‘ಮದ ನಿ’ರ್ಮೂಲನೆ ಆಗಲೇಬೇಕು

ಕೇರಳದ ಸಾಸ್ತಾಂಕೋಟದಲ್ಲಿ ೧೯೬೫ರಲ್ಲಿ ಜನಿಸಿದ ಅಬ್ದುಲ್ ನಾಸಿರ್ ಮದನಿ, ಮುಸಲ್ಮಾನ್ ಮತಾಂಧತೆಯ ಜಾಲದೊಳಗೆ ಸಿಲುಕಿ ಹಿಂದೂ ಸಂಘಟನೆಗಳ ವಿರೋಧಿಯಾಗಿ ಗುರುತಿಸಿದಾತ. ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಈತ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಲಷ್ಕರ್-ಇ-ತೊಯ್ಬಾ ಜತೆ ನಂಟು ಬೆಳೆಸಿ ಭಾರತದಲ್ಲಿ ಭಯೋತ್ಪಾದನಾ ಜಾಲ ಹರಡುವ ತಂತ್ರ ಹೆಣೆದವನು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಇಸ್ಲಾಮಿಕ್ ಸೇವಕ್ ಸಂಘ ಪ್ರಾರಂಭ ಮಾಡಿದರೂ ೧೯೯೩ರಲ್ಲಿ ಅದನ್ನು ನಿಷೇಧಿಸಲಾಯಿತು. ಆತ ನಡೆಸಿದ ೧೯೯೮ರ ಕೊಯಮತ್ತೂರು ಸ್ಪೋಟದಲ್ಲಿ ೬೦ಮಂದಿ ಸಾವನ್ನಪ್ಪಿದರು. ಇದಕ್ಕಾಗಿ ೮ವರ್ಷ ಜೈಲುಶಿಕ್ಷೆ. ನಂತರ ೨೦೦೭ರಲ್ಲಿ ಎಲ್ಲಾ ಆರೋಪಗಳಿದ ಮುಕ್ತನಾದ! ೧೯೯೨ರ ಅಯೋಧ್ಯಾ ಆಂದೋಲನದ ತರುವಾಯ ಘಟನೆಯೊಂದರಲ್ಲಿ ತಾನೇ ಸಾಗಿಸುತ್ತಿದ್ದ ಬಾಂಬ್ ಸ್ಪೋಟಗೊಂಡು ತನ್ನದೇ ಬಲಗಾಲು ಕಳೆದುಕೊಂಡ. ಆದರೂ ಈ ವಿಷಜಂತು ತನ್ನ ಮೂಲಗುಣ ಬಿಡಲಿಲ್ಲ. ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (PಆP) ಎಂಬ ಮುಸಲ್ಮಾನ್ ರಾಜಕೀಯ ಸಂಘಟನೆ ಮೂಲಕ ಮತ್ತೆ ಗುರುತಿಸಿಕೊಂಡ ಮದನಿ ೨೦೦೮ರ ಬೆಂಗಳೂರು ಸ್ಪೋಟದ ರೂವಾರಿ ಎಂಬ ಆರೋಪದ ಮೇಲೆ ಇದೀಗ ಕರ್ನಾಟಕ ಪೋಲೀಸರಿಂದ ಬಂಧಿಸಲ್ಪಟ್ಟಿದ್ದಾನೆ. ಹತ್ತಾರು ಗಂಭೀರ ರಾಷ್ಟ್ರದ್ರೋಹದ ಆಪಾದನೆ ಈತನ ಮೇಲಿದೆ.
