UDUPI

ಉಡುಪಿ : ಸಮಾನತೆ ಹೆಸರಲ್ಲಿ ರಕ್ತ ಹರಿಸುತ್ತಿರುವ ನಕ್ಸಲಿಸಂ ಸತ್ತ ಹಲ್ಲಿಯ ಬಾಲದಂತೆ ಚಡಪಡಿಸುತ್ತಿದೆ. ಬಾಬರ್ ಸಂತಾನದ ರಕ್ತ ಬೀಜಾಸುರರು ಇನ್ನೂ ದೇಶದಲ್ಲಿದ್ದಾರೆ. ಇವರೊಂದಿಗೆ ಢೋಂಗಿ ಜಾತಿವಾದಿಗಳು, ಕೋಮುವಾದಿಗಳು ಕೈ ಜೋಡಿಸಿದ್ದಾರೆ. ಇದಕ್ಕೆಲ್ಲಾ ವೋಟ್ ಬ್ಯಾಂಕ್ ರಾಜ-ಕಾರಣ ಕುಮ್ಮಕ್ಕು ನೀಡುತ್ತಿದೆ…

UDUPI

ರಾಮ ಮಂದಿರಕ್ಕಾಗಿ ಇಟ್ಟಿಗೆ ಮತ್ತು ಸೇರಿಸಿದ ದುಡ್ಡು ಏನಾಯಿತು ಅಂತ ಕೆಲವರು ಪ್ರಶ್ನಿಸುತ್ತಿದ್ದಾರೆ. ೮.೩೦ ಕೋಟಿ ರೂ. ಭದ್ರವಾಗಿದೆ. ಅದನ್ನು ರಾಮ ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತದೆ.

ಭಾನುವಾರ ಉಡುಪಿ ಕಲ್ಸಂಕ ರಾಯಲ್ ಗಾರ್ಡನ್‌ನಲ್ಲಿ ನಡೆದ ಹಿಂದು ಸಮಾಜೋತ್ಸವ ಮತ್ತು ಹನುಮಾನ್ ಯಜ್ಞ ಕಾರ್ಯಕ್ರಮ ಸಂದರ್ಭ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಗೋರಕ್ಷಾ ಪ್ರಮುಖ್ ಮಂಜುನಾಥ ಸ್ವಾಮಿ ಬಣ್ಣಿಸಿದ್ದು ಹೀಗೆ.

ಹಿಂದೂ ಮಲಗಿದರೆ ಹನುಮಂತ. ಎದ್ದರೆ ಬಲವಂತ. ಕೇಸರಿ ಭಯೋತ್ಪಾದನೆ ಬಗ್ಗೆ ಮಾತನಾಡುವ ಗೃಹ ಸಚಿವರು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಲ್ಲಿಸುವ ಬಗ್ಗೆ ಚಿಂತಿಸಲಿ ಎಂದು ಅವರು ಸಲಹೆ ಮಾಡಿದರು.

ಸುದೀರ್ಘ ಹೋರಾಟದ ನಂತರ ನ್ಯಾಯಾಲಯ ಅಯೋಧ್ಯೆ ರಾಮ ಜನ್ಮಭೂಮಿ ಎನ್ನೋದಕ್ಕೆ ಅಂಕಿತ ಹಾಕಿದೆ. ಅಯೋಧ್ಯೆಯಲ್ಲಿರೋದು ಬಾಬರ್ ಕಟ್ಟಡವೇ ಹೊರತು ಮಸೀದಿಯಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಕಲ್ಲಿನ ಕೆತ್ತನೆ ಕೆಲಸ ಶೇ.೭೫ರಷ್ಟು ಪೂರ್ಣಗೊಂಡಿದೆ. ಅಯೋಧ್ಯೆಯಲ್ಲಿ ಏನೇ ವಿರೋಧ ಬಂದರು ಮಂದಿರ ಕಟ್ಟದೆ ವಿರಮಿಸುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲಾ ಸಂಘಚಾಲಕ ಟಿ. ಶಂಭು ಶೆಟ್ಟಿ , ವಿಶ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕಟ್ಕೆರೆ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಹನುಮದ್ ಶಕ್ತಿ ಜಾಗರಣಾ ಸಮಿತಿ ಅಧಕ್ಷ ಅಂಡಾರು ದೇವಿಪ್ರಸಾದ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಹನುಮಾನ್ ಯಜ್ಞ ಹಾಗೂ ಸಮಾಜೋತ್ಸವ ಸಮಿತಿ ಅಧಕ್ಷ ಎರ್ಮಾಳು ಶಶಿಧರ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ನಿರೂಪಿಸಿದರು. ಬಜರಂಗದಳ ಉಡುಪಿ ನಗರ ಸಂಚಾಲಕ ಗಿರೀಶ್ ಅಂಚನ್ ವಂದಿಸಿದರು.

ಸಭೆಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ನಡೆಯಿತು. ನಂತರ ಯಜ್ಞಕ್ಕೆ ಪೂರ್ಣಾಹುತಿ ನೀಡಲಾಯಿತು. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.

