ಓದುಗರಲ್ಲಿ, ಸ್ವಯಂಸೇವಕರಲ್ಲಿ ವಿನಂತಿ

ಇತ್ತೀಚೆಗೆ ವಿಧಿವಶರಾದ ಆರೆಸ್ಸೆಸ್ಸಿನ ನಿಕಟಪೂರ್ವ ಸರಸಂಘಚಾಲಕ ಕುಸೀ ಸುದರ್ಶನ್‌ಜೀಯವರ ಬದುಕು – ವ್ಯಕ್ತಿತ್ವವನ್ನು ಬಿಂಬಿಸುವ ’ಚಿತ್ರ ಸಂಚಯ’ ಎಂಬ ಚಿತ್ರಮಾಲಿಕೆ (ಫೋಟೋ ಸಂಗ್ರಹ)ಯೊಂದನ್ನು ಸಿದ್ಧಪಡಿಸಲಾಗುತ್ತಿದೆ. ಸುದರ್ಶನ್‌ಜೀಯವರು ದೇಶ ವಿದೇಶಗಳಲ್ಲಿ ಪಾಲ್ಗೊಂಡ ಕಾರ್ಯಕ್ರಮಗಳು, ಭೇಟಿ ಮಾಡಿದ ವ್ಯಕ್ತಿ – ಸಂಸ್ಥೆಗಳು, ಅಪರೂಪದ ಸನ್ನಿವೇಶಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ತೆಗೆದ ಛಾಯಾಚಿತ್ರಗಳ ಸಂಕಲನವೇ ಈ ಹೊತ್ತಿಗೆಯ ಹೂರಣ.

KS Sudarsjan ji

ಮೂಲತಃ ಮಂಡ್ಯ ಜಿಲ್ಲೆಯ ಕುಪ್ಪಹಳ್ಳಿಯವರೇ ಆದ ಸುದರ್ಶನ್‌ಜೀ, ಅನೇಕ ಬಾರಿ ಕನ್ನಡ ನೆಲದಲ್ಲಿ ಓಡಾಡಿದ್ದಾರೆ. ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ವಿಶಾಲ ಸಂಘಟನೆಯೊಂದರ ಅತ್ಯುನ್ನತ ಸ್ಥಾನದಲ್ಲಿದ್ದರೂ ಸಾವಿರಾರು ಸಾಮಾನ್ಯ ಸ್ವಯಂಸೇವಕರ, ಹಿತೈಷಿಗಳ ಸಂಪರ್ಕ ಹೊಂದಿದ್ದವರು. ಈ ವೇಳೆ ತೆಗೆಯಲಾದ ಆಯ್ದ ಫೋಟೋಗಳು  ಚಿತ್ರ ಸಂಚಯಕ್ಕೆ ಅಗತ್ಯವಿದೆ. ಈಗಾಗಲೇ ಅಂತಹ ಅನೇಕ ಫೋಟೋಗಳನ್ನು ಸಂಗ್ರಹಿಸಲಾಗಿದೆ. ಆದರೆ ’ಸಮಗ್ರ’ ಎನಿಸುವಷ್ಟು ಸಂಗ್ರಹ ಆಗಿಲ್ಲ.

www.samvada.org ