Shivamogga District

ಶಿವಮೊಗ್ಗದಲ್ಲಿ ನಡೆದ ಆರ್‌ಎಸ್‌ಎಸ್ ನ ಬೃಹತ್ ಪ್ರತಿಭಟನಾ ಧರಣಿ ಕಾರ್ಯಕ್ರಮದ ವರದಿ

ವಿದ್ವಿಷೋಪಿಅನುನಯ ಎಂಬ ಭರ್ತೃಹರಿಯ ಹೇಳಿಕೆಯಂತೆ ವಿರೋಧಿಗಳನ್ನು ಸಹ ನಮ್ಮ ಸ್ನೇಹಿತರನ್ನಾಗಿ ಪರಿವರ್ತಿಸಿಕೊಳ್ಳುವುದು ಸಂಘದ ರೂಢಿ. ಇದಕ್ಕೆ ೧೯೬೧ ರಲ್ಲಿ  ಸಂಘವನ್ನು ಗಣರಾಜ್ಯೋತ್ಸವ ಪೆರೆಡ್‌ಗೋಸ್ಕರ ದೆಹಲಿಗೆ ಆಹ್ವಾನಿಸಿದ್ದ ಸಂಘದ ಕಡು ವಿರೋಧಿ ನೆಹರೂರವರೆ ಸಾಕ್ಷಿ. ಆದರೆ ಯಾರು ಎಲ್ಲೆಲ್ಲಿ ಸಂಘವನ್ನು ಯಾವ್ಯಾವಾಗ ತುಳಿಯಲು ಯತ್ನಿಸದರೋ ಆಗೆಲ್ಲಾ ಅದು ತನ್ನ ಬೃಹದಾಕಾರದ ಬೆಳವಣಿಗೆಯಲ್ಲಿ ಮುಂದುವರೆದಿದೆ. ನೆಹರು ಸಂಘವನ್ನು ಅಮುಕಿ ಹಾಕಿ ಬಿಡುತ್ತೇನೆ ಎಂದರು, ಸಾಧ್ಯವಾಗಲಿಲ್ಲ. ನೆಹರು ಮಗಳಾದರೋ, ೧೯೭೫ ರಲ್ಲಿ ತುರ್ತು ಪರಿಸ್ಥಿತಿಯನ್ನೇ ದೇಶದಾದ್ಯಂತ ನಿರ್ಮಿಸಿ ಬಿಟ್ಟು ಲಕ್ಷಾಂತರ ಸ್ವಯಂಸೇವಕರನ್ನು ಜೈಲಿಗೆ ಕಳುಹಿಸಿದರು. ಪರಿಣಾಮ? ಸಂಘವು ಮತ್ತಷ್ಟು ಬಲಿಷ್ಠವಾಯಿತು. ೧೯೯೨ ರಲ್ಲಿ  ಬಾಬರಿ ರಚನೆಯು ಧ್ವಂಸಗೊಂಡಾಗ ಸಂಘದ ಮೇಲೆ ಬಿದ್ದ ನಿಷೇಧವಂತೂ ಸುದ್ದಿಯೇ ಆಗಲಿಲ್ಲ. ಆದರಿಂದು ಅಪ್ಪ ಮತ್ತು ಮಗಳಿಗಾಗದ ಕೆಲಸವನ್ನು ಸೊಸೆ ಮತ್ತು ಮೊಮ್ಮಗ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಹೇಳುವ ದಾರ್ಷ್ಟ್ಯವನ್ನು ತೋರುತ್ತಿದ್ದಾರೆ. ಈ ಹೇಳಿಕೆಯನ್ನು ವಿರೋಧಿಸಿ ಇಂದು ಇದೇ ಸಮಯದಲ್ಲಿ ನಮ್ಮ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೋಟ್ಯಂತರ ಮಂದಿ ಸ್ವಯಂಸೇವಕರು ಧರಣಿ ನಡೆಸಿದ್ದಾರೆ. ಅಷ್ಟೇ ಅಲ್ಲ. ಇಂದಿನ ಪಾರ್ಲಿಮೆಂಟಿನ ಸೆಷನ್ ಸಹ ಬರಕಾಸ್ತುಗೊಂಡಿದೆ. ಈಗ ತಾಕ್ಕತ್ತಿದ್ದರೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡು ಕಾಂಗ್ರೆಸ್ ಮಂದಿಯು ಒಂದೇ ಒಂದು ಧರಣಿ ನಡೆಸಿ ಅದರಲ್ಲಿ ಕಡೆಯ ಪಕ್ಷ ೨೫ ಮಂದಿ ಸೇರಿಸಲಿ ನೋಡೋಣ. ಹೀಗೆಂದವರು ಆರ್‌ಎಸ್‌ಎಸ್ ನ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ‍್ಯವಾಹರಾದ ಶ್ರೀಯುತ ಕಜಂಪಾಡಿ  ಸುಬ್ರಹ್ಮಣ್ಯಭಟ್ ರವರು. ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದ ಆವರಣದಲ್ಲಿ ೧೦.೧೧.೨೦೧೦ ರ ಬುಧವಾರದಂದು ಆರ್‌ಎಸ್‌ಎಸ್ ಶಿವಮೊಗ್ಗ ನಡೆಸಿದ ಬೃಹತ್ ಪ್ರತಿಭಟನಾ ಧರಣಿ ಸಭೆ ಯನ್ನುದ್ದೇಶಿಸಿ ಭಟ್ ಮಾತನಾಡಿದರು.

