SAMSKARA BHARATI- ಸಂಸ್ಕಾರ ಭಾರತಿ,

ಸಂಸ್ಕಾರ ಭಾರತಿ
‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’
ಭಾರತೀಯ ಸಂಸ್ಕೃತಿಯ ಪೋಷಣೆಗಾಗಿ ಲಲಿತಕಲೆಗಳ ಸಂವರ್ಧನೆಗೆ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಸಂಘಟನೆ ಸಂಸ್ಕಾರ ಭಾರತಿ. ‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’ ಎಂಬುದು ಸಂಸ್ಕಾರ ಭಾರತಿಯ ಧ್ಯೇಯ ವಾಕ್ಯ.
ವ್ಯಕ್ತಿಯನ್ನು ಸಮಾಜ-ದೇಶದೊಂದಿಗೆ ಜೋಡಿಸುವ ಶಕ್ತಿ ಭಾರತೀಯ ಕಲೆಗಳಿಗಿವೆ. ವ್ಯಕ್ತಿತ್ವವನ್ನು ಹೆಚ್ಚಿಸಲು ಕಲೆಯ ಆಸಕ್ತಿ-ಅಭಿವ್ಯಕ್ತಿ ಎಂದಿಗೂ ಸಹಕಾರಿ.
ಭಾವನಾತ್ಮಕವಾದ ಸಮಾಜ ಪರಿವರ್ತನೆ ಹಾಗೂ ಸಮನ್ವಯಪೂರ್ಣ ಸಮಾಜ ಜೀವನ ನಡೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಚಿಂತಕರಾಗಿದ್ದ ಭಾವೂರಾವ್ ದೇವರಸ್, ಹರಿಭಾವೂ ವಾಕಣಕರ್ ಮುಂತಾದವರ ಸಹಚಿಂತನದ ಪರಿಣಾಮವಾಗಿ ೧೯೫೪ ರಲ್ಲಿ ‘ಸಂಸ್ಕಾರ ಭಾರತಿ’ ಜನ್ಮ ತಾಳಿತು. ವಿಧ್ಯುಕ್ತವಾಗಿ ಸಂಸ್ಕಾರ ಭಾರತಿಯ ಆರಂಭ, ೧೯೬೧ ರಲ್ಲಿ ಲಕ್ನೋದಲ್ಲಿ. ಯೋಗೀಂದ್ರಜೀಯವರು ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಯಾಗಿ ಇಂದಿಗೂ ಕಾರ‍್ಯನಿರ್ವಹಿಸುತ್ತಿದ್ದಾರೆ. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ೧೫೦೦ಕ್ಕಿಂತ ಹೆಚ್ಚು ಸಮಿತಿಗಳ ಮೂಲಕ ಸಾವಿರಾರು ಚಟುವಟಿಕೆಗಳನ್ನು ‘ಸಂಸ್ಕಾರ ಭಾರತಿ’ ನಡೆಸುತ್ತಿದೆ. ಅಸ್ಸಾಂ, ಮಣಿಪುರದಂತಹ ಪೂರ್ವಾಂಚಲ ಭಾರತದ ಪ್ರದೇಶಗಳಲ್ಲೂ ಸಂಸ್ಕಾರ ಭಾರತಿಯ ನೂರಾರು ಚಟುವಟಿಕೆಗಳು ನಡೆಯತ್ತಿದ್ದು, ಅಲ್ಲಿಯ ಕಲೆಗಳನ್ನು ರಾಷ್ಟ್ರಜೀವನದ ಮುಖ್ಯ ಧಾರೆಯಲ್ಲಿ ಜೋಡಿಸುವಲ್ಲಿ ನೆರವಾಗುತ್ತವೆ.


