ನೈಜ ಸ್ವಾತಂತ್ರ ಹೋರಾಟ

by ನ. ನಾಗರಾಜ

ಬಂದಿದೆ, ಮತ್ತೊಂದು ಸ್ವಾತಂತ್ರ್ಯದಿನ. ಪ್ರತಿ ಭಾರತೀಯನೂ ಹೆಮ್ಮೆಯಿಂದ ಎದೆಯುಬ್ಬಿಸಿ ನಿಲ್ಲಬೇಕಾದ ಕ್ಷಣ. ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ದೇಶ ಭಾರತ. ನೂರಾರು ವಿಷಯಗಳಲ್ಲಿ ಹಿಂದಿಗೂ-ಇಂದಿಗೂ ಜಗದ್ಗುರು ಭಾರತ. ಅನೇಕ ದಾಳಿಗಳನ್ನೆದುರುಸಿ, ಜಯಿಸಿ, ಅಗತ್ಯ ಪರಿವರ್ತನೆಯ ಮೂಲಕ ತನ್ನನ್ನು ಯುಗಾನುಕೂಲಗೊಳಿಸಿಕೊಳ್ಳುತ್ತಾ ಮುನ್ನಡೆಯುತ್ತಿರುವ ಭಾರತ. ಹತ್ತಾರು ಶತ್ರುಗಳನ್ನು ಗೆದ್ದು ಜಯಶಾಲಿಯಾದ ಭಾರತ. ತನ್ನನ್ನೊಪ್ಪಿ ಬದುಕಲಿಚ್ಛಿಸುವ ಸಕಲ ಜನಾಂಗಕ್ಕೂ ಪ್ರೀತಿಯ ನೆಲೆಯಾದ ಭಾರತ. ಜಗತ್ತಿನ ಎಲ್ಲ ಒಳ್ಳೆಯ ಸಂಗತಿಗಳ ಸಾರವನ್ನು ಸ್ವೀಕರಿಸುವ ತೆರೆದ ಹೃದಯದ ಭಾರತ. . . . ಮತ್ತೆಷ್ಟು ಬರೆಯಲಿ.

ಆದರೆ . . . . ಇಂದಿನ ಸ್ಥಿತಿಯೇನು? . . . .

ನಮ್ಮ ಸಂಸ್ಕೃತಿಯಲ್ಲಿ ತ್ಯಾಗಕ್ಕೆ ಮಹತ್ವ, ಭೋಗಕ್ಕಲ್ಲ. ಪಾಶ್ಚಾತ್ಯ ಚಿಂತನೆಯ ಪ್ರಭಾವದಿಂದ ಜನಜೀವನದಲ್ಲಿ ಭೋಗವೇ ಪ್ರಧಾನವಾಗುತ್ತಿದೆ. ತಮ್ಮ ಸುಖಭೋಗಗಳಿಗಾಗಿ ಪ್ರಕೃತಿಯನ್ನು ದುರುಪಯೋಗಿಸಿಕೊಂಡು ಪರಿಸರದ ಸಮತೋಲನವನ್ನು ಹಾಳುಮಾಡಿದ ಪರಿಣಾಮವಾಗಿ ನೀರಿನ ಕೊರತೆ, ಹೆಚ್ಚಿದ ಉಷ್ಣತೆ, ಕಲುಷಿತವಾದ ಗಾಳಿ-ನೀರು ಇತ್ಯಾದಿಗಳಿಂದ ನೆಮ್ಮದಿಯ ಜನಜೀವನ ದುಸ್ತರವಾಗುತ್ತಿದೆ. ನಮ್ಮ ಅವಶ್ಯಕತೆಗಳಿಗಿಂತ ಹೆಚ್ಚಿನ ವಸ್ತುಗಳನ್ನು ಬಳಸುವುದನ್ನು ನಿಲ್ಲಿಸುವುದು, ಮರಗಿಡಗಳನ್ನು ಬೆಳೆಸುವುದು, ಕೃಷಿಕ್ಷೇತ್ರಗಳನ್ನು ಉಳಿಸಿಕೊಳ್ಳುವುದು, ಸಾವಯವ ಕೃಷಿ, ಅಂತರ್ಜಲದ ಸಂರಕ್ಷಣೆ ಇತ್ಯಾದಿಗಳಿಂದ ಪರಿಸರವನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ.

ಶಾರದೆಯ ತಾಣ ಕಾಶ್ಮೀರ, ನಮ್ಮ ದೇಶದ ಅವಿಭಾಜ್ಯ ಅಂಗ. ಇದರ ಹೆಚ್ಚಿನ ಭಾಗ ನಮ್ಮ ಕೈಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಮ್ಮ ದೇಶದ ತಥಾಕಥಿತ ಬುದ್ಧಿಜೀವಿಗಳು ಕಾಶ್ಮೀರವನ್ನು ಕಬಳಿಸುವ ಪಾಕಿಸ್ತಾನದ ಸಂಚಿಗೆ ಸಹಾಯ ಮಾಡುವಂತೆ ನಡೆದುಕೊಳ್ಳುತ್ತಿದ್ದಾರೆ. ಪಾಕ್ ಆಕ್ರಮಿತ ಪ್ರದೇಶವನ್ನು ಪಾಕ್ ಆಡಳಿತಕ್ಕೊಳಪಟ್ಟ ಪ್ರದೇಶವನ್ನಾಗಿಸುವ, ೩೭೦ನೇ ವಿಧಿಯ ತಾತ್ಕಾಲಿಕ ನೆಲೆಯನ್ನು ವಿಶೇಷ ಸೌಲಭ್ಯವಾಗಿ ಶಾಶ್ವತಗೊಳಿಸುವ ಮೂಲಕ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುವ ಹುನ್ನಾರ ನಡೆದಿದೆ. ಕೇಂದ್ರ ಸರಕಾರವೂ ಇದಕ್ಕೆ ಬೆಂಬಲ ನೀಡುತ್ತಿರುವುದು ದೌರ್ಭಾಗ್ಯದ ಸಂಗತಿ. ಕಾಶ್ಮೀರದ ರಕ್ಷಣೆ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಭಯೋತ್ಪಾದನೆಯ ಕರಿನೆರಳು ನಮ್ಮ ಮನೆಯಂಗಳಕ್ಕೂ ಚಾಚಿದೆ.

ಇಂದಿನ ಪರಿಸ್ಥಿತಿಯನ್ನು ನೋಡುವಾಗ ವೈಯಕ್ತಿಕ ಹಿತಾಸಕ್ತಿಗಳೇ ಬಲವಾಗುತ್ತಿದೆ, ಸಮಾಜಹಿತ ಗೌಣವಾಗುತ್ತಿದೆ. ಭ್ರಷ್ಟಾಚಾರ ಸಮಾಜಜೀವನದ ಎಲ್ಲ ರಂಗಗಳನ್ನೂ ವ್ಯಾಪಿಸಿದೆ. ಉತ್ತಮ ಆಡಳಿತ ನೀಡಬೇಕಾದ ಜನನಾಯಕರು ತಮ್ಮ ಸ್ವಾರ್ಥ ಸಾಧನೆಗಾಗಿ ಅನ್ಯಾಯ ಅಕ್ರಮಗಳಿಂದ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುತ್ತಿದ್ದಾರೆ. ಜನಹಿತವನ್ನು ಕಡೆಗಣಿಸುತ್ತಿದ್ದಾರೆ. ನಮ್ಮ ಸಮಾಜದ ಮೈಮರೆವು, ಅಸಂಘಟನೆಯ ಸ್ಥಿತಿ ಇದಕ್ಕೆ ಪೂರಕವಾಗಿದೆ. ಸಜ್ಜನ ಶಕ್ತಿಯ ಸಕ್ರಿಯತೆ ಮತ್ತು ಸಂಘಟನೆಯೇ ಇದಕ್ಕೆ ಪರಿಹಾರವಾಗಬಲ್ಲುದು.

