ಡಾ|| ಕೆ. ಎಸ್. ನಾರಾಯಣಾಚಾರ‍್ಯ

(Article appeared in Vikrama December-2011)

“ಹಿಂದೂಗಳಲ್ಲಿ ನಡೆದುಕೊಂಡು ಬಂದ ರೀತಿ, ನೀತಿ, ಆಚಾರ, ವಿಚಾರ, ಎಲ್ಲ ಕಂದಾಚಾರ, ಮೂಢನಂಬಿಕೆ” ಎಂದು ಬಿಂಬಿಸಲು ನಡೆದಿರುವ ಒಂದು ಚಳವಳಿಯಲ್ಲಿ ಎಲ್ಲರೂ ಸಾಮುದಾಯಿಕ, ವಿಶಾಲ ಪ್ರಜ್ಞೆಗಳನ್ನು ಮರೆತು ಅಡ್ಡದಾರಿ ಹಿಡಿಯುತ್ತಿದ್ದೇವೆಂದು ತೋರುತ್ತದೆ. “ಎಂಜಲೆಲೆಯ ಮೇಲೆ ಮಠಾಧೀಶರು ಉರುಳಾಡಲಿ” ಎಂದು ಇಂದು ಒಬ್ಬ ಢೋಂಗೀ ವಿಚಾರವಾದಿ ಸವಾಲೆಸೆದಿರುವ ವರದಿಯಿದೆ!

“ಎಂಜಲೆಲೆಯ ಮೇಲೆ ಉರುಳಾಡಿ” ಎಂದು ಗೀತೆಯೋ, ವೇದೋಪನಿಷತ್ತುಗಳೋ ಹೇಳಿಲ್ಲ. ಧರ್ಮಶಾಸ್ತ್ರಗಳು “ಎಂಜಲೂಟ”ವನ್ನು ತಾಮಸದ ಆಹಾರ, ಅಶುದಟಛಿ, ಅಸ್ವೀಕಾರ ಎಂದೇ ಖಂಡಿಸಿವೆ. “ಉಚ್ಛಿಷ್ಟಮಪಿ ಚಾಮೇಧ್ಯಂ ತಾಮಸ ಪ್ರಿಯಂ” ಎಂದು ಗೀತೆಯೇ ಹೇಳುತ್ತದೆ. ವರ್ಣಾಶ್ರಮದ ಯತಿಗಳಿಗೆ ಗೃಹಸ್ಥನು, ವೈಶ್ವದೇವ ಮಾಡಿ, ಉಂಡಬಳಿಕ, ಪಾತ್ರೆಯಲ್ಲಿ ಮಿಕ್ಕದ್ದನ್ನು ಮಾತ್ರ ಬಡಿಸಬೇಕೆಂದು ಶಾಸ್ತ್ರವಿದೆ. ಆಶ್ರಮಗಳಲ್ಲಿ ಗೃಹಸ್ಥನದೇ ಶ್ರೇಷ್ಠವೆನ್ನುತ್ತಾನೆ ಮನು. “ತಸ್ಮಾತ್ ಜ್ಯೇಷ್ಠಾಶ್ರಮೋ ಗೃಹೀ”. ಉಳಿದ ಮೂರೂ ಭಿಕ್ಷಾಶ್ರಮಗಳು. ಇಂದು ಯಾರೂ ಹೀಗೆ ಮಾಡುವುದಿಲ್ಲ ಎಂಬುದು ವಿಡಂಬನೆಯ ಮಾತು. ಶಾಸ್ತ್ರ ಬೇರೆ. ಈಗಣ ಆಚರಣೆಗೆ ಯಾವಾಗಲೋ ಎಲ್ಲೋ ಹುಟ್ಟಿಬಂದ ಒಂದು ನಂಬಿಕೆ, ಶ್ರದೆಟಛಿ ಮೂಲ, ಹೊರತು ಹಿಂದೂ ಧರ್ಮಶಾಸ್ತ್ರ ಅಲ್ಲ. ನೆಪ, ಸಂದರ್ಭ ಸಿಕ್ಕೊಡನೆ ಹಿಂದೂ ಧರ್ಮವನ್ನೇ ಜರೆದಾಡುವ ತಲೆಹರಟೆಗಳ ಸಂಘಗಳು ಈಗ ಎಲ್ಲೆಲ್ಲೂ ಇವೆ. ಇವು ಅನಾಗರೀಕವೂ , ಅಮಾನುಷವೂ, ಅಸಹ್ಯವೂ ಆದ ಇತರ ಮತಗಳ ಅರ್ಥಹೀನ ಆಚರಣೆಗಳನ್ನು ಖಂಡಿಸದೆ, ಏಕಪಕ್ಷೀಯವಾಗಿ, “ಸೆಲೆಕ್ಟಿವ್ ಆಗಿ”, ಆರಿಸಿ, ಆರಿಸಿ ಹಿಂದೂಗಳನ್ನೇ ಗುರಿಯಾಗಿಸಿ ನಗೆಯಾಡುವ ರೀತಿಗೆ ಕಡಿವಾಣ ಹಾಕುವವರಿಲ್ಲವಾಗಿದೆ. ಕೋಟಿ ಕೋಟಿ ಸಂಖ್ಯೆಯ ಸ್ತ್ರೀಯರಿಗೆ “ಬುರ್ಖಾ” ಹಾಕಿ, ಬುಟ್ಟಿಯಲ್ಲಿಡುವ ಕೆಟ್ಟ ಪದಟಛಿತಿಯತ್ತ ಇವರೇಕೆ ಗಮನಹರಿಸಲಾರರು? ಅಲ್ಲಿ ಬರೀ ಶ್ರದೆಟಛಿಯಲ್ಲ, “ಮತಧರ್ಮ” ಆಧಾರವಿದೆಯೆಂದೋ- “ಪರ್ಸನಲ್ ಲಾ”- ಎಂದೋ ಬೊಬ್ಬಾಟ ಮಾಡುತ್ತಾರಲ್ಲ? ಇದು ನಿಲ್ಲುವುದು,ಸ್ತ್ರೀ

