ಹಿಂದುಗಳನ್ನು ಹತ್ತಿಕ್ಕುವ ಕರಾಳ ಮಸೂದೆ: ದತ್ತಾತ್ರೇಯ ಹೊಸಬಾಳೆ

ಶಿವಮೊಗ್ಗ:  ದಿನಾಂಕ 24-8-2011

ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ದಿನಾಂಕ 24-8-2011ರ ಸಂಜೆ 6-30ಕ್ಕೆ ನಗರದ ವಿಕಾಸ ಟ್ರಸ್ಟ್ ಹಾಗೂ ರಾಷ್ಟ್ರೋತ್ಥಾನ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಗರದ ಬಹುಮಂದಿ ಪ್ರತಿಷ್ಠಿತ ಡಾಕ್ಟರ್‌ಗಳು, ಇಂಜಿನಿಯರ್‌ಗಳು, ಅಧ್ಯಾಪಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು.

ಕಾರ್ಯಕ್ರಮದ ವಿಷಯ ‘ಹುನ್ನಾರದ ಹಿಂದಿನ ಹೆಜ್ಜೆಗಳು’.

ಹುನ್ನಾರವೇನೆಂದರೆ ಭಾರತದ ಬಹುಸಂಖ್ಯಾತ ಹಿಂದುಗಳನ್ನು ಎಲ್ಲಾ ರಂಗದಿಂದಲೂ ಹತ್ತಿಕ್ಕುವಂತಹ ‘ಮತೀಯ ನಿರ್ದೇಶಿತ ಹಿಂಸಾಚಾರ ತಡೆ ಮಸೂದೆ -2011’. ಕಾರ್ಯಕ್ರಮದ ವಕ್ತಾರರು ಆರೆಸೆಸ್‌ನ ಮಾನ್ಯ ಸರ ಸಹಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು. ಅವರು ಮಾತನಾಡಿದ ವಿಷಯದ ಕೆಲವು ಪ್ರಮುಖ ಅಂಶಗಳು.

Datta-Treya-hosbale

Apartheid ಪರಿಕಲ್ಪನೆಯ ಮೂಲಕ ಅಮೇರಿಕಾದಲ್ಲಿ ಬಿಳಿಯರು ಕರಿಯರನ್ನು ಹೇಗೆ ಹತ್ತಿಕ್ಕಿದ್ದರೋ ಅದೇ ರೀತಿ ಭಾರತದ ಬಹುಸಂಖ್ಯಾತ ಹಿಂದುಗಳನ್ನು ಹತ್ತಿಕ್ಕುವ ಕರಾಳ ಮಸೂದೆ ಇದು.

ಈ ಮಸೂದೆಯಲ್ಲಿರುವುದುPossitive Discrimination ಗಿಂತ Negetive Isolation. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾಜದ ಮುಖ್ಯಧಾರೆಗೆ ತರುವಂತಹ ಘನವಾದ ಉದ್ದೇಶವನ್ನು ಮೀಸಲಾತಿ ಕಲ್ಪನೆ ಹೊಂದಿ ಅದರ ಮೂಲಕPossitive Discriminationನ್ನು ಸಾಧಿಸಲು ಹೊರಟಿದ್ದರೆ, ದೇಶವನ್ನೇ ಮತ್ತೊಮ್ಮೆ ಒಡೆಯುತ್ತಾ Negetive Isolation ತರುವಂತಹ ದುರುದ್ದೇಶ ಪೂರಿತ ಮಸೂದೆ ಈ ‘ಮತೀಯ ನಿರ್ದೇಶಿತ ಹಿಂಸಾಚಾರ ತಡೆ ಮಸೂದೆ ೨೦೧೧’.

ಜರ್ಮನಿಯಲ್ಲಿ ಯಹೂದಿಗಳನ್ನು ಮುಗಿಸಲು ಅವರ ವಿರುದ್ಧ ರಾಜಕೀಯವಾಗಿ, ಆರ್ಥಿಕವಾಗಿ ಬೇರೆ ಬೇರೆ ಷಡ್ಯಂತ್ರಗಳನ್ನು ರಚಿಸಿ ಹತ್ತಿಕ್ಕಿದಂತೆ, ಅಪಘಾನಿಸ್ಥಾನದಲ್ಲಿ ನಡೆದ ತಾಲೀಬಾನೀಕರಣದಂತೆ ಈ ಮಸೂದೆಯು ಹಿಂದುಗಳ ಅಸ್ತಿತ್ವವನ್ನೇ ಬುಡಮೇಲು ಮಾಡಲು ಹೊರಟಿದೆ.

