Bantwala:: ಪಾಣೆಮಂಗಳೂರಿನ ಟೋಲ್‌ಗೇಟ್ ಬಳಿಯ ಹನುಮಾನ್ ನಗರದತ್ತ ಜನ ಸಾಗರದ ಅಲೆ ಅಲೆಯಂತೆ ಹರಿದು ಬಂದರು. ಬಿ.ಸಿ.ರೋಡ್, ಪೊಳಲಿ, ಕೈಕಂಬ, ಬಂಟ್ವಾಳದ ಹನುಮಾನ್ ದೇವಸ್ಥಾನ ಹೀಗೆ ಮೂರು ದಿಕ್ಕುಗಳಿಂದ ಆರಂಭವಾದ ವೈಭವೋಪೇತ ಶೋಭಾಯಾತ್ರೆ ಹನುಮಾನ್ ನಗರದತ್ತ ಹರಿದು ಬಂತು.

ಚೆಂಡೆ, ಕಹಳೆ, ಜಾಗಟೆ, ಕೊಂಬು ವಾದ್ಯಗಳೊಂದಿಗೆ ಗೊಂಬೆ ಕುಣಿತ, ಹುಲಿವೇಷ, ನಾಸಿಕ್‌ಬ್ಯಾಂಡ್ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು. ಸಭೆ ಮುಕ್ತಾಯದವರೆಗೂ ಜನ ವಿವಿಧ ಘೋಷಣೆ ಮೊಳಗಿಸುತ್ತಾ ಹರಿದು ಬರುತ್ತಿದ್ದರು. ಹನುಮಾನ್ ನಗರದ ವಿಶಾಲ ಮೈದಾನದಲ್ಲಿ ನಿರೀಕ್ಷೆಗೂ ಮೀರಿ ನಿಂತು ಹಿಂದು ಬಾಂಧವರು ಸೇರಿದ್ದರು. ಮೈದಾನ ಭರ್ತಿಯಾಗಿ ಹೆದ್ದಾರಿಯಲ್ಲೂ ನಿಂತು ಜನ ಭಾಷಣ ಆಲಿಸಿದರು. ಮಾತೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ವಿಶಾಲ ಮೈದಾನದಲ್ಲಿ ಜನ ಕುಳಿತಲ್ಲಿಗೆ ಕಾರ್ಯರ್ಕತರು ನೀರು ಹಾಗೂ ಹನುಮಾನ್ ಶಕ್ತಿ ಯಜ್ಞದ ಪ್ರಸಾದವನ್ನು ವಿತರಿಸಿದರು. ಹಿರಿಯರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿತ್ತು. ಕರಾವಳಿ ಅಭಿವೃದಿಟಛಿ ಪ್ರಾಧಿಕಾರಿದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಪುರಸಭಾಧ್ಯಕ್ಷ ದಿನೇಶ್ ಭಂಡಾರಿ, ದ.ಕ.ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮತ್ತಿತರರು ಉಪಸ್ಥಿತರಿದ್ದರು.

ಶೋಭಾ ಯಾತ್ರೆ ವೇಳೆ ಯಾವುದೇ ಟ್ರಾμಕ್ ಜಾಮ್ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿತ್ತು.

ಹನುಮಾನ್ ನಗರದಲ್ಲಿ ಬೆಳಿಗ್ಗೆ ಪುರೋಹಿತರಾದ ಕೆ.ಎಲ್. ಆಚಾರ್ಯ ಹಾಗೂ ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಹನುಮಾನ್ ಶಕ್ತಿ ಯಜ್ಞ ನೆರವೇರಿತು.

ಮಧ್ಯಾಹ್ನ ಪೂರ್ಣಾಹುತಿ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ವಿವಿಧ ದೇವಸ್ಥಾನ, ದೈವಸ್ಥಾನ, ಮಂದಿರಗಳ ಆಡಳಿತ ಮೊಕ್ತೇಸರರು, ಧಾರ್ಮಿಕ ಮು-ಖಂಡರು, ಆರೆಸ್ಸೆಸ್ ದಕ್ಷಿಣ ಪ್ರಾಂತ ಕಾರ್ಯವಾಹ ಡಾ| ಪ್ರಭಾಕರ ಭಟ್ ಈ ಸಂದರ್ಭ ಉಪಸ್ಥಿತರಿದ್ದರು.