ತಮ್ಮ ಪ್ರಭುತ್ವವನ್ನು ಪ್ರತಿಷ್ಠಾಪಿಸಲು ಹೊರಟಿರುವ ದೇಶವಿರೋಧಿ ಶಕ್ತಿಗಳು ದೇಶವನ್ನು ದುರ್ಬಲಗೊಳಿಸಲು ಇನ್ನಿಲ್ಲದ ಪ್ರಯತ್ನಗಳಲ್ಲಿ ತೊಡಗಿವೆ. ನಕ್ಸಲ್, ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪರೋಕ್ಷ ಬೆಂಬಲ, ಬಲವಂತದ ಮತಾಂತರದ ಅವಾಂತರ, ದೇಶಭಕ್ತ ಸಂಘಟನೆಗಳಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಹಚ್ಚಿರುವುದು ಇಂತಹ ಪ್ರಯತ್ನಗಳಿಗೆ ಸಾಕ್ಷಿ. ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಭಾರತವನ್ನು ರಕ್ಷಿಸುವುದು ನಮ್ಮ ಕರ್ತವ್ಯ.

ನೂರಾರು ಸವಾಲುಗಳಿರಬಹುದು, ಸಾವಿರಾರು ಸಮಸ್ಯೆಗಳಿರಬಹುದು, ಉತ್ತರ ಒಂದೇ-ಜಾಗೃತ. ಸಂಘಟಿತ, ಸಕ್ರಿಯ ಸಜ್ಜನ ಶಕ್ತಿ.

ನಾಡಿನ ಯುವ ಜನ ಎದ್ದು ನಿಂತಲ್ಲಿ ಇವೆಲ್ಲ ಸಂಗತಿಯನ್ನು ಮತ್ತಷ್ಟು ಬಲಗೊಳಿಸಬಹುದಾಗಿದೆ. ನೂರೈವತ್ತು ವರ್ಷಗಳ ಹಿಂದೆ ಅವತರಿಸಿದ ಸಿಡಲ ದನಿಯ ಸಂತ ಸ್ವಾಮಿ ವಿವೇಕಾನಂದರ ಕನಸನ್ನು ನನಸು ಮಾಡುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ.

ಏಳಿ ಎಚ್ಚರಗೊಳ್ಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂಬ ಉಪನಿಷತ್ತಿನ ಮಾತನ್ನು ಮತ್ತೆ ಮೊಳಗಿಸಿದ ವಿವೇಕಾನಂದರು ದುರ್ಬಲತೆಯನ್ನು ತೊಡೆದು ಮೋಹದಿಂದ ಹೊರಬನ್ನಿ. ಹಿಂದುತ್ವದ ಅಸ್ಮಿತೆಯನ್ನು ಪ್ರಸ್ತಾಪಿಸಿ ಸಜ್ಜನ ಶಕ್ತಿಯನ್ನು ಜಾಗೃತಗೊಳಿಸಿ, ಎಲ್ಲರಲ್ಲೂ ಈ ಅರಿವು ಮೂಡಿಸಿ ಎಂದು ಕರೆ ನೀಡಿದ್ದಾರೆ. ಆಗ ಮತ್ತೊಮ್ಮೆ ತಾಯಿ ಭಾರತಿ ಜಗಜ್ಜನನಿಯಾಗಿ ಮೆರೆಯುವುದರಲ್ಲಿ ಸಂಶಯವಿಲ್ಲ. ಈಗಲೂ ಕಾಲ ಮಿಂಚಿಲ್ಲ, ಬೇರೆಲ್ಲವನ್ನೂ ಬದಿಗಿಟ್ಟು ಈ ರಾಷ್ಟ್ರಕಾರ್ಯದಲ್ಲಿ ತೊಡಗಿರೆಂಬ ಆಹ್ವಾನ ಸ್ವೀಕರಿಸಿ, ಬನ್ನಿ. ಕೈ ಚೆಲ್ಲಿ ಕುಳಿತರೆ ಸಾಲದು, ಬಯ್ಯುತ್ತಾ ಗೊಣಗುತ್ತ ಗೋಳಾಡಿದರೆ ಆಗದು.

ವಿಶ್ವವೂ ಪರಿವರ್ತನೆಗೆ ಪಕ್ವಗೊಂಡಿದೆ. ಹೊಸ ಹೊಸ ವಿಚಾರಶೀಲರೂ, ವಿಭಿನ್ನ ವಿಚಾರಧಾರೆಯ ವಿದ್ವಾಂಸರೂ ನಮ್ಮ ಸನಾತನ ಚಿಂತನೆಗಳನ್ನು ಒಪ್ಪಿಕೊಳ್ಳುತ್ತಿರುವ ಬೆಳಕು ಗೋಚರಿಸುತ್ತಿದೆ. ನಮ್ಮಲ್ಲಿನ ಯುವಜನಾಂಗವೂ ತಮ್ಮ ಮೂಲ ಬೇರುಗಳನ್ನು ಅಪ್ಪಿಕೊಳ್ಳಲು ಸಿದ್ಧವಾಗುತ್ತಿರುವುದೂ ಅಭಿಮಾನದ ಸಂಗತಿಯಾಗಿದೆ. ವಿವೇಕಾನಂದರ ಆಶಯವೂ ಇದೇ ಆಗಿತ್ತಲ್ಲವೇ?

ಭಾರತದ ಹಿರಿಮೆಯನ್ನು ವಿಶ್ವದೆಲ್ಲೆಡೆ ಪಸರಿಸಿದವರು, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಅವರ ವಿಚಾರಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಇಂದಿಗೂ ಪರಿಣಾಮಕಾರಿ. ಮುಂದಿನ ವರ್ಷ ಸ್ವಾಮಿ ವಿವೇಕಾನಂದರ ಜನ್ಮದ ೧೫೦ನೇ ವರ್ಷ. ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವ, ಸಾಧನೆ, ವಿಚಾರಗಳನ್ನು ಮತ್ತೆ ನೆನಪಿಸುವುದರಿಂದ ಸಮಾಜದ ಜಾಗೃತಿಗೆ ಹೊಸ ವೇಗ ಸಿಗುವಂತಾಗುವುದು.

ನಮ್ಮ ಹಿರಿಯರು, ಗುರುಗಳಿಂದ ಭಾರತ ಸ್ಡಾತಂತ್ರ ಕಥೆಕೇಳಿ ರೋಮಾಂಚನಗೊಂಡಿದ್ದೇವೆ. ಹೋರಾಟಗಾರರೆಲ್ಲರ ಬಗ್ಗೆ ಅಭಿಮಾನದಿಂದ ಎದೆಯುಬ್ಬಿಸಿಕೊಂಡಿದ್ದೇವೆ. ನಲಿವಿನ ಕಥೆಕೇಳಿ ಸಂತಸಗೊಂಡಿದ್ದೇವೆ. ಈ ಹೋರಾಟದಲ್ಲಿ ಆದ ನೋವಿನ ವ್ಯಥೆಗಳ ಕೇಳಿ ದುಃಖಿತರಾಗಿದ್ದೇವೆ. ಅನೇಕರಿಗೆ ನಾವೂ ನಮ್ಮ ಹಿಂದಿನವರಂತೆಯೇ ದೇಶಕ್ಕಾಗಿ ಬಾಳುವ-ಬದುಕುವ, ಅಗತ್ಯಬಿದ್ದರೆ ಬಲಿದಾನ ಮಾಡುವ ಸ್ಪೂರ್ತಿ ಪಡೆದಿದ್ದೇವೆ. ಇಂಥಃ ಮಕ್ಕಳಿಂದಲೇ ತಾಯಿ ಭಾರತಿಗೆ ನೆಮ್ಮದಿ, ಆನಂದ, ಜಗನ್ಮಾತೆಯಾಗಿ ಮುಂದುವರೆಯುವ ಬಯಕೆ.

ಸಂತಸದ ಸಮಯದಲ್ಲೂ ನಿಜ ಸಂಗತಿಗಳನ್ನು ಪುನಃಸ್ಮರಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಕೆಲುವೊಮ್ಮೆ ಸತ್ಯಸಂಗತಿಗಳನ್ನು ಹೇಳುವಾಗ , ಈಗಾಗಲೆ ಸ್ಥಾಪಿತ ಬುದ್ಧಿಯ ಕೆಲವರಿಗೆ ಮುಜಗರ, ಕೆಲವೊಮ್ಮೆ ಕೋಪವೂ ಬರಬಹುದು. ಆದರೆ ಹೇಳದಿದ್ದಲ್ಲಿ ಸ್ಡಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ನೋವು-ಸಾವು ಅನುಭವಿಸಿದ ಪೂರ್ವಜರಿಗೆಲ್ಲರಿಗೆ ಅಪಮಾನ ಮಾಡಿದಂತೆ. ಅವರ ಅತ್ಮಕ್ಕೆ ದುಃಖವಾದೀತು.ಶಾಶ್ವತ ಬ್ರಹ್ಮಲೋಕ ಸಿಗದಂತಾದೀತು.

ಯೋಜನಾಬದ್ಧವಾಗಿ ಒಂದು ಚಿಂತನೆಯ ವ್ಯಕ್ತಿಗಳು ,ಗುಂಪುಗಳು ,ಈ ದೇಶಕ್ಕೆ  ಸ್ಡಾತಂತ್ರ ಬಂದದ್ದು ಕೇವಲ ಸತ್ಯಾಗ್ರಹ, ಉಪವಾಸ, ಧರಣಿ, ಮನವೀಪತ್ರ, ಮಾತುಕತೆ…. ಇತ್ಯಾದಿಗಳಿಂದಲೇ ಎಂಬ ವಿಚಾರವನ್ನು ಪ್ರಸ್ತಾಪಿಸಿದೆ. ಇದು ಪೂರ್ಣ ನಿಜವಲ್ಲ. ತ್ತಾರು ಮಾರ್ಗದ ಸತತ ಸಂಘರ್ಷದ ಇತಿಹಾಸ ಸ್ಡಾತಂತ್ರ ಚಳುವಳಿಯಾಗಿದೆ.

ದೇಶಾದ್ಯಂತ ಎಳಯ ಮಕ್ಕಳಿಂದಾರಂಬಿಸಿ ಹಿರಿಯರವರೆಗೆ, Pನ್ಯಾಕುಮಾರಿಯಿಂದ ಜಮ್ಮು ಕಶ್ಮೀರದವರೆಗೆ, ಗುಜರಾತಿನಿಂದ ಗೌಹಾತಿಯವರೆಗೆ ಎಲ್ಲಪ್ರದೇಶಶಗಳ, ಎಲ್ಲ ಜಾತಿ-ಮತ-ಪಂಥಗಳ, ಸ್ತ್ರೀ-ಪುರುಷ ಭೇದವಿಲ್ಲದೆ ,  ಭಾಷಾಗೋಡೆಯನ್ನೊಡೆದು ..ಒಟ್ಟಾರೆ ಎಲ್ಲಾ ವಿವಿಧತೆಗಳನ್ನು, ಏಕತೆಯನ್ನು ಮೆರೆಸಿದ ಸಕಲ ರೀತಿಯ ಪ್ರಯತ್ನಗಳನ್ನು, ವ್ಯಕ್ತಿಗಳನ್ನೂ ಮರೆಯುವುದು ಅನ್ಯಾಯ.

