Mangalore

ಮೊಳಗಿತು ಪ್ರತಿಭಟನೆಯ ಕಹಳೆ:

ಮೃತ್ಯುಂಜಯ ಭಾರತದಲ್ಲಿ  ಧರ್ಮಕ್ಕೆ  ಅಪಜಯವಿಲ್ಲ.

ಪ್ರತಿಭಟನಾ ಧರಣಿ ೧೦.೧೧.೨೦೧೦, ಬುಧವಾರ
ಉಪಸ್ಥಿತ ಗಣ್ಯರು    :    ಡಾ| ಪ್ರಭಾಕರ ಭಟ್ ಕಲ್ಲಡ್ಕ, ಪ್ರಾಂತ ಕಾರ್ಯವಾಹ, ಕರ್ನಾಟಕ ದಕ್ಷಿಣ
:    ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸಾಹಿತಿಗಳು
:    ಡಾ| ವಾಮನ್ ಶೆಣೈ, ಮಾನ್ಯ ಸಹಸಂಘಚಾಲಕರು, ಮಂಗಳೂರು ವಿಭಾಗ
ಉಪಸ್ಥಿತ ಶ್ರೀಗಳು    :    ಕೊಲ್ಯ ಶ್ರೀ ರಮಾನಂದ ಸ್ವಾಮಿಗಳು
:    ಮಾಣಿಲ ಮಠದ ಶ್ರೀ ಮೋಹನದಾಸ ಸ್ವಾಮೀಜೀ
:    ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜೀ
:    ವೇದಬ್ರಹ್ಮ ಶ್ರೀ ಕೆ.ಎಸ್. ನಿತ್ಯಾನಂದರು, ಚಿಕ್ಕಮಂಗಳೂರು

ಮಂಗಳೂರು : ಸನಾತನ ಸಂಸ್ಕೃತಿಯ ಶ್ರೇಷ್ಠ ನಾಡಾದ ಭಾರತದಲ್ಲಿ ಧರ್ಮಕ್ಕೆ ಅಪಜಯವಾದ ಉದಾಹರಣೆಗಳೇ ಇಲ್ಲ. ಇಲ್ಲಿ ಧರ್ಮದ ಮೇಲೆ ಅದೇಷ್ಟೊ ಸಂಕಟಗಳು ಬಂದಿರಬಹುದು. ಆದರೆ ಪುರಾಣ ಕಾಲದಿಂದಲೂ ಧರ್ಮಕ್ಕೆ, ಸತ್ಯಕ್ಕೆ ಜಯ ದೊರೆತ ನಿದರ್ಶನಗಳು ನಮ್ಮಲ್ಲಿವೆ. ಹೀಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ  ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಾಡುತ್ತಿರುವ ಸಂಚು ಸಂಪೂರ್ಣ ವಿಫಲವಾಗಲಿದೆ ಎಂದು ವಿಶ್ವಾಸದ ನುಡಿಗಳನ್ನು ಆಡಿದವರು ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯವಾಹ ಡಾ.ಕಲ್ಲಡ್ಕ ಪ್ರಭಾಕರ್ ಭಟ್.