ವಿಮೋಚನೆ ಆಗುವುದು ಯಾವಾಗ?

ಕಣ್ಣಿಗೆ ಕಾಣದ ಸೈತಾನನ ಸ್ಥಳದಲ್ಲಿ ಬೇರೆಲ್ಲೋ ಮರುಳುಗಾಡಿನಲ್ಲಿ “ಕಲ್ಲುಹೊಡೆಯುವುದು”, ಅದರ ಆಚರಣೆಯ ಮರುಕಳಿಕೆಯನ್ನು ಇಲ್ಲಿ ನಡುಬೀದಿಯಲ್ಲಿ ಗಣೇಶನ ಹಬ್ಬ, ಬೇರೆ ಉತ್ಸವಗಳಲ್ಲಿ ಆಚರಿಸಿ ಶಾಂತಿ ಕದಡುವುದು ಎಂಜಲೆಲೆಯ ಮೇಲೆ ಉರುಳುವುದಕ್ಕಿಂತ ಘೋರವಲ್ಲವೆ? ಇಲ್ಲಿ ಈ ವಿರುದಟಛಿ ಚಳುವಳಿ ಏಕೆ ಬೇಡ? ಜಿ. ಕೆ. ಗೋವಿಂದರಾಯರು ಯೋಚಿಸಬೇಡವೇ? ಹಿಂದುಗಳ ನಡುವೆ ಹಿಂದು ಊರುಗಳಲ್ಲಿ ಯಾವುದೋ ಹಬ್ಬದ ನೆಪದಲ್ಲಿ ಲಕ್ಷ ಲಕ್ಷ ದನ, ಕುರಿ, ಆಡು, ಒಂಟೆಗಳನ್ನು ಬಹಿರಂಗವಾಗಿಯೇ ಕೊಲ್ಲುತ್ತಾ ಬರುವುದು ನಡೆದಿದೆಯಲ್ಲ? ಉರುಳಾಟದಲ್ಲಿ ಏನು ಹಿಂಸೆ ಇದೆ? ಯಾರು ಸಾಯುತ್ತಾರೆ? ಯಾವ ಮಾಂಸಾಹಾರ ಇಲ್ಲಿ ನಡೆಯುತ್ತದೆ? ಕೋಮು ಜಗಳ ಎಲ್ಲಿದೆ? ಗೋವಿಂದರಾಯರು ಯಾರಿಗೆ

ಬುದಿಟಛಿ ಹೇಳಬೇಕು?