ಎಳೆಯ ವಯಸ್ಸಿನಲ್ಲೇ ಬಹು ದೊಡ್ಡ ಗುರಿಗಾಗಿ ತಮ್ಮ ಜೀವನ ರೂಪಿಸಿಕೊಂಡ ಚಂದ್ರಶೇಖರ ಆಜಾದ್, ಸರದಾರ ಭಗತ್ಸಿಂಗ್ ಮದನಲಾಲ್‌ಧೀಂಗ್ರಾ,  ಸುಭಾಷಚಂದ್ರಬೋಸ್ … ಇತ್ಯಾದಿ ವೀರ ಪುತ್ರರನ್ನು ಈ ಸಂದರ್ಬದಲ್ಲಿ ನೆನಸಬೇಕಲ್ಲವೇ ?.  ದೇಶದ್ರೋಹಿಗಳಿಗೆ ಬಟ್ಟೆ ಹೊಲಿಯಲಾರೆ ಎಂದ ಟೈಲರ್, ಚಪ್ಪಲಿ ಸಿದ್ದಪಡಿಸಲಾರೆ ಎಂದ ಮೋಚಿ, .ಇತ್ಯಾದಿ ವಿವಿದ ವೃತ್ತಿಯ ವೀರರನ್ನು ಮರೆಯಬೇಕೆ ?. ತಮ್ಮ ಮನೆಮಂದಿಯನ್ನೆಲ್ಲಾ  ಚಳುವಳಿvಯಲ್ಲಿ ತೊಡಗಿಸಿದ ವೀರ ಸಾವರ್ರ‍್ಕರ್, ಚಾಪೇಕರ್ ಬಂದುಗಳ ಮನೆಮಂದಿಯಲ್ಲ ಸ್ಮರಣಾರ್ಹರಲ್ಲವೇ?.

ಐ.ಎನ್.ಎ. ಕಟ್ಟಿದ  ಸಭಾಷರೇನು ಕಡಿಮೆ ಸಾಹಸಿಗರೇ? ಸ್ಡದೇಶಿ ನ್ಯಾವಿಗೇಶನ್ ಕಂಪನಿ ಸ್ಥಪಿzಸಿದ ಧನಿಕರದು ಸಾರ್ಥಕ ಬಾಳಲ್ಲವೇ ? ಬ್ರಿಟಿರ ಮೋಸದ ಹತ್ಯಾಕಾಂಡದಲ್ಲಿ  ಸಾವನ್ನಪ್ಪಿದ ಎಳೆಯ-ಹಿರಿಯ ಸಿಖ್ ಬಂದುಗಳ ಧರ್ಮಶ್ರದ್ದೆ ಅನಕರಣೀಯ.

೧೮೫೭ ರ ಪ್ರಥಮ ಸ್ಡಾತಂತ್ರ ಸಂಗ್ರಾಮದಿಂದಾಗಿ ದಿಕ್ಕು ತೋಚದ ಬ್ರಿಟಿಷರು ಬಾರತ ಬಿಟ್ಟು ಕಾಲ್ತಗೆಯುವ ಯೋಚನೆ ಮಾಡತೊಡಗಿದ್ದರು. ಅದರಲ್ಲೂ ದೇಶಾದ್ಯಂತ ಒಂದಲ್ಲಾ ಒಂದು ರೀತಿಯ ನಿರಂತರ ಹೋರಾಟದಿಂದಾಗಿ vತ್ತರಿಸಿದ್ದರು. ಬ್ರಟಿಷ್ ಅಧಿಕಾರಗಳ ಮನೆಯಲ್ಲೂ ಊರಿಗೆ ಹೋಗುವ ಒತ್ತಡ ಹೆಚ್ಚುತ್ತಿತ್ತು. ಇಂಥಃ ದಿನಗಳಲ್ಲಿ ಭಾರತೀಯ ದೇಶಭಕ್ತರ ಮನಸ್ಸುಗಳಿಗೆ ವಿರುದ್ದವಾಗಿ ನಮ್ಮ ಸಮಾಜದ ವಿವಿಧತೆಗಳನ್ನು ಭಿನ್ನತೆಯನ್ನಾಗಿಸುವ ಕುತಂತ್ರ ಹೂಡಿ  ನಮ್ಮನ್ನೇ ವಿವಿದ ರೀತಿಯಲ್ಲಿ ಒಡೆದಿಟ್ಟರು. ಇತಿಹಾಸವನ್ನೇ ತಿರುಚಿದರು. ದೇಶಭಕ್ತರನ್ನು ಸಂಚುಕೋರರು, ದಂಗೆ ಕೋರರು ದಾರಿ ತಪ್ಪಿದ ಯುವಕರು, ಹಿಂಸಾವಾದಿಗಳು, ತೀವ್ರವಾದಿಗಳು …ಇತ್ಯಾದಿ ಶಬ್ದಗಳಿಂದ ಕಳಂಕಿತರಾಗಿ ಚಿತ್ರಿಸುವ ಪ್ರಯತ್ನವನ್ನು ಯಶಸ್ವಿಯಾಗಿ ನಡೆಸಿದರು

ಇಷ್ಟು ವರ್ಷಗಳು ಕಳೆದರೂ ಸತ್ಯಸಂಗತಿ ಹೊರ ಬರಲು ತಿಣುಕಾಡಿತ್ತಿದೆ. !. ಆದರೆ ಭಾರತ ಮಗ್ಗುಲು ಬದಲಾಯಿಸುತ್ತಿದೆ.ಯುವಕರ ಮನಸ್ಸಿನಲ್ಲಿ ಸ್ಡಾತಂತ್ರ ಸಂಘ್ರಾಮ ತಿಳಿಯುವ ಹಂಬಲ -ಪ್ರಯತ್ನ ನಡೆದಿದೆ. ಇತ್ತೀಚೆಗೆ ಸಭಾಷರ ಜನ್ಮದಿನವನ್ನು ಯುವ ದಿನವೆಂದು ಆಚರಿಸುತ್ತಿಲ್ಲವೇ ?. ಭಗತ್ಸಿಂಗ್ ಯುವ ಜನತೆಗೆ ಮಾದರಿಯಾದದ್ದು.

ಬನ್ನ್ನಿರಿ ಬಾರತ ವಿಮೋಚನೆಗೆ ಬಲಿದಾನಗಳನ್ನು ಮಾಡಿದ ದಾನಿಗಳನ್ನು, ನಮ್ಮ ಒಳಿತಕ್ಕೆ ತಮ್ಮ ಸರ್ವಸ್ವವನ್ನು  ತ್ಯಾಗಮಾಡಿದ ತ್ಯಾಗಿಗಳನ್ನು ನೆನೆಯೋಣ. ಅವರ ತ್ಯಾಗ, ಬಲಿದಾನ ನಮಗೆ ಮಾದರಿಯಾಗಲಿ. ಪ್ರಭುದ್ಧ ಭಾರತ ಮೇಲೇರಲಿ.

ನಾವೆಲ್ಲರೂ ಸ್ನೇಹ-ಸದ್ಭಾವನೆಯೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಮುನ್ನಡೆಯುವುದೇ ಇಂದಿನ ಅಗತ್ಯ. ಕಾಲದ ಕರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

'Bookbharati.Com' to be launched on Aug 15

Tue Aug 14 , 2012
Nagpur: News Bharati is launching its new project – Book Bharati – on August 15, 2012. Books can be bought online from this portal. Books on nationalist thoughts and thinking are not easily available. This NewsBharati’s effort is a humble step to change this situation.  By clicking on www.bookbharati.com anyone can view the […]