Ullal- Konaje

ullal hindu samajotsav
ullal hindu samajotsav

Ullal, Mangalore:  ಅಯೋಧ್ಯೆಯ ಶ್ರೀರಾಮಚಂದ್ರನ ಭೂಮಿಯಲ್ಲಿ ರಾಮ ಮಂದಿರವಲ್ಲದೆ ಬೇರಾವ ಮಸೀದಿಯನ್ನೂ ನಿರ್ಮಾಣ ಮಾಡಲು ಬಿಡುವುದಿಲ್ಲ. ಭಾರತ ದೇಶದ ಎಲ್ಲೂ ಕೂಡ ಬಾಬರನ ಹೆಸರಿನಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡುವುದಿಲ್ಲವೆಂದು ಹಿಂದುಗಳು ಶಪಥ ಮಾಡಬೇಕು ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ‍್ಯವಾಹ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಘೋಷಿಸಿದರು.

ಅವರು ಶ್ರೀ ಹನುಮದ್ ಶಕ್ತಿ ಜಗರಣಾ ಅಭಿಯಾನ ಸಮಿತಿ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟಿನ ಕಾಪಿಕಾಡು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಬೃಹತ್ ಹಿಂದು ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸರಕಾರ ಕಳೆದ ಕೆಲವು ವರ್ಷಗಳಿಂದ ಒಂದೊಂದೇ ಕಾನೂನುಗಳನ್ನು ಜರಿಗೆ ತರುತ್ತಿದ್ದು, ಈ ಕಾನೂನು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯವಾಗುತ್ತಿದ್ದು, ಇತರ ಧರ್ಮದವರು ಈ ಬಗ್ಗೆ ಕೊಂಚವೂ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ದೇಶದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರಾಗುತ್ತಿದ್ದು, ದೇಶದೆಲ್ಲೆಡೆ ಮಿನಿ ಪಾಕಿಸ್ತಾನ ನಿರ್ಮಾಣವಾಗುತ್ತಿದೆ. ಈ ಮೂಲಕವಾಗಿ ರಾಷ್ಟ್ರ ದ್ರೋಹದ ಹತ್ತು ಹಲವು ಕಾರ‍್ಯಗಳು ನಡೆಯುತ್ತಿವೆ. ಆದರೂ ಷಂಡ ನಾಯಕತ್ವದ ಕಾಂಗ್ರೆಸ್ ಸರಕಾರ ಮನವಾಗಿದೆ. ಜಗತ್ತಿನಲ್ಲಿ ಏಕೈಕ ಹಿಂದು ರಾಷ್ಟ್ರವಾಗಿರುವ ಭಾರತವನ್ನು ಪಾಕಿಸ್ತಾನ ಮಾಡದಂತೆ ಹಿಂದುಗಳು ಗಮನ ಹರಿಸಬೇಕಿದೆ. ೧೯೫೧ರಲ್ಲಿ ಶೇ. ೨ರಷ್ಟಿದ್ದ ಅಲ್ಪಸಂಖ್ಯಾತರು ಇಂದು ಶೇ.೨೦ ರ ಗಡಿ ದಾಟಿದ್ದಾರೆ. ಬಾಂಗ್ಲಾದಿಂದ ಕಳೆದ ಐದು ವರ್ಷದಿಂದ ನಾಲ್ಕು ಕೋಟಿ ಮುಸಲ್ಮಾನರು ಭಾರತಕ್ಕೆ ನಿರಾಶ್ರಿತರ ರೂಪದಲ್ಲಿ ನುಸುಳಿ ಬಂದಿದ್ದಾರೆ. ಹಿಂದೂಗಳೇ ಜೀವಿಸುತ್ತಿದ್ದ ಕಾಶ್ಮೀರದ ಕಣಿವೆಯಲ್ಲಿ ಈಗ ಹಿಂದೂಗಳೇ ಇಲ್ಲ. ಭಾರತದ ಹೆಮ್ಮೆಯ ಕಿರೀಟವಾಗಿರುವ ಕಾಶ್ಮೀರ ಕೈತಪ್ಪುವ ಪರಿಸ್ಥಿತಿ ಉಂಟಾಗಿದೆ. ಗ್ರೇಟರ್ ಬಾಂಗ್ಲಾದ ಹೆಸರಿನಲ್ಲಿ ತ್ರಿಪುರ, ಮಣಿಪುರ, ಅಸ್ಸಾಂ ಅನ್ನು ತನ್ನ ತೆಕ್ಕೆಗೆ ಸೆಳೆಯುವ ತಂತ್ರಗಾರಿಕೆ ಸದ್ದಿಲ್ಲದೆ ನಡೆಯುತ್ತಿದೆ. ಆದರೂ ಸೋನಿಯಾ ಗಾಂಧಿಗೆ ಭಾರತವನ್ನು ಅರ್ಥ ಮಾಡುವ ತಾಕತ್ತೇ ಇಲ್ಲವಾಗಿ, ಹಿಂದೂಗಳ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ. ಇದರ ವಿರುದಟಛಿ ಹಿಂದು ಸಮಾಜದ ಸಂಘಟಿತ ಹೋರಾಟ ಅನಿವಾರ್ಯ ಎಂದರು.