ಶ್ರೀಕೃಷ್ಣ ಕೌರವನಲ್ಲಿ ಪಾಂಡವರಿಗಾಗಿ ಐದು ಗ್ರಾಮವನ್ನಾದರೂ ಬಿಟ್ಟು ಕೊಡುವಂತೆ ಭಿನ್ನವಿಸಿದ್ದ. ಆದರೆ ಕೌರವ ಸೂಜಿ ಮೊನೆಯಷ್ಟು ಜಾಗ ಕೊಡೋದಿಲ್ಲ ಎಂದ. ಇದಕ್ಕಾಗಿ ಮಹಾಭಾರತ ನಡೀತು. ಕೌರವರ ವಂಶ ನಾಶವಾಗಿ ಹೋಯಿತು. ನಾವೂ ಕೂಡ ನಮ್ಮ ಶ್ರದಾಟಛಿ ಭಕ್ತಿಯ ಮೂರು ಸ್ಥಳ ಕೇಳುತ್ತಿದ್ದೇವೆ. ಕಾಶಿ, ಮಥುರಾ ಮತ್ತು ಅಯೋಧ್ಯೆ. ದೇಶದಲ್ಲಿ ೩೦ ಸಾವಿರಕ್ಕೂ ಮಿಕ್ಕ ದೇವಸ್ಥಾನಗಳು ದಾಳಿಗೆ ಸಿಕ್ಕಿ ನಾಶವಾಗಿವೆ. ನಾವು ಅಷ್ಟನ್ನು ಕೇಳುತ್ತಿಲ್ಲ. ಕೇವಲ ಮೂರೇ ಮೂರನ್ನು ಕೇಳುತ್ತಿದ್ದೇವೆ. ಅದನ್ನು ಕೊಡೋಕೆ ಹಿಂದೇಟು ಹಾಕೋರು ಕೌರವರಂತೆ ನಾಶವಾಗಲಿದ್ದಾರೆ ಎಂದು ಎಚ್ಚರಿಸಿದರು.

ಕೇಸರಿ ಭಯೋತ್ಪಾದನೆ ಅಲ್ಲ. ಧರ್ಮ ಮತ್ತು ರಾಷ್ಟ್ರೀಕರಣದ ಸಂಕೇತ. ಹಿಂದು ಬಾಂಧವರನ್ನು ಒಟ್ಟಾಗಿಸುವ ಮೂಲಕ ಮತ್ತಷ್ಟು ಜಾಗೃತಾವಸ್ಥೆಗೆ ತರುವ ಪ್ರಯತ್ನವಿದೆ. ಹಿಂದೂ ಸಂಘಟನೆಗಳು ವಾಯುಪುತ್ರನ ಹಾಗೆ ಚಿರಂಜೀವಿ. ಹಿಂದೂ ಸಮಾಜದ ಬಗ್ಗೆ ಅಪಮಾನ, ಅವಹೇಳನ ಮತ್ತು ದಾಳಿ ನಡೆದಾಗಲೆಲ್ಲಾ ಹಿಂದೂ ಸಮಾಜ ಸಿಡಿದು ನಿಂತಿದೆ. ಕೋಮು ಸಾಮರಸ್ಯ ಉಳಿದಿರುವುದಕ್ಕೆ ಬಹುಸಂಖ್ಯಾತ ಹಿಂದೂಗಳೇ ಕಾರಣ ಹೊರತು ನಕಲಿ ಕೋಮವಾದಿಗಳಲ್ಲಎಂದು ಆಶೀರ್ವಚನ ನೀಡಿದ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

ಹಿಂದೂ ದೇಶದಲ್ಲಿ ಹಿಂದೂ ಧರ್ಮಕ್ಕೆ ಸಹಕಾರ ನೀಡುವ ಸರಕಾರ ಅಗತ್ಯವಿದೆ. ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿಗೆ ಪೂರ್ಣ ಸಹಮತವಿಲ್ಲ ಎಂದು ಹೇಳಿದ ಸ್ವಾಮೀಜಿ ಧರ್ಮ ಜಾಗೃತಿಯಾಗಬೇಕಾದರೆ ಅದರ ನೇತೃತ್ವವನ್ನು ಮಾತೆಯರು ಮತ್ತು ಯುವಕರು ಹೊರಬೇಕಾಗಿದೆ. ಜೇನು ಹೂವಿನ ಮಕರಂದ ತಂದು ಶುದಿಟಛೀಕರಿಸಿ ಜನರಿಗೆ ನೀಡಿದಂತೆ ಹಿಂದೂ ಸಂಘಟನೆಗಳು ಸಮಾಜ ಶುದಿಟಛೀಕರಿಸಿ ಜೇನುಣಿಸುವ ಕೆಲಸ ಮಾಡಬೇಕು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

SULLIA

Sat Dec 25 , 2010
Sullia:  ಹಿಂದೂ ಆದವನು ಎಂದೂ ಭಯೋತ್ಪಾದಕನಾಗಲು ಸಾಧ್ಯವಿಲ. ಹಿಂದೂ ಭಯೋತ್ಪಾದನೆ ಇದೆ ಎಂದು ಕೇಂದ್ರ ಸರಕಾರ ಪ್ರಚುರಪಡಿಸಿ ಹಿಂದು ಯುವಕರನ್ನೂ, ಸನ್ಯಾಸಿಗಳನ್ನೂ ಹಿಂಸಿಸುವುದು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಭಾರತ ದೇಶಕ್ಕೇ ಮಾಡಿದ ಅಪಮಾನ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿ ಹೇಳಿದ್ದಾರೆ. ಅವರು ವಿರಾಟ್ ಹಿಂದೂ ಸಮಾಜೋತ್ಸವ ಮತ್ತು ಶ್ರೀ ಹನುಮಾನ್ ಜಾಗರಣ ಸಮಿತಿಯ ಆಶ್ರಯದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ […]

You May Like