ನಿಧನ ವಾರ್ತೆ
ಟಿ.ಎಸ್.ವಿಶ್ವನಾಥ್

ಬೆಂಗಳೂರು : ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಟಿ.ಎಸ್.ವಿಶ್ವನಾಥ್ (85) ಅವರು ಅಲ್ಪಕಾಲದ ಅನಾರೋಗ್ಯದಿಂದ ಜು. 3ರಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ದೈವಾಧೀನರಾದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಟಿ.ಎಸ್.ವಿಶ್ವನಾಥ್ ಅವರು ತಮ್ಮ ಬಿ.ಇ. ಪದವಿ ಬಳಿಕ 1952ರಿಂದ 1960ರವರೆಗೆ ಸಂಘದ ಪ್ರಚಾರಕರಾಗಿ ಹಲವೆಡೆ ದುಡಿದಿದ್ದರು. ಮೈಸೂರು ನಗರ ಪ್ರಚಾರಕ್, ಜಿಲ್ಲಾ ಪ್ರಚಾರಕ್ ಹಾಗೂ ನಂತರ ಮಂಗಳೂರು ವಿಭಾಗ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು. ಉತ್ತಮ ಹಾಡುಗಾರ, ಸಂಗೀತದಲ್ಲಿ ಆಸಕ್ತಿ ಹಾಗೂ ‘ಫೈರ್ ಬ್ರಾಂಡ್’ ಭಾಷಣಕಾರರೆಂದೇ ಚಿರಪರಿಚಿತರಾಗಿದ್ದರು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರು ತಮ್ಮ ನೇರ ಹಾಗೂ ದಿಟ್ಟ ನಡವಳಿಕೆಗೆ ಹೆಸರಾಗಿದ್ದರು.
ವಿಶ್ವನಾಥ್ ಅವರ ನಿಧನಕ್ಕೆ ಸಂಘದ ಹಿರಿಯ ಪ್ರಚಾರಕರಾದ ಕೃ.ಸೂರ್ಯನಾರಾಯಣ ರಾವ್, ನ.ಕೃಷ್ಣಪ್ಪ, ಮೈ.ಚ.ಜಯದೇವ್ ಮೊದಲಾದ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

T.S.Vishwanath