ನಗರದ ಕೇಂದ್ರ ಮೈದಾನದಲ್ಲಿ  ಬುಧವಾರ ಕೇಂದ್ರ ಸರಕಾರದ ಹಿಂದು ವಿರೋಧಿ ನೀತಿ ಖಂಡಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಪ್ರಾಂತ ಆಯೋಜಿಸಿದ್ದ  ಪ್ರತಿಭಟನಾ ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಅವರು, ತುಷ್ಟೀಕರಣ ರಾಜಕೀಯಕ್ಕಾಗಿ ಕಾಂಗ್ರೆಸ್ ರಾಷ್ಟ್ರನಿಷ್ಠ  ಸಂಘಟನೆ ಆರ್‌ಎಸ್‌ಎಸ್ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದೆ. ದೇಶಕ್ಕಾಗಿ ಸಮರ್ಪಣಾ ಭಾವದಿಂದ ದುಡಿಯುವ ಲಕ್ಷಾಂತರ ಜನರನ್ನು ಹೊಂದಿರುವ ಸಂಘದ ಮೇಲೆ ಭಯೋತ್ಪಾದನೆಯ ಆರೋಪ ಹೋರಿಸುವುದು, ಈ ನಾಡಿನ ಸಂಸ್ಕೃತಿ, ಸಭ್ಯತೆಗಳನ್ನು ಅವಮಾನಿಸಿದಂತೆ. ಸಂಘವನ್ನು ಹತ್ತಿಕ್ಕಲು ಕಾಂಗ್ರೆಸ್ ಸದಾ ಯತ್ನಿಸುತ್ತಲೇ ಬಂದಿದೆ. ಆದರೆ ಈವರೆಗೂ ಅದಕ್ಕೆ ಅದರಲ್ಲಿ ಯಶಸ್ಸು ದೊರೆತಿಲ್ಲ, ದೊರೆಯುವುದೂ ಇಲ್ಲ ಎಂದರು.

ಕಾಂಗ್ರೆಸ್ ಮೊದಲಿನಿಂದಲೂ ರಾಷ್ಟ್ರದ್ರೋಹಿ ಭಾವನೆಗಳನ್ನು ಬೆಂಬಲಿಸುತ್ತಾ ಬಂದಿದೆ ಎಂದು ಇತಿಹಾಸದ ಘಟನಾವಳಿಗಳ ಮೂಲಕ ಉದಾಹರಿಸಿದ ಅವರು, ಖಿಲಾಫತ್ ಚಳುವಳಿ, ದೇಶವಿಭಜನೆ, ವಂದೇಮಾತರಂನ ವಿಭಜನೆಗಳಿಂದ ಮೊದಲುಗೊಂಡು ಈಗ ಕಾಶ್ಮೀರಕ್ಕೆ ಸ್ವಾಯತತ್ತೆ ನೀಡುವ ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಆಧಾರಗಳಿಲ್ಲದೆ, ಮುಸ್ಲಿಂ  ಮತಬ್ಯಾಂಕ್‌ನ್ನು ಒಲೈಸುವ ಏಕೈಕ ಉದ್ದೇಶದಿಂದಲೇ ಕಾಂಗ್ರೆಸ್ ಆರ್‌ಎಸ್‌ಎಸ್ ಮೇಲೆ ವಿನಾಕಾರಣ ಆರೋಪಗಳನ್ನು ಹೊರಿಸುತ್ತಿದೆ. ಆದರೆ ಸತ್ಯ ಏನೆಂಬುದು ಎಲ್ಲರಿಗೂ ಗೊತ್ತಿದೆ. ಅದಾಗ್ಯೂ ದೇಶವನ್ನು ಆಳುವ ಪಕ್ಷ ರಾಷ್ಟ್ರಕ್ಕಾಗಿ ಅಹರ್ನಿಶಿ ಕಾರ್ಯಮಾಡುವ ಸಂಘಟನೆಗಳ ಮೇಲೆ ಆರೋಪ ಹೋರಿಸುವುದರ ಮೂಲಕ ತಪ್ಪು ಸಂದೇಶಗಳನ್ನು ರವಾನಿಸುತ್ತಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಹಗರಣಗಳ ಆರೋಪಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಂಘವನ್ನು ದಾಳವನ್ನಾಗಿ ಉಪಯೋಗಿಸುತ್ತಿದೆ. ಇಂತಹ ನೀತಿಯನ್ನು ಒಕ್ಕೊರಲಿನಿಂದ ಖಂಡಿಸಿ, ಹಿಂದುಶಕ್ತಿಯನ್ನು ಪರಿಚಯಿಸಿ ಕೊಡಬೇಕು ಎಂದು ಕರೆ ನೀಡಿದರು.