ಈ ಮಸೂದೆಯಿಂದ ಅಪಾಯವಿರುವುದು ಕೇವಲ ಹಿಂದುಗಳಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರೆನಿಸಕೊಂಡವರಿಗೂ ಅಪಾಯವಿದೆ.  ವ್ಯಾಪಾರ- ವ್ಯವಹಾರಗಳಲ್ಲಾಗಲಿ, ಮನೆ-ನಿವೇಶನ ಹಂಚಿಕೆಗಳಲ್ಲಾಗಲೀ, ಮನೆ ಬಾಡಿಗೆ ವಿಷಯದಲ್ಲಾಗಲೀ ಮುಸ್ಲಿಂ ಮತ್ತು ಹಿಂದುಗಳು ಮುಂದೆ ಸಾಮರಸ್ಯದಿಂದ ಬದುಕುವುದು ಈ ಮಸೂದೆಯು ಕಾಯ್ದೆಯಾದಲ್ಲಿ ಕನಸಿನ ಮಾತೇ ಸರಿ.

ಕೆಲವು ಪ್ರಶ್ನೆಗಳಿವೆ.

ಮೊದಲನೆಯದಾಗಿ ಅಲ್ಪಸಂಖ್ಯಾತ, ಬಹುಸಂಖ್ಯಾತ ಪರಿಕಲ್ಪನೆಯೇ ಪ್ರಶ್ನಾರ್ಹ. ಏಕೆಂದರೆ, 75% ಕ್ರಿಶ್ಚಿಯನ್ ಇರುವ ನಾಗಾಲ್ಯಾಂಡ್‌ನಲ್ಲಾಗಲೀ, 98% ಕ್ರಿಶ್ಚಿಯನ್ ಇರುವ ಮಿಜೋರಾಂನಲ್ಲಾಗಲೀ ಅಲ್ಪಸಂಖ್ಯಾತ ವ್ಯಾಪ್ತಿಗೆ ಯಾವ ಮತದವರು ಬರುತ್ತಾರೆಂದು ಈ ಮಸೂದೆಯು ತಿಳಿಸುತ್ತದೆಯೇ ?

1980ರ ದಶಕದಲ್ಲಿ ರಾಜೀವ್‌ಗಾಂಧಿಯವರು ಈ ದೇಶದಲ್ಲಿ 45 ಮುಸ್ಲಿಂ ಬಾಹುಳ್ಯವಿರುವ ಜಿಲ್ಲೆಗಳನ್ನು ಗುರುತಿಸಿದ್ದರು. ಈಗ ಅವುಗಳ ಸಂಖ್ಯೆ 90ಕ್ಕೇರಿದೆ. ಅಂತಹ ಮುಸ್ಲಿಂ ಬಾಹುಳ್ಯವಿರುವ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಪದದ ಅರ್ಥವೇನು ?

70ರ ದಶಕದಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲ್ಲಿ ವಿದ್ಯಾರ್ಥಿಯೊಬ್ಬ ಶೌಚಾಲಯದಲ್ಲಿ ವಾಷ್‌ಬೇಸೀನ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ. ಅದನ್ನು ನೋಡಿ ಸಿಟ್ಟಿಗೆದ್ದ ಅಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಕಪಾಳಕ್ಕೊಂದು ಬಿಗಿಯುತ್ತಾನೆ. ದುರ್ದೈವವಶಾತ್ ಆ ದುಷ್ಕೃತ್ಯವೆಸಗಿದ ವ್ಯಕ್ತಿ ಒಬ್ಬ ಮುಸ್ಲಿಂ ವಿದ್ಯಾರ್ಥಿ. ಇದು ದೊಡ್ಡ ಕೋಮು ಗಲಭೆಗೆ ಕಾರಣವಾಗಿತ್ತು. ಆಗಲೇ ಕಪಾಳಕ್ಕೆ ಬಿಗಿದಿದ್ದ ವ್ಯಕ್ತಿ ಜೈಲಲ್ಲಿ 1 ತಿಂಗಳ ಶಿಕ್ಷೆ ಅನುಭವಿಸಬೇಕಾಯಿತು. ದುಷ್ಕೃತ್ಯವೆಸಗಿದ್ದ ವಿದ್ಯಾರ್ಥಿ ಸುರಕ್ಷಿತವಾಗಿ ಪಾರಾಗಿದ್ದ. ಈಗ ಚರ್ಚೆಯಲ್ಲಿರುವ ಮಸೂದೆ ಇಲ್ಲದಿದ್ದ ಆ ಸಮಯದಲ್ಲೇ ಈ ಪರಿಣಾಮವಾದರೇ, ಈ ಕಾಯ್ದೆ ಬಂದರೆ ಏನಾಗಬಹುದು….?