ಸಭೆಯು ಶ್ರೀಯುತ ಬಿಳಕಿ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಶಿವಮೊಗ್ಗ ವಿಭಾಗದ ಸಂಘ ಚಾಲಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದು ಸಮಾಜವಿಂದು ಒಟ್ಟಾಗಬೇಕಾದ ಅನಿವಾರ್ಯತೆಯನ್ನು ಸವಿವರವಾಗಿ ತಿಳಿಸುತ್ತಾ ಇಂಥಹ ಕಾರ್ಯಕ್ರಮಗಳು ಜನಜಾಗೃತಿಗೆ ಅತ್ಯವಶ್ಯಕವೆಂದು ಬಿಳಕಿ ಸ್ವಾಮೀಜಿಯವರು ತಿಳಿಸಿದರು. ಸುಮಾರು ೫೦೦೦ ಕ್ಕೂ ಮಿಕ್ಕಿ ಸೇರಿದ್ದ ಈ ಸಭೆಯಲ್ಲಿ ಶಿವಮೊಗ್ಗ ವಿಭಾಗ ಬೌದ್ಧಿಕ್ ಪ್ರಮುಖರಾದ ಶ್ರೀ ದಿನೇಶ್ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶ್ರೀ ಮತ್ತೂರು ಸ್ವಾಮಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಂದ ಜನರು ಹನುಮಾನ್ ಚಾಲೀಸ ಪಠಣದಲ್ಲಿ ಪಾಲ್ಗೊಂಡರು.

ಕಜಂಪಾಡಿಯವರು ತಮ್ಮ ಭಾಷಣದಲ್ಲಿ ತಿಳಿಸಿದ ಅಂಶಗಳು :-

ನಮ್ಮ ದೇಶದ ಸ್ವತ್ವವಿರುವುದು ಸರ್ವಜನರ ಹಿತದಲ್ಲಿ. ’ಸರ್ವೇಭವಂತುಸುಖಿನ:’ ಎಂದು ಪ್ರತಿನಿತ್ಯ ಜಪಿಸುವ ಸಂಘದ ಉದ್ದೇಶವೂ ಇದೇ.

ನಮ್ಮದು ಂಐSಔ  ಸಂಸ್ಕ್ರತಿಯೇ ಹೊರತು   ಔಓಐಙ ಸಂಸ್ಕ್ರತಿಯಲ್ಲ.

ಗೋದ್ರಾದಲ್ಲಿ ೫೦ ಕ್ಕಿಂತ ಅಧಿಕ ಮಂದಿ ಕರಸೇವಕರನ್ನು ರೈಲಿನಲ್ಲಿ  ಸುಟ್ಟು ಕರಕಲಾಗಿಸಿದ  ಮುಸಲ್ಮಾನ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆತ ರಾಜದೀಪ್ ಸರದೇಸಾಯಿಯಂತಹ ಮಾಧ್ಯಮ ಮಂದಿಯು ಗೋಧ್ರೋತ್ತರ ಗುಜರಾತ್ ದಂಗೆಯನ್ನು ’ಹಿಂದುಗಳ ದೌರ್ಜನ್ಯ’ ಎಂದು ಚಿತ್ರಿಸುವಲ್ಲಿ ಸಂತೋಷ ಕಂಡಿತು.

ಇಂದು ನಡೆಯುವ ಒಕ್ಕಲಿಗ ಸಭೆಯನ್ನಾಗಲೀ ಲಿಂಗಾಯಿತ, ಮಾದಿಗ, ಬ್ರಾಹ್ಮಣ ಇಲ್ಲವೇ ಗೌಡರ ಸಮಾವೇಶಗಳನ್ನಾಗಲೀ ಜಾತಿ ಸಮಾವೇಶಗಳೆಂದು ಕರೆಯದ ಮಾಧ್ಯಮಗಳು ಯಾವುದೇ ಜಾತಿ ಭೇದಗಳಿಲ್ಲದೇ ಎಲ್ಲಾ ಜಾತಿಯವರನ್ನೂ ಸೇರಿಸಿ ಮಾಡಲಾಗುವ ಹಿಂದು ಸಮಾಜೋತ್ಸವಗಳನ್ನು ಮಾತ್ರ ಜಾತಿಯ ಸಮಾವೇಶಗಳೆಂದು ಚಿತ್ರಿಸುತ್ತವೆ. ಈ ಧೊರಣೆಯು ಬದಲಾಗುವುದು ಯಾವಾಗ ?