ಇದೆಂತ ಸ್ಥಿತಿ ? ದೇಶ ಇಂದು ಎಲ್ಲ ರಂಗಗಳಲ್ಲೂ  ವಿಷಮ ಪರಿಸ್ಥಿತಿ ಎದುರಿಸುತ್ತಿದೆ. ನಮ್ಮದೇ ದೇಶದಲ್ಲಿ ವಂದೇಮಾತರಂ ಹೇಳುವ ಹಾಗಿಲ್ಲ. ಭಾರತಮಾತೆಗೆ ಜೈಕಾರ ಹಾಕಯವ ಹಾಗಿಲ್ಲ. ನಮ್ಮದೆ ಕಾಶ್ಮೀರ ಪಾಕಿಸ್ಥಾನದ ಪಾಲಾಗುತ್ತಿದೆ. ದೇಶಾದ್ಯಂತ ಮಿನಿ ಪಾಕಿಸ್ಥಾನಗಳು ನಿರ್ಮಾಣಗೊಂಡಿವೆ. ಈಶಾನ್ಯ ರಾಜ್ಯಗಳು ಬಾಂಗ್ಲಾ ಅತಿಕ್ರಮಣಕೋರರ ಕೈಗೆ ಸಿಲುಕಿವೆ. ಇಷ್ಟೆಲ್ಲ  ಸಾಮಾಜಿಕ ವಿಷಮತೆ ಉಂಟಾದರೂ ಸರಕಾರ ಮಾತ್ರ ಮುಸ್ಲಿಂರನ್ನು ಒಲೈಸುವಲ್ಲಿ ತೊಡಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ.ಕಲ್ಲಡ್ಕ್ ಹೇಳಿದ ಮುಖ್ಯಾಂಶಗಳು

* ದೇಶದ ಸಂಸ್ಕೃತಿ, ಇತಿಹಾಸ, ಜೀವನಮೌಲ್ಯ ಯಾವುದೂ ಗೊತ್ತಿಲ್ಲದ ಸೂಪರ್ ಪಿಎಂ ಇಂದು ದೇಶವನ್ನಾಳುತ್ತಿದ್ದಾರೆ.

* ಒಂದೇ ದೇಶದಲ್ಲಿ ಹಿಂದುಗಳಿಗೊಂದು, ಮುಸಲ್ಮಾನರಿಗೊಂದು ನೀತಿ ಏಕೆ?

* ದೇಶಾದ್ಯಂತ ತಲೆ ಎತ್ತುತ್ತಿರುವ ಮಿನಿ ಪಾಕಿಸ್ಥಾನಗಳು ಭದ್ರತೆಗೆ ಮಾರಕ.

* ಭಯೋತ್ಪಾದಕರನ್ನು ಪೋಷಿಸುತ್ತಾ, ರಾಷ್ಟ್ರಭಕ್ತರನ್ನು ಹಿಂಸಿಸುತ್ತಿರುವ ಸರಕಾರ ದೇಶವನ್ನು ಮತ್ತೆ ದಾಸ್ಯದತ್ತ ನೂಕುತ್ತಿದೆ.

* ಸಂಘ ಈ ಎಲ್ಲ ಷಡ್ಯಂತ್ರಗಳನ್ನು ಯಶಸ್ವಿಯಾಗಿ ಹಿಮ್ಮೆಟಿಸಲಿದೆ.

