SAKSHAMA- ಸಮದೃಷ್ಟಿ, ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ, ಕರ್ನಾಟಕ

ಮದೃಷ್ಟಿ, ಕ್ಷಮ ತಾವಿಕಾಸ ಮತ್ತು ಅನುಸಂಧಾನ ಮಂಡಲ, ಕರ್ನಾಟಕ
‘ಸಕ್ಷಮ’ವು ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇಶನಿಷ್ಠ ವಿಚಾರದಿಂದ ಪ್ರೇರಿತವಾಗಿರುವ ದಾನಶೀಲ ರಾಷ್ಟ್ರೀಯ ಸಂಸ್ಥೆಯಾಗಿದೆ. ಸಕ್ಷಮವು ವಿಕಲಚೇತನ ಸಮುದಾಯದ ಸಾಮಾಜೀಕರಣ, ಸಾಮಾಜೀಕೃತ ಸಮುದಾಯಗಳ ಏಕೀಕರಣ, ಏಕೀಕೃತ ಸಮಾಜದ ರಾಷ್ಟ್ರೀಕರಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ರೀತಿಯ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಾಗಿರದೆ ದೇಶದ ಆಸ್ತಿಯಾಗಿದ್ದಾರೆ ಎಂಬುದು ‘ಸಕ್ಷಮ’ದ ನಂಬಿಕೆಯಾಗಿದೆ. ವಿಕಲಚೇತನರೆಲ್ಲರನ್ನೂ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತರಬೇಕೆನ್ನುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.


‘ಸಕ್ಷಮ’ದ ಉದಯ
‘ಸಕ್ಷಮ’ವು ಮಹಾರಾಷ್ಟ್ರದ ನಾಗಪುರದಲ್ಲಿ ೨೦೦೮ರ ಜೂನ್ ೨೦ರಂದು, ಸೊಸೈಟಿ ನೋಂದಣಿ ಅಧಿನಿಯಮ ೧೮೬೦ರ ಅಂತರ್ಗತ ನೋಂದಾಯಿಸಲ್ಪಟ್ಟಿದೆ. ಇದು ಎಲ್ಲಾ ವಿಧದ ವಿಕಲಚೇತನರ ಸಮಸ್ಯೆಗಳನ್ನು ಲಕ್ಷ್ಯದಲ್ಲಿರಿಸಿ ಅವರ ಶಿಕ್ಷಣ, ಸ್ವಾವಲಂಬನೆ, ಸಾಮಾಜಿಕ ವಿಕಾಸದ ಮೂಲಕ ರಾಷ್ಟ್ರನಿರ್ಮಾಣದಲ್ಲಿ ಅವರ ಪಾತ್ರವನ್ನು ಸುನಿಶ್ಚಿತಗೊಳಿಸುವ ಉದ್ದೇಶವಿರಿಸಿ ಕಾರ್ಯ ನಿರ್ವಹಿಸುತ್ತಿರುವ ನೂತನ ಸಂಸ್ಥೆಯಾಗಿದೆ.
‘ಸಕ್ಷಮ’ದ ಉದ್ದೇಶ ಮತ್ತು ಗುರಿ

 • ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳು ‘ಸಕ್ಷಮ’ದ ಉದ್ದೇಶಿತ ಕಾರ್ಯಕ್ಷೇತ್ರಗಳಾಗಿವೆ. ಎಲ್ಲಾ ವಿಧದ ಅಂಗವಿಕಲರಿಗೆ ವಿಶೇಷವಾಗಿ ದೃಷ್ಟಿಹೀನರಿಗೆ ಸರ್ಕಾರಿ/ ಸರ್ಕಾರೇತರ ಉದ್ಯೋಗಾವಕಾಶ ಗಳನ್ನು ಹುಡುಕಿ ಉದ್ಯೋಗಗಳನ್ನು ಒದಗಿಸಲು, ಪ್ರಯತ್ನಿಸಲಾಗುವುದು.
 • ಶೈಕ್ಷಣಿಕ ಮತ್ತು ಔದ್ಯೋಗಿಕ ತರಬೇತಿಗಾಗಿ ಕಲೆ, ವಿಜ್ಞಾನ, ಉದ್ಯೋಗ ಮತ್ತು ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ವ್ಯವಸ್ಥೆ ಮಾಡುವುದು. ಸಮಾಜದ ಎಲ್ಲಾ ವಿಕಲಚೇತನ ವ್ಯಕ್ತಿಗಳ ಬದುಕಿನ ಗುಣಸಂಪನ್ನತೆಯನ್ನು ಸುಧಾರಿಸುವುದು.
 • ಬಾಲಕ/ಬಾಲಕಿಯರಿಗಾಗಿ ಪ್ರೌಢಶಿಕ್ಷಣ ಕೇಂದ್ರವನ್ನು ವ್ಯವಸ್ಥೆ ಮಾಡುವುದು. ವಿಕಲಚೇತನರಿಗೆ ಎಲ್ಲ ರೀತಿಯ ಮಾರ್ಗದರ್ಶನ ಲಭಿಸುವಂತೆ ಮಾಡುವುದು.
 • ಕುಟುಂಬ ಯೋಜನೆ, ವ್ಯಸನ ಮುಕ್ತಿ, ಹೆಚ್‌ಐವಿ ಕುರಿತು ಜಾಗೃತಿ, ಪರಿಸರ, ವಿಕಾಸ ಇತ್ಯಾದಿಗಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ಸ್ವ-ಉದ್ಯೋಗ ಮತ್ತು ಸ್ವ-ಸಹಾಯದ ಅವಕಾಶಗಳನ್ನು ಸೃಷ್ಟಿಸುವ ಅಗತ್ಯದ ಬಗ್ಗೆ ಜಾಗೃತಿಗಾಗಿ ಪ್ರಯತ್ನ.

ಪ್ರಕಲ್ಪಗಳು ಮತ್ತು ಚಟುವಟಿಕೆಗಳು
‘ಸಕ್ಷಮ’ದ ಮುಖ್ಯ ಸೇವೆಯು ದೃಷ್ಟಿಮಾಂದ್ಯರ ಸರ್ವತೋಮುಖ ವಿಕಾಸವೇ ಆಗಿದ್ದರೂ ಇನ್ನಿತರ ಎಲ್ಲಾ ವಿಧದ ವಿಕಲಚೇತನರ ಸೇವೆಗೆ ಹಾಗೂ ಪರಿಸರ, ಆರೋಗ್ಯ ಮತ್ತು ಇನ್ನಿತರ ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ಆರೋಗ್ಯ ಮತ್ತು ಇನ್ನಿತರ ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ಸಮಾಜವನ್ನು ಸಶಕ್ತಗೊಳಿಸುವ ಚಟುವಟಿಕೆಗಳಿಗೂ ಅದು ಬದ್ಧವಾಗಿದೆ. ಪ್ರಸ್ತುತ ‘ಸಕ್ಷಮ’ವು ಈ ಕೆಳಗಿನ ಪ್ರಕಲ್ಪಗಳನ್ನು ರಾಷ್ಟ್ರದ ವಿವಿಧೆಡೆಯಲ್ಲಿ ನಡೆಸುತ್ತಿದೆ.

