ಭಟ್ಕಳ November 10: ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸೀತಾರಾಮ್ ಕೆದಿಲಾಯ ಅವರು ಕೈಗೊಂಡಿರುವ ಭಾರತ ಪರಿಕ್ರಮ ಯಾತ್ರೆ ಇಂದು ಉತ್ತಕ ಕನ್ನಡ ಜಿಲ್ಲೆಗೆ ಪ್ರವೇಶಿಸಿತು.

Bharat Parikrama Yatra at Shirroor on November 09, 2012

ಶನಿವಾರ ಮುಂಜಾನೆ ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಗೋ ಪೂಜೆ ನೆರವೇರಿಸಿ ಹೊರಟ ಯಾತ್ರೆಗೆ ಜಿಲ್ಲೆಯ ಗಡಿ ಬೆಳ್ಕೆಯ ಬಳಿ ಹಾರ್ದಿಕವಾಗಿ ಸ್ವಾಗತಿಸಲಾಯಿತು.

ಸಂಘದ ಕ್ಷೇತ್ರಿಯ ಪ್ರಚಾರಕ ಮಂಗೇಶ ಭೇಂಡೆ, ಪ್ರಾಂತ ಸಹಕಾರ್ಯವಾಹ ಶ್ರೀಧರ ನಾಡಗೀರ, ವಿಭಾಗ ಸಂಘಚಾಲಕ ವೆಂಕಟರಮಣ ಹೆಗಡೆ, ಭಟ್ಕಳ ಜಿಲ್ಲಾ ಸಂಘಚಾಲಕ ಹನುಮಂತ ಶಾನಭಾಗ್, ತಾಲೂಕ ಸಂಘಚಾಲಕ ಸುರೇಂದ್ರ ಶಾನಭಾಗ್ ಮುಂತಾದವರು ಸೀತಾರಾಮ ಕೆದಿಲಾಯರಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಸ್ವಾಗತ ಕೋರಿದರು. ಉಡುಪಿ ಜಿಲ್ಲೆಯ ಸಂಘಚಾಲಕ ಶಂಭು ಶೆಟ್ಟಿ ಧರ್ಮ ಧ್ವಜವನ್ನು ವಿಭಾಗ ಸಂಘಚಾಲಕ ವೆಂಕಟರಮಣ ಹೆಗಡೆ ಅವರಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್, ವಿ.ನಾಗರಾಜ್, ಸುಧೀರ ಗಾಡ್ಗಿಳ್, ಸುಧಾಕರ, ಸೀತಾರಮ್ ಭಟ್ ಮುಂತಾದವರು ಉಪಸ್ಥಿತರಿದ್ದರು.

ಆಗಸ್ಟ 9 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಯಾತ್ರೆಯು ಇಂದು ಜಿಲ್ಲೆಯನ್ನು ಪ್ರವೇಶಿಸಿದ್ದು, ನವೆಂಬರ 27 ರವರೆಗೆ ಜಿಲ್ಲೆಯ ಕರಾವಳಿಯ ಮೂಲಕ ಸಾಗಿ ಗೋವಾ ರಾಜ್ಯವನ್ನು ಪ್ರವೇಶಿಸಲಿದೆ.