ಮಾತುಗಳು :
ಕೊಲ್ಯ ಶ್ರೀಗಳು :    ಈ ಧರಣಿ ಸರಕಾರಕ್ಕೆ ಎಚ್ಚರಿಕೆಯ ಕರೆಘಂಟೆಯಾಗಿ ಮೊಳಗಬೇಕಾಗಿದೆ. ಭಾರತದೇಶ ಶಿರ ಕಾಶ್ಮೀರ ಅದಕ್ಕೆ ಇಂದು ಕುತ್ತು ಬಂದಿದೆ. ಅದನ್ನು ಸಂಘದಿಂದ ಮಾತ್ರ ಸರಿಮಾಡಲು ಸಾಧ್ಯ. ಭಾರತಮಾತೆಯನ್ನು ಮತ್ತೆ ರಾರಾಜಿಸುವಂತೆ ಮಾಡುವುದು ಸಂಘದಿಂದ ಸಾಧ್ಯ. ಇಂದು ಹಿಂದುಗಳ ಸ್ಥಿತಿ ಕುರಿಗಳ ಹಿಂಡಿನಲ್ಲಿ ಸಿಕ್ಕಿಕೊಂಡಿರುವ ಸಿಂಹದಂತೆ ಆಗಿದೆ. ಈ ಸ್ಥಿತಿಯಿಂದ ಸಮಾಜ ಹೊರಗೆ ಬರಬೇಕಾಗಿದೆ.
ಏರ್ಯ ಶ್ರೀ ಲಕ್ಷ್ಮೀನಾರಾಯಣ ಆಳ್ವ : ನಾವು ಸೇರಿರುವ ಮುಖ್ಯ ಕಾರಣ ಸಂಘಕ್ಕೆ ನಿರ್ಬಂಧ ಹಾಕಬಹುದು ಎನ್ನುವ ಸಣ್ಣ ಮಾತಿನಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಿಂದೂ ಸಂಘಟನೆಯ ದರ್ಶನ ದೇಶಕ್ಕೆ ನೋಡುವಂತಾಗಿದೆ. ಜಗತ್ತಿಗೇ ಮಾದರಿಯಾದ ಭಾರತದ ಸಂಸ್ಕೃತಿಯಲ್ಲಿ ಎತ್ತಿ ಹಿಡಿಯುವ ಸಂಘಕ್ಕೆ ಈ ರೀತಿಯಾಗಿರುವುದು ಅತ್ಯಂತ ವಿಶಾದನೀಯ. ಈ ಸಂಘ ಅನ್ಯಧರ್ಮಿಯರ ವಿರೋಧ ಎಂದು ಹೇಳುವುದು ಅತ್ಯಂತ ಮೂರ್ಖತನ. ಸಂಘ ಂದೂ ಈ ರೀತಿಯ ಕೆಲಸ ಮಾಡಲಿಲ್ಲ. ಈ ಹಿಂದೆ ಇಂದಿರಾಗಾಂಧೀ ಇದೇ ರೀತಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಯಾವುದೇ ಶಕ್ತಿಯಿಂದ ಈ ಸಂಘವನ್ನು ಸದೆ ಬಡಿಯಲು ಸಾಧ್ಯವಿಲ್ಲ. ಈ ಸಾಹಸಕ್ಕೆ ಯಾರೂ ಹೊಗಬೇಡಿ ಎನ್ನುವ ಮಾತನ್ನು ನಾನು ಹೇಳ ಬಯಸುತ್ತೇನೆ. ಲೋಕಸಭೆಗೆ ಅಪಾಯವನ್ನುಂಟುಮಾಡಿದವರನ್ನು ಈ ಸರಕಾರವು ಎಚ್ಚತ್ತು ಕೊಳ್ಳುವುದು ಅವಶ್ಯಕ.
