ABVP’s call Against Corruption: ಭ್ರಷ್ಟಾಚಾರದ ವಿರುದ್ಧ ಎಬಿವಿಪಿಯಿಂದ ರಾಜ್ಯಾದ್ಯಂತ ಆಂದೋಲನ

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳುವಳಿಗೆ ಎಬಿವಿಪಿ ಬೆಂಬಲ ವ್ಯಕ್ತಪಡಿಸಿ ರಾಜ್ಯಾದ್ಯಂತ ರಸ್ತೆತಡೆ, ಮಾನವ ಸರಪಳಿ ರಚಿಸಿ ಧರಣಿ ಸತ್ಯಾಗ್ರಹ ನಡೆಸಿತು
ಲೋಕ ಜನಪಾಲ್ ಮಸೂದೆಗೆ ಆಗ್ರಹಿಸಿ ನಿರಶನ ಪ್ರಾರಂಭಿಸುವುದರ ಮೂಲಕ ಭೃಷ್ಟಾಚಾರದ ವಿರುದ್ಧ ಅಣ್ಣ ಹಜಾರೆಯವರು   ರಣ ಕಹಳೆ ಮೊಳಗಿಸಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಇದಕ್ಕೆ ಸ್ಪಂದಿಸಿದ ವಿದ್ಯಾರ್ಥಿ ಸಮುದಾಯ ರಸ್ತೆತಡೆ, ಮಾನವ ಸರಪಳಿ ರಚಿಸಿ ಧರಣಿ ಮತ್ತು ಸತ್ಯಾಗ್ರಹ ನಡೆಸಿ ಪ್ರತಿಭಟಿಸಿತು.
ಬೆಂಗಳೂರು : ಬೆಂಗಳೂರಿನ ವಿದ್ಯಾರ್ಥಿ ಪರಿಷತ್ ಘಟಕವು ಭ್ರಷ್ಟಾಷಾರದ ವಿರುದ್ಧ ಹಮ್ಮಿಕೊಂಡಿರುವ ಅಣ್ಣಾ ಹಜಾರೆ ಅವರಿಗೆ ಬೆಂಬಲ ವ್ಯಕ್ಯಪಡಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಸ್ತೆತಡೆ ನಡೆ ಮತ್ತು ಮಾನವ ಸರಪಳಿ ರಚಿಸಿ ಧರಣಿ ಸತ್ಯಾಗ್ರಹ ನಡೆಸಿತು.ಬೆಂಗಳೂರು ಮಹಾನಗರ ಕಾರ್ಯದರ್ಶಿ ಮಾತನಾಡಿ ಭ್ರಷ್ಟಾಚಾರದ ವಿರುಧ್ಧ ಅಖಿಲ ಭಾರತೀಯ  ವಿದ್ಯಾರ್ಥಿ ಪರಿಷತ್ ಅನೇಕ ಬಾರಿ ಚಳುವಳಿ ಮತ್ತು ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಹ, ಭೃಷ್ಟಾಚಾರಿಗಳಿಗೆ ಎಚ್ಚರಿಕೆ ನೀಡುವಂತಹ ಕಾರ್ಯವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಅ.ಭಾ.ವಿ.ಪ ದ ೫೬ ನೇ ರಾಷ್ಟ್ರೀಯ ಅಧಿವೇಶನದಲ್ಲಿ ಭೃಷ್ಟಾಚಾರದ ವಿರುಧ್ಧ ವರ್ಷಪೂರ್ತಿ ಅಭಿಯಾನ ನಡೆಸುವ ನಿರ್ಣಯ ಅಂಗೀಕರಿಸಿತ್ತು. ಫೆಬ್ರವರಿ ೧೬ ಮತ್ತು ೧೭, ೨೦೧೧ ರಂದು ೨೪ ಗಂಟೆಗಳ ಕಾಲ ದೇಶಾದ್ಯಂತ ಎಲ್ಲಾ ರಾಜ್ಯದ ರಾಜ್ಯದಾನಿಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ ೩, ೨೦೧೧ ರಂದು ಸಂಸತ್ ಭವನಕ್ಕೆ ಮುತ್ತಿಗೆ ಹಾಕಿತ್ತು. ಅನೇಕ ಬಾರಿ ದೇಶಾದ್ಯಂತ ಪ್ರತಿಭಟನೆಯು ನಡೆಸಿತ್ತು ಭ್ರಷ್ಟಾಚಾರದ ವಿರುದ್ಧ ಲೋಕಪಾಲ್  ಮಸೂದೆಯ ಅವಶ್ಯಕತೆ ದೇಶಕ್ಕೆ ಇದೆ. ಅಣ್ಣ ಹಜಾರೆಯವರ ಯೋಚನೆ ಮತ್ತು ಹೋರಾಟ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ, ಆ ಕಾರಣಕ್ಕಾಗಿಯೆ ಅವರಿಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಣ್ಣ ಹಜಾರೆಯವರ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಮಾತ್ರವಲ್ಲ ಈ ಅಭಿಯಾನವನ್ನು ದೇಶಾದ್ಯಂತ ತೀವೃಗೊಳಿಸುತ್ತದೆ. ಅಣ್ಣ ಹಜಾರೆಯವರು ಆಗ್ರಹ ಮಾಡಿರುವ ಲೋಕಜನಪಾಲ್ ಮಸೂದೆಯ ಬಗೆಗೆ ತಳೆದಿರುವ ತಾತ್ಸಾರ ಮನೋಭಾವ ಮತ್ತು ಅವರ ಹೋರಾಟವನ್ನು ಟೀಕೆ ಮಾಡುವುದರ ಮೂಲಕ ಕಾಂಗ್ರೇಸ್ ಭ್ರಷ್ಟಾಚಾರದ ಕುರಿತಾದ ತನ್ನ ನಿಲುವನ್ನು ದೇಶದ ಮುಂದೆ ಮತ್ತೊಮ್ಮೆ ತೆರೆದಿಟ್ಟಿದೆ. ಸಮ್ಮಿಶ್ರ ಸರಕಾರದ ಹಗರಣ ಬಗ್ಗೆ ತನಿಖೆ ನಡೆಸಲು ‘ಮೈತ್ರಿ ಧರ್ಮ’ ತನ್ನನ್ನು ತಡೆಯುತ್ತಿದೆ ಎಂದ ಮಾನ್ಯ ಪ್ರಧಾನಿಯವರು ಈ ಕುರಿತು ಇನ್ನು ಬಾಯಿ ಬಿಡದೆ ಇರುವುದು ಆಶ್ಚರ್ಯಕರವಾದ ಸಂಗತಿಯಾಗಿದೆ. ಎಂದು ಹೇಳಿದರು..

ಅ.ಭಾ.ವಿ.ಪ ಬೆಂಗಳೂರು ಕೇಂದ್ರ ವಲಯ ಕಾರ್ಯದರ್ಶಿ ಪ್ರೇಮ್ ಮಾತನಾಡಿ ಇಂದು ಭ್ರಷ್ಟಾಚಾರ ಜನನ ಪ್ರಮಾಣ ಪತ್ರದಿಂದ ಹಿಡಿದು ಮರಣದ ಪ್ರಮಾಣ ಪತ್ರದವರೆಗೂ, ಶಿಕ್ಷಣದಲ್ಲಿ ಕೆ.ಜಿಯಿಂದ ಪಿ.ಜಿ.ವರೆಗೂ ವ್ಯಾಪಿಸಿದೆ. ಭ್ರಷ್ಟಾಚಾರವು ಸರ್ವವ್ಯಾಪಿಯಾಗಿ, ಸರ್ವಸ್ಪರ್ಶಿಯಾಗಿ ಹಬ್ಬಿದೆ. ಇದನ್ನು ನಾಶಗೊಳಿಸಲು ಲೋಕಪಾಲ್ ಮಸೂದೆಯು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಕು.ಪುಷ್ಪಾ, ವಿದ್ಯಾರ್ಥಿ ನಾಯಕರಾದ ಪ್ರೇಮ್, ಸೂರಜ್, ನವೀನ್‌ಕುಮಾರ್, ನಿತೀನ್‌ಗೌಡ, ಪವನ್,  ಸೇರಿದಂತೆ ಸುಮಾರು ೫೦೦ ಕ್ಕೂ ವಿದ್ಯಾರ್ಥಿಗಳು ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ಬೆಂಬಲ ವ್ಯಕ್ಯಪಡಿಸಿದರು.


ರಾಜ್ಯಾದ್ಯಂತ ಎಬಿವಿಪಿ ರಸ್ತೆತಡೆ, ಮಾನವ ಸರಪಳಿ ರಚಿಸಿ ಪ್ರತಿಭಟನೆ
ಭ್ರಷ್ಟಾಚಾರದ ವಿರುದ್ಧ ಹಮ್ಮಿಕೊಂಡಿರುವ ಅಣ್ಣಾ ಹಜಾರೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅಭಾವಿಪ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು, ಹೊಬಳಿಗಳು ಸೇರಿದಂತೆ ೨೬ ಸ್ಥಾನಗಳಲ್ಲಿ, ಸುಮಾರು ೭೦೦೦ ಕ್ಕೂ ಹೆಚ್ಚು ಕಾರ್ಯಕರ್ತರು ಮಾನವ ಸರಪಳಿ ರಚಿಸಿ, ರಸ್ತೆತಡೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿತು. ಧರಣಿಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುಮಾರು ೩೦೦, ಧಾರವಾಡ ೭೦೦, ಬಾಗಲಕೋಟೆಯಲ್ಲಿ ಮಾಜಿ ರಾಜ್ಯಾದ್ಯಕ್ಷ ಡಾ. ಶ್ರೀನಿವಾಸ ಬಳ್ಳಿ ಸೇರಿದಂತೆ ಸುಮಾರು ೩೦೦, ವಿಜಾಪುರದಲ್ಲಿ ೩೦೦, ಗುಲ್ಬರ್ಗಾದಲ್ಲಿ ೩೦೦, ಮೈಸೂರಿನಲ್ಲಿ ೧೦೦೦ ಕ್ಕೂ ಹೆಚ್ಚು, ತುಮಕೂರು ಜಿಲ್ಲೆಯಲ್ಲಿ ೨೫೦೦, ಚಿಕ್ಕಬಳ್ಳಾಪುರದಲ್ಲಿ ೭೦೦, ಬೆಂಗಳೂರಿನಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.


nagesh

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS extends support for Anna Hazare; national leaders at anti-corruption campagin at NewDelhi

Fri Apr 8 , 2011
Rashtriya Swayamsevak Sangh extended its full support for the ant-corruption campaign lead by veteran social activist Anna Hazare. RSS General Secretary Suresh Joshi has written a letter to Anna Hazare expressing the fulk cooperation for the anti-corruption movement. Suresh Joshi has mentioned the resolution on Corruption issue, passed by Akhil […]