‘ಕೇಸರಿ’ ಭೀತಿವಾದವಲ್ಲ, ರಾಷ್ಟ್ರೀಯತೆಯ ಸಂಕೇತ

ಮಾನ್ಯ ಚಿದಂಬರಂ ಅವರೆ,
ನಿಮ್ಮ  ಅದ್ಭುತ ಶೋಧಕ್ಕೆ ನೊಬೆಲ್ ಪ್ರಶಸ್ತಿಯೇ ದೊರೆಯಬೇಕು. ರಾಷ್ಟ್ರದಲ್ಲಿ ಬೆಟ್ಟದಷ್ಟು  ಸಮಸ್ಯೆಗಳಿಂದ ಜನ ಬಸವಳಿದಿರುವಾಗ ಭಯೋತ್ಪಾದನೆಯ ಹೊಸ ಬಗೆಯನ್ನು  ಕಂಡುಹಿಡಿದು ಅದಕ್ಕೆ ಕೇಸರಿ ಭಯೋತ್ಪಾದನೆ ಎಂಬ ಕ್ರಿಯೇಟಿವ್ ಹೆಸರನ್ನು ನೀಡಿ ಮಹದುಪಕಾರವನ್ನೇ ಮಾಡಿದ್ದೀರಿ! ಬುದ್ಧಿಗೆ ಖಗ್ರಾಸ ಗ್ರಹಣ ಹಿಡಿದು ವ್ಯಕ್ತಿ ಅದೆಷ್ಟು ವಿವೇಕರಹಿತವಾಗಿ, ಸ್ವಾಭಿಮಾನಶೂನ್ಯನಾಗಿ ನಡೆದುಕೊಳ್ಳುತ್ತಾನೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದೀರಿ.


‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು  ವೊದಲಬಾರಿಗೆ ನೀವು ಬಳಸಿದಾಗ ಎರಡು ದಿನಗಳ ಕಾಲ ರಾಜ್ಯಸಭೆ ಕೋಲಾಹಲದಲ್ಲಿ ಮುಳುಗಿ ಹೋಯಿತು. “ಭಯೋತ್ಪಾದನೆ ಯಾವುದೇ ಧರ್ಮ, ಕೋಮು ಸಂಪ್ರದಾಯ, ವಿಚಾರಧಾರೆ, ವರ್ಣಕ್ಕೆ ಸಂಬಂಧಿಸಿದ್ದಲ್ಲ. ಏನಿದ್ದರೂ ಭಯೋತ್ಪಾದಕರು ಮಾನವೀಯತೆಯ ಬದ್ಧ ವೈರಿಗಳು” ಎಂದು ಇದೇ ಸದನದಲ್ಲಿ  ಹಾಗೂ ಸದನದ ಹೊರಗೆ  ಹತ್ತು ಬಾರಿ ಹೇಳಿಕೆ ನೀಡಿದ್ದ ನೀವೇ ಇದೀಗ ‘ಕೇಸರಿ ಭಯೋತ್ಪಾದನೆ’ಯನ್ನು ಸಂಶೋಧಿಸಿದ್ದೀರಿ. ಇದಕ್ಕೊಂದು ವರ್ಣ, ವಿಚಾರಧಾರೆ ಹಾಗೂ ಧರ್ಮವನ್ನೂ ಜೋಡಿಸಿದ್ದೀರಿ. ಅಂದರೆ ನೀವೇ ಹೇಳಿದ ಮಾತಿಗೆ ಅಕ್ಷರಶಃ  ತದ್ವಿರುದ್ಧವಾಗಿ ನಡೆದುಕೊಂಡು ನೀವೂ ಇತರ ರಾಜಕಾರಣಿಗಳ ಹಾಗೆ ‘ಅವಕಾಶವಾದಿ ರಾಜಕೀಯ’ವನ್ನು  ಮಾಡಿದ್ದೀರಿ.
