ವಿದೇಶಗಳಿಂದ ಹರಿದು ಬರುತ್ತಿರುವ ಹೇರಳ ಹಣಬಲದಿಂದ ಮುಗ್ದ, ಅಮಾಯಕರನ್ನು ಪ್ರಲೋಭನೆಗೊಳಪಡಿಸಿ ಅವ್ಯಾಹತವಾಗಿ ಮತಾಂತರ ಮಾಡಲಾಗುತ್ತಿದೆ, ಈ ಅನ್ಯಾಯವನ್ನು ತಡೆಯಲು ತಕ್ಷಣವೇ ಕಾನೂನು ರಚಿಸಬೇಕೆಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ರಾಜ್ಯಪಾಲ ರಾಮಾಜೋಯಿಸ್ ಓತ್ತಾಯಿಸಿದರು.  ರಾಜ್ಯಪಾಲ ಹಂಸರಾಜ ಭಾರಧ್ವಾಜ್ ಅವರನ್ನು ಇಂದು ಭೇಟಿ ಮಾಡಿದ ‘ಸಿಟಿಜನ್ ಫ಼ಾರ್ ಹಾರ್ಮೋನಿ’ ನಿಯೋಗದ ಪರವಾಗಿ ಪತ್ರಕರ್ತರನ್ನು ಸಂಭೋದಿಸಿದ ಜೋಯಿಸ್, ಬಲವಂತದ ಮತಾಂತರ     ಧರ್ಮದ ಜೊತೆಗೆ ಸಮಾಜಕ್ಕೆ ಮತ್ತು ದೇಶಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟರು. ಧರ್ಮ ಪ್ರಚಾರ ತಪ್ಪಲ್ಲ. ಆದರೆ, ಆಸೆ-ಆಮಿಷ ಒಡ್ಡಿ ಬಲವಂತದಿಂದ   ಮತಪರಿವರ್ತನೆ ಘೋರ ಅಪರಾಧ. ಮಕ್ಕಳಿಗೆ ಚಾಕೋಲೆಟ್ ತೋರಿಸಿ ತಮ್ಮತ್ತ ಸೆಳೆಯುವಂತೆ, ಮುಗ್ದ, ಅಮಾಯಕರನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ರಾಮಾಜೋಯಿಸ್ ‘ಮತಾಂತರ  ನಿಷೇಧ ಕಾನೂನು ರಚಿಸುವುದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕೆಲಸ. ಭವಾನಿಶಂಕರ್ ಆಯೋಗದ ವರದಿಯನ್ವಯ ಮಧ್ಯ ಪ್ರದೇಶ ಹಾಗೂ ಓರಿಸ್ಸಾ ರಾಜ್ಯಗಳಲ್ಲಿ ಮತಾಂತರ    ನಿಷೇಧ ಕಾನೂನು  ರಚಿಸಲಾಗಿದೆ’ಎಂದರು.

ನಂತರ ಮಾತನಾಡಿದ ಖ್ಯಾತ ಸಂಶೋಧಕ  ಡಾ. ಎಂ.ಚಿದಾನಂದಮೂರ್ತಿ, ‘ಕಳೆದ ವಾರ  ಹಳೆ ವಿಮಾನ ನಿಲ್ದಾಣದ ಬಳಿಯಿರುವ ಮಾರತಹಳ್ಳಿಯ ಮನೆ-ಮನೆಗೆ ನುಗ್ಗಿ ಹಿಂದು ದೇವ-ದೇವತೆಯರ ಭಾವಚಿತ್ರವನ್ನು ಬಿಸಾಡುವಂತೆ ಹಣ ನೀಡಿ ಪ್ರಚೋಧಿಸಲಾಗಿದೆ, ಹಿಂದುಗಳಿಗೆ ದೇವಸ್ಥಾನಕ್ಕೆ ಹೋಗದಂತೆ ಉಪದೇಶಿಸಲಾಗಿದೆ. ಇಂತಹ ಅಕ್ರಮವನ್ನು ತಡೆಯಲು ಮತಾಂತರ ನಿಷೇಧ ಕಾನೂನು ಅತ್ಯವಶ್ಯ’ ಎಂದರು.

ನಿಯೋಗ, ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ, ಡಾ. ಸುಮತೀಂದ್ರ ನಾಡಿಗ್, ಆದಿಚುಂಚನಗಿರಿ ಮಠದ ಕಿರಿಯ ಸ್ವಾಮಿಜೀಗಳಾದ ನಿರ್ಮಲಾನಂದ ಸ್ವಾಮಿಜಿ, ಮತ್ತು ಇತರ ಗಣ್ಯರನ್ನು ಒಳಗೊಂಡಿತ್ತು.

 

Ramajois for strict anti-conversion law ; to protect innocents from forceful conversion

‘Conversion done by provocating innocents using huge foreign funds is breaking the society and the nation. Forceful conversion should be banned by making a strict law’, said former Chief Justice & former Governor Dr. Rama Jois. He was addressing the media on behalf of the delegation, which met Karnataka governor Hansraj Bharadwaj today to stress on the need of anti-conversion law in the state.

On the invitation of governor to discuss the issue, ‘Citizens For Harmony’ delegation met the governor in Raj Bhavan,Bengaluru.

Talking on the occasion, renowned researcher Dr. M Chidanadamurthy elaborated a last week’s incident in Marathahalli, where some miscreants barged into all houses and offered money for throwing photos of Hindu deity out of the houses. ‘Hindus were also brain-washed to not to visit the temples’, added Murthy. Dr.Murthy hailed the meeting with the governor as a success and urged for the formation of anti-conversion law.

Noted littérateurs Dr Doddarange Gouda,Dr Sumatindra Nadig and several religious leaders were part of the delegation.