ಮದನಿ ಕೈವಾಡ
ಐಟಿ ಕೇಂದ್ರವಾಗಿ ಬೆಳೆಯುತ್ತಿ ರುವ ಬೆಂಗಳೂರಿನ ಪ್ರತಿಷ್ಠೆಗೆ ಮಸಿ ಬಳಿಯಬೇಕು ಮತ್ತು ಈ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಬೇಕು. ಜೊತೆಗೆ ಈ ಸಂದರ್ಭದ ಲಾಭ ಪಡೆದು ಕೋಮುಗಲಭೆಯ ಮೂಲಕ ಅರಾಜಕತೆ ಸ್ಥಾಪಿಸಬೇಕೆನ್ನುವುದು ಈ ದಾಳಿಗಳ ಹಿಂದಿನ ಜಿಹಾದಿ ಉದ್ದೇಶ.  ಹೈದರಾಬಾದ್ ನಿವಾಸಿ ರಿಜಿಯುದ್ದಿನ್ ನಾಜಿರ್ ಮತ್ತು ಆತನ ಸಹಾಯಕ ನನ್ನು ಹುಬ್ಬಳ್ಳಿಯಲ್ಲಿ ಬಂಧಿಸುವುದರ ಮೂಲಕ ಈ ದುಷ್ಕೃತ್ಯದ ಎಳೆ ಪೋಲಿಸರಿಗೆ ಲಭ್ಯವಾಯಿತು. ಅನೇಕ ಸಿಮಿ ಕಾರ್ಯಕರ್ತರ ಬಂಧನ ವಾಯಿತು. ರಾಜ್ಯದ ಗೃಹ ಇಲಾಖೆಯೇ ಬೆಚ್ಚಿ ಬೀಳುವ ಮಟ್ಟಿಗೆ ಜಿಹಾದಿ ಜಾಲ ಹರಡಿರುವುದು ಆಘಾತಕಾರಿಯೇ ಸರಿ. ಮಾತ್ರವಲ್ಲ ಅನೇಕ ವರ್ಷಗಳಿಂದ ಕೊಡಗಿನ ಅರಣ್ಯ ಪ್ರದೇಶದಲ್ಲಿ ಉಗ್ರರ ತರಬೇತಿ ಶಿಬಿರವನ್ನೂ ಆಯೋಜಿಸ ಲಾಗುತ್ತಿತ್ತೆಂದರೆ ಇನ್ಯಾವ ಪರಿ ನಿದ್ದೆಯಲ್ಲಿ ನಮ್ಮ ಜನರಿರಬಹುದು?
ಬಾಂಗ್ಲಾದೇಶ ರೈಫ಼ಲ್ಸ್ ನವರಿಂದ ಕಳೆದ ಡಿಸೆಂಬರ್‌ನಲ್ಲಿ ಬಂಧಿತನಾದ ಉಗ್ರ ನಾಸಿರ್ ಇಡೀ ಪ್ರಕರಣದ ಮುಖ್ಯ ಆರೋಪಿಯೆಂಬುದು ಸಾಬೀತಾಗಿದೆ. ಆದರೆ ಆತನಿಗೆ ಪ್ರೇರಣೆ ಕೇರಳದ ಮದನಿ ಎಂಬುದನ್ನು ಆತನೇ ಸ್ಪಷ್ಟಗೊಳಿಸಿದ್ದಾನೆ. ಶುಂಠಿ ಬೆಳೆಯುವ ನೆಪದಲ್ಲಿ ಜಮೀನು ಖರೀದಿಸಿ, ಬಾಂಬ್ ತಯಾರಿ ಮತ್ತು ಉಗ್ರರ ತರಬೇತಿಗೆ ಆತನನ್ನು ಪ್ರೇರಿಸಿದವನು ಮದನಿಯೇ. ಮಾತ್ರವಲ್ಲ ಕೊಡಗಿನ ಹೊಸ್ತೋಟದಲ್ಲಿ ಸ್ವತಃ ಆತನೇ ನಾಜಿರ್‌ನನ್ನು ಭೇಟಿಯಾಗಿ ಮಾರ್ಗದರ್ಶನ ಮಾಡಿದ್ದಾನೆ.  ಕೊಯಮತ್ತೂರಿನಲ್ಲಿ ಬಾಂಬ್ ಸ್ಪೋಟದಲ್ಲಿ ಉದ್ದೇಶ ವಿಫಲ ಆದಂತೆ (ಅಡ್ವಾಣಿ ಪಾರಾದಂತೆ) ಈಗ ಆಗಬಾರದು ಎಂದು ಎಚ್ಚರಿಸಿದ್ದಾನೆ. ಬೆಂಗಳೂರು ಬಾಂಬ್ ಸ್ಪೋಟ ನಂತರವೂ ಕೇರಳದಲ್ಲಿ ಮದನಿ ಯನ್ನು ನಾಸಿರ್ ಭೇಟಿಯಾಗಿದ್ದಾನೆ ಆಗ ಬಾಂಗ್ಲಾದೇಶಕ್ಕೆ ಹೋಗಿ ತಪ್ಪಿಸಿ ಕೊಳ್ಳುವಂತೆ ಮದನಿ ಸೂಚಿಸಿದ್ದಾನೆ.