ಮೋಹನದಾಸ ಸ್ವಾಮೀಜಿ, ಮಾಣಿಲ : ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸಲು ಹೋರಾಟ, ಶ್ರಮಿಸುತ್ತಿರುವ ಸಂಘ ಮತ್ತು ಸಮಾಜದಲ್ಲಿ ಸದ್ಭಾವನೆಯನ್ನು ತರುವಲ್ಲಿ ಸಂಘ ಪರಿಶ್ರಮ ಸಾಕಷ್ಟಿದೆ. ಬೇರೆ ದೇಶದ ಸಂಸ್ಕೃತಿಯನ್ನು ಈ ದೇಶದಲ್ಲಿ ಬಿತ್ತಲು ನಾವು ಬಡುವುದಿಲ್ಲ, ಎಲ್ಲ ಸಂತರು ಜೀವ ತೆತ್ತಾದರೂ ಇದನ್ನು ಖಂಡಿತವಾಗಿಯೂ ನಾವು ತಡೆಯುತ್ತೇವೆ. ನಾವೆಲ್ಲ ಒಟ್ಟಾಗಿ ಇದಕ್ಕೆ ಬೆಂಬಲ ತೋರಿ ರಾಮಜನ್ಮಭೂಮಿಯಲ್ಲೆ ರಾಮಮಂದಿರವನ್ನು ನಾವೆಲ್ಲರೂ ಒಟ್ಟಾಗಿ ನಿರ್ಮಾಣ ಮಾಡೋಣ.
ಡಾ| ವಾಮನ್ ಶೆಣೈ : ಕಲಿಯುಗದಲ್ಲಿ ದುಷ್ಟ ಶಕ್ತಿಗಳ ಮೇಲ್ಮೆ  ನೋಡಲು ಸಿಕ್ಕುತ್ತದೆ. ಇದೊಂದು ಷಡ್ಯಂತ್ರ ಇಂದು ಸಾಗಿದೆ. ದೇಶದಲ್ಲಿ ಈ ಹಿಂದೆ ಸಂಘದ ಶಕ್ತಿಹಿಂದುಗಳು ಒಟ್ಟಾದಾಗ ಅಘಾದವಾದಂತಹ ಫಲಿತಾಂಶ ಬಂದಿರುವುದು ನಮ್ಮ ಗಮನದಲ್ಲಿ ಇದೆ. ಇದಕ್ಕೆಲ್ಲ ಮೂಲ ಪ್ರೇರಣೆ ನೀಡಿದ ಸಂಘವೇ ಈ ರೀತಿ ವಿರೋಧಿಸುವ ಹುನ್ನಾರವನ್ನು ಇಂದಿನ ಸರಕಾರ ಮಾಡುತ್ತಿರುವುದು. ಅತ್ಯಂತ ವಿಷಾಧನೀಯ ಅಂಶ. ಅನೇಕ ಭಯೋತ್ಪಾದಕರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಕಾಶ್ಮೀರ ಸಮಸ್ಯೆ ಬಗೆಹರಿಯಲಿಲ್ಲ. ಈ ವಿಷಯಗಳ ಬಗ್ಗೆ ಗಮನಹರಿಸುವುದು ಅತೀ ಮುಖ್ಯವಾದ ಕೆಲಸವಾಗಿದೆ. ಅದನ್ನು ಮಾಡುವುದ ಬಿಟ್ಟು ಈ ರೀತಿಯ ಷಡ್ಯಂತ್ರ ಇಂದಿನ ಸರಕಾರ ಮಾಡುತ್ತಿರುವುದು. ಅತ್ಯಂತ ವಿಷಾದನೀಯ. ಸರಕಾರ ಇಂದು `ಜೇನು ಗೂಡಿಗೆ ಕೈ ಹಾಕಿದೆ’ ಹಾಗಾಗಿ ಈ ಜೇನು ಇದನ್ನು ಸುಮ್ಮನೆ ಸಹಿಸುವುದಿಲ್ಲ. ಸಜ್ಜನ ಶಕ್ತಿ ಇಂದು ಒಟ್ಟಾಗಿದೆ. ದೇಶವ್ಯಾಪಿ ಈ  `ಪ್ರತಿಭಟನೆ’ ನಡೆಯುತ್ತಿದೆ.
