BELTHANGADY

Belthangady:  ಸಂಘ ಪರಿವಾರವನ್ನು ನಾಶ ಮಾಡಲು ಕೇಸರಿ ಭಯೋತ್ಪಾದನೆಯೆಂಬ ಗುಮ್ಮವನ್ನು ಯುಪಿಎ ಸರಕಾರ ಸೃಷ್ಟಿಸಿದೆ. ಹಿಂದೂ ಸಮಾಜದ ತೇಜೋವಧೆ ಮಾಡುವ ಕ್ರೈಸ್ತ ಹಾಗೂ ಇಸ್ಲಾಮಿನ ಎಲ್ಲ ಷಡ್ಯಂತ್ರಗಳ ವಿರುದಟಛಿ ರಣಕಹಳೆ ಮೊಳಗಿಸಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಗದೀಶ ಕಾರಂತ ಹೇಳಿದ್ದಾರೆ.

ಅವರು ಬೆಳ್ತಂಗಡಿಯಲ್ಲಿನ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಪ್ರಮುಖ ಭಾಷಣ ಮಾಡುತ್ತಿದ್ದರು. ದೇಶದ ೧೦ ಸಾವಿರ ತಾಲೂಕುಗಳಲ್ಲಿ ನ.೧೫ರಿಂದ ಡಿ.೧೫ ರ ತನಕ ರಾಮಜನ್ಮ ಭೂಮಿ ಆಂದೋಲನವನ್ನು ಜೀವಂತವಿಡುವುದಕ್ಕಾಗಿ ಹಾಗೂ ನವ ತರುಣರಿಗೆ ಆಂದೋಲನದ ಮಹತ್ವವನ್ನು ವಿವರಿಸುವುದಕ್ಕಾಗಿ ಇಂತಹ ಹಿಂದೂ ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ. ಹಿಂದು ಎಂಬುದು ಭಾರತದ ಆತ್ಮ. ಗ್ರೇಟ್ ಎಂಬ ಏಳು ರಾಷ್ಟ್ರಗಳು ಒಟ್ಟಾಗಿ ಭಾರತವನ್ನು ಗೆಲ್ಲಬೇಕಾದರೆ ಹಿಂದುತ್ವವನ್ನು ಕೊಲ್ಲ ಬೇಕು ಎಂಬುದನ್ನು ಅರಿತು ಇದಕ್ಕಾಗಿ ಸತತ ಷಡ್ಯಂತ್ರಗಳನ್ನು ರೂಪಿಸುತ್ತಿವೆ. ಬ್ರಿಟಿಷರ ವೇಷದ ಕ್ರೈಸ್ತರು ಮತಾಂತರದ ಮೂಲಕ, ಜೆಹಾದಿ ಹೆಸರಿನಲ್ಲಿ ಮುಸಲ್ಮಾನರು ಭಯೋತ್ಟಾದನೆಯ ಮೂಲಕ ಹಿಂದೂ ಸಮಾಜದ ತೇಜೋವಧೆ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಚ್ಚರಿಸಿದರು.

ಕೇಸರಿ ಭಯೋತ್ಪಾದನೆಯೆಂದು ಕರೆಯುವ ವಿರೋಧಿಗಳು ಮುಸಲ್ಮಾನರು ಅಲ್ಲಲ್ಲಿ ಮಾಡುತ್ತಿರುವ ಭಯೋತ್ಟಾದಕ ಕೃತ್ಯಗಳನ್ನು ಹಸಿರು ಭಯೋತ್ಟಾದನೆ ಎಂದು ಯಾಕೆ ಕರೆಯುತ್ತಿಲ್ಲ. ಓಟಿಗಾಗಿ ತಾಯಿನಾಡನ್ನೇ ದ್ವೇಷಿಸುವ ದೇಶದ್ರೋಹಿಗಳು, ಸೆಕ್ಯುಲರ್ ವಾದಿಗಳು ಮಣ್ಣು ಮುಕ್ಕದೆ ಈ ದೇಶಕ್ಕೆ ಉಳಿಗಾಲವಿಲ್ಲ. ಕೋಮು ಸಾಮರಸ್ಯವೆಂಬುದು ಒಂದು ಚಪ್ಪಾಳೆಯಿಂದ ಸಾಧ್ಯವಿಲ್ಲ. ರಾಮ ಜನ್ಮಭೂಮಿ ಎಂಬುದು ಯಾರೂ ಕೊಡುವ ಭಿಕ್ಷೆಯಲ್ಲ ಅದು ನಮ್ಮ ಹಕ್ಕು. ಹಿಂದುಗಳು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಹೊಣೆಗಾರಿಕೆಯಿಂದ ಇದ್ದರೆ ಸಮಾಜ ಸಶಕ್ತವಾಗಬಲ್ಲುದು ಎಂದರು.

ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಭ್ರಷ್ಟಾಚಾರ ರಹಿತ ಆಡಳಿತದ ಕನಸು ಎಂದು ನನಸಾಗುವುದೋ ಎಂಬ ಕಾತರ ನನ್ನದು. ಮಕ್ಕಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಜವಾಬ್ದಾರಿ ತಾಯಂದಿರಲ್ಲಿ ಇರಬೇಕು. ಹಿಂದುಗಳ ತಾಳ್ಮೆ ಸಹನೆಯ ದುರುಪಯೋಗದ ಬಗ್ಗೆ ಎಚ್ಚರದಿಂದಿರಬೇಕು ಎಂದರು.

ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ಧರ್ಮದ ಮೇಲೆ ಆಘಾತವಾದಾಗ ಸಂಘಟನೆಗೆ ಶಕ್ತಿ ಹೆಚ್ಚು ಬರುತ್ತದೆ. ಜಾಗೃತಿಯ ಹಾದಿ ನಮ್ಮದಾಗಬೇಕು. ಮಾತೃಶಕ್ತಿ ಜಾಗೃತವಾದರೆ ಭಾರತವೆಂಬ ರಥದ ಸಾರಥಿಗಳನ್ನು ನಿರ್ಮಿಸಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಶ್ರೀ ಹನುಮದ್ ಶಕ್ತಿ ಜಾಗರಣ ಸಮಿತಿಯ ತಾಲೂಕಾಧ್ಯಕ್ಷ ಧರ್ಮಸ್ಥಳ ಭುಜಬಲಿ ವಹಿಸಿದ್ದರು.

ಸಮಿತಿಯ ಉಪಾಧ್ಯಕ್ಷ ರಾಜೇಶ್ ಪ್ರಭು ಸ್ವಾಗತಿಸಿದರು. ಬಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ವಂದಿಸಿದರು. ಉಪನ್ಯಾಸಕ ರವಿ ಮಂಡ್ಯ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮಕ್ಕೆ ಮೊದಲು ಇಲ್ಲಿನ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಹನುಮದ್ ಶಕ್ತಿ ಜಾಗರಣ ಯಜ್ಞ ನಡೆಯಿತು. ಬಳಿಕ ಸಂಜೆ ದೇಗುಲದ ವಠಾರದಿಂದ ತಾಲೂಕು ಕ್ರೀಡಾಂಗಣದ ವರೆಗಿನ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಶೋಭಾ ಯಾತ್ರೆ ನಡೆಯಿತು. ಸಮಾವೇಶದಲ್ಲಿ ಭಾಗವಹಿಸಿದವರೆಲ್ಲರಿಗೂ ಬನ್ ಹಾಗೂ ಪಾನೀಯದ ವ್ಯವಸ್ಥೆ ಮಾಡಲಾಗಿv

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

BANTWALA

Sat Dec 25 , 2010
Bantwala:: ಪಾಣೆಮಂಗಳೂರಿನ ಟೋಲ್‌ಗೇಟ್ ಬಳಿಯ ಹನುಮಾನ್ ನಗರದತ್ತ ಜನ ಸಾಗರದ ಅಲೆ ಅಲೆಯಂತೆ ಹರಿದು ಬಂದರು. ಬಿ.ಸಿ.ರೋಡ್, ಪೊಳಲಿ, ಕೈಕಂಬ, ಬಂಟ್ವಾಳದ ಹನುಮಾನ್ ದೇವಸ್ಥಾನ ಹೀಗೆ ಮೂರು ದಿಕ್ಕುಗಳಿಂದ ಆರಂಭವಾದ ವೈಭವೋಪೇತ ಶೋಭಾಯಾತ್ರೆ ಹನುಮಾನ್ ನಗರದತ್ತ ಹರಿದು ಬಂತು. ಚೆಂಡೆ, ಕಹಳೆ, ಜಾಗಟೆ, ಕೊಂಬು ವಾದ್ಯಗಳೊಂದಿಗೆ ಗೊಂಬೆ ಕುಣಿತ, ಹುಲಿವೇಷ, ನಾಸಿಕ್‌ಬ್ಯಾಂಡ್ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು. ಸಭೆ ಮುಕ್ತಾಯದವರೆಗೂ ಜನ ವಿವಿಧ ಘೋಷಣೆ ಮೊಳಗಿಸುತ್ತಾ ಹರಿದು ಬರುತ್ತಿದ್ದರು. ಹನುಮಾನ್ […]

You May Like