ಇಂತಹ ಅನೇಕ ಪ್ರಶ್ನೆಗಳಿವೆ

ಇಡೀ ಮಸೂದೆ ದೇಶದ ಜನರನ್ನು ಗುಂಪು ಮತ್ತು ಅನ್ಯರು ಎಂದು ವಿಂಗಡಿಸುತ್ತದೆ. ಕ್ರಿಶ್ಚಿಯನ್, ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಭಾಷಾ  ಅಲ್ಪಸಂಖ್ಯಾತರು ‘ಗುಂಪಿ’ನ ವ್ಯಾಪ್ತಿಗೆ ಬಂದರೆ, ದೇಶದ ಬಹುಸಂಖ್ಯಾತ ಹಿಂದುಗಳು ‘ಅನ್ಯರು’ ವ್ಯಾಪ್ತಿಗೆ ಬರುತ್ತಾರೆ. ಅರ್ಥಾತ್ ಹಿಂದುಗಳದ್ದೇ ಭಾಗವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ಹಿಂದುತ್ವದಿಂದಲೇ ಬೇರ್ಪಡಿಸುವ ಹುನ್ನಾರ ಈ ಮಸೂದೆಯದ್ದು.

‘ಗುಂಪಿ’ನ ಯಾವುದೇ ವ್ಯಕ್ತಿ ‘ಅನ್ಯರ’ ಮೇಲೆ ಹಲ್ಲೆ ಎಸಗಿದರೆ ಅದಕ್ಕೆ ಅನ್ಯರೇ ಕಾರಣರಾಗಿರುತ್ತಾರೆ. ಅಂದರೆ ಬಹುಸಂಖ್ಯಾತ ಹಿಂದುಗಳ ಮೇಲೆ ಹಲ್ಲೆ ಎಸಗುವ ಯಾವ ಅಲ್ಪ ಸಂಖ್ಯಾತನೂ ಅಪರಾಧಿ ಸ್ಥಾನದಲ್ಲಿ ನಿಲ್ಲಲು ಸಾಧ್ಯವಿಲ್ಲ. ಏಕೆಂದರೆ ಆತನ ಅಪರಾಧಕ್ಕೆ ‘ಅನ್ಯ’ನೇ ಕಾರಣನಾಗಿರುತ್ತಾನೆ. ಉದಾಹರಣೆಗೆ ಗೋಧ್ರಾ ದಂಗೆ. ಪ್ರಸ್ತುತ ಮಸೂದೆಯು ಚರ್ಚೆಯಾಗುತ್ತಿರುವ ಮೊದಲೇ ನಡೆದ ಆ ಘಟನೆಯಲ್ಲಿ 58 ಹಿಂದು ಕರಸೇವಕರನ್ನು ಸುಟ್ಟುಹಾಕಿದ ಮುಸ್ಲಿಮರದ್ದು ಅಪರಾಧವಲ್ಲ. ನಂತರ ನಡೆದ ಗುಜರಾತ್ ಗಲಭೆಗೆ  ಕಾರಣರಾದ ಹಿಂದುಗಳು ಮಾತ್ರ ಅಪರಾಧಿಗಳು.

ಈ ಮಸೂದೆಯ ಪ್ರಕಾರ ಅಲ್ಪಸಂಖ್ಯಾತನೊಬ್ಬ ಹೇಳುವ ಸಾಕ್ಷಿಗೆ ಮಾತ್ರ ಮಾನ್ಯತೆ ದೊರೆಯುತ್ತದೆ. ಬಹು ಸಂಖ್ಯಾತರ ಸಾಕ್ಷಿಗೆ ಮಾನ್ಯತೆ ಇಲ್ಲ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಶ್ರೀ ಡಿ.ಹೆಚ್. ಸುಬ್ಬಣ್ಣನವರು ವಹಿಸಿದ್ದರು, ರಾಷ್ಟ್ರೋತ್ಥಾನ ಬಳಗದ ಸಂಚಾಲಕರಾದ ಡಾ|| ಸುಧೀಂದ್ರರವರು ಉಪಸ್ಥಿತರಿದ್ದರು. ನಟರಾಜ್ ಭಾಗವತ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರೋತ್ಥಾನ ಬಳಗದ ಸುರೇಶ್‌ರವರು ವಂದಿಸಿದರು. ಕೊನೆಯಲ್ಲಿ ವಂದೇಮಾತರಂ ಗೀತಗಾಯನ ನಡೆಯಿತು.

 

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Ram Madhav's Press Conference at Agartala, Tripura on Lokpal Bill

Fri Aug 26 , 2011
Statement issued at a Press Conference at Agartala, Tripura by Sri Ram Madhav, Member, Central Executive, RSS August 27-2011 FIGHT AGAINST CORRUPTION: The country has witnessed an unprecedented upsurge of patriotic sentiments against the corrupt and arrogant political leadership of the country. Led by eminent non-political leaders like Sri Anna Hazare, […]