ಕಣ್ಣು ಮುಂದೆ ಕಾಣುವ ಜ್ವಲಂತ ಸವಾಲುಗಳನ್ನು ಕಡೆಗಣಿಸಿ ಯಾವುದೋ ಕಾಲ್ಪನಿಕ ‘ಭೀತಿವಾದ’ವನ್ನು  ಹುಟ್ಟುಹಾಕುವ ಸರಕಾರದ ನೀತಿ ಅದರ ದೇಶನಿಷ್ಠೆಯ ಮೇಲೆ ಪ್ರಶ್ನೆ ಮೂಡಿಸುತ್ತದೆ. ಕಳೆದ ಆರು ದಶಕಗಳಲ್ಲಿ  ಭಯೋತ್ಪಾದನೆಗೆ ಬಲಿಯಾದ ಒಟ್ಟು  ಜೀವಗಳು ೬೫ ಸಾವಿರಕ್ಕೂ ಅಧಿಕ ಎಂದು ಇದೇ ಕೇಂದ್ರ ಸರಕಾರ ಲೋಕಸಭೆಯಲ್ಲಿ ಹೇಳಿದೆ. ಆರು ದಶಕಗಳಿಂದಲೂ ರಾಷ್ಟ್ರವನ್ನು ಜರ್ಜರಿತ ಮಾಡುತ್ತಾ ರಕ್ತದ ಹೊಳೆಯನ್ನು  ಹರಿಸುತ್ತಿರುವ ಜಿಹಾದಿ ಭಯೋತ್ಪಾದನೆ ‘ಹಸಿರು ಭಯೋತ್ಪಾದನೆ’ಯಲ್ಲವೆ? ಇದರ ವಿಷಯ ಬಂದಾಗ ಮಾತ್ರ ಕೋಮು, ಧರ್ಮ, ಸಂಪ್ರದಾಯಗಳ ಸಂಬಂಧವಿರುವುದಿಲ್ಲ  ಎಂದರೆ ಇದೆಂತಹ ತರ್ಕ?
ಅಷ್ಟಕ್ಕೂ ಯಾವುದು ಕೇಸರಿ ಭಯೋತ್ಪಾದನೆ? ಅದು ಎಲ್ಲಿದೆ? ಯಾವ ಕೃತ್ಯಗಳನ್ನು ನಡೆಸಿದೆ? ಎಷ್ಟು  ಜನರನ್ನು ಬಲಿ ಪಡೆದಿದೆ? ಯಾವ ಸಂಘಟನೆ ಇದರ ಹೊಣೆ ಹೊತ್ತಿದೆ? ಎಂಬೆಲ್ಲ ಪ್ರಶ್ನೆಗಳಿಗೆ ಕೇಂದ್ರ ಸರಕಾರದ ಬಳಿಯೇ ಉತ್ತರವಿಲ್ಲ. ಯಾಕಿಲ್ಲ  ಅಂದರೆ ಚಿದು ಹೇಳುತ್ತಿರುವ ಭೀತಿವಾದದ ಪ್ರಕಾರ ಅಸ್ತಿತ್ವದಲ್ಲೇ ಇಲ್ಲ. ಇಲ್ಲದಿರುವ ಗುಮ್ಮನನ್ನು  ಸೃಷ್ಟಿಸಿ ಅದು ಅಲ್ಲಿದೆ, ಇಲ್ಲಿದೆ ಎಂದು ಕಪೋಲಕಲ್ಪಿತ ಹಾಗೂ ಸುಳ್ಳಿನ ಕಂತೆಯನ್ನು ಹೆಣೆಯುವ ಕೆಲಸ ‘ಕೇಸರಿ ಭೀತಿವಾದ’ದ ಹೆಸರಿನಲ್ಲಿ ನಡೆಯುತ್ತಿದೆ. ಚಿದಂಬರಂ ಅವರ ಹೇಳಿಕೆಯಿಂದ ಇದೀಗ ಸ್ವತಃ ಕಾಂಗ್ರೆಸ್ಸಿಗರೇ ತಬ್ಬಿಬ್ಬಾಗಿದ್ದಾರೆ.