 • ಮಾಧವ ನೇತ್ರನಿಧಿ : ‘ಸಕ್ಷಮವು ಭಾರತದ ಹತ್ತು ರಾಜ್ಯಗಳಲ್ಲಿ ೨೦ಕ್ಕೂ ಹೆಚ್ಚು ಮಾಧವ ನೇತ್ರನಿಧಿ ಕೇಂದ್ರಗಳನ್ನು ನಡೆಸುತ್ತಿದೆ.
 • ಮಾಧವ ಶ್ರವಣ ಗ್ರಂಥ ಭಂಡಾರ : ದೃಷ್ಟಿ ಸವಾಲುಳ್ಳವರ ಶೈಕ್ಷಣಿಕ ಆವಶ್ಯಕತೆಗಳ ಈಡೇರಿಕೆಗಾಗಿ ಕೇಂದ್ರಸ್ಥಾನ ನಾಗಪುರದಲ್ಲಿ. ಶ್ರವಣ ಗ್ರಂಥ ಭಂಡಾರ ನಡೆಸುತ್ತಿದ್ದು ಇತರ ಕೇಂದ್ರಗಳಿಗೂ ವಿಸ್ತರಿಸುವ ಯೋಜನೆ ಹೊಂದಿದೆ.
 • ಮಾಧವ ಬ್ರೈಲ್‌ಲಿಪಿಯ ಗ್ರಂಥರಚನಾ ಕೇಂದ್ರ : ಸಂಸ್ಕಾರ ಸಾಹಿತ್ಯವನ್ನು ಒದಗಿಸುವ ನಿಟ್ಟಿನಲ್ಲಿ, ‘ಸಮಕ್ಷಮ’ದ ನಾಗಪುರ ಘಟಕವು ಕಂಪ್ಯೂಟರ್ ಮೂಲಕ ಬ್ರೈಲ್ ಲಿಪಿಯಲ್ಲಿ ಪುಸ್ತಕಗಳನ್ನು ರಚಿಸುವ ಕಾರ್ಯದಲ್ಲಿ ತೊಡಗಿದೆ.
 • ಕೃಷ್ಣಜ್ಯೋತಿ ಅಗರಬತ್ತಿ ನಿರ್ಮಾಣ ಕೇಂದ್ರ : ಕೇರಳದ ಪಾಲಕ್ಕಾಡ್‌ನಲ್ಲಿನ ‘ಸಕ್ಷಮ’ ಕೇಂದ್ರದ ಅಂಧರು ಸುಗಂಧ ಬತ್ತಿ ಮತ್ತು ಸಾಬೂನು ತಯಾರಿಕೆಯಲ್ಲಿ ಪ್ರಶಿಕ್ಷಣ ಪಡೆದವರಾಗಿದ್ದು, ಸ್ವಂತದ ಸಂಪಾದನೆಯಿಂದ ಬದುಕಲು ಸಮರ್ಥರಾಗಿದ್ದಾರೆ.
 • ಅಂಧ ಮಹಿಳೆಯರ ಹಾಸ್ಟೆಲ್ : ಕೇರಳದ ಕಾಲಡಿಯಲ್ಲಿನ ‘ಸಕ್ಷಮ’ ಕೇಂದ್ರವು ದೃಷ್ಟಿಹೀನ ಮಹಿಳೆಯರಿಗಾಗಿ ಒಂದು ವಸತಿಗೃಹವನ್ನು ನಡೆಸುತ್ತಿದೆ.
 • ಸ್ವರ ದೃಷ್ಟಿ : ಅಂಗ ಮತ್ತು ಅಸ್ಥಿ ವಿಕಲಾಂಗರನ್ನೊಳಗೊಂಡ ಸಂಗೀತಗಾರರ ತಂಡವೊಂದು ನಾಗಪುರದಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಮಾನಧನ ಸಂಪಾದಿಸಿ, ಅಂಗ ಮತ್ತು ಅಸ್ಥಿ ವಿಕಲಚೇತನರ ಸಹಾಯಾರ್ಥ ಹಂಚುತ್ತಿದೆ.