‘ಎಂಜಲೆಲೆಯ ಮೇಲೆ ಉರುಳಾಡಿದ ಹೊರತು ಹಿಂದುಗಳಿಗೆ ಮೋಕ್ಷವಿಲ್ಲ’ ಎಂದು ನಾನೋ ಯಾರೋ ಹೇಳುತ್ತಿಲ್ಲ . “ತನ್ನ ಮತಬಾಹಿರರನ್ನು ಕೊಂದಹೊರತು ಸ್ವರ್ಗಪ್ರವೇಶವಿಲ್ಲ” ಎನ್ನುತ್ತ ಆತ್ಮಹತ್ಯಾದಳಕ್ಕೆ ಪ್ರೇರಣೆ, ಕುಮ್ಮಕ್ಕು ಕೊಡುವ ಪ್ರಚೋದನಾತ್ಮಕ ಮತಗಳಿವೆಯಲ್ಲ? ಅವು ಪ್ರಕಟವಾಗಿಯೇ ಕಾರ್ಯಪರವೂ ಆಗಿವೆಯಲ್ಲ? USuಘಟನೆ, ಮುಂಬೈ ತಾಜ್ ಪ್ರಕರಣ, ಪಾರ್ಲಿಮೆಂಟ್ ಸ್ಫೋಟ ಯತ್ನ ಪ್ರಕರಣ ಇವೆಯಲ್ಲ? ಗೋವಿಂದರಾಯರು ಈ ಬಗ್ಗೆ ಏಕೆ ಮಾತನಾಡುವುದಿಲ್ಲ? ಭಿಕ್ಷುಕನಿಗೂ ಎಂಜಲು ಹಾಕಬೇಡ ಎನ್ನುತ್ತದೆ ನಮ್ಮ ಶಾಸ್ತ್ರ. ಎಂಜಲು ಹಾಕುವುದು ನಾಯಿ, ಬೆಕ್ಕು ಇಂಥ ಪ್ರಾಣಿಗಳಿಗೆ. ಈ ಬಗ್ಗೆ ಏಕೆ ರಾಯರು ವಿಚಾರಿಸುವುದಿಲ್ಲ? ಇಲ್ಲಿ ಜಾತಿ ಪ್ರಶ್ನೆ ಏಳುವುದಿಲ್ಲ. ಬಲಾತ್ಕಾರವೂ ಇಲ್ಲ. ಸ್ವಪ್ರೇರಣೆಯಿಂದ ಯಾರೋ ಭಕ್ತರು ಮಾಡುವ ಆಚರಣೆಗೆ, ನಡುವೆ ತಲೆಯಿಕ್ಕಿ ಸಲ್ಲದ ಪ್ರಚಾರ ಕೊಟ್ಟು ಧೂಳೆಬ್ಬಿಸಿ ಹಿಂದುಗಳನ್ನು ಪರೋಕ್ಷ ಟೀಕೆಗೆ, ಛೀಮಾರಿಗೆ ಗುರಿಮಾಡುವುದು ಏಕೆ?

ಇಲ್ಲಿ ಕಮ್ಯುನಿಸ್ಟರಿಗೆ ಬೇರೆ ಕೆಲಸವಿಲ್ಲ ಎಂಬುದೊಂದು ಕಾರಣವಿರಬೇಕು. ಈ ಚಳುವಳಿಯ ಹಿಂದೆ ದಿಕ್ಕುಗೆಟ್ಟ, ಮತಾಂತರಿತರೂ ಸೇರಿರಬೇಕೆಂದು ಅನಿಸುತ್ತದೆಯಲ್ಲವೆ? ಈ ಹಿಂದೆ ಒಬ್ಬ , ಒಂದು ಮತದವನು ತನ್ನ ಸೊಸೆಯನ್ನೇ ವ್ಯಭಿಚರಿಸಿದ. ಆ ಮತ ಮುಖಂಡರು ಆಮೇಲೆ ಆಕೆಯ ಗಂಡನನ್ನು “ಇನ್ನುಮೇಲೆ ಅವಳ ಮಗ” ಎಂದು ಸಾರಿದರು ! ಯಾವ ಗೋವಿಂದರಾಯರು ಪ್ರತಿಭಟಿಸಲಿಲ್ಲ ! “ನೆನ್ನೆವರೆಗೆ ಗಂಡ ! ಈಗ ಮಗ !” – ಇದು ಎಂಥ ಮಾನವೀಯತೆ ! ಅಮಾನುಷತೆ ಎಲ್ಲಿದೆ? ಯೋಚಿಸುವಿರಾ? ಸಾಮೂಹಿಕ ಊಟದಲ್ಲಿ ಟೇಬಲ್ ಮೇಲೆ ಕುಳಿತು ಉಣ್ಣುವುದು ಒಬ್ಬರೊಬ್ಬರ ಎಂಜಲಲ್ಲವೇ? ಶಾಸ್ತ್ರ, ಮಡಿ, ಆರೋಗ್ಯ ಶಾಸ್ತ್ರ ನಿಷೇಧಿಸುವುದು ಈ ಸಾಮೂಹಿಕ ದುರಾಚಾರವನ್ನಲ್ಲವೇ? ವ್ಯಭಿಚಾರ ಗೃಹವಿದೆಯಲ್ಲ-ಚ್ಟಿಟಠಿeಛ್ಝಿ, ಅಥವಾ ಪಬ್, ಕ್ಲಬ್ ಎಂಬವು? ಇಲ್ಲಿ ಎಲ್ಲ ಮಾರಿಕೊಳ್ಳುವವರ ಮೈ ಎಂಜಲಲ್ಲವೇ? ಒಬ್ಬ ವೇಶ್ಯೆಯನ್ನಾದರೂ ವೇಶ್ಯಾಗೃಹದಿಂದ ಪಾರುಮಾಡುವ ಯತ್ನವನ್ನು ನಿಮ್ಮ ಗುಂಪಿನವರೋ ನೀವೋ ಮಾಡಿದ್ದೀರಾ?