‘ಕೇಸರಿ’ ಭಯೋತ್ಪಾದನೆ ಆಗಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಆದರೆ ರಾಷ್ಟ್ರವೇ ಭಯೋತ್ಪಾದಕನಾದಂತೆ ! ರಾಷ್ಟ್ರೀಯ ಚೇತನದ ಗುರುತಾಗಿರುವ ಕೇಸರಿಯನ್ನು ಭೀತಿವಾದಕ್ಕೆ ಹೋಲಿಸುವ ದಾಷ್ಟ್ಯ ನೈತಿಕ ಹಾಗೂ ಸಭ್ಯ ವಿಚಾರಗಳ ಸಮಾಧಿಯ ಮೇಲೆ ನಡೆದಿದೆ. ಮಾತ್ರವಲ್ಲ ಸಂಕೀರ್ಣ ಸ್ವಾರ್ಥಗಳಿಗಾಗಿ ದೇಶಹಿತ ಹಾಗೂ ರಾಷ್ಟ್ರೀಯ ಸಭ್ಯತೆಗಳೊಂದಿಗೆ ನಡೆದ ಕ್ರೂರಚೇಷ್ಟೆ  ಇದಾಗಿದೆ. ಅಹಿತ ರಾಜಕಾರಣ, ಸಂಕೀರ್ಣ ಸಂಪ್ರದಾಯಿಕತೆ, ತುಷ್ಟೀಕರಣದ ಪರಮಾವಧಿಯ ಫಲವಾಗಿ ಇಂದು ರಾಷ್ಟ್ರರಕ್ಷಕರಿಗೆ, ಅಪ್ಪಟ ದೇಶಭಕ್ತರಿಗೆ ಭಯೋತ್ಪಾದಕರ ಪಟ್ಟ  ಕಟ್ಟುವ ಅಸಹನೀಯ ಅವಮಾನದ ಕೃತ್ಯ ನಡೆಯುತ್ತಿದ್ದು, ರಾಷ್ಟ್ರನಿಷ್ಠರನ್ನೆಲ್ಲಾ ಚಿಂತೆಗೀಡು ಮಾಡಿದೆ. ಆದರೆ ಈ ದುರಂಹಕಾರಿ ಯತ್ನ  ‘ವಿನಾಶಕಾಲೇ ವಿಪರೀತ ಬುದ್ಧಿಯ’ ಸ್ಪಷ್ಟ  ಸಂಕೇತ.
‘ಭಗ್ವಾ’ ವರ್ಣ ಭರತದ ವರ್ಣ. ಸನಾತನ ಕಾಲದಿಂದಲೂ ಈ ರಾಷ್ಟ್ರದೊಂದಿಗೆ ಬೆಸೆದುಕೊಂಡಿರುವ ಸ್ಫೂರ್ತಿಯ ವರ್ಣ. ಜಗದಲ್ಲಿ ಭರತವನ್ನು ಗುರುತಿಸುವುದು ಇದೇ ಕೇಸರಿ ವರ್ಣದಿಂದ. ತ್ಯಾಗ, ತಪಸ್ಸು, ಬಲಿದಾನ ಹಾಗೂ ಶೌರ್ಯದ ಪ್ರತೀಕ ಕೇಸರಿ. ನಮ್ಮ  ಸಂವಿಧಾನದಲ್ಲೇ ಕೇಸರಿ ವರ್ಣಕ್ಕೆ ಈ ವ್ಯಾಖ್ಯಾನ ನೀಡಲಾಗಿದೆ. ಸನಾತನ ಸಂಸ್ಕೃತಿಯ ಪ್ರತೀಕವೆಂದೆ  ಹಿರಿಯರು ಕೇಸರಿಗೆ ನಮ್ಮ ರಾಷ್ಟ್ರೀಯ ಧ್ವಜ ತಿರಂಗಾದಲ್ಲಿ ಸ್ಥಾನ ನೀಡಿದ್ದಾರೆ. ಗಗನದ ವರ್ಣ ನೀಲಿ, ಪ್ರಕೃತಿಯ ವರ್ಣ ಹಸಿರು ಎಂದು ಹೇಗೆ ನಂಬಲಾಗಿದೆಯೋ ಹಾಗೆ ಭರತೀಯ ಮೂಲಚೇತನ ಹಾಗೂ ಆತ್ಮದ ವರ್ಣ ‘ಭಗ್ವಾ’ ಆಗಿದೆ. ಋಷಿಮುನಿಗಳು ಹಾಗೂ ಸಂನ್ಯಾಸಿಗಳು ಅಧ್ಯಾತ್ಮಕ್ಕೆ ಹಾಗೂ ಪರಹಿತಕ್ಕಾಗಿ ಮಾಡಿದ ತಮ್ಮ ಬಲಿದಾನದ ಪರಂಪರೆಯನ್ನು ಅಭಿವ್ಯಕ್ತಗೊಳಿಸಿದ್ದು ಸಹ ಇದೇ ಕೇಸರಿ ವರ್ಣದಿಂದ. ಹಿಂದುಗಳಿಗೆ ಮಾತ್ರವಲ್ಲ  ಸಿಕ್ಖರಿಗೂ ಕೇಸರಿ ಪಾವಿತ್ರ್ಯದ, ಪೂಜ್ಯತೆಯ ಸಂಕೇತ. ಗುರು ಗೋವಿಂದ್ ಸಿಂಗ್‌ರ ಪತಾಕೆಯ ವರ್ಣವೂ ಕೇಸರಿಯೇ ಆಗಿತ್ತು. ಇತ್ತೀಚೆಗಷ್ಟೆ  ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಮೃತಸರ್‌ಕ್ಕೆ ಭೇಟಿ ನೀಡಿದ್ದಾಗ ಇಡೀ ನಗರವನ್ನು ಹಾಗೂ ಶ್ರೀಹರಮಂದಿರ್ ಸಾಹೀಬ್‌ನ್ನು  ಭಗ್ವಾ ವರ್ಣದಿಂದ ಅಲಂಕರಿಸಲಾಗಿತ್ತು. ಅಂದು ಅಲ್ಲಿನ ಪತ್ರಿಕೆಗಳೆಲ್ಲ ‘ಅಮೃತಸರ್ ಕೇಸರಿಮಯ’ ಎಂಬ ಶೀರ್ಷಿಕೆಯನ್ನು ನೀಡಿದ್ದವು. ಹಾಗಾದರೆ ಚಿದು ಅವರು ಪ್ರಧಾನಿ ಸ್ವಾಗತಕ್ಕೆ ಭಯೋತ್ಪಾದನೆಯ ವರ್ಣ ಬಳಸಿಕೊಳ್ಳಲಾಯಿತು ಎಂದು ಹೇಳುವರೆ? ಅಥವಾ ನಮ್ಮ  ತಿರಂಗಾದಲ್ಲಿ ಕೇಸರಿ ವರ್ಣವೂ ಭಯೋತ್ಪಾದನೆಯನ್ನು ಬಿಂಬಿಸುತ್ತದೆ ಎಂದು ಹೇಳುವರೆ? ಇದ್ಯಾವುದಕ್ಕೂ ಇವರ ಬಳಿ ಉತ್ತರವಿಲ್ಲ. ಏಕೆಂದರೆ ಸುಳ್ಳನ್ನು ಅದೆಷ್ಟೇ ಸಮರ್ಥಿಸಿಕೊಂಡರೂ ಅದು ಸತ್ಯವಾಗಿ ಮಾರ್ಪಡುವುದಿಲ್ಲ. ಈ ಸಂಗತಿ ಚಿದು ಅವರಿಗೂ ಚೆನ್ನಾಗಿ ಗೊತ್ತು. ಆದರೂ ಶಾಂತಿಪ್ರಿಯ ಹಿಂದುಗಳ ಮೇಲೆ ‘ಸ್ಯಾಫ್ರಾನ್ mರರಿಜಂ’ನ ಹಣೆಪಟ್ಟಿ  ತಾಗಿಸಿದ್ದು  ಏಕೆ?
