ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ

(ಕಲಿಯುಗಾಬ್ದ 5113, ಶ್ರೀ ಖರ ಸಂವತ್ಸರ ಶ್ರಾವಣ ಪೂರ್ಣಿಮಾ 13 ಆಗಸ್ಟ್ 2011)

ರಕ್ಷಾಬಂಧನ ಸಂದೇಶ

ಆತ್ಮೀಯ ಸಹೋದರ ಬಂಧುಗಳೇ,

Ashwini Gabhane ties rakhi to her brother and the then RSS chief KS Sudarshanji in Nagpur on Tuesday, August 28, 2007

ತ್ಯಾಗಭೂಮಿ, ಯೋಗಭೂಮಿ ಎಂದು ಹೆಸರಾಗಿದ್ದ ನಮ್ಮ ಭಾರತ ದೇಶದಲ್ಲಿ ಭ್ರಷ್ಟಾಚಾರ ಎಂದಿಗಿಂತಲೂ ಭರ್ಜರಿಯಾಗಿ ತಾಂಡವನೃತ್ಯ ಮಾಡುತ್ತಿದೆ. ನಾಡಿನ ನೆಲ, ಜಲದಿಂದ ಹಿಡಿದು ಕಲೆ, ಕ್ರೀಡಾ ಕ್ಷೇತ್ರಗಳವರೆಗೂ ಭ್ರಷ್ಟಾಚಾರ ಹಬ್ಬಿದೆ. ಎಲ್ಲೆಡೆ ಪಸರಿಸಿರುವ ಈ ವಿಷಜ್ವಾಲೆ ಜನಸಾಮಾನ್ಯರ ಬದುಕನ್ನು ನರಕವನ್ನಾಗಿಸುತ್ತಿದೆ. ಹಗರಣಗಳ ಮೂಲಕ ಅಕ್ರಮ ಸಂಪತ್ತಿನ ಗಳಿಕೆ, ಕಪ್ಪು ಹಣ ಸಂಗ್ರಹ ಮತ್ತು ವಿದೇಶಗಳಲ್ಲಿ ನಮ್ಮ ಹಣವನ್ನು ಅಕ್ರಮವಾಗಿ ಕೂಡಿಟ್ಟಿರುವುದು, ಇವೆಲ್ಲವೂ ದೇಶದ್ರೋಹದ ಕೃತ್ಯಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಎಲ್ಲ ಕೆಟ್ಟ ಕೆಲಸಗಳನ್ನು ಎಸಗುತ್ತಿರುವ ಜನರಿಗೆ ರಾಷ್ಟ್ರದ ಬಗ್ಗೆಯಾಗಲಿ, ರಾಷ್ಟ್ರಬಾಂಧವರ ಬಗ್ಗೆಯಾಗಲಿ ಎಳ್ಳಷ್ಟೂ ಗೌರವವಿಲ್ಲ ಎನ್ನುವುದು ಸ್ಪಷ್ಟ.

ಅಧಿಕಾರಸ್ಥರ ಸ್ವಾರ್ಥ, ಲಾಲಸೆಗಳ ಜೊತೆಗೆ ಸಜ್ಜನ ಶಕ್ತಿಯ ನಿಷ್ಕ್ರಿಯತೆಯೇ ಈ ಸಮಸ್ಯೆ ಬೃಹದಾಕಾರವಾಗಲು ಕಾರಣ. ಸಮಾಜದಲ್ಲಿ ಅಂತರ್ಗತವಾಗಿರುವ ಈ ಸಜ್ಜನ ಶಕ್ತಿಯನ್ನು ಜಾಗೃತಗೊಳಿಸಿ ದೇಶಕಾರ್ಯಕ್ಕೆ ತೊಡಗಿಸುವುದೇ ಇಂದಿನ ತುರ್ತು ಅಗತ್ಯ. ಸಂಸ್ಕಾರಯುತ ಸಂಘಟನೆಯಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಈ ಮಹೋನ್ನತ ಉದ್ದೇಶದ ಪೂರ್ತಿಗಾಗಿ ಬಿಡಿ ಬಿಡಿ ಯಾಗಿರುವ ಪ್ರತಿಯೊಬ್ಬ ಹಿಂದುವನ್ನು ಬೆಸೆದು ರಾಷ್ಟ್ರ ಜಾಗೃತಿಯನ್ನುಂಟು ಮಾಡಲು ಶ್ರಮಿಸುತ್ತಿರುವ ಧ್ಯೇಯವಾದಿಗಳ ಸಂಘಟನೆಯ ನಿರ್ಮಾಣ ನಮ್ಮ ಕೆಲಸ. ಬನ್ನಿ ಈ ರಾಷ್ಟ್ರಕಾರ್ಯಕ್ಕೆ ನಮ್ಮೆಲ್ಲರ ಕೈಜೋಡಿಸೋಣ.

ಜಗತ್ತಿನ ಎಲ್ಲೆಡೆ ಅಶಾಂತಿಯನ್ನು ಹರಡುತ್ತಿರುವ ಜಿಹಾದಿ ಮುಸ್ಲಿಂ ಭಯೋತ್ಪಾದಕರು ಮತ್ತು ಸೇವೆಯ ಸೋಗಿನ ಕ್ರೈಸ್ತ ಮಿಷನರಿಗಳು ಹಿಂದುತ್ವವನ್ನು ನಷ್ಟಗೊಳಿಸಿ ವಿದೇಶಿ ಸಂಕುಚಿತ ಮತಗಳನ್ನು ಹರಡುವ ಹುನ್ನಾರ ನಡೆಸುತ್ತಿರುವುದು ನಾವೆಲ್ಲರೂ ಚಿಂತಿಸಬೇಕಾದ ವಿಷಯ. ಮುಗ್ಧಜನರ ಪ್ರಾಣ ಹಿಂಡುವ ಭಯೋತ್ಪಾದಕ ಕೃತ್ಯಗಳು, ಬಾಂಬ್ ಸ್ಫೋಟಗಳು, ಹಿಂದೂ ಯುವತಿಯರ ಅಪಹರಣ, ಬೆದರಿಕೆ, ಆಮಿಷಗಳ ಮೋಸದ ಮತಾಂತರಗಳು ನಮ್ಮ ಸಮಾಜದ ನೆಮ್ಮದಿಯನ್ನು ಹಾಳು ಮಾಡಿವೆ. ಭಯೋತ್ಪಾದಕತೆಯ ನೈಜ ರೂವಾರಿಗಳನ್ನು ಬಯಲಿಗೆಳೆಯಲು ಅಸಮರ್ಥರಾದ ರಾಜಕಾರಣಿಗಳು ಈ ದುಷ್ಟತನವನ್ನು ನಿಗ್ರಹಿಸುವುದರ ಬದಲು ರಾಷ್ಟ್ರವಿರೋಧಿ ಮತಾಂಧರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ನೆಲದ ಬೇರುಗಳಿಂದ ದೂರವಿರುವ ಬುದ್ಧಿಜೀವಿಗಳು ತಮ್ಮ ಭ್ರಷ್ಟ ಜೀವನವನ್ನು ಮುಚ್ಚಿಟ್ಟುಕೊಳ್ಳಲು ನಕ್ಸಲಿಸಂ ಇತ್ಯಾದಿ ಎಡಪಂಥೀಯ ಉಗ್ರಗಾಮಿಗಳಿಗೆ ಮುಖವಾಡಗಳಾಗುತ್ತಿದ್ದಾರೆ.

ಈ ದೇಶದ್ರೋಹಿ ಶಕ್ತಿಗಳನ್ನು ಮೊಟಕುಗೊಳಿಸಲು ಧೈರ್ಯಶಾಲಿ, ಶಕ್ತಿಶಾಲಿ, ಸ್ವಾಭಿಮಾನಿ ಯುವಜನಾಂಗ ಮೇಲೇಳಬೇಕು. ಇಂತಹ ಬಲಯುತವಾದ ಸಂಘಟಿತ ಹಿಂದು ಶಕ್ತಿಯೇ ದೇಶದ ಎಲ್ಲಾ ಸಮಸ್ಯೆಗಳಿಗೆ ಸರಿಯಾದ ಉತ್ತರ ನೀಡಬಲ್ಲುದು. ನಾಡಿನ ಯುವ ಪೀಳಿಗೆಯಲ್ಲಿ ಶೀಲ, ಸದ್ಗುಣಗಳನ್ನು ಬೆಳೆಸುವಲ್ಲಿ ಸಂಘದ ಶಾಖೆಗಳಲ್ಲಿನ ಚಟುವಟಿಕೆಗಳು ಪೂರಕವಾಗಿವೆ. ಶಾಖೆಗೆ ಬರುವ ಪ್ರತಿ ವ್ಯಕ್ತಿಯಲ್ಲಿ ಸಮಾಜಸೇವಾ ಭಾವ ಮತ್ತು ರಾಷ್ಟ್ರಪ್ರೇಮಗಳನ್ನು ಸಂಘದ ವಿಚಾರಗಳು ತುಂಬುತ್ತಿವೆ.

‘ನಾವೆಲ್ಲ ಹಿಂದು, ನಾವೆಲ್ಲ ಬಂಧು’ ಎಂಬ ಧ್ಯೇಯದಡಿಯಲ್ಲಿ ರಾಷ್ಟ್ರಸೇವೆಗೆ ಟೊಂಕ ಕಟ್ಟಿ ನಿಲ್ಲೋಣ. ಜಾತಿ, ಪ್ರಾಂತ, ಭಾಷೆಗಳ ಹೆಸರಲ್ಲಿರುವ ಕ್ಷುಲ್ಲಕ ಭೇದಭಾವಗಳನ್ನು ಮರೆತು ಸಂಘದ ಶಾಖೆಗೆ ಹೋಗೋಣ. ಸಂಘದ ಶಾಖೆಗಳ ಹೆಚ್ಚಳ, ಅದಕ್ಕಾಗಿ ಸಂಪರ್ಕ ಮತ್ತು ನಮ್ಮೆಲ್ಲಾ ಸಮಯವನ್ನು ಮೀಸಲಿರಿಸೋಣ. ಸಕಲ ಹಿಂದೂಗಳ ಹೃದಯಗಳನ್ನು ಬೆಸೆಯೋಣ. ಇದನ್ನು ಸಾಕಾರಗೊಳಿಸುವ ಸಂಕಲ್ಪದೊಂದಿಗೆ ಈ ಪವಿತ್ರ ರಕ್ಷೆಯನ್ನು ಕಟ್ಟೋಣ.

ನಮಸ್ಕಾರ .