ಡೆಗೂ ಹತ್ತಾರು ದಿನಗಳ ನಾಟಕಕ್ಕೊಂದು ತೆರೆ ಬಿದ್ದಿದೆ. ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸುವ ಮೂಲಕ ಕರ್ನಾಟಕ ಪೋಲಿಸರು ಜನತೆಯ ಮೆಚ್ಚುಗೆ ಯನ್ನಂತೂ ಗಳಿಸಿದರು. ಆದರೂ ಒಬ್ಬ ರಾಷ್ಟ್ರವಿರೋಧಿ ಪಾತಕಿಯನ್ನು, ಎಲ್ಲರ ಕಣ್ಣಿಗೂ ಕಾಣುವಂತೆ ರಾಜಾರೋಷವಾಗಿ ಬದುಕುತ್ತಿರುವ ಉಗ್ರಗಾಮಿಯನ್ನು ಬಂಧಿಸಲು ಹರಸಾಹಸ ಪಡಬೇಕಾದ ಸ್ಥಿತಿ ಭಾರತೀಯ ತನಿಖಾ ಸಂಸ್ಥೆಗಳಿಗಿದೆ ಎಂದರೆ ನಾಚಿಕೆಯೆನಿಸುತ್ತಿದೆ.
ಹಿಂದೂಗಳ ಶ್ರದ್ಧೆಯ ಕೇಂದ್ರ ಗಳಲ್ಲೊಂದಾದ ಕಂಚೀಪೀಠದ ಶಂಕರಾಚಾರ್ಯರನ್ನು ಬಂಧಿಸಲು ಇಲ್ಲಿನ ಪೋಲೀಸರಿಗೆ ಅಂಜಿಕೆಯಿಲ್ಲ. ರಾಷ್ಟ್ರದ ವಿರೋಧ ಪಕ್ಷದ ನಾಯಕರನ್ನು ಬಂಧಿಸಿದರೂ ಯಾವುದೇ ಅರಾಜಕತೆ ತಾಂಡವವಾಡುವ ಭಯವಿಲ್ಲ. ಆದರೆ ದೇಶದ ವಿರುದ್ಧವೇ ಯುದ್ಧ ಸಾರಿರುವ ಕ್ರಿಮಿನಲ್‌ನನ್ನು ಹಿಡಿದು ಸೆರೆಮನೆಗೆ ತಳ್ಳಲು ರಾಜ್ಯ ಸರ್ಕಾರಗಳೇ ಹೆದರುತ್ತದೆಯೆಂದರೆ ನಾವು ಸ್ವತಂತ್ರ, ಸಾರ್ವಭೌಮ ದೇಶ ಎಂದು ಹೇಳಿಕೊಳ್ಳುವುದು ಬರೀ ಬುರುಡೆಯಾದೀತು. ವೋಟ್ ಬ್ಯಾಂಕ್ ರಾಜಕಾರಣದ ಪರಿಣಾಮವಾಗಿ ಆತ ಪಾತಕಿಯಾದರೂ ಸರಿ ಮುಸ್ಲಿಂ ಎಂದ ಮಾತ್ರಕ್ಕೆ ಪಕ್ಷಬೇಧವಿಲ್ಲದೇ ಎಲ್ಲರೂ ಆತನ  ಬೆಂಬಲಕ್ಕೆ ನಿಲ್ಲುವವರೇ. ಸರ್ಕಾರದ ಚುಕ್ಕಾಣಿ ಹಿಡಿದವರು, ಸಾಹಿತಿ, ಬುದ್ಧಿಜೀವಿಗಳು ಕಡೆಗೆ ಎಲ್ಲದಕ್ಕೂ  ಬೆಚ್ಚಿ ಬೀಳುವ ಸಾಮಾನ್ಯ ನಾಗರಿಕರೂ ಸಹ ‘ಏತಕ್ಕೆ ಇಲ್ಲದ ಉಸಾಬರಿ, ಸುಮ್ಮನೆ ಮೈಮೇಲೆ ಹಾಕಿಕೊಳ್ಳುವುದೇಕೆ? ಸುಮ್ಮನಿದ್ದುಬಿಟ್ಟರಾಯಿತು’ ಎಂದು ಹೇಳುವವರೇ!