ನಮ್ಮಲ್ಲಿ ಎಲ್ಲ  ನಿರ್ಧಾರಗಳು, ಸರಕಾರದ ವೈಖರಿಗಳು ದಿಲ್ಲಿಯಲ್ಲಿನ ‘೧೦ ಜನಪಥ’ ಎಂಬ ಕಾಂಗ್ರೆಸ್‌ನ ಗರ್ಭಗುಡಿಯಲ್ಲಿ ಅಂತಿಮಗೊಳ್ಳುತ್ತವೆ. ಸರಕಾರದಲ್ಲಿ ಇರುವ ಎಲ್ಲರಿಗೂ ಈ  ಗರ್ಭಗುಡಿಯಲ್ಲಿನ  ಇmಲಿಯನ್ ಅಮ್ಮನನ್ನು ಒಲಿಸುವುದೆ  ಕೆಲಸ. ಅದರಲ್ಲೇ ಅವರ ಸಾರ್ಥಕತೆ! ಇದಕ್ಕೆ ಚಿದಂಬರಂ ಸಹ ಹೊರತಲ್ಲ. ಇmಲಿಯನಮ್ಮಗೆ ಬಹುಪರಾಕ್ ಹಾಕುವುದರಲ್ಲಿ  ತಾವು ಮುಂದೆ ಇರಬೇಕು ಅಂದುಕೊಂಡ ಸನ್ಮಾನ್ಯ ಗೃಹ ಸಚಿವರು ಈ ದೇಶದ ಭೂಮಿಪುತ್ರರಿಗೆ ಭಯೋತ್ಪಾದಕ ಪಟ್ಟ ನೀಡಿದ್ದಾರೆ. ಇನ್ನು ಮುಂದುವರಿದು ಸೋನಿಯಾ ಆಣತಿಯಂತೆ ತಿರಂಗಾದಲ್ಲಿನ ಕೇಸರಿ ವರ್ಣವನ್ನು ತೆಗೆದು ಹಾಕಲು ಸಂವಿಧಾನದಲ್ಲಿ ಮಾರ್ಪಾಡು ತಂದರೂ ಆಶ್ಚರ್ಯಪಡಬೇಕಿಲ್ಲ. ಏಕೆಂದರೆ ವಂಶಪಾರ್ಯಂಪರ್ಯದ ಈ ಪಕ್ಷದಲ್ಲಿ ಸ್ವಾಭಿಮಾನ, ಆತ್ಮಗೌರವ, ಸ್ವಪ್ರತಿಷ್ಠೆಗಳಿಗೆ ಮಾನ್ಯತೆಯೂ ಇಲ್ಲ. ಅಲ್ಲಿರುವ ನಾಯಕರಿಗೆ ಅದರ ಬಗ್ಗೆ  ಎಳ್ಳಷ್ಟೂ  ಚಿಂತೆಯೂ ಇಲ್ಲ. ಇದ್ದಿದ್ದರೆ ಕೇಸರಿ ಭಯೋತ್ಪಾದನೆ ಎಂಬ ಪದ ಬಳಸುವ ದಾಷ್ಟ್ಯವನ್ನು ನಮ್ಮ ಗೃಹ ಸಚಿವರು ಮಾಡುತ್ತಿರಲಿಲ್ಲ. ಇಟಲಿಯಮ್ಮನಿಗೆ ಬಿಡಿ ಈ ದೇಶದ ಸಂಸ್ಕೃತಿ, ಸಭ್ಯತೆ, ಶಿಷ್ಟಾಚಾರ, ರೀತಿರಿವಾಜು, ಅಧ್ಯಾತ್ಮ ಮೌಲ್ಯಗಳು ಯಾವುದು ಗೊತ್ತಿಲ್ಲ. ಇದೆಲ್ಲ ಅರ್ಥಮಾಡಿಕೊಳ್ಳುವುದು ಯಾರೋ ಬರೆದುಕೊಟ್ಟ  ಭಷಣವನ್ನು ಓದಿದಷ್ಟು  ಸುಲಭವೂ ಅಲ್ಲ. ಆದರೆ ನಿಮಗೇನಾಗಿತ್ತು ಚಿದು ಅವರೆ? ನೀವು ಈ ದೇಶದ ಗಾಳಿ, ನೀರು ಸೇವಿಸಿ ಬದುಕಿದವರು. ಇಲ್ಲೇ ಹುಟ್ಟಿದವರು. ಇಂತಹ ಹೇಳಿಕೆ ನೀಡುವಾಗ ಬುದ್ಧಿಗೆ ಗ್ರಹಣ ಬಡಿದಿತ್ತೆ? ಗ್ರಹಣ ಮೋಕ್ಷದ ನಂತರವಾದರೂ ಈ ದೇಶದ ಕ್ಷಮೆ ಕೇಳಬಹುದಿತ್ತಲ್ವೆ? ಆದರೆ ನಿಮ್ಮಂಥ ನಾಯಕರಿಗೂ ‘೧೦ ಜನಪಥ’ನ ಹಿತವೇ ಮುಖ್ಯವಾಯಿತಲ್ಲವೆ? ಇರಲಿ.
ಭರತ ಸ್ವಾತಂತ್ರ್ಯ ಬಂದ ಮೇಲಷ್ಟೆ  ಅಲ್ಲ ಹಿಂದಿನಿಂದಲೂ ಇಸ್ಲಾಂ ದಾಳಿಕೋರರ ಬರ್ಬರ ಕೃತ್ಯಗಳಿಗೆ ಗುರಿಯಾಗಿದೆ. ಆಗಲೂ ನಮ್ಮಲ್ಲಿ  ಕೇಸರಿ ಭಯೋತ್ಪಾದನೆ ಹುಟ್ಟಿಕೊಳ್ಳಲಿಲ್ಲ. ಮಹ್ಮದ್ ಘಜ್ನಿ ಈ ನಾಡಿನ ಮೇಲೆ ೧೭ ಬಾರಿ ದಾಳಿ ಮಾಡಿ ಇಲ್ಲಿನ ಶ್ರದ್ಧಾಸ್ಥಾನಗಳನ್ನು ಉರುಳಿಸಿದರೂ ಹಿಂದು ಉಗ್ರ ತಲೆ ಎತ್ತಲಿಲ್ಲ. ಘಜ್ನಿಯಂತಹ ಮತಾಂಧರಿಗೆ ಈ ದೇಶ ತನ್ನ ಆತ್ಮಬಲದ ಮೇಲೆಯೇ ಸೋಲಿನ ರುಚಿ ಉಣಿಸಿತ್ತು. ಈ ದೇಶದ ಬಹುಸಂಖ್ಯಾತ ಹಿಂದುಗಳು ಶಾಂತಿಪ್ರಿಯರು, ದೇಶನಿಷ್ಠರು ಆಗಿದ್ದರಿಂದಲೇ ಇಲ್ಲಿ ಮುಸಲ್ಮಾನ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ ಸೇರಿದಂತೆ ಎಲ್ಲ  ಧರ್ಮಿಯರೂ ನೆಮ್ಮದಿಯಿಂದ ಬಾಳಲು ಆಗುತ್ತಿರುವುದು. ಹಿಂದುಗಳು ಶಾಂತಿಯ ಆರಾಧಕರಾಗಿದ್ದರಿಂದಲೇ ‘ನಿಮ್ಮ ನಾಯಕರಿಗೆಲ್ಲ ‘ಭರತ ವಿವಿಧ ಧರ್ಮಗಳ ನಾಡು, ಸಾಮರಸ್ಯದ ಬೀಡು’ ಎಂದು ಭಷಣ ಮಾಡಲು ಆಗುತ್ತಿರುವುದು. ಆದರೆ ಹಿಂದುಗಳ ಸಹನೆ ದೌರ್ಬಲ್ಯವಲ್ಲ. ಹಿಂದುಗಳ ಶಾಂತಿಪ್ರಿಯತೆ ಹಿಂಸೆಯನ್ನು ಸಹಿಸಿಕೊಳ್ಳುವ ಅಸಹಾಯಕ ಗುಣವಲ್ಲ. ದೇಶ ಆಪತ್ತಿನಲ್ಲಿದ್ದಾಗ ಅದರ ರಕ್ಷಣೆಗೆ ಎದ್ದು ನಿಲ್ಲುವುದು, ಕೈಯಲ್ಲಿ  ಶಸ್ತ್ರ  ಹಿಡಿಯುವುದು ಈ ದೇಶದ ಶೌರತ್ವ ಹಾಗೂ ರಾಷ್ಟ್ರಾಭಿಮಾನದ ಪ್ರತೀಕ. ಆದರೆ ನೀವು ಇದನ್ನೇ ಭಯೋತ್ಪಾದನೆ ಎನ್ನುವುದಾರೆ ಇದಕ್ಕಿಂತ ಮೂರ್ಖತನ ಮತ್ತೊಂದು ಇರಲಿಕ್ಕಿಲ್ಲ.
