ಬೆಂಗಳೂರು ಸೆ.೧೪ ಕರ್ನಾಟಕ ಸರ್ಕಾರದ ೨ನೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನೇತಾರರೂ ಆಗಿದ್ದ ಟಿ.ವೆಂಕಟಸ್ವಾಮಿ (೮೬ ವರ್ಷ) ವಿಧಿವಶರಾಗಿದ್ದಾರೆ.

ಹೃದಯರೋಗದಿಂದ ಬಳಲುತ್ತಿದ್ದ ಟಿ.ವೆಂಕಟಸ್ವಾಮಿರವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಇಂದು ಬೆಳಗಿನ ಜಾವ ೪ ಕ್ಕೆ ಅವರು ಕೊನೆಯುಸಿರೆಳೆದರು.

ಮೂಲ ತುಮಕೂರು ಜಿಲ್ಲೆಯವರಾದ ವೆಂಕಟಸ್ವಾಮಿರವರು ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕ ಸರ್ಕಾರ ನೇಮಿಸಿದ್ದ ೨ನೇ ಹಿಂದುಳಿದ ಆಯೋಗದ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ವ್ಯಾಪಕ ಅಧ್ಯಯನದೊಂದಿಗೆ ಸಮರ್ಪಕ ವರದಿಯನ್ನು ಕೊಟ್ಟ ಶ್ರೇಯಸ್ಸು ವೆಂಕಟಸ್ವಾಮಿರವರದ್ದು.

ರಾಷ್ಟ್ರೀಯ ಸ್ವಯಂಸೇವಕ ಸಂಘದ  ಪ್ರಾಂತ ಸಹಸಂಘಚಾಲಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಬಸವನಗುಡಿಯ ಪ್ರತಿಷ್ಟಿತ ಅನಾಥ ಶಿಶು ನಿವಾಸ, ಅಬಲಾಶ್ರಮ ಸಂಸ್ಥೆಗಳ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯಕಾರಿ ಸದಸ್ಯರಾಗಿಯೂ ಸೇವೆ  ಸಲ್ಲಿಸಿದ್ದಾರೆ.

ಜಾತಿ ಭೇದವಿಲ್ಲದ ಸಮರಸತೆಯ ಸಮಾಜಕ್ಕಾಗಿ ಸದಾ ತುಡಿಯುತ್ತಿದ್ದ ಟಿ.ವೆಂಕಟಸ್ವಾಮಿರವರು ಸಾಮಾಜಿಕ ವಿಘಟನೆಗಳಾದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಸಾಮರಸ್ಯಕ್ಕಾಗಿ ಕೆಲಸ ಮಾಡಿದ್ದಾರೆ.

ಉಡುಪಿಯ ಕನಕಗೋಪುರದ ಪುನರ್ನಿರ್ಮಾಣದ  ವಿಷಯ ವಿವಾದವಾಗಿ ಸಾಮಾಜಿಕ ಕ್ಷೆಭೆಗೆ  ಕಾರಣವಾದಾಗ ಸಾಮರಸ್ಯ ವೇದಿಕೆಯ ಆಶ್ರಯದಲ್ಲಿ ಸತ್ಯಶೋಧನಾ ತಂಡದ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಆರೆಸ್ಸೆಸ್‌ನ ೨ನೇ ಸರಸಂಘಚಾಲಕರಾಗಿದ್ದ  ಶ್ರೀ ಗುರೂಜಿ ಗೋಳ್ವಾಳ್ಕರ್‌ರವರ ಜನ್ಮಶತಮಾನೋತ್ಸವದ  ಸಂದರ್ಭದಲ್ಲಿ ಶ್ರೀ ಗುರೂಜಿ ಜನ್ಮಶತಾಬ್ಧಿ ಸಮಿತಿಯ ಉಪಾಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ಆರೆಸ್ಸೆಸ್ಸಸನ ಹಿರಿಯರಾದ ಶ್ರೀ ಕು.ಸೀ. ಸುದರ್ಶನ್, ಶ್ರೀ ಮೈ.ಚ.ಜಯದೇವ್, ಶ್ರೀ  ನ.ಕೃಷ್ಣಪ್ಪ, ಶ್ರೀ ವೈ.ಕೆ.ರಾಘವೇಂದ್ರ ರಾವ್‌ರವರ  ನಿಕಟವರ್ತಿಗಳಾಗಿದ್ದ ಅವರು ಕೇಶವಕೃಪಾದಲ್ಲಿ  ಪ್ರತಿ ಗುರುವಾರ ನಡೆಯುವ ಸಂಘಪರಿವಾರದ  ಪ್ರಮುಖರು ಪಾಲ್ಗೊಳ್ಳುವ ವಾರದ ಶಾಖೆಗೆ ಅನಾರೋಗ್ಯ ಲೆಕ್ಕಿಸದೇ, ತಪ್ಪದೇ ಹಾಜರಾಗುತ್ತಿದ್ದವರು.

ಟಿ.ವೆಂಕಟಸ್ವಾಮಿಯವರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು  ಅಗಲಿದ್ದಾರೆ.