ಎಲ್ಲಾ ಜಾತಿಯವರನ್ನು ಜಾತಿ ಭೇದವಿಲ್ಲದೇ ಒಟ್ಟಿಗೆ ಕೊಂಡೊಯ್ಯುವ ಆರ್‌ಎಸ್‌ಎಸ್ ನ್ನು ನೈಜ ಜಾತ್ಯತೀತ ಸಂಘಟನೆಯೆಂದು ದ್ಯೇರ್ಯದಿಂದ ಮಾಧ್ಯಮಗಳು ಸಾರಬೇಕಾದ ಕಾಲ ಬರುವುದು ಯಾವಾಗ ?

ಸಂಘದ ಸ್ವಯಂಸೇವಕರ ಕೈಯಲ್ಲಿ ದಂಡವಿದೆ: ಚೆಂದಕ್ಕಲ್ಲ. ಶ್ರೀ ಕೃಷ್ಣನ ಕೈಯಲ್ಲಿ ಚಕ್ರವಿದೆ: ಅಲಂಕಾರಕ್ಕಲ್ಲ. ಅದನ್ನಾತ ಶಿಶುಪಾಲನ ನೂರು ತಪ್ಪುಗಳಾದ ನಂತರ ಪ್ರಯೋಗಿಸಿದ. ಕಳೆದ ೮೫ ವರ್ಷಗಳಲ್ಲಿ  ನಿರಂತರವಾಗಿ  ರಾಷ್ಟ್ರ ನಿರ್ಮಾಣ ಕಾರ್ಯ, ವ್ಯಕ್ತಿ ನಿರ್ಮಾಣ ಕಾರ್ಯ ಹಾಗೂ ಸೇವಾ ಕಾರ್ಯಗಳಲ್ಲಿ ಎಡಬಿಡದೆ ತನ್ನನ್ನು ತೊಡಗಿಸಿಕೊಂಡಿರುವ ಸಂಘದ ಮೇಲೆ ವಿರೋಧಿಗಳಿಂದ ಆಪಾದನೆಗಳು ಎಡೆಬಿಡದೆ ಬರುತ್ತಲೇ ಇವೆ. ಆದ್ದರಿಂದ ಸಂಘದ ಸ್ವಯಂಸೇವಕರು ಮುಂದೊಮ್ಮೆ ದಂಡದ ಮೂಲಕ ಸಂಘರ್ಷಕ್ಕಿಳಿಯುವ ಕಾಲ ಬಂದೀತು. ಹಾಗಾಗದಂತೆ ಎಚ್ಚರ ವಹಿಸಬೇಕಾದ, ಹೊಣೆಗಾರಿಕೆಯಿಂದ ವರ್ತಿಸಬೇಕಾದ ಜವಾಬ್ಧಾರಿಯು ಕೇಂದ್ರದಲ್ಲಿರುವ ಕಾಂಗ್ರೇಸ್ ನಂತಹ ಪಕ್ಷಗಳಿಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

CHITRADURGA district

Wed Nov 10 , 2010
ಚಿತ್ರದುರ್ಗದಲ್ಲಿ ಕೇಂದ್ರ ಸರ್ಕಾರದ ಹಿಂದು ವಿರೋಧಿ ಧೊರಣೆ ಖಂಡಿಸಿ ಬೃಹತ್ ಪ್ರತಿಭಟನಾ ಧರಣಿ ಚಿತ್ರದುರ್ಗ: ಕೇಂದ್ರ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ,  ಹಾಗೂ ದೇಶಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಯೋತ್ಪಾದನೆಯ ಜೊತೆಗೆ ತಳುಕು ಹಾಕುತ್ತಿರುವ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಚಿತ್ರದುರ್ಗದ  ಜಿಲ್ಲಾಧಿಕಾರಿ ಕಛೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ಸುಮಾರು ೫೦೦ ಕ್ಕೂ ಸ್ವಯಂಸೇವಕರು ಭಾಗವಹಿಸಿ ಕೇಂದ್ರದ ವಿರುದ್ಧ ಪ್ರತಿಭಟನಾ ಧರಣಿ ನಡೆಸಲಾಯಿತು. ಭಾರತ ಮಾತೆಗೆ […]

You May Like