ನೆತ್ತರುಗುಳಿ , ಉಪ್ಪಳ : ಕಾಸರಗೋಡು ಜಿಲ್ಲೆ ನವೆಂಬರ್ 14, 2012: ಭಾರತೀಯ ಕಿಸಾನ್  ಸಂಘದ  ವತಿಯಿಂದ , ಪೈವಳಿಕೆ ಪಂಚಾಯತ್ ಮಟ್ಟದ ಗೋಪೂಜನಾ ಕಾರ್ಯಕ್ರಮ ನೆತ್ತರುಗುಳಿ ಪರಿಸರದಲ್ಲಿ ತಾ  13-11-2012, ರಂದು ನಡೆಯಿತು.

ಭಾರತೀಯ ಕಿಸಾನ್ ಸಂಘದ ವತಿಯಿಂದ ಪಂಚಾಯತ್ ಮಟ್ಟದ ಗೋಪೂಜನಾ ಕಾರ್ಯಕ್ರಮ

ಕಾರ್ಯಕ್ರಮದ ಆರಂಭದಲ್ಲಿ ಮಾತೆಯರು  ಗೋಪೂಜೆ ನಡೆಸಿ ಬಳಿಕ  ಗೋಗ್ರಾಸ ನೀಡಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಕೃಷಿಕರಾದ  ತಿರುಮಲೇಶ್ವರ ಭಟ್ , ಉಳುವಾನ ಇವರು ಮಾತನಾಡಿ ಹಿಂದಿನ  ಜೀವನ ಪದ್ದತಿಯ ಅರಿವು ಇಂದಿನ ಪೀಳಿಗೆಗೆ ತಿಳಿಸುವುದು ಅಗತ್ಯ  ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ  ಜಿಲ್ಲಾ ವ್ಯವಸ್ಥಾ ಪ್ರಮುಖ್   ನಟರಾಜ್ ರಾವ್  ಅವರು  ಗೋವಿನ ಹಿರಿಮೆಯ ಬಗ್ಗೆ ಆರಿವು ನೀಡಿ ನಮ್ಮ  ಜೀವನದಲ್ಲಿ ಗೋವಿನ ಮಹತ್ವವನ್ನು ತಿಳಿಸಿದರು.  ಗೋವಿನ ರಕ್ಷಣೆಗಾಗಿ ಪ್ರಾಣವನ್ನೇ ಅರ್ಪಣೆ ಮಾಡಲೂ ಹಿಂಜರಿಯದ ನಮ್ಮ ಪರಂಪರೆಯನ್ನು ನೆನಪಿಸಿ , ಗೋರಕ್ಷಣೆಗಾಗಿ ಕಟಿಬದ್ದರಾಗೋಣ ಎಂದು ಹೇಳಿದರು. ಭಾರತೀಯ ಕಿಸಾನ್  ಸಂಘದ ಮಂಜೇಶ್ವರ ಪ್ರಖಂಡದ  ಕಾರ್ಯದರ್ಶಿಗಳಾದ  ವಿನೋದ್ ಅವರು ಗೋಪೂಜನಾ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು, ಕೊನೆಯಲ್ಲಿ  ಗೋರಕ್ಷಣೆಗಾಗಿ ಪ್ರತಿಜ್ಞೆಯನ್ನು ಮಾಡಿಸಲಾಯಿತು.

Nataraj, veteran social worker speaks on the occasion

ಸಭಾ ಕಾರ್ಯಕ್ರಮದಲ್ಲಿ ಸ್ವಾಗತವನ್ನು  “ಭಾರತೀಯ ಕಿಸಾನ್  ಸಂಘದ”  ಪೈವಳಿಕೆಯ  ಅಧ್ಯಕ್ಷ  ಜಗದೀಶ್ ಶೆಟ್ಟಿ  ಕಲ್ಲಗದ್ದೆ ನಡೆಸಿದರು.  ಹಾಗೂ ಧನ್ಯವಾದ ಸಮರ್ಪಣೆಯನ್ನು ಶ್ರೀಧರ ಬದಿಯಾರು ಇವರು ನಡೆಸಿದರು.
by Shivakrishna, Bayaru