ಕರ್ನಾಟಕದಲ್ಲಿ ಸಂಸ್ಕಾರ ಭಾರತಿಯು ೧೯೯೫ ರಲ್ಲಿ ವಿಧ್ಯುಕ್ತವಾಗಿ ಚಾಲನೆಗೊಂಡಿತು. ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ನೂರಾರು ಚಟುವಟಿಕೆಗಳನ್ನು ಈಗಾಗಲೇ ಮಾಡಿರುವ ಸಂಸ್ಕಾರ ಭಾರತಿ, ಕರ್ನಾಟಕದ ಕಲಾಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ. ಹಂಪಿಯಲ್ಲಿ ನಡೆದ ಅಖಿಲ ಭಾರತೀಯ ಚಿತ್ರಕಲಾ ಶಿಬಿರ, ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ರಂಗೋಲಿ ತರಬೇತಿ ಶಿಬಿರ, ಚನ್ನೇನಹಳ್ಳಿಯಲ್ಲಿ ಅಖಿಲಭಾರತೀಯ ಕಲಾಸಾಧಕ ಸಂಗಮ, ಮೈಸೂರಿನಲ್ಲಿ ಅಖಿಲಭಾರತ ಸಂಗೀತ ಕಲಾವಿದರಿಂದ ನಾದ ವೈಭವ, ಅನೇಕ ನಾಟಕ ಕಾರ‍್ಯಾಗಾರಗಳು, ನೃತ್ಯ ಅಧ್ಯಾಪಕರ ಸಮಾವೇಶ, ಇತ್ಯಾದಿ ಚಟುವಟಿಕೆಗಳು ಸಮಾಜದ ಕಲಾಸಕ್ತರ ಗಮನ ಸೆಳೆದಿದೆ.
ಇದಲ್ಲದೆ ಭಾರತೀಯ ಕಲೆಗಳಿಗೆ ಪೂರಕವಾಗುವ ದೇಶಭಕ್ತಿಗೀತೆಗಳ ನೃತ್ಯ, ಕಲೆಯ ಕುರಿತ ವಿಚಾರ ಸಂಕಿರಣ, ಉಪನ್ಯಾಸ ಮಾಲೆಗಳು, ಕೃಷ್ಣಲೋಕ ಕಾರ‍್ಯಕ್ರಮ, ಸಂಸ್ಕಾರ ಶಿಬಿರಗಳು, ಗಮಕವಾಚನ, ವಂದೇ ಮಾತರಂ ಉತ್ಸವಗಳು, ಭಜನಾ ಶಿಬಿರಗಳು, ಪ್ರತಿಷ್ಠಿತ, ಸಮಾರಂಭಗಳಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು, ಯಕ್ಷಗಾನ ತರಬೇತಿ ಶಿಬಿರ- ಹೀಗೆ ಬಗೆಬಗೆ ಚಟುವಟಿಕೆಗಳಿಂದ ಸಂಸ್ಕಾರ ಭಾರತಿ ಸದಾಸಕ್ರಿಯ.
ಎರಡು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಲಾ ಉತ್ಸವ, ವರ್ಷಕ್ಕೊಮ್ಮೆ ಪ್ರಾಂತ ಮಟ್ಟದ ಕಲಾ ಉತ್ಸವ, ಯುಗಾದಿ, ಗುರುಪೂರ್ಣಿಮೆ ಯಂದು ಗುರುವಂದನಾ ಕಾರ‍್ಯಕ್ರಮ, ಕೃಷ್ಣಾಷ್ಟಮಿ ದಿನ ಕೃಷ್ಣಲೋಕ ಕಾರ‍್ಯಕ್ರಮ, ದೀಪಾವಳಿ ದಿನ ‘ಮಿಲನ’ ಉತ್ಸವ, ಜನವರಿ ೨೬ ರಂದು ಭಾರತ್ ಮಾತಾ ಪೂಜನ ಕಾರ‍್ಯಕ್ರಮ, ಭಾರತೀಯ ಕಲೆಗಳ ಪಿತಾಮಹ ಎಂದೇ ಗುರುತಿಸಲ್ಪಟ್ಟ ಭರತ ಮುನಿಯ ಜಯಂತಿ ಅಲ್ಲಲ್ಲಿ ಆಚರಿಸಲಾಗುತ್ತದೆ.
ಯುವಜನರಲ್ಲಿ ರಾಷ್ಟ್ರಭಾವನೆಯ ಜಾಗೃತಿ ಮೂಡಿಸಿ, ನಾಡು-ನುಡಿಗೆ ಸಂಬಂಧಿಸಿದ ಕಥನಶೈಲಿಯ ನಿರೂಪಣೆಯೊಂದಿಗೆ ದೇಶಭಕ್ತಿಗೀತೆಗಳಿಂದ ಕೂಡಿದ ವಿಶಿಷ್ಟ ಕಾರ‍್ಯಕ್ರಮ ‘ಜಾಗೋಭಾರತ್’ ಕರ್ನಾಟಕದಲ್ಲಿ ಜನಪ್ರಿಯ ಗೊಳ್ಳುತ್ತದೆ.
ಈ ರೀತಿ ಸಂಸ್ಕಾರ ಭಾರತಿಯು ಎಲ್ಲಾ ವರ್ಗದ ಜನರ ಮನಸ್ಸಿನಲ್ಲಿ ಕಲೆಯನ್ನು ಸಾಕಾರಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ‍್ಯಕ್ರಮದಲ್ಲಿ ಮುಂದೆ ಹೆಜ್ಜೆಯಿಡುತ್ತಾ ಸಾಗಿದೆ.
ವಿವರಗಳಿಗೆ.
ಸಂಸ್ಕಾರ ಭಾರತಿ, ಕರ್ನಾಟಕ
‘ಯಾರವ ಸ್ಮೃತಿ’, ೧ನೇ ಮುಖ್ಯರಸ್ತೆ
ಶೇಷಾದ್ರಿಪುರಂ, ಬೆಂಗಳೂರು – ೫೬೦ ೦೨೦