ಲವ್ ಜಿಹಾದ್ ಮೂಲಕ ಹಿಂದು ಯುವತಿಯರನ್ನು ಮೋಸ ಮಾಡುವ ಮತಾಂತರದ ಮೂಲಕ ಹಿಂದೂಗಳನ್ನೇ ವಿಘಟಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಹಿಂದೂ ಸಮಾಜ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಕೇಂದ್ರದ ಕಾಂಗ್ರೆಸ್ ಸರಕಾರ ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕ ಕಸಬ್‌ನ ಆರೈಕೆಗೆ ವಿವಿಐಪಿ ವ್ಯವಸ್ಥೆಯಲ್ಲಿ ೩೧ ಕೋಟಿ ಖರ್ಚು ಮಾಡುತ್ತಿದ್ದು, ಅಮಾಯಕ ಹಿಂದೂ ಉಗ್ರವಾದಿ ಎಂದು ಬಿಂಬಿಸಿರುವ ಪ್ರಜ ಸಿಂಗ್‌ಗೆ ದಿನ ಕ್ಷಣವೂ ಜೈಲಿನಲ್ಲಿ ಅನ್ಯಾಯ, ಅನಾಚಾರವನ್ನು ಮಾಡುವ ಹೇಯ ಕೃತ್ಯದಲ್ಲಿ ನಿರತವಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್, ಎಷ್ಟೇ ಓಲೈಕೆ ನಡೆಸುತ್ತಿದ್ದರೂ ಕೂಡ ವೋಟು, ಸೀಟು, ನೋಟಿಗಾಗಿ ಅಲ್ಪಸಂಖ್ಯಾತರನ್ನು ಕೂಡ ಮುರ್ಖರನ್ನಾಗಿಸುತ್ತಿದೆ. ಮುಸಲ್ಮಾನರ ಕೆಲವೊಂದು ರಾಷ್ಟ್ರದ್ರೋಹದ ಕೆಲಸದ ಜೊತೆಗೆ ಕ್ರಿಶ್ಚಿಯನ್ನರ ಮತಾಂತರ ಪಿಡುಗು ಹಿಂದೂ ಸಮಾಜವನ್ನು ಬಲಹೀನವನ್ನಾಗಿಸುವ ಪ್ರಯತ್ನ ನಡೆಸುತ್ತಿದೆ. ತಿರುಪತಿಯಲ್ಲಿನ ೩೭೫ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹಿಂದೂಗಳಿಗೆ ಹೊರತುಪಡಿಸಿ ಇನ್ನಾರಿಗೂ ಪ್ರವೇಶವಿರಲಿಲ್ಲ. ಆದರೆ ಸೋನಿಯಾ ಗಾಂಧಿ, ರಾಜಶೇಖರ ರೆಡ್ಡಿ ಕುತಂತ್ರಗಾರಿಕೆಯಿಂದ ಅಲ್ಲಿ ಈಗ ಒಂದು ಸಾವಿರ ಕ್ರಿಶ್ಚಿಯನ್ ಮನೆಗಳ ನಿರ್ಮಾಣವಾಗಿದೆ. ಭವ್ಯ ಹಿಂದೂ ದೇವಾಲಯದೊಳಗಡೆ ಕ್ರಿಶ್ಚಿಯನ್ ಪಿಡುಗು ತಲೆ ಎತ್ತಿದ್ದು, ಪವಿತ್ರವಾದ ಲಡ್ಡು ಕೂಡ ಕ್ರಿಶ್ಚಿಯನ್ ಓರ್ವನ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿರುವುದು ದುರಂತ ಎಂದರು.

ಹಿಂದೂ ಧರ್ಮಕ್ಕೆ ಅನ್ಯ ಧರ್ಮಗಳ ತೊಂದರೆಗಳಿಗಿಂತ ಹೆಚ್ಚಾಗಿ ಸಮಾಜದೊಳಗಿನ ಭಿನ್ನತೆ ಸರಿಯಾಗಲು ನಮ್ಮ ಲೋಪದೋಷಗಳನ್ನು ನಿವಾರಣೆಯನ್ನಾಗಿಸಲು ಕೂಡ ನಮ್ಮ ಪ್ರಯತ್ನ ನಡೆಯಬೇಕಿದೆ. ಹೀಗಾಗಿ ಸಮಾಜವನ್ನೇ ತುಂಡು ಮಾಡುತ್ತಿರುವ ದೇವಸ್ಥಾನಗಳಿಗೆ ಜತಿ, ಬಣ್ಣ, ನಿರ್ಬಂಧ ತೊಡೆದು ಹಾಕಿ ಅಸ್ಪೃಶ್ಯತೆಯ ಮೂಲೋತ್ಪಾಟನೆ ನಡೆಸಬೇಕಾಗಿದೆ ಎಂದರು.

