ಬೆಂಗಳೂರು  Dec 10; ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆಂದು ವಿಶ್ವ ಹಿಂದೂ ಪರಿಷತ್‌ನ ಮುಖಂಡ ಅಶೋಕಸಿಂಘಾಲ್‌ರವರು ತಿಳಿಸಿದರು, ಇವರು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಏರ್ಪಡಿಸಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಕಾ

ರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತಾನಾಡುತ್ತಿದ್ದರು.

ಇದಕ್ಕೂ ಮುನ್ನ ಕಾರ‍್ಯಕ್ರಮಕ್ಕೇ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು, ಕಾರ‍್ಯಕ್ರಮಕ್ಕೇ   ಆಗಮಿಸಿದ್ದ ಸಿಂಘಾಲ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಪಾಲ್ಗೊಂಡಿದ್ದ ನೂರಾರು ಶ್ರೀನಿವಾಸನ ಭಕ್ತರನ್ನು ಉದ್ದೇಶಿಸಿ ಮಾತಾನಾಡುತ್ತಾ ಕಲಿಯುಗದ ದೈವ ಶ್ರೀನಿವಾಸ, ಇತನ ಕಲ್ಯಾಣದಂಥ ಕಾರ‍್ಯಕ್ರಮಗಳನ್ನು ಏರ್ಪಡಿಸುವುದರಿಂದ ಖಂಡಿತವಾಗಿ ಸಮಾಜದಲ್ಲಿ ಒಳ್ಳೇಯ ವಾತಾವರಣ ನಿರ್ಮಾಣವಾಗಲಿದೆ ಹಾಗೇಯೇ ಇತರೇ ಧರ್ಮಗಳಿಗಿಂಥ ಈ ಧರ್ಮದ ವಿಚಾರ ಮುಂದಿನ ಪೀಳಿಗೆ ಅರಿತುಕೊಳ್ಳಲು ಅನುಕೂಲವಾಗುತ್ತದೆಂದರು ಇದೇ ಸಂಧರ್ಭದಲ್ಲಿ ಮಾತಾನಾಡುತ್ತಾ ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನ ಬೇಡ ಖಂಡಿತವಾಗಿ ಅಲ್ಲೇ ನಿರ್ಮಾಣವಾಗುತ್ತದೆಂದರು, ಇದು ಮುಂದಿನ ಪೆಬ್ರವಲ್ಲಿ ಪ್ರಯಾಗದಲ್ಲಿ ನಡೆಯುವ ನಲವತ್ತು ದಿನಗಳಾ ಕುಂಭಮೇಳದಲ್ಲಿ ಮಂದಿರ ನಿರ್ಮಾಣದ ದಿನಾಂಕ ನಿಗದಿಯಾಗಲಿದೆ ಇದನ್ನು ಕೇಂದ್ರ ಸರ್ಕಾರ ಒಪ್ಪಲಿ ಬಿಡಲೀ ಮಂದಿರವಲ್ಲೇ ನಿರ್ಮಾಣವಾಗುತ್ತದೆಂದರು.  ಕಾರ‍್ಯಕ್ರಮದಲ್ಲಿ ಕಾರ‍್ಯಕ್ರಮದ ಅಧ್ಯಕ್ಷವಹಿಸಿದ್ದ ಸದಾಶಿವರೆಡ್ಡಿ, ವಿಶ್ವ ಒಕ್ಕಲಿಗೆ ಮಠದ ಶ್ರೀ ಚಂದ್ರಶೇಖರ್‌ಸ್ವಾಮೀಜಿ ಹಾಗೂ ವಿಹೆಚ್‌ಪಿ ಕಾರ‍್ಯವಾಹ ಕೇಶವಹೆಗ್ಡೆ, ಬೆಂಗಳೂರು ಮಹನಗರ ಅಧ್ಯಕ್ಷ ವಿಜಯ್‌ಕುಮಾರರೆಡ್ಡಿ, ಜಿಲ್ಲಾಧ್ಯಕ್ಷ ವರ್ತೂರು ಮುನಿರಾಜು, ಆನೇಕಲ್ ತಾಲೂಕು ಅಧ್ಯಕ್ಷ ಮುಕುಂದರೆಡ್ಡಿ, ಮುಂತಾದವರು ಭಾಗವಹಿಸಿದ್ದರು.