 • ಸೂರದಾಸ ಭಜನಾ ಮಂಡಳಿ : ಕೇರಳದ ಪಾಲಕ್ಕಾಡ್ ‘ಸಕ್ಷಮ’ ಘಟಕದಲ್ಲಿ ದೃಷ್ಟಿಮಾಂದ್ಯ ಸಂಗೀತಪ್ತಿಯರ ತಂಡವೊಂದು ನಿಯಮಿತವಾಗಿ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮಗಳ ಮೂಲಕ ತಮ್ಮ ಜೀವಿಕೆಯನ್ನು ಸಂಪಾದಿಸುತ್ತಿದ್ದಾರೆ.
 • ಕಾನೂನು ಸಲಹಾ ಕೋಶ : ವಿಕಲಚೇತನರು ಕಾನೂನು ಬದ್ಧವಾದ ಉದ್ಯೋಗಾವಕಾಶ ಮತ್ತು ಸವಲತ್ತುಗಳನ್ನು ಪಡೆಯಲು ಸೂಕ್ತ ಮಾರ್ಗದರ್ಶನ ಮತ್ತು ಆಪ್ತಸಲಹೆ ನೀಡುವ ಕಾರ್ಯವನ್ನು ಸೂಕ್ತ ಮಾರ್ಗದರ್ಶನ ಮತ್ತು ನಾಗಪುರ ಕಾನೂನು ಸಲಹಾ ಕೋಶವು ಮಾಡುತ್ತಿದೆ.
 • ಟ   ಆಯುರ್ವೇದ ಔಷಧಿ ತಯಾರಿಕಾ ಕೇಂದ್ರ : ಉತ್ತರ ಪ್ರದೇಶದ ವಾರಾಣಸಿಯಲ್ಲಿನ ‘ಸಕ್ಷಮ’ ಘಟಕವು ಅಂಧರಿಗೆ ಕೆಲವು ನಿತ್ಯೋಪಯೋಗಿ ಆಯುರ್ವೇದ ಔಷಧಿಗಳನ್ನು ತಯಾರಿಸುವ ತರಬೇತಿ ನೀಡುತ್ತಿದೆ.
 • ವಿಕಲಾಂಗರ ವಿವಾಹ ಕೇಂದ್ರ : ‘ಸಕ್ಷಮ’ದ ನಾಸಿಕ್ ಮತ್ತು ಕೇರಳದ ಘಟಕಗಳು ಹಲವು ವರ್ಷಗಳಿಂದ ವಿಲಕಚೇತನರಲ್ಲಿ ಪರಸ್ಪರ ವಿವಾಹ ವ್ಯವಸ್ಥೆಯನ್ನು ಏರ್ಪಡಿಸುತ್ತಿವೆ.
 • ಅನುಸಂಧಾನ ಪ್ರಕಲ್ಪ : ‘ಸಕ್ಷಮ’ದ ಅನುಸಂಧಾನ ಪ್ರಕಲ್ಪವು ದೃಷ್ಟಿ ಸವಾಲುಳ್ಳವರ ಶೈಕ್ಷಣಿಕ ಅಗತ್ಯತೆಯನ್ನು ದೃಷ್ಟಿಯಲ್ಲಿರಿಸಿ ಕೊಂಡು, ‘ಆಡಿಯೋ ಬುಕ್ ರೀಡರ್’ ಎನ್ನುವ ವಿಶೇಷ ಸಾಧನವನ್ನು ಆವಿಷ್ಕರಿಸಿದೆ. ಎಂಟು ಘಂಟೆಗಳ ಬ್ಯಾಟರೀ ಸಾಮರ್ಥ್ಯವುಳ್ಳ ಈ ಸಾಧನವನ್ನು ಆವಿಷ್ಕರಿಸಿದೆ. ಈ ಸಾಧನವದ ಮೂಲಕ ೬೦ ಘಂಟೆಯ ಧ್ವನಿ ಸುರುಳಿಯನ್ನು ಆಯ್ಕೆಗೆ ಅನುಗುಣವಾಗಿ ಕೇಳಬಹುದಾಗಿದೆ.

