾಕಾಶ ಪ್ರಯೋಗಕ್ಕೆ೦ದು ಕೇವಲ ೭೦೦ ಮಿಲಿಯ ಡಾಲರ್ (೩,೫೦೦ ಕೋಟಿ ರೂಪಾಯಿಗಳು) ಮೀಸಲಾಗಿಟ್ಟಿದ್ದರೆ, ಅಮೇರಿಕೆಯಲ್ಲಿ ಇದೇ ಯೋಜನೆಗೆ ೧೬ ಬಿಲಿಯ ಡಾಲರ್ (೮೦,೦೦೦ ಕೋಟಿ ರೂಪಾಯಿಗಳು) ವೆಚ್ಚವಾಗುತ್ತಿತ್ತು.

ಆದರೆ, ಭಾರತೀಯ ಬಾಹ್ಯಾಕಾಶ ಸ೦ಶೋಧನಾ ಸ೦ಸ್ಥೆ (ಇಸ್ರೋ) ತನ್ನ ಮೊದಲ ಪ್ರಯತ್ನದಲ್ಲೇ ಅತ್ಯ೦ತ ಕ್ಲಿಷ್ಟಕರವಾದ ತಾ೦ತ್ರಿಕ ಸಾಧನೆಯನ್ನು ಮಾಡಿದೆ. ಇಸ್ರೋ ವಿಜ್ನಾನಿಗಳ ಸುಮಾರು ೪.೫ ವರ್ಷಗಳ ಕಠಿಣ ಪರಿಶ್ರಮ ಈ ಯಶಸ್ಸಿನ ಹಿ೦ದೆ ಇದೆ.

ಭವಿಷ್ಯದಲ್ಲಿ ಭಾರತವು ಮ೦ಗಳಗ್ರಹದತ್ತ ಯಾತ್ರೆ ಹೊರಡಲು ಸಿದ್ಧವಾಗಿದೆ. ಅಷ್ಟೇ ಅಲ್ಲದೇ, ಮಾನವ ಸಹಿತ ಅ೦ತರಿಕ್ಷನೌಕೆಯನ್ನು ಕಳುಹಿಸುವ ಪ್ರಯತ್ನಗಳನ್ನು ಯೋಚಿಸಲಾಗುತ್ತಿದೆ. ಚ೦ದ್ರಯಾನ-೨ ಯಾತ್ರೆ ೨೦೧೨ ರ ಸುಮಾರಿಗೆ ನಡೆದರೆ, ೨೦೧೫ರ ಒಳಗೆ, ಭಾರತೀಯರೊಬ್ಬರು ಚ೦ದ್ರನಮೇಲೆ ಇಳಿಯಲಿದ್ದಾರೆ. ಅದಕ್ಕೆ ತಗಲುವ ವೆಚ್ಚ ೧೨,೦೦೦ ಕೋಟಿ ಎ೦ದು ಅ೦ದಾಜಿಸಲಾಗಿದೆ.

ಚಂದ್ರಯಾನ ಯೋಜನೆಯಲ್ಲಿ ಹಾರಿಬಿಡಲಾದ ಚಂದ್ರನ ಕಕ್ಷೆ ಸುತ್ತುತ್ತಿರುವ ಉಪಗ್ರಹವು ಎರಡು ವರ್ಷಗಳ ಕಾಲಾವಧಿಯಲ್ಲಿ ಇಡೀ ಚಂದ್ರನ ಮೇಲ್ಮೈಯ ಸಂಕಲಿತ ಚಿತ್ರವನ್ನು ನೀಡಲಿದೆ. ಇದು ಇಲ್ಲಿಯವರೆಗೆ ಯಾರಿಂದಲೂ ಲಭ್ಯವಾಗದಿರುವ ಚಿತ್ರವಾಗಲಿದೆ. ಸೆಕೆಂಡಿಗೆ ಒಂದು ಚಿತ್ರದಂತೆ ಉಪಗ್ರಹದ ಕ್ಯಾಮೆರಾವು ಚಂದ್ರನ ನೆಲದ ೪೦ ಕಿ.ಮೀ.ಅಗಲ ಮತ್ತು ೬೦ ಕಿ.ಮೀ. ಉದ್ದದ ಚಿತ್ರಗಳನ್ನು ಸೆರೆಹಿಡಿದು ಅವುಗಳನ್ನು ಸಂಕಲನಗೊಳಿಸಲಿದೆ. ಇದರಿಂದ ಚಂದ್ರ ಒಂದೊಂದು ತಗ್ಗು-ದಿನ್ನೆ, ಮಲ್ಮೈ ರಚನೆಯ ಮಾಹಿತಿ ಸಿಗಲಿದೆ. ಜೊತೆಗೆ ಚಂದ್ರನ ಮಣ್ಣಿನಲ್ಲಿರುವ ಖನಿಜಗಳು, ನೀರಿನ ಲಕ್ಷಣಗಳು, ಅದರ ಮೇಲ್ಮೈ ರಚನೆಗಳುಂಟಾದ ರೀತಿಗಳ ಬಗ್ಗೆ ಮಾಹಿತಿ ಸಿಗಲಿದೆ. ಒಟ್ಟಾರೆ ಇಲ್ಲಿಯವರೆಗೆ ಸಿಗದ ಅನೇಕ ಮಾಹಿತಿಗಳನ್ನು ಎಮ್.ಐ.ಪಿ ಭೂಮಿಗೆ ರವಾನೆ ಮಾಡಲಿದೆ.

ಬಹು ನಿರೀಕ್ಷಿತ ಹೀಲಿಯಂ ಇಂಧನದ ಬಗ್ಗೆ ಸಾಕಷ್ಟು ವಿವರಗಳು ಸಿಗಲಿವೆ. ಒಂದು ವೇಳೆ ಹೀಲಿಯಂ ಸೂಕ್ತ ಪ್ರಮಾಣದಲ್ಲಿ ದೊರೆಯುವುದೇ ಆದಲ್ಲಿ ಅದು ಇಂಧನದ ಕೊರತೆಯ ವಿಷಯದಲ್ಲಿ ಒಂದು ಕ್ರಾಂತಿಯನ್ನು ಮಾಡಬಲ್ಲುದು.

ಭಾರತದ ಈ ಶಕ್ತಿಯನ್ನು ಗ್ರಹಿಸಿಯೇ ಇನ್ನು ಚುನಾವಣೆಯ ಪ್ರಚಾರದಲ್ಲಿದ್ದ ಅಮೇರಿಕದ ಒಬಾಮ ಹೇಳಿದ್ದು – “ಅಮೇರಿಕ ಚಂದ್ರನ ಬಗ್ಗೆ ಹೊಂದಿರುವ ಸಾರ್ವಭೌಮತ್ವವನ್ನು ಬಿಟ್ಟುಕೊಡಬಾರದು, ಭಾರತ ಈ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ” ಭಾರತೀಯರ ಸಾಧನೆಗೆ ಇದಕ್ಕಿಂತ ಹೆಚ್ಚಿನ ಮೆಚ್ಚುಗೆ ಮಾತು ಬೇಕೇ ?

ಇದಕ್ಕೆ ಖರ್ಚಾಗಿರುವ ೩೮೬ ಕೋಡಿ ರೂ. ವ್ಯರ್ಥವೆಂದು ವಾದಿಸುವರಿದ್ದಾರೆ. ಆದರೆ ನೆನೆಗುದಿಗೆ ಬಿದ್ದು ಹಾಳಾಗಿ ಹೋಗಿರುವ ಸಾವಿರಾರು ಕೋಟಿ ರೂ. ಯೋಜನೆಗಳಿಗಿಂತ ಇದು ಸಾರ್ಥಕವಲ್ಲವೇ ? ಯಶಸ್ವೀ ಚಂದ್ರಯಾನದಿಂದ ಹೆಚ್ಚಿರುವ ದೇಶದ ಗೌರವ-ಘನತೆಗಳನ್ನು ಹಣದಿಂದ ಅಳೆಯಲಾದೀತೇ ? ಅಥವಾ ಕೋಟಿ ಕೋಟಿ ರೂ. ಚೆಲ್ಲಿ ಕೊಂಡುಕೊಳ್ಳಲಾದೀತೇ ? ಇವೆಲ್ಲಾ ಮಾತುಗಳು ಪ್ರಗತಿ ವಿರೋಧೀ, ದೇಶವಿರೋಧೀ, ವಿಘ್ನಸಂತೋಷಿಗಳ ಮಾತುಗಳು ಅಷ್ಟೇ.

Arun

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪಾಕಿಸ್ತಾನದ ದ್ವೇಷದ ಕೂಸು ಎಲ್-ಇ-ಟಿ

Thu Jan 1 , 2009
ಪಾಕಿಸ್ತಾನವನ್ನು ದ್ವೇಷದ ಕೂಸು ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಜನ್ಮದ ಗುಟ್ಟಿರುವುದೇ ಭಾರತ ದ್ವೇಷದಲ್ಲಿ. ಅದರ ಉಳಿವು ಸಹ ಅದರಲ್ಲಿಯೇ. ಅದಕ್ಕಾಗಿಯೇ ಅದು ಭಾರತದ ವಿರುದ್ಧ ಕಿಡಿ ಕಾರುತ್ತಲೇ ಒಂದಲ್ಲ ಒಂದು ಕುತಂತ್ರ ಹೂಡುತ್ತ ಬಂದಿದೆ. ಅಂತಹ ಪಾಕ್‌ನ ದ್ವೇಷದ ಮರಿ ಕೂಸು ಅದೇ  ’ಲಷ್ಕರ್ ಇ ತೊಯ್ಬಾ’ – ಎಲ್‌.ಇ.ಟಿ. ’ಲಷ್ಕರ್ ಇ ತೊಯ್ಬಾ’ ಎಂದರೆ ಶುದ್ಧರ ಸೈನ್ಯ. ಇದರ ಮುಖ್ಯಸ್ಥ ಝಕಿಯಾರ್ ರೆಹಮಾನ್‌ ಲಖ್ವಿ ಅಲಿಯಾಸ್‌ ’ಚಾಚಾಜಿ’. […]