ಭರತ ಮಾತ್ರವಲ್ಲ ಇಸ್ಲಾಂ ರಾಷ್ಟ್ರಗಳಾದ ಪಾಕಿಸ್ಥಾನ, ಅಫ್ಘಾನಿಸ್ಥಾನಕ್ಕೂ ಬೇತಾಳನಂತೆ ಕಾಡುತ್ತಿರುವುದು ಇಸ್ಲಾಮಿಕ್ ಭಯೋತ್ಪಾದನೆ ಅಲ್ಲವೆ?  ಇತ್ತೀಚೆಗೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ತನ್ನ ರಾಷ್ಟ್ರದ ಶತ್ರುಗಳ ಪಟ್ಟಿಯಲ್ಲಿ ವೊದಲ ಸ್ಥಾನವನ್ನು ಇಸ್ಲಾಂ ಭಯೋತ್ಪಾದಕರಿಗೆ ನೀಡಿದೆ. ಈ ಬಗೆಯ ಭಯೋತ್ಪಾದನೆಯಿಂದ ರಾಷ್ಟ್ರಕ್ಕೆ ಕಂಟಕವಿದೆ ಎಂದು ಅವಲತ್ತುಕೊಂಡಿದೆ. ಅಮೆರಿಕದಿಂದ ಬಂದ ಹಣದಲ್ಲಿ ಬಂದೂಕು ಖರೀದಿಸಿ ತಾಲಿಬಾನಿಗಳ ಕೋmಗೆ ನುಗ್ಗಿದೆ.
ಪಾಕ್, ಅಫ್ಘಾನ್‌ನಂತಹ ಇಸ್ಲಾಂ ರಾಷ್ಟ್ರಗಳೇ ತಮ್ಮ  ಶತ್ರು ಇಸ್ಲಾಮಿಕ್ ಭಯೋತ್ಪಾದನೆಯೆಂದು ಒಪ್ಪಿಕೊಂಡಿರುವಾಗ ಈ ದೇಶವಂತೂ ತನ್ನ ೬೫ ಸಾವಿರ ಬಂಧುಗಳನ್ನು ಜಿಹಾದಿಗಳಿಂದ ಕಳೆದುಕೊಂಡಿದೆಯಲ್ಲ. ಲಕ್ಷಾಂತರ ಜನರು ಶಾಶ್ವತ ಅಂಗವಿಕಲರಾಗಿದ್ದಾರಲ್ಲ. ಅಂದಮೇಲೆ ಭರತದ ನಂ.೧ ಶತ್ರು ಇಸ್ಲಾಮಿಕ್ ಭಯೋತ್ಪಾದನೆಯೇ ಅಲ್ಲವೇ? ಇದರ ಮೂಲೋತ್ಪಾಟನೆಗೆ mಂಕ ಕಟ್ಟಿ ನಿಂತು ಸಂಸತ್ತಿನ ಎದುರು ಅಫ್ಜಲ್‌ಗೆ, ಛತ್ರಪತಿ ಶಿವಾಜಿ ಟರ್ಮಿನಲ್ ಎದುರಿಗೆ ಕಸಬ್‌ಗೆ ಬಹಿರಂಗವಾಗಿ ಗಲ್ಲಿಗೇರಿಸಿದ್ದರೆ ಚಿದು ಅವರೆ ನಿಮಗೆ ಹಾಗೂ ನಿಮ್ಮ ಸರಕಾರಕ್ಕೆ ಈ ದೇಶ ಇತಿಹಾಸದುದ್ದಕ್ಕೂ ಕೃತಜ್ಞತೆಯಿಂದ ನೆನೆಯುತ್ತಿತ್ತು. ಏನೇ ಇರಲಿ, ಅಲ್ಪಸಂಖ್ಯಾತರ ಮತಗಳಿಸಿಕೊಂಡು ಕುರ್ಚಿ ಉಳಿಸಿಕೊಳ್ಳಬೇಕೆಂಬ ಧಾವಂತದಲ್ಲಿ ಮಾಡುತ್ತಿರುವ ಈ ತುಷ್ಟೀಕರಣ ಮುಂದೆ ಸ್ವತಃ ಕಾಂಗ್ರೆಸ್‌ನ ಕೊರಳಿಗೆ ಉರುಳಾಗಬಹುದು. ಏಕೆಂದರೆ ಕಾಂಗ್ರೆಸ್ ಈ ರಾಷ್ಟ್ರದ ಮುಸಲ್ಮಾನರನ್ನು ವ್ಯಕ್ತಿಯಾಗಿ ನೋಡುತ್ತಿಲ್ಲ. ಕಡೆ ಪಕ್ಷ ಮುಸಲ್ಮಾನನಾಗಿಯೂ ಕಾಣುತ್ತಿಲ್ಲ. ಮುಸ್ಲಿಂ ಅಂದರೆ ಬರಿ ವೋm ಬ್ಯಾಂಕ್ ಎಂದು ತಿಳಿದು ಅವಿವೇಕತನದಿಂದ ವರ್ತಿಸುತ್ತಿರುವುದನ್ನು ನೋಡಿದಾಗ ಪಾಪದ ಕೊಡ ತುಂಬಿದೆ ಎಂದೆನಿಸುತ್ತದೆ.
ಅದಕ್ಕೆ ಪಕ್ಷದ ಶವಯಾತ್ರೆ ಹೊರಡುವ ಮುನ್ನವಾದರೂ ಪ್ರಾಯಶ್ಚಿತ್ತ ರೂಪದಲ್ಲಿ ಈ ದೇಶಕ್ಕಿಷ್ಟು  ಗೌರವ, ನಮನ ಸಲ್ಲಿಸಿ ಭರತದ ಹೆಗ್ಗುರುತಾಗಿರುವ ಕೇಸರಿಗೆ ಒಂದು ಬಾರಿಯಾದರೂ ಸಲಾಂ ಹೇಳಿ ಕೃತಾರ್ಥರಾಗಿ…

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

'ಮದ ನಿ'ರ್ಮೂಲನೆ ಆಗಲೇಬೇಕು

Tue Sep 7 , 2010
ಕೇರಳದ ಸಾಸ್ತಾಂಕೋಟದಲ್ಲಿ ೧೯೬೫ರಲ್ಲಿ ಜನಿಸಿದ ಅಬ್ದುಲ್ ನಾಸಿರ್ ಮದನಿ, ಮುಸಲ್ಮಾನ್ ಮತಾಂಧತೆಯ ಜಾಲದೊಳಗೆ ಸಿಲುಕಿ ಹಿಂದೂ ಸಂಘಟನೆಗಳ ವಿರೋಧಿಯಾಗಿ ಗುರುತಿಸಿದಾತ. ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಈತ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಲಷ್ಕರ್-ಇ-ತೊಯ್ಬಾ ಜತೆ ನಂಟು ಬೆಳೆಸಿ ಭಾರತದಲ್ಲಿ ಭಯೋತ್ಪಾದನಾ ಜಾಲ ಹರಡುವ ತಂತ್ರ ಹೆಣೆದವನು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಇಸ್ಲಾಮಿಕ್ ಸೇವಕ್ ಸಂಘ ಪ್ರಾರಂಭ ಮಾಡಿದರೂ ೧೯೯೩ರಲ್ಲಿ ಅದನ್ನು ನಿಷೇಧಿಸಲಾಯಿತು. ಆತ ನಡೆಸಿದ ೧೯೯೮ರ ಕೊಯಮತ್ತೂರು […]