ಸ್ವಾರ್ಥ ರಹಿತ ಶುದ್ಧ ಚಾರಿತ್ರ್ಯಯುಳ್ಳ ಶಕ್ತಿಶಾಲಿ ಸಮಾಜದಿಂದ ದೇಶದ ಸಮಸ್ಯಗಳಿಗೆ ಉತ್ತರ -ಮೋಹನ ಭಾಗ್ವತ್

ಬೆಳಗಾವಿ ೩೧: ಸ್ವಾರ್ಥ ರಹಿತ ಶುದ್ಧ ಚಾರಿತ್ರ್ಯಯುಳ್ಳ ಶಕ್ತಿಶಾಲಿ ಸಮಾಜದಿಂದ ದೇಶದ ಸಮಸ್ಯಗಳಿಗೆ ಉತ್ತರ ದೊರೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮಾನ್ಯ ಶ್ರೀ ಮೋಹನ ಭಾಗ್ವತ್ ಇಂದಿಲ್ಲಿ ನುಡಿದರು.
ಸಂಘದ ಸ್ವಯಂಸೇವಕರು ಹಾಗೂ ಹಿತೈಷಿಗಳಿಗಾಗಿ ಆಯೋಜಿಸಲಾಗಿದ್ದ ಬೌಧಿಕ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಮೋಹನ ಭಾಗ್ವತ್ ದೇಶದ ಮುಂದಿರುವ ಸಮಸ್ಯಗಳು ನಮ್ಮನ್ನು ಸಹಜವಾಗಿ ಚಿಂತೆಗೀಡುಮಾಡುತ್ತವೆ. ಆದರೆ ಅವುಗಳಿಗೆ ಕಾರಣ ಹಾಗೂ ಉತ್ತರ ಹುಡುಕುವುದು ಅವಶ್ಯಕ. ನಮ್ಮ  ಸಮಸ್ಯಗಳಿಗೆ ಇತರರು ಎಷ್ಟು ಕಾರಣರೂ ನಮ್ಮಲಿನ ದೋಷಗಳೂ ಕೂಡಾ ಅಷ್ಟೇ ಕಾರಣ. ಸಾವಿರಾರು ವರ್ಷಗಳಿಂದ ವಿಶ್ವದೆಲ್ಲೆಡೆ ತಮ್ಮ ದಾಳಿಗಳಿಂದ ಅಲ್ಲಿನ ಸಂಸ್ಕೃತಿಯನ್ನು ನಾಶ ಮಾಡಿದ ಇಸ್ಲಾಂ ಅಥವಾ ಪಶ್ಚಿಮದ ಶಕ್ತಿಗಳು ಭಾರವನ್ನು ಗುಲಾಮನ್ನಾಗಿಸಿಕೊಳುವಲ್ಲಿ ಮಾತ್ರ ಸಫಲವಾದವೇ ವಿನಃ ಇಲ್ಲಿನ್ ಸಮಾಜವನ್ನು ಸಂಪೂರ್ಣವಾಗಿ ನಾಶ ಮಾಡುವಲ್ಲಿ ಸಫಲವಾಅಗಲಿಲ್ಲ. ಅಂದರೆ ಅಷ್ಟರ ಮಟ್ಟಿಗೆ ನಾವು ಶಕ್ತಿಶಾಲಿ ಸಮಾಜವೆಂದೇ ಹೇಳಬಹುದು. ೧೦೦ ವರ್ಷಗಳಲ್ಲಿಯೇ ನಮ್ಮನ್ನು ಹೊಸಕಿ ಹಾಕಬಹುದಾದ ಶಕ್ತಿಯನ್ನು ಅವುಗಳು ಹೊಂದಿದ್ದರೂ ಕೂಡ ನಮ್ಮ ಸಂಪೂರ್ಣ ನಾಶ ಅವುಗಳಿಂದ ಸಾಧ್ಯವಾಗಲಿಲ್ಲ. ಆದರೆ ಸಂಖ್ಯಾತ್ಮಕವಾಗಿ ನಾವು ಹೆಚ್ಚಿದ್ದರೂ ಕೂಡ ಇಂದಿಗೂ ನಾವು ಅವುಗಳ ದಬ್ಬಾಳಿಕೆಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ನಮ್ಮಯೋಗ್ಯತೆಯ ಬಗ್ಗೆ ನಮ್ಮ ದೋಷಗಳ ಬಗ್ಗೆ ಪರಾಮರ್ಶೆ ಆಗಬೇಕಾಗಿದೆ. ನಾವು ಯೋಗ್ಯರಾದಲ್ಲಿ ನಮ್ಮ ಎಲ್ಲ ಸಮಸ್ಯಗಳಿಗೆ ಪರಿಹಾರ ಸಿಗಲಿದೆ.  ಇದಕ್ಕೆ ಸ್ವಾರ್ಥ ರಹಿತ ಶುದ್ಧ ಚಾರಿತ್ರ್ಯಯುಳ್ಳ ಶಕ್ತಿಶಾಲಿ ಸಮಾಜದ ನಿರ್ಮಾಣ ಅವಶ್ಯಕ. ಸಂಘಟಿತ ಸಮಾಜದಿಂದ ಮಾತ್ರ ಸ್ವಾತಂತ್ರ್ಯದ ರಕ್ಷಣೆ ಸಾದ್ಯ ಎಂಬುದನ್ನು ಡಾ. ಅಂಬೇಡ್ಕರ ಕೂಡ ಪ್ರತಿಪಾದಿಸಿದ್ದರು. ಇದನ್ನೇ ಮನಗಂಡಿದ್ದ ಸಂಘ ಸ್ಥಾಪಕ ಡಾ. ಹೆಡಗೇವಾರ ಹಿಂದು ಸಮಾಜದ ಸಂಘಟನೆಯ ಕಾರ್ಯಕ್ಕೆ ಸಂಘವನ್ನು ಪ್ರಾರಂಭಿಸಿದರು. ಇದೇ ಸಂಘದ ಮೂಲ ಮಂತ್ರ ಹಾಗೂ ಸಿದ್ದಂತ .