ಸ್ತ್ರೀವಿಮೋಚನಾ ಚಳುವಳಿಗಳು, ಬೇರೆ ಮತದವರ ಆಚರಣೆಗೆ ಹೆದರುವುದೇಕೆ? “ಎಷ್ಟಾದರೂ ಹೆಂಡತಿಯರು, ಅಸಂಖ್ಯಾತ ವೇಶ್ಯೆಯರು ಇರಬಹುದೆಂಬುದು” ಎಂಜಲು ಹೊರಳಾಟವಲ್ಲವೆ? ಈ ಬಗೆಯ ಗ್ರಂಥಗಳನ್ನು ಓದಿದ್ದೀರಾ? ಭಯೋತ್ಪಾದನೆಗೆ ಪ್ರಚೋದನೆಯಾಗಿರುವ ಮತಗಳು ಯಾರ ಎಂಜಲು? ಪರ ದೇಶದ ಹಣ ಇಲ್ಲಿ ವಿಧ್ವಂಸ ಕಾರ್ಯಕ್ಕೆ ಬಳಸುವುದು ಎಂಜಲಲ್ಲವೇ? ರಾಜಕೀಯ ಚೆಲ್ಲಾಟ, ಅಟ್ಟಹಾಸಗಳೆಲ್ಲ ಎಂಜಲು ತಿನ್ನುವುದಲ್ಲವೆ? ಬರೀ ಹೊರಳಾಟವೇ? ಇಲ್ಲಿ ನರಳಾಟ ಜನಸಾಮಾನ್ಯರದು, ನಿಮಗೆ ಕಾಣುವುದಿಲ್ಲವೆ? ಬರೀ ಕೆಸರೆರಚಾಟವೇ? ತಮಿಳುನಾಡಿನ ಕರುಣಾನಿಧಿ ಕುಟುಂಬದ ಎಂಜಲನ್ನು ಕೇಂದ್ರದ ಯಾವ ಯಾವ ನಾಯಕರು ತಿನ್ನುತ್ತಿದ್ದಾರೆಂಬುದು ಚಿದಂಬರಂಗೆ ಗೊತ್ತಿದೆ ! ಕರ್ನಾಟಕದ ಎಂಜಲಿನ ಬಗ್ಗೆ ಎಸ್. ಎಂ. ಕೃಷ್ಣ, ಧರಂ ಸಿಂಗ್,ಕುಮಾರಸ್ವಾಮಿಯವರನ್ನು ನೀವು ಕೇಳಬೇಡವೆ? ಎಲ್ಲೆಲ್ಲೂ ಎಂಜಲೇ ! ನಿಮ್ಮ ವಿಚಾರ ಆಚಾರ, ಅಪಪ್ರಚಾರ ಒಳಗೊಂಡಂತೆ – ಇಲ್ಲೆಲ್ಲ ಉರುಳಾಡುತ್ತಿರುವವರು ಯಾರು?

ನಿಲ್ಲಿಸಬೇಕಾದವರದ್ದೇ, ಕಳ್ಳನ ತಿರುಬೊಬ್ಬೆ ! ಸಾಕು ನಿಲ್ಲಿಸಿರಯ್ಯಾ !

ಸಾಮೂಹಿಕ ಊಟದಲ್ಲಿ ಟೇಬಲ್ ಮೇಲೆ ಕುಳಿತು ಉಣ್ಣುವುದು ಒಬ್ಬರೊಬ್ಬರ ಎಂಜಲಲ್ಲವೇ? ಶಾಸ್ತ್ರ, ಮಡಿ, ಆರೋಗ್ಯ ಶಾಸ್ತ್ರ ನಿಷೇಧಿಸುವುದು ಈ ಸಾಮೂಹಿಕ ದುರಾಚಾರವನ್ನಲ್ಲವೇ?

– ಡಾ|| ಕೆ. ಎಸ್. ನಾರಾಯಣಾಚಾರ‍್ಯ