ಗೋಸಂರಕ್ಷಣೆ ಕುರಿತು ಮುಕ್ತ ಸಂವಾದ -’ಪುಂಗವ’ ಅಭಿಯಾನ

ಪುಂಗವ  ಪತ್ರಿಕೆಯು ಗೋಸಂರಕ್ಷಣೆಯ ಕಾಯಿದೆ ವಾಸ್ತವದ ನೆಲಗಟ್ಟಿನಲ್ಲಿ ಜಾರಿಗೆ ಬರಲು ಸಹಕಾರಿಯಾಗುವಂತೆ  ‘ಮುಕ್ತಸಂವಾದ’ವೊಂದನ್ನು ಆರಂಭಿಸಿದೆ.
ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿರುವುದು ಸಂತೋಷ. ನಾವು ಮೊದಲಿನಿಂದಲೂ ತಾಯಿಯೆಂದು ಪೂಜಿಸಿಕೊಂಡು ಬರುತ್ತಿರುವ ಗೋಮಾತೆಯ ರಕ್ಷಣೆಗೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.


ಎಲ್ಲರಿಗೂ ಗೋಸಂರಕ್ಷಣೆ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿಯೇನೋ ಇದೆ. ಆದರೆ, ಹೇಗೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿದ್ದ ಹಾಗಿಲ್ಲ! ಹಾಗಾಗಿ ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಮಾತ್ರ ಚರ್ಚೆಯಾಗುತ್ತಿದೆಯೇ ಹೊರತು, ರೈತರ ವಾಸ್ತವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಸಾವಯವ ಕೃಷಿಕರ ಸಮಾವೇಶದಲ್ಲಿಯೂ ರೈತರ ಮಕ್ಕಳು ಕಾಲೇಜು ಓದಲು ಅನುಕೂಲವಾಗುವಂತೆ ಹಳ್ಳಿಗಳಲ್ಲಿಯೂ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿಯವರು ಹೇಳಿದರೇ ಹೊರತು ಹಳ್ಳಿಯ ರೈತರ ಮಕ್ಕಳು ಕೃಷಿಯನ್ನು ಲಾಭದಾಯಕವಾಗಿ ನಡೆಸಲು ಅನುಕೂಲ ವಾಗಲು ಏನು ಮಾಡುತ್ತೇವೆಂದು ಹೇಳಲೇ ಇಲ್ಲ! ಎಂಬಲ್ಲಿಗೆ, ಆ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆಯೇ ಎನ್ನುವುದೇ ಒಂದು ಪ್ರಶ್ನೆ.
ಗೋ ಸಂರಕ್ಷಣೆಯ ನನ್ನ ದಾರಿ:  ಗೋ ಸಂತತಿಯ ಉಳಿವಿಗಾಗಿ ನಾವೇನಾದರೂ ಮಾಡಿದ್ದೇವೆಯೇ? ನಾವು ಮಾಡಿದ ಪ್ರಯೋಗ –  ಪ್ರಯತ್ನಗಳೇನು? ಆದ ಪರಿಣಾಮಗಳೇನು? ಗೋಮೂತ್ರದಿಂದ ಲಾಭದಾಯಕ ಗಳಿಕೆ ಸಾಧ್ಯವಾದ ಉದಾಹರಣೆಗಳಿವೆಯೇ? ಒಂದು ಕುಟುಂಬ, ಒಂದು ಗ್ರಾಮ ಒಟ್ಟಾಗಿ ಕುಳಿತು ಈ ಬಗ್ಗೆ ಯೋಚಿಸಿದ್ದು ಇದೆಯೇ? ಅಂತಹ ಪ್ರಯತ್ನದ ಅನುಭವಗಳೇನು? ಗೋ ಸಂರಕ್ಷಣೆಯ ಬಗ್ಗೆ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು ವ್ಯಾವಹಾರಿಕ ಪರಿಹಾರದ ಬಗ್ಗೆ ಏನು ಕೆಲಸ ಮಾಡಿವೆ? ಅಂತಹ ಅನುಭವಗಳನ್ನು ದಾಖಲಿಸುವ, ಆ ಮೂಲಕ ಗೋಸಂರಕ್ಷಣೆಯ ಕಾಯಿದೆ ಮೂಲೆ ಸೇರದೆ ವಾಸ್ತವದ ನೆಲಗಟ್ಟಿನಲ್ಲಿ ಜಾರಿಗೆ ಬರಲು ಸಹಕಾರಿಯಾಗುವಂತೆ ‘ಮುಕ್ತಸಂವಾದ’ದ ವೇದಿಕೆಯನ್ನು ಪುಂಗವ ಆರಂಭಿಸಿದೆ.
ಈ ಕುರಿತ ನಿಮ್ಮ  ಪ್ರಯತ್ನ, ಅನುಭವಗಳನ್ನು ೧೫೦ ಶಬ್ದಗಳ ಒಳಗೆ ದಾಖಲಿಸಿ ನಮಗೆ ಕಳುಹಿಸಿ ಕೊಡಬೇಕೆಂದು ವಿನಂತಿ. ಕಳುಹಿಸಬೇಕಾದ ವಿಳಾಸ :
‘ಗೋ ಸಂರಕ್ಷಣೆಯ ನನ್ನದಾರಿ’
ಪುಂಗವ ಪತ್ರಿಕೆ, ನಂ. ೭೪ ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – ೫೬೦ ೦೦೪.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹರಿಯಲಿ ಚಿತ್ತ ಕುಟುಂಬಗಳತ್ತ

Thu Sep 16 , 2010
ಬದಲಾಗುತ್ತಿರುವ ಜೀವನ ಶೈಲಿ, ಆಧುನಿಕತೆಯ ಅನಿವಾರ್ಯತೆ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಹಂಬಲಗಳ ಮಧ್ಯೆ ಪಾಲಕರಿರುವ ಈ ಕಾಲಘಟ್ಟದಲ್ಲಿನ ಮಕ್ಕಳನ್ನು ಹೊಸ ವಿಧವಾದ ಸಮಸ್ಯೆಗಳು ಕಾಡುತ್ತಿರುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ತೀವ್ರವಾದ ಮಾನಸಿಕ ಒತ್ತಡದಿಂದಾಗಿ ಅಮೆರಿಕಾದಂತಹ ರಾಷ್ಟ್ರಗಳಲ್ಲಿನ ಮಕ್ಕಳಲ್ಲಿ ಕಂಡುಬರುತ್ತಿದ್ದ ಸಮಸ್ಯೆಗಳು ಇದೀಗ ಭಾರತದಲ್ಲೂ ಕಾಣಿಸಲಾರಂಭಿಸಿದೆ. ಸಮಸ್ಯೆ ಇದು ಮಾತ್ರ – ಕುಸಿಯುತ್ತಿರುವ ಕುಟುಂಬ ವ್ಯವಸ್ಥೆ! ತಾಯಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿ. ಮಗುವಿನೊಂದಿಗೆ ಅಜ್ಜಿ. ಶನಿ-ಭಾನುವಾರಗಳೇ ತಾಯಿ ಮಗು ಜೊತೆಯಲ್ಲಿರಲು ಸಮಯ. ಉಳಿದ […]