ಆನೇಕಲ್ಲು: ಬೆಂಗಳೂರು ಹೊರ ವಲಯ ಚನ್ನೇನಹಳ್ಳಿಯ ಜನ ಸೇವಾ ವಿದ್ಯಾಕೇಂದ್ರ ವಸತಿ ಶಾಲೆಯ ೨೦೧೦-೧೧ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೯೪ ಫಲಿತಾಂಶ ಲಭಿಸಿದೆ ಎಂದು ವಿಶ್ವಸ್ಥ ಕಾರ್ಯದರ್ಶಿ ನಿರ್ಮಲ್ ಕುಮಾರ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೧೩೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ೧೨ ಡಿಸ್ಟಿಂಕ್ಷನ್, ೭೮ ಪ್ರಥಮ ದರ್ಜೆ ಉತ್ತೀರ್ಣರಾಗಿದ್ದಾರೆ. ಮೊನಿಷ್ ಕೆ.ಟಿ. ೫೮೫ (ಶೇ.೯೩.೬) ಅಂಕಗಳನ್ನು ಪಡೆದಿದ್ದಾರೆ. ಅನುಕ್ರಮವಾಗಿ ನಿಖಿಲ್ ಸಿಂಗ್ರಿ ೫೮೧, ವಾಸುದೇವ ಮೂರ್ತಿ ೫೮೧, ನಿರಂಜನ್ ಕುಮಾರ್ ಎಲ್. ಆರ್. ೫೭೮, ಅಕ್ಷಯ್ ರಾಥೋಡ್ ೫೭೬, ರವಿ ಜೆ.ಎನ್. ೫೬೪, ಸಾಯಿ ಪವನ್ ೫೬೩ ಅಂಕಗಳನ್ನು ಪಡೆಯುವ ಮೂಲಕ ಶೇ. ೯೦ಕ್ಕಿಂತ ಹೆಚ್ಚು ಸಾಧನೆಗೈದಿದ್ದಾರೆ ಎಂದರು. ಪಿಯು ಶೇ. ೮೫ ಫಲಿತಾಂಶ: ಜನಸೇವಾ ವಿದ್ಯಾ ಸಂಸ್ಥೆ ವಸತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಕ್ರಮವಾಗಿ ಶೇ. ೮೫ ಹಾಗೂ ೫೦ ಫಲಿತಾಂಶ ಬಂದಿದೆ.

ಕೃಪೆ : ಕನ್ನಡಪ್ರಭ