ಫೇಸ್‌ಬುಕ್ ಪ್ರಿಯಕರನಿಗಾಗಿ ಗಂಡ-ಮಗು ಬಿಟ್ಟು ಇಸ್ಲಾಂಗೆ ಮತಾಂತರಗೊಂಡ ಕಾಂಗ್ರೆಸ್ ಶಾಸಕಿ!

ಫೇಸ್‌ಬುಕ್ ಪ್ರಿಯಕರನಿಗಾಗಿ ಗಂಡ-ಮಗು ಬಿಟ್ಟು ಇಸ್ಲಾಂಗೆ ಮತಾಂತರಗೊಂಡ ಕಾಂಗ್ರೆಸ್ ಶಾಸಕಿ!

Congress MLA Dr Rumi Nath

ಅಸ್ಸಾಂನ ಗೌಹಾತಿಯ ಬಳಿಯ ಬೋರ್ಕೋಲಾ ಪ್ರದೇಶದ ಕಾಂಗ್ರೆಸ್ ಶಾಸಕಿ ಡಾ|| ರುಮಿ ನಾಥ್ ತನ್ನ ಗಂಡ ಹಾಗೂ ಎರಡು ವರ್ಷದ ಮಗಳನ್ನು ತ್ಯಜಿಸಿ ಫೇಸ್‌ಬುಕ್ ಅಂತರ್ಜಾಲ ತಾಣದಲ್ಲಿ ಪರಿಚಿತನಾದ ಮುಸ್ಲಿಂ ಯುವಕ ಜಾಕೆ ಝಕೀರ್‌ಗಾಗಿ ಹಿಂದೂ ಧರ್ಮವನ್ನು ತೊರೆದು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. 32ರ ಹರೆಯದ ರುಮಿ ನಾಥ್ ಫೇಸ್‌ಬುಕ್ ಮೂಲಕ ಪರಿಚಿತನಾದ ಜಾಕಿ ಝಕೀರ್‌ಗೆ ಮನಸೋತದ್ದೇ ತಡ, ತಾನೋರ್ವ ಜನಪ್ರತಿನಿಧಿ, ವಿವಾಹಿತ ಮಹಿಳೆ ಎನ್ನುವುದನ್ನೂ ಮರೆತು ಪ್ರೇಮಲೋಕದಲ್ಲೇ ತೇಲಾಡತೊಡಗಿದಳು.

ಸಮಾಜ ಕಲ್ಯಾಣ ಇಲಾಖೆಯ ಸಾಧಾರಣ ಗುಮಾಸ್ತನಾಗಿರುವ ಝಾಕಿರ್ ನೋಡಲು ಸುಂದರನಾಗಿದ್ದ ಎಂಬುದಷ್ಟೇ ಆಕೆಯನ್ನು ಆಕರ್ಷಿಸಲು ಕಾರಣವಾದ ಸಂಗತಿ. ಪತಿ ರಾಕೇಶ್ ಕುಮಾರ್ ಸಿಂಗ್, ಎರಡು ವರ್ಷದ ಮಗಳು ಋತಂಬರಾ ಸೇರಿದಂತೆ ತನ್ನ ಕುಟುಂಬ ಸದಸ್ಯರನ್ನೆಲ್ಲಾ ತೊರೆದು, ಪಕ್ಷದ ಮುಖಂಡರ ಸಲಹೆಯನ್ನು ತಗೊಳ್ಳದೇ ಇಸ್ಲಾಂಗೆ ಮತಾಂತರಗೊಂಡಿರುವ ಡಾ|| ರುಮಿ ನಾಥ್ ತನ್ನ ಹೆಸರನ್ನು ರಬಿಯಾ ಸುಲ್ತಾನ್ ಎಂದು ಬದಲಾಯಿಸಿಕೊಂಡಿದ್ದಾಳೆ. ಈ ಮತಾಂತರಕ್ಕೆ ಅಸ್ಸಾಂನ ಕಾಂಗ್ರೆಸ್ ಸಚಿವ ಸಿದ್ಧಿಕ್ ಅಹಮ್ಮದ್ ನೇತೃತ್ವ ವಹಿಸಿದ್ದರು. ಇದೇ ವೇಳೆ ತನ್ನ ಪತ್ನಿಯನ್ನು ಬಲವಂತವಾಗಿ ಅಪಹರಿಸಲಾಗಿದೆ ಎಂದು ಪೋಲೀಸ್ ಠಾಣೆಯಲ್ಲಿ ರಾಕೇಶ್ ಸಿಂಗ್ ನೀಡಿದ್ದರೂ, ‘ತಾನು ಸ್ವ-ಇಚ್ಛೆಯಿಂದ ಝಾಕಿರ್ ಜತೆ ಇದ್ದೇನೆ’ ಎಂದು ಲಿಖಿತವಾಗಿ ಹೇಳಿದ್ದಾಳೆ ಈ ಕಾಂಗ್ರೆಸ್ ಶಾಸಕಿ!

2 year old Ritambara
MLA Dr Rumi Nath along with her daughter Ritambara

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಜ್ಯದಲ್ಲಿ ಆರೆಸ್ಸೆಸ್ ಕಾರ್ಯವೃದ್ಧಿ

Sat Jun 23 , 2012
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕಾರ‍್ಯ ಚಟುವಟಿಕೆ ಮತ್ತಷ್ಟು ವಿಸ್ತಾರಗೊಂಡಿದ್ದು ಆರೆಸ್ಸೆಸ್ ಶಾಖೆಗಳ ಸಂಖ್ಯೆ ಹೆಚ್ಚಳವಾಗಿದೆ. ಆರೆಸ್ಸೆಸ್ ಇತ್ತೀಚೆಗೆ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಂತೆ 2011 ರ ಜನವರಿಯಲ್ಲಿ 1698 ಸ್ಥಾನಗಳಲ್ಲಿ 2597 ರಷ್ಟು ಇದ್ದ ಶಾಖೆಗಳ ಸಂಖ್ಯೆಯು 2012 ರ ಜನವರಿ ವೇಳೆಗೆ 1788 ಸ್ಥಾನಗಳಲ್ಲಿ 2715ಕ್ಕೆ ಏರಿದೆ. ಇದೇ ರೀತಿ ವಾರಕ್ಕೊಮ್ಮೆ ನಡೆಯುವ ಮಿಲನ್‌ಗಳ ಸಂಖ್ಯೆ 2011 ರಲ್ಲಿ 248 ಇದ್ದಿದ್ದು ಇದೀಗ […]