ಶ್ರೀ ನಿತ್ಯಾನಂದ ಸ್ವಾಮೀಜಿ : ದೇಶ ಪ್ರತಿಯೊಬ್ಬನ ಹುಟ್ಟಿಗೆ ಕಾರಣವಾಗುತ್ತದೆ. ಜಗತ್ತಿನಾದ್ಯಂತ ನಾನು ಕಾಲುನಡಿಗೆಯಲ್ಲಿ ಸುತ್ತಿದ್ದೇನೆ ನಾನು ಕಂಡುಕೊಂಡ ಸತ್ಯವೆಂದರೆ ದೇವರ ಆಶೀರ್ವಾದ ಇದ್ದ ವ್ಯಕ್ತಿ ಭಾರತದಲ್ಲೇ ಜನನ ಖಂಡಿತ. ಈ ರಾಷ್ಟ್ರವನ್ನು ರಕ್ಷಣೆ ಮಾಡುತ್ತಿರುವ ಈ ಸಂಘವನ್ನು ದಮನಿಸಲು ಹೋದರೆ ಅವರೇ ದಮನವಾಗುವುದು ಖಂಡಿತ.
ರಾಜಶೇಖರಾನಂದ ಸ್ವಾಮೀಜೀ : ಸಿಮಿಗೂ ಆರ್‌ಎಸ್‌ಎಸ್ ಗೂ ನಂಟಿದೆ ಎಂದು ಉಲ್ಲೇಖಸಿದ್ದು ದೊಡ್ಡ ಷಡ್ಯಂತ್ರ ಇದಾಗಿದೆ. ಹೊಸ ಮಹಾಭಾರತವನ್ನು ಹತ್ತಿಕ್ಕಲು ನಾವೆಲ್ಲ ಒಟ್ಟಾಗಿ ಮುಂದೆ ಬರಬೇಕಾಗಿದೆ.
ಡಾ| ಪ್ರಭಾಕರ ಭಟ್ ಕಲ್ಲಡ್ಕ : ಕಳೆದ ೭೦-೮೦ ವರ್ಷಗಳಿಂದ ಯಾವ ಮಂತ್ರಗಳು ಸ್ವಾತಂತ್ರ್ಯ ಪಡೆಯಲು ಶಕ್ತಿ ಕೊಟ್ಟಿತೋ ಆ ಮಂತ್ರಗಳನ್ನು ಈ ದೇಶದಲ್ಲಿ ಹೇಳಲು ತಡೆಯುಂಟಾಗುತ್ತಿದೆ. ಈ ದೇಶದಲ್ಲಿ ಧರ್ಮಕ್ಕೆ ಸಾವಿಲ್ಲ. ಯಾವಾಗ ಈ ದುಷ್ಟಶಕ್ತಿಗಳು ಎದ್ದುನಿಂತಾಗ ಭಗವಂತನ ಅವತಾರವೇ ಧರೆಗಿಳಿದಿದೆ. ಅನೇಕರು ಆಕ್ರಮಣ ಮಾಡಿದಾಗಲೂ ಒಂದು ಇಂಚು ಸ್ಥಳ ನಾವು ಬಿಟ್ಟು ಕೊಡಲಿಲ್ಲ.  ಆದರೇ ಇಂದು ಕಾಂಗ್ರೇಸ್ ಸರಕಾರ ದೇಶದ ಅನೇಕ ಭಾಗಗಳನ್ನು ತಮ್ಮ ಆಸ್ತಿ ಎನ್ನುವಂತೆ ಬಿಟ್ಟುಕೊಟ್ಟಿತು. ಎಲ್ಲಾ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಕಡೆ ಗೊಂದಲಗಳಾಗಿರುವುದು ನಮ್ಮ ಗಮನದಲ್ಲಿದೆ. ಕಾಶ್ಮೀರ ನಮ್ಮ ಕೈಯಿಂದಿ (ದೇಶದಿಂದ) ಹೋದಂತಾಗಿದೆ.
ಇಟಲಿಯ ಹೆಣ್ಣುಮಗಳು ನಮ್ಮ ದೇಶವನ್ನು ಆಳುತ್ತಿದ್ದಾಳೆ. ಈ ದೇಶದ ಸಂಸ್ಕೃತಿ ನಾಡಿ ಮಿಡಿತ ಅವಳಿಗೇನು ಗೊತ್ತು ?