ಇಂದು ಬೆಳಿಗ್ಗೆ ಟಿ.ವೆಂಕಟಸ್ವಾಮಿರವರ ನಿಧನದ  ಸುದ್ದಿ ತಿಳಿಯುತ್ತಿದ್ದಂತೆಯೇ ಆರೆಸ್ಸೆಸ್  ಪ್ರಮುಖರಾದ ಶ್ರೀ ಮೈ.ಚ.ಜಯದೇವ್, ಶ್ರೀ ನ. ಕೃಷ್ಣ, ಸೇರಿದಂತೆ ಸಾವಿರಾರು ಕಾರ‍್ಯಕರ್ತರು ಬಸವನಗುಡಿಯ ಹೆಚ್.ಬಿ.ಸಮಾಜ ರಸ್ತೆಯಲ್ಲಿರುವ ಮೃತರ ನಿವಾಸಕ್ಕೆ ತಎರಳಿ ಅಶ್ರುತರ್ಪಣ ಸಲ್ಲಿಸಿದ್ದಾರೆ.

ಸಂತಾಪ : ರಾಷ್ಟ್ರೀಯ ಸ್ವಯಂಸೇವಕ  ಸಂಘದ ರಾಜ್ಯ ಅಧ್ಯಕ್ಷರಾದ ಮೈಸೂರಿನ  ಶ್ರೀ ಮ. ವೆಂಕಟರಾಮುರವರು ಟಿ.ವೆಂಕಟಸ್ವಾಮಿರವರ ಜೊತೆಗಿನ ಒಡನಾಟವನ್ನು ಸ್ಮರಿಸಿ ಅವರ ಅಗಲಿಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

****************
೧.  ಜನನ : ೧೯೨೩ನೇ ಇಸವಿ ನವಂಬರ್, ಬಳ್ಳಾರಿ ಜಿಲ್ಲೆ, ಆಲೂರಿನಲ್ಲಿ
೨. ಚಿಕ್ಕವಯಸ್ಸಿನಲ್ಲಿ Deccan Herald ನ ಶ್ರೀ ಗುರುಸ್ವಾಮಿಯವರು ಅವರನ್ನು ಹಳೇಮೈಸೂರಿಗೆ
ಕರೆತಂದರು. ೧೯೪೦ ರಿಂದ ಬೆಂಗಳೂರಿನಲ್ಲಿದ್ದಾರೆ.
೩.  St. Joseph College  ನಲ್ಲಿ  BA, ಮದ್ರಾಸ್‌ನಲ್ಲಿ BL
೪.  ಮಡದಿ ಶ್ರೀಮತಿ ಸಾಕಮ್ಮ, ೧೯೯೪ ರಲ್ಲಿ ನಿಧನರಾದರು
೫.  ಶ್ರೀ ಜಗನ್ನಾಥ, ಶ್ರೀ ರಘುನಾಥ, ಶ್ರೀಮತಿ ಗೀತಾ – ಮಕ್ಕಳು. ಶ್ರೀ ರಘುನಾಥ
ಬೆಂಗಳೂರಿನಲ್ಲಿ / ಉಳಿದವರು ಅಮೇರಿಕಾದಲ್ಲಿ
೬.    ಅವರು ವಕೀಲರು
ಡಿಸ್ಟ್ರಿಕ್ಟ್ & ಸೆಷನ್ಸ್ ನ್ಯಾಯಮೂರ್ತಿ
ಕರ್ನಾಟಕ ಸರ್ಕಾರದ Law Dept. ಮತ್ತು Legislative Dept.ನಲ್ಲಿ ಕಾರ್ಯದರ್ಶಿಗಳಾಗಿ
ಕರ್ನಾಟಕ ಸರ್ಕಾರ ರಚಿಸಿದ ೨ನೇ ಹಿಂದುಳಿದ ಆಯೋಗದ ಅಧ್ಯಕ್ಷರಾಗಿ ಬಹಳ ಉತ್ತಮ ವರದಿ ನಿರ್ಮಿಸಿ ಸರ್ಕಾರಕ್ಕೆ ಕೊಟ್ಟಿದ್ದಾರೆ.
’‘Upliftment of Backward Class’’ ಗಾಗಿ ’ಶ್ರೀ ದೇವರಾಜ ಅರಸ’ ಪ್ರಶಸ್ತಿ ಪ್ರಾಪ್ತ

೭.    ಸಾಮಾಜಿಕ ಕಾರ‍್ಯ
೧)    ವಿವೇಕಾನಂದ ಕೇಂದ್ರ, ಜಿಗಣಿ – ಉಪಾಧ್ಯಕರು
೨)    ಅನಾಥ ಶಿಶುನಿವಾಸ, ಅಬಲಾಶ್ರಮ – ಅಧ್ಯಕ್ಷರು
೩)    ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ – ಕಾರ‍್ಯಕಾರಿ ಸಮಿತಿ ಸದಸ್ಯರು
೪)    ಯಾದವ ಸಂಘದ ಸಕ್ರಿಯ ಕಾರ‍್ಯಕರ್ತರು, ಅನೇಕ ಸಾಮಾಜಿಕ ಕಾರ‍್ಯಗಳಲ್ಲಿ ಸಕ್ರಿಯರು
೫)    ರಾ. ಸ್ವ. ಸಂಘದ ಸಹಪ್ರಾಂತ ಸಂಘಚಾಲಕರಾಗಿದ್ದರು, ಈಗ ರಾಷ್ಟ್ರೀಯ ಕಾರ‍್ಯಕಾರಿ ಮಂಡಲದ ಸದಸ್ಯರು

೮.    Widely Travelled  – UK, USA, New Zealand, Australia, Japan ಇತ್ಯಾದಿ ದೇಶಗಳು
೯.    ವಿಳಾಸ / ಶ್ರೀ ರಘುನಾಥ, ೮೧, ಹೆಚ್.ಬಿ.ಸಮಾಜ ರಸ್ತೆ, ಬಸವನಗುಡಿ, ಬೆಂಗಳೂರು – ೪.