ಇತರ ಚಟುವಟಿಕೆಗಳು

 • ನೇತ್ರದಾನ ಜಾಗೃತಿ ಕಾರ್ಯಕ್ರಮಗಳು ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಗಳು ಶಾಂತಿಯುತ ಪ್ರತಿಭಟನೆ ಮತ್ತು ಹೋರಾಟಗಳು ವಿಶ್ವ ದೃಷ್ಟಿ ದಿವಸ, ವಿಶ್ವ ವಿಕಲಚೇತನರ ದಿವಸ, ಸೂರದಾಸ ಜಯಂತಿ, ಲೂಯಿ ಬ್ರೈಲ್ ಜಯಂತಿ, ಹೆಲೆನ್ ಕೆಲ್ಲರ್ ಜಯಂತಿ ಮತ್ತಿತರ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳ ಸಂಘಟನೆ ಮತ್ತು ಆಚರಣೆ.

ಆದ್ಯತೆಗಳು

 • ಕಣ್ಣು ರಾಷ್ಟ್ರೀಯ ಸಂಪತ್ತು ಎಂದು ಘೋಷಣೆಯಾಗಬೇಕು ಮತ್ತು ನೇತ್ರದಾನವು ರಾಷ್ಟ್ರಿಯ ಪರಂಪರೆಯಾಗಬೇಕು.
 • ವಿಕಲಚೇತನರಿಗಾಗಿ ಮೀಸಲಾಗಿರಿಸಿದ ಸರಕಾರಿ ಹುದ್ದೆಗಲಲ್ಲಿ ಅವರು ಮಾತ್ರ ನಿಯುಕ್ತರಾಗಬೇಕು. ವಿಕಲಚೇತನರಿಗೆ ಕಂಪ್ಯೂಟರ್ ಬಳಕೆಯಲ್ಲಿ ತರಬೇತಿ ಮತ್ತು ಪುನರ್ವಸತೀಕರಣ. ವಿಕಲಚೇತನರಿಗಾಗಿ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಕ್ರಮವಾಗಿ ೩-೧ ಸ್ಥಾನಗಳನ್ನು ಮೀಸಲಾಗಿರಿಸಬೇಕು.

ಸಕ್ಷಮ’ದ ಕರ್ನಾಟಕ ಘಟಕವು ಮೇಲ್ಕಂಡ ಚಟುವಟಿಕೆಗಳನ್ನು ಕರ್ನಾಟಕಕ್ಕೂ ವಿಸ್ತರಿಸುವ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜಬಾಂಧವರು ರಾಷ್ಟ್ರನಿರ್ಮಾಣದ ಈ ಸಮಾಜ ಸೇವೆಯ ಕಾರ್ಯಕ್ಕೆ ತನು ಮನ ಧನಗಳೊಂದಿಗೆ ಸಹಕರಿಸಲು ಕೋರಲಾಗಿದೆ.
ಸಂಪರ್ಕ ವಿಳಾಸ :
ಶ್ರೀ ವಿನೋದ್ ಪ್ರಕಾಶ್
ಪ್ರಾಂತ ಸಂಯೋಜಕರು,

ಮೊ. : 9986699710

‘ಸಕ್ಷಮ’ ಯಾದವಸ್ಮೃತಿ, ನಂ. ೫೫,
ಲಿಂಕ್‌ರೋಡ್, ೧ನೇ ಮುಖ್ಯರಸ್ತೆ,
ಶೇಷಾದ್ರಿಪುರಂ, ಬೆಂಗಳೂರು – 20..

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

HINDU SEVA PRATISHTANA- ಹಿಂದು ಸೇವಾ ಪ್ರತಿಷ್ಠಾನ

Sat Sep 18 , 2010
ಹಿಂದು ಸೇವಾ ಪ್ರತಿಷ್ಠಾನ ಸೇವೆಯ ಭಾರತಕ್ಕೆ ಹೊಸ ಕಲ್ಪನೆಯೇನಲ್ಲ. ನಮ್ಮ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಅದೆಷ್ಟೋ ಮಹಾಪುರುಷರು ಸಮಾಜದ ದೀನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೊನೆ ಉಸಿರಿನ ತನಕ ಪರೋಪಕಾರದಲ್ಲಿ ತೊಡಗಿದ್ದನ್ನು ಕಾಣುತ್ತೇವೆ. ಮಹರ್ಷಿ ವ್ಯಾಸರು ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ ಎಂಬುದನ್ನು ಸಾರಿ ಹೇಳಿದ್ದಾರೆ. ಇಂತಹ ಮಹಾಪುರುಷರ ಆದರ್ಶವನ್ನಿಟ್ಟುಕೊಂಡು ಪ್ರಾರಂಭವಾದ ಸಂಸ್ಥೆಯೇ ಹಿಂದು ಸೇವಾ ಪ್ರತಿಷ್ಠಾನ. ‘ಲೋಕಹಿತಂ ಮಮ ಕರಣೀಯಂ’ (ಸಮಾಜಕ್ಕೆ ಹಿತವಾಗುವ ಕೆಲಸವನ್ನು ನಾನು […]