ಕಸಬ್ ಮತ್ತು ಅಫ್ಜಲ್ ನನ್ನು ಅನೇಕ ಕೋಟಿ ರೂ. ವ್ಯಯ ಮಾಡಿ ಅವರನ್ನು ಸಾಕುತ್ತಿರುವುದು ನೋಡಿದರೆ ತುಷ್ಟಕರಣ ನೀತಿ ಅರ್ಥವಾಗುತ್ತದೆ. ಈ ನಾಡಿನಲ್ಲಿರುವ ಕ್ರಿಶ್ಚಿಯನ್, ಮುಸಲ್ಮಾನರು ಮೂಲತಃ ಹಿಂದುಗಳೇ ಆದಂತವರು. ಹಿಂದು ಭಯೋತ್ಪಾದನೆ ಎಂಬ ಹೊಸ ಶಬ್ಧವನ್ನು ಸೃಷ್ಟಿಮಾಡಿ ದೇಶದ ಜನತೆಗೆ ಹೊಸ ವಿಕೃತವಾದ ವಿಚಾರವನ್ನು ದೇಶಕ್ಕೆ ನೀಡಿದ್ದಾರೆ. ಭಯೋತ್ಪದಕನಾದರೆ ಅವನು ಖಂಡಿತವಾಗಿಯೂ ಹಿಂದು ಆಗಿರುವುದಿಲ್ಲ, ಇದೆಲ್ಲವನ್ನು ಗಮನಿಸಿ ಇಂದಿನ ಕಾಂಗ್ರೆಸ್ ಸರಕಾರ ಕುತಂತ್ರ ಮಾಡುತ್ತಿದೆ. ರಾಮನ ಜನ್ಮಸ್ಥಾನ ನಮಗೆ ಪವಿತ್ರ. ಬಾಬರನಿಗೆ ಪವಿತ್ರವಲ್ಲ. ರಾಮಜನ್ಮಭೂಮಿ ತುಂಡಾಗಲು ಈ ದೇಶದ ಜನರು ಜಾಗೃತ ಹಿಂದುಗಳು ಬಿಡುವುದಿಲ್ಲ. ರಾಷ್ಟ್ರದ್ರೋಹಿಗಳು, ಭಯೋತ್ಪಾದಕರಿಗೆ, ಕಾಂಗ್ರೇಸ್ ಸರಕಾರಕ್ಕೆ ಂದು ಆರ್‌ಎಸ್‌ಎಸ್ ಎಂದರೆ ಭಯ, ಬದ್ಧವೈರಿ.
ನೆಹರೂ, ಇಂದಿರಾ, ಈಗ ೧೯೯೨ ನಂತರ ಈಗ ಅವರ ಸೊಸೆ. ಅದೇ ರೀತಿಯ ಅನುಕರಣೆ ಮುಂದುವರೆಸಿದ್ದಾಳೆ.
ಇದಕ್ಕೆಲ್ಲ ನಾವು ಹಿಂದುಗಳು ಒಟ್ಟಾಗಿ ಮೇಲೆದ್ದು ಈ ನಾಡಿನ ಸಂಸ್ಕೃತಿಧರ್ಮಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವು ಮಾಡಬೇಕು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Mandya district

Wed Nov 10 , 2010
Allegation on RSS is an international conspiracy The attacks on different Hindu identity points should not be considered as separate incidents, but these are the results of well thought out strategy. There it seems definite indications of high handedness in this case. As India is coming up fast at different […]

You May Like