ಕಟೀಲು: ಕಾಶ್ಮೀರದಲ್ಲಿ ಹೆಂಗಸರು ಮಕ್ಕಳಿಂದಲೇ ಸೈನಿಕರ ಶಿಬಿರವನ್ನು ನಾಶಪಡಿಸುವ ಕಾರ್ಯತಂತ್ರವನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಹಾಗಿದ್ದರೂ ಕೇಂದ್ರ ಸರಕಾರ ಮೌನವಾಗಿದೆ ಎಂದು ಮಂಗಳೂರು ವಿಭಾಗ ಸಹಕಾರ್ಯವಾಹ ನ.ಸೀತಾರಾಮ ಹೇಳಿದ್ದಾರೆ.

ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಂಗಣದಲ್ಲಿ ಭಾನುವಾರ ನಡೆದ ಹನುಮದ್ ಶಕ್ತಿ ಜಾಗರಣ ಯಜ್ಞ ಹಾಗೂ ಹಿಂದು ಸಮಾವೇಶದಲ್ಲಿ ಅವರು ಮಾತನಾಡಿದರು. ಹಂದಿಗೆ ಗಂಧದ ಪರಿಮಳ ಗೊತ್ತಿರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ರಾಹುಲ್ ಗಾಂಧಿ ಸ್ಥಿತಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶತಮಾನದ ಹೋರಾಟವಾಗಿದ್ದು ಹಿಂದುಗಳಲ್ಲಿ ಜಾಗೃತಿ, ಸಂಘಟನೆ, ಸಮಾಜ ಮತ್ತು ರಾಷ್ಟ್ರದ ರಕ್ಷಣೆಗಾಗಿ ಅಗತ್ಯವಿದೆ ಎಂದವರು ಹೇಳಿದರು.

ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಬೇಕು. ರಾಮನ ಆದೇಶ ಪಾಠವಾಗಬೇಕು ಎಂದು ಹೇಳಿದರು.

ಹನುಮದ್ ಶಕ್ತಿ ಜಾಗರಣಾ ಸಮಿತಿ ಮೂಲ್ಕಿ ಪ್ರಖಂಡ ಅಧ್ಯಕ್ಷ ದೊಡ್ಡಯ್ಯ ಮೂಲ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಭಾಸ್ಕರ ದೇವಸ್ಯ ಸ್ವಾಗತಿಸಿದರು. ವೆಂಕಟರಮಣ ಹೆಗಡೆ ವೈಯಕ್ತಿಕ ಗೀತೆ ಹಾಡಿದರು. ಸೋಂದಾ ಭಾಸ್ಕರ ಭಟ್ ನಿರೂಪಿಸಿ, ಉಮೇಶ ಪಂಜ ವಂದಿಸಿದರು.