ಸಂಪರ್ಕ : ಶ್ರೀಪತಿ –  9945629991

ಚಕ್ರವರ್ತಿ ತಿರುಮಗನ್ – 9449837360

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

SAMSKRITA BHARATI - ಸಂಸ್ಕೃತ ಭಾರತಿ

Sat Sep 18 , 2010
ಸಂಸ್ಕೃತ ಭಾರತಿ ಸಂಸ್ಕೃತವನ್ನು ಮತ್ತೊಮ್ಮೆ ಜನಸಾಮಾನ್ಯರ ವ್ಯವಹಾರದ ಭಾಷೆಯನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಪ್ರಾರಂಭವಾದ ಆರೆಸ್ಸೆಸ್‌ನ ಸಹಸಂಘಟನೆ ‘ಸಂಸ್ಕೃತಭಾರತಿ’. ೧೯೮೧ರಲ್ಲಿ ಅದೇ ತಾನೇ ತಿರುಪತಿಯಿಂದ ಸಂಸ್ಕೃತದ ಅಧ್ಯಯನ ಮುಗಿಸಿಬಂದ ಮೂವರು ತರುಣರಿಂದ ಈ ಕಾರ್ಯ ಪ್ರಾರಂಭ. ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ೧೦ದಿನದಲ್ಲಿ ದಿನಕ್ಕೆರಡು ಗಂಟೆಯಂತೆ ನಡೆಸಲಾಗುವ ಸಂಭಾಷಣಾ ಶಿಬಿರದ ಮೂಲಕ ಸಂಘಟನೆಯ ಆರಂಭ. ಸಂಸ್ಕೃತದ ಬಗ್ಗೆ ಪ್ರೀತಿಯನ್ನು ಶ್ರದ್ಧೆಯನ್ನು ಇರಿಸಿಕೊಂಡು ಅದರ ಉತ್ಥಾನಕ್ಕಾಗಿ ಪ್ರಯತ್ನಪಡುತ್ತಿರುವ ಸಾವಿರಾರು ಸಂಸ್ಥೆಗಳು ದೇಶದಲ್ಲಿ ಇಂದಿಗೂ ಕೆಲಸ […]