ಸಮಾಜೋತ್ಸವದಲ್ಲಿ ಆಶೀರ್ವಚನ ನೀಡಿದ ಕೊಲ್ಯ ಮಠದ ಶ್ರೀ ರಮಾನಂದ ಸ್ವಾಮೀಜಿ, ಸಿಂಹಗಳ ಹಿಂಡಿನಲ್ಲಿ ಕುರಿಯೊಂದು ಸಿಕ್ಕ ದುಸ್ಥಿತಿಯಲ್ಲಿ ಹಿಂದೂ ಸಮಾಜವಿದೆ. ಹೀಗಾಗಿ ಸಮಗ್ರ ಹಿಂದು ಸಮಾಜವನ್ನು ರಕ್ಷಿಸುವ ಮಹಾನ್ ಕಾರ‍್ಯದಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಹಿಂದೂ ಸಂಘಟನೆಗಳು ನಿರಂತರ ಕಾರ‍್ಯ ನಡೆಯುತ್ತಿದೆ. ಹೀಗಾಗಿ ಮನೆ ಮನೆಗಳಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಪುಸ್ತಕಗಳನ್ನು ಕಾಪಿಡುವ ಪ್ರಯತ್ನ ನಡೆಯಬೇಕು ಎಂದರು.

ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ, ಕುಂಪಲದ ಬಾಲಯೋಗಿ ಅಮೃತಾನಂದ ಸ್ವಾಮೀಜಿ, ಹನುಮದ್ ಶಕ್ತಿ ಜಗರಣಾ ಅಭಿಯಾನ ಸಮಿತಿಯ ಜಿಲ್ಲಾಧ್ಯಕ್ಷ ರವಿಶಂಕರ ಮಿಜರ್, ಉಳ್ಳಾಲ ಪ್ರಖಂಡದ ಅಧ್ಯಕ್ಷ ಸತ್ಯಶಂಕರ ಬೊಳ್ಳಾವ ಇದ್ದರು.

ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಪ್ರಸ್ತಾವನೆಗೈದರು. ನಾರಯಣ ಕುಂಪಲ ಬಿ.ಎನ್ ಸ್ವಾಗತಿಸಿ, ರಾಮಮೋಹನ್ ಅಂಬ್ಲಮೊಗರು ಧನ್ಯವಾದವಿತ್ತರು. ವಾಮನ್‌ರಾಜ್ ಕಾರ್ಯಕ್ರಮ ನಿರ್ವಹಿಸಿದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

UDUPI

Sat Dec 25 , 2010
ಉಡುಪಿ : ಸಮಾನತೆ ಹೆಸರಲ್ಲಿ ರಕ್ತ ಹರಿಸುತ್ತಿರುವ ನಕ್ಸಲಿಸಂ ಸತ್ತ ಹಲ್ಲಿಯ ಬಾಲದಂತೆ ಚಡಪಡಿಸುತ್ತಿದೆ. ಬಾಬರ್ ಸಂತಾನದ ರಕ್ತ ಬೀಜಾಸುರರು ಇನ್ನೂ ದೇಶದಲ್ಲಿದ್ದಾರೆ. ಇವರೊಂದಿಗೆ ಢೋಂಗಿ ಜಾತಿವಾದಿಗಳು, ಕೋಮುವಾದಿಗಳು ಕೈ ಜೋಡಿಸಿದ್ದಾರೆ. ಇದಕ್ಕೆಲ್ಲಾ ವೋಟ್ ಬ್ಯಾಂಕ್ ರಾಜ-ಕಾರಣ ಕುಮ್ಮಕ್ಕು ನೀಡುತ್ತಿದೆ… ರಾಮ ಮಂದಿರಕ್ಕಾಗಿ ಇಟ್ಟಿಗೆ ಮತ್ತು ಸೇರಿಸಿದ ದುಡ್ಡು ಏನಾಯಿತು ಅಂತ ಕೆಲವರು ಪ್ರಶ್ನಿಸುತ್ತಿದ್ದಾರೆ. ೮.೩೦ ಕೋಟಿ ರೂ. ಭದ್ರವಾಗಿದೆ. ಅದನ್ನು ರಾಮ ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತದೆ. ಭಾನುವಾರ ಉಡುಪಿ […]

You May Like