ಹಾಗೆ ಸುಮ್ಮನಿದ್ದು ಬಿಡಲು ಮದನಿಯೇನು ಸಾಮಾನ್ಯ ಅಪರಾಧಿಯೇ? ಮನಸ್ಸಿನ ತುಂಬೆಲ್ಲಾ ಹಿಂದುತ್ವ ವಿರೋಧದ ವಿಷ ತುಂಬಿಸಿಕೊಂಡವನು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಪ್ರತಿಯಾಗಿ ಇಸ್ಲಾಮಿಕ್ ಸೇವಕ ಸಂಘ ಎಂಬ ಕಟ್ಟರ್  ಮುಸಲ್ಮಾನರ ಸಂಘಟನೆ ಆರಂಭಿಸಿದ ವಿಕೃತ ಮನಸ್ಸಿನವ. ಕಣ್ಣೂರನ್ನು ಕೇಂದ್ರ ಮಾಡಿಕೊಂಡು ಪ್ರಚೋದನಕಾರಿ ಭಾಷಣಗಳ ಮೂಲಕ ಪ್ರಸಿದ್ಧಿಗೆ ಬಂದವನು. ಕೇರಳ, ಕರ್ನಾಟಕಕ್ಕೆ ಸಂಬಂಧಿಸಿದ ಅನೇಕ ಕೋಮುಗಲಭೆಗಳಲ್ಲಿ, ವಿಧ್ವಂಸಕ ಕೃತ್ಯಗಳಲ್ಲಿ ಈತ ನೇರ ಭಾಗೀದಾರ ಎಂಬ ಆರೋಪಗಳಿವೆ. ತಾನು ಸ್ವತಃ ಬಾಂಬ್ ತಯಾರಿಸುವುದಲ್ಲದೇ, ಮುಸಲ್ಮಾನ ಯುವಕರಿಗೂ ಬಾಂಬ್ ತಯಾರಿಕೆ ಕಲಿಸುತ್ತಿದ್ದ, ತಾನೇ ತಯಾರಿಸಿದ ಬಾಂಬನ್ನು ಕೊಂಡೊಯ್ಯುವಾಗ ಸ್ಪೋಟಗೊಂಡು ಒಂದು ಕಾಲು ಸಹ ಕಳೆದುಕೊಂಡಿದ್ದಾನೆ.
ಆದರೆ ಮುಸಲ್ಮಾನರನ್ನು ತೃಪ್ತಿಗೊಳಿಸಲು ಸದಾ ತುದಿಗಾಲಲ್ಲಿ ನಿಲ್ಲುವ ಕಾಂಗ್ರೆಸ್, ಕಮ್ಯೂನಿಷ್ಟರ ಬೆಂಬಲದಿಂದ ಕೂದಲೂ ಕೊಂಕದಂತೆ ನಿಶ್ಚಿಂತೆಯಾಗಿದ್ದ. ೧೯೯೮ರಲ್ಲಿ ಕೊಯಮತ್ತೂರಿನಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯ ಪ್ರಮುಖ ಆರೋಪಿ ಈತ. ಬಲವಾದ ಸಾಕ್ಷ್ಯಗಳು ಈತನ ವಿರುದ್ಧ ಲಭ್ಯವಿದ್ದುದರಿಂದ ವಿಚಾರಣೆಗೊಳಗಾಗಿ ಜೈಲಿನಲ್ಲಿದ್ದ ಆದರೂ ೨೦೦೭ ರಲ್ಲಿ ಕೇರಳದ ಸರ್ಕಾರ ಈತನ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನೂ ಯಾವುದೇ ಕಾರಣವಿಲ್ಲದೇ ಹಿಂತೆಗೆದು ಕೊಂಡಿತು.
ಬೆಂಗಳೂರಿನಲ್ಲಿ ಬಾಂಬ್!
ಅಂದು ಜುಲೈ ೨೫ ೨೦೦೮ ಮಧ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ಬೆಂಗಳೂರು  ತತ್ತರಿಸಿ ಹೋಗಿತ್ತು. ಒಂದಾದ ಮೇಲೊಂದರಂತೆ ಏಳು ಜನನಿಬಿಡ ಸ್ಥಳಗಳಲ್ಲಿ ಬಾಂಬುಗಳು ಆಸ್ಪೋಟಿಸಿದ್ದವು. ಬಸ್ ಸ್ಟಾಂಡ್, ರಸ್ತೆ, ಮಾರುಕಟ್ಟೆ, ಆಸ್ಪತ್ರೆ ಇತ್ಯಾದಿ ಆಯಕಟ್ಟಿನ ಸ್ಥಳಗಳಲ್ಲಿ ಸಿಡಿದ ಬಾಂಬ್‌ಗಳು ಬೆಂಗಳೂರು ಸುರಕ್ಷಿತ ನಗರ ಎಂಬ ಹಣೆಪಟ್ಟಿಯನ್ನು ಕಿತ್ತೊಗೆದಿದ್ದವು. ಅಮಾಯಕರು ಹೆಣವಾಗಿ ಮಲಗಿದರು, ನೂರಾರು ಮಂದಿ ಗಾಯಗೊಂಡಿದ್ದಲ್ಲದೇ ದಿಕ್ಕಾಪಾಲಾಗಿ  ಚದುರಿದರು. ಪ್ರಶಾಂತ ವಾಗಿದ್ದ ಬೆಂಗಳೂರು ಉಗ್ರಗಾಮಿಗಳ ಆಡೊಂಬಲವಾಗಿ ಬದಲಾಯಿತು.
ಗಾಬರಿಗೊಂಡ ಜನ ಮಾಡತೊಡಗಿದ ಕರೆಗಳಿಂದಾಗಿ ದೂರವಾಣಿ ನೆಟ್‌ವರ್ಕ್ ಸ್ತಬ್ಧಗೊಂಡಿತು. ಶಾಲೆಕಾಲೇಜುಗಳು ದಡಬಡನೆ ಮುಚ್ಚಲ್ಪಟ್ಟವು, ಸಿನಿಮಾಹಾಲ್ ಗಳು ಖಾಲಿಯಾದವು. ಪೋಲಿಸ್ ವಾಹನಗಳ ಭರಾಟೆ ಹೆಚ್ಚಾಯಿತು. ವಿಪ್ರೊ, ಇನ್ಫೋಸಿಸ್ ಇತ್ಯಾದಿ ಐಟಿ ಕಂಪೆನಿಗಳು ಬಾಂಬ್ ಸ್ಪೋಟದಿಂದ ನಮ್ಮ ಯಾವುದೇ ಸಿಬ್ಬಂದಿ ತೊಂದರೆಗೊಳಗಾಗಿಲ್ಲ ಹೀಗಾಗಿ ಗಾಬರಿಗೊಳ್ಳಬೇಕಿಲ್ಲ ಎಂದು ಇಮೇಲ್ ಸಂದೇಶಗಳನ್ನು ಎಲ್ಲರಿಗೂ ಕಳುಹಿಸಿದರು. ಸ್ಪೋಟದ ಸುದ್ದಿ ಹರಡುತ್ತಿದ್ದಂತೆ ಷೇರು ಪೇಟೆಯ ಸ್ಯೂಚಂಕ ಕುಸಿದು ಬಿತ್ತು. ಬೆಂಗಳೂರಿನಲ್ಲೂ ಬಾಂಬ್ ಸ್ಪೋಟವಾಗ ಬಹುದೆಂಬುದು ಊಹೆಗೂ ನಿಲುಕದ ಸಂಗತಿಯೆಂಬಂತೆ ನೆಮ್ಮದಿಯಿಂದಿದ್ದ ನಾಗರಿಕರು ದಿಗ್ಭ್ರಾಂತರಾಗಿ ಚರ್ಚಿಸ ತೊಡಗಿದರು.
ಪ್ರಧಾನಮಂತ್ರಿಗಳು ಎಂದಿನಂತೆ ಈ ಘಟನೆಯನ್ನು ಖಂಡಿಸಿ ಕೋಮು ಸಾಮರಸ್ಯ ಕಾಪಾಡಿಕೊಳ್ಳಬೇಕೆಂದು ಜನತೆಯಲ್ಲಿ ಮನವಿ ಮಾಡಿದರು. ರಾಷ್ಟ್ರಪತಿಗಳಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಯವರೆಗೆ ಎಲ್ಲರೂ ಮೃತಪಟ್ಟವರಿಗಾಗಿ ಶೋಕ ವ್ಯಕ್ತ ಪಡಿಸಿ ನಿದ್ದೆಗೆ ಜಾರಿದರು. ಪೋಲಿಸರು ಮಾತ್ರ ನಿದ್ದೆ ಕೆಡಿಸಿಕೊಂಡು ಈ ಹೊಸ ಪ್ರಕರಣದ ಹಿಂದೆ ಬಿದ್ದರು. ಪಾಕಿಸ್ತಾನದ ಲಷ್ಕರ್ ತೊಯ್ಬಾ, ಬಾಂಗ್ಲಾದೇಶದ ಹುಜಿ ಮತ್ತು ಭಾರತದ್ದೇ ಆದ ಸಿಮಿ ಇತ್ಯಾದಿ ಮುಸ್ಲಿಂ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ತನಿಖೆ ಚುರುಕಾಗಿ ಆರಂಭಗೊಂಡಿತು.
ಪ್ರಭುತ್ವಕ್ಕೇ ಸವಾಲು
ಇಷ್ಟೆಲ್ಲಾ ಸಾಕ್ಷಿಗಳಿದ್ದರೂ ಕರ್ನಾಟಕದ ಪೋಲೀಸರು ದಿನಗಟ್ಟಲೇ ಕೊಲ್ಲಂನಲ್ಲಿ ಕೈಕಟ್ಟಿ ನಿಲ್ಲಬೇಕಾಯಿತು. ರಾಜ್ಯದ ಪೋಲಿಸ್ ಉನ್ನತಾಧಿಕಾರಿಗಳು ಸಹ ಕೇರಳ ಸರ್ಕಾರ ಮತ್ತು ಪೋಲಿಸರ ಮನವೊಲಿಸಲು ಹರಸಾಹಸ ಮಾಡ ಬೇಕಾಯಿತು. ಯಾವ ದೇಶದ್ರೋಹಿ ಯನ್ನು ಹೆಡೆಮುರಿಕಟ್ಟಿ ಸೆರೆಗೆ ತಳ್ಳಬೇಕಾಗಿತ್ತೋ? ಅಂತಹವನನ್ನು ರಕ್ಷಿಸಲು ಕೇರಳ ಗೃಹಮಂತ್ರಿಯೇ ‘ಕೋಮು ಗಲಭೆಯುಂಟಾದೀತು, ಸ್ವಾತಂತ್ರ್ಯೋತ್ಸವ ಮುಗಿಯಲಿ, ರಮ್ಜಾನ್ ಹಬ್ಬ ಕಳೆಯಲಿ’ ಇತ್ಯಾದಿ ಕುಂಟು ನೆಪಗಳನ್ನೊಡ್ಡುತ್ತಿದ್ದರು. ಕಡೆಗೆ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಕರ್ನಾಟಕ ಸರ್ಕಾರ ಹತ್ತಬೇಕಾಯಿತು. ಮದನಿಯೂ ಸುಮ್ಮನಿರಲಿಲ್ಲ, ತನ್ನ ಸುತ್ತಲೂ ನಾಲ್ಕಾರು ಸಾವಿರ ಮುಸ್ಲಿಂ ಯುವಕರನ್ನು ಕೋಟೆಯಂತೆ ಸೇರಿಸಿಕೊಂಡು ಪೋಲಿಸರಿಗೆ ಸವಾಲೆಸೆದಿದ್ದ, ಆತನ ಬಂಧನಕ್ಕೆ ಹೊರಡುವ ಸುಳಿವು ಸಿಗಲೆಂದು ದಾರಿಯುದ್ದಕ್ಕೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದ.
ಅಂತೂ ಕಡೆಗೂ ಆತ ಕರ್ನಾಟಕ ಪೋಲಿಸರ ಬಲೆಯೊಳಗೆ ಬಿದ್ದಿದ್ದಾನೆ. ಆದರೆ ಕಾನೂನಿನ ಲೋಪದೋಷಗಳ ಮೂಲಕ ಆತ ಕಾರಾಗೃಹದಲ್ಲೂ ಸುಖಜೀವನ ನಡೆಸಬಹುದು. ಕಸಬ್, ಅಫ಼್ಜಲ್ ಗುರು ಗಳಂತೆ ಬಿರಿಯಾನಿ ತಿನ್ನುತ್ತಾ, ಜನತೆಯ ಹಣದಲ್ಲಿ ಪೋಲಿಸರಿಂದ ಸೇವೆ ಮಾಡಿಸಿ ಕೊಂಡಿರಬಹುದು. ಜಾತ್ಯಾತೀತವಾದಿ ರಾಜಕಾರಣಿಗಳು, ಮಾನವಹಕ್ಕು ಹೋರಾಟ ಗಾರರ ಸೋಗಿನಲ್ಲಿರುವವರ ಸಹಕಾರದಿಂದ ಎಲ್ಲಾ ಆರೋಪಗಳಿಂದ ಮುಕ್ತವಾಗಿ ಬಿಡಬಹುದು. ಹಾಗಾಗಬಾರದು, ವಿಚಾರಣೆ ತ್ವರಿತವಾಗಿ ಮುಗಿಸಿ ಇಂತಹ ದೇಶದ್ರೋಹಿ ಗಳಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕೆ ಬೇಕಿರುವುದು ಸಾರ್ವಜನಿಕರ ಬಲವಾದ ಒತ್ತಡ ಮತ್ತು ಅಧಿಕಾಸ್ಥರ ಪ್ರಬಲ ಇಚ್ಛಾಶಕ್ತಿ.
ಮದನಿ ಬಂಧನದಿಂದ ಒಂದಷ್ಟು ಮಟ್ಟಿಗೆ ಪೋಲೀಸ್ ವ್ಯವಸ್ಥೆ ಯಶಸ್ಸು ಸಾಧಿಸಿದೆ. ಆದರೆ ಆತನ ಗರಡಿಯಲ್ಲಿ ಪಳಗುತ್ತಿರುವ ನೂರಾರು ಮರಿಮದನಿ ಗಳನ್ನು, ಆತನ ನಂಟು ಹೊಂದಿರುವ ಇತರ ಭಯೋತ್ಪಾದಕರನ್ನು ಹಾಗೂ ಮದನಿ ಪ್ರೇರಿತ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಬಗೆ ಎಂತು? ಎಂದು ಕೇಂದ್ರಗೃಹ ಇಲಾಖೆ ಗಂಭಿರವಾಗಿ ಚಿಂತಿಸಬೇಕಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಿಗರೇಟ್

Tue Sep 7 , 2010
email facebook twitter google+ WhatsApp