ಇದನ್ನು ಪೂರ್ತಿಗೊಳಿಸುವುದಕ್ಕಾಗಿ ಎಲ್ಲ ಸ್ವಯಂಸೇವಕರು ನಿರಂತರವಾಗಿ ಕಾರ್ಯಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಸಮಾಜದ ಸ್ಥಿತಿಗತಿಯ ಬಗ್ಗೆ ತಮ್ಮಾ ಬೌದ್ದಿಕದಲ್ಲಿ ಬೆಳಕು ಚೆಲ್ಲಿದ ಮೋಹನ ಭಾಗ್ವತ  ಜಾತಿ, ಭಾಷೆ, ರಾಜ್ಯ ಮುಂತಾದ ವಿಷಯಗಳಲ್ಲಿ ಜನರು ಯಾವಮಟ್ಟಕ್ಕಾದರೂ ಹೋಗುತ್ತಾರೆ. ಇದೇ ಭಾವನೆ ದೇಶದ ಬಗ್ಗೆ ಏಕಿಲ್ಲ? ಎಂದು ಪ್ರಶ್ನಿಸಿದ ಭಾಗ್ವತ ಇಂದು ಸಮಾಜದಲ್ಲಿ ಹೆಚ್ಚಿನ ಅನಾಹುತಗಳು ತಥಾಕಥಿತ ವಿದ್ಯಾವಂತರಿಂದಲೇ ಆಗುತ್ತಿದ್ದೆ. ಯಾವ ವನವಾಸಿಗಳ ಪ್ರದೇಶಗಳನ್ನು ನಾವು ಹಿಂದುಳಿದ ಪ್ರದೇಶ ಎನ್ನುತ್ತೇವೆಯೋ, ಎಲ್ಲಿ ಅಭಿವೃದ್ಧಿ ಇನ್ನು ತಲುಪಿಲ್ಲವೂ ಅಲ್ಲಿ ಸಾಮಾಜಿಕ ಜೀವನ ಇನ್ನು ಕೂಡ ಸಂಘಟಿತವಾಗಿ ಸುವ್ಯವಸ್ಥಿತವಾಗಿ ಇದೆ ಎಂದರೆ ತಪ್ಪಾಗಲಿಕಿಲ್ಲ. ಎಂದು ಹೇಳಿದರು.
ನಮ್ಮ ಸಮಾಜ, ಆದರ್ಶಗಳ ಪಾಲಿನೆಗಿಂತ ಪೂಜೆಗೆ ಹೆಚ್ಚಿನ ಮಹತ್ವ ನೀಡುತ್ತದೆ ಎಂದು ಹೇಳಿದ ಸರಸಂಘಚಾಲಕರು ಇಂದು ಸಮಾಜಕ್ಕೆ ಒಳ್ಳೆಯ ಉದಾಹರಣೆಗಳ  ಅವಶ್ಯಕತೆ ಇದೆ. ಹೀಗಾಗಿ ಸ್ಸಂಘದ ಸ್ವಯಂಸೇವಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸ್ವಯಂಸೇವಕ ಹಾಗೂ ಆತನ ಮನೆ  ನಿಜವಾದ ಅರ್ಥದಲ್ಲಿ ರಾಷ್ಟ್ರೀಯ  ಸ್ವಯಂಸೇವಕ  ಸಂಘವಾಗಬೇಕಾಗಿದೆ.  ಆತ ಸತತ ಸಾಧನೆಯ ವೃತ ಆಚರಣೆಯ ಮೂಲಕ ಸಮಾಜಕ್ಕೆ ಉದಾಹರಣೆಯಾಗಬೇಕಾಗಿದೆ. ಆಗ ಸಮಾಜದಲ್ಲಿ ಒಳ್ಳೆಯ ವಾತಾವರಣೆ ನಿರ್ಮಾಣವಾಗಿ ಇನ್ನುಳಿದ ಹಿಂದು ಸಮಾಜ ಕೂಡಾ ಅವರನ್ನು ಅನುಕರಿಸುತ್ತದೆ ಎಂದು ಭಾಗ್ವತ ಇದೇ ಸಂದರ್ಭದಲ್ಲಿ ಸ್ವಯಂಸೇವಕರಿಗೆ ಹಿತವಚನ ಹೇಳಿದರು.
ವೇದಿಕೆಯಲ್ಲಿ ಕ್ಷೇತ್ರೀಯ ಸಂಘಚಾಲಕ ಶ್ರೀ ಪರ್ವತರಾವ್, ಪ್ರಾಂತ ಸಂಘಚಾಲಕ ಶ್ರೀ ಖಗೇಶನ್, ನಗರ ಸಂಘಚಾಲಕ ಶ್ರೀ ಬಾಳಣ್ಣಾ ಕಗ್ಗಣಗಿ ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Karnataka RSS Personalities

Wed Sep 1 , 2010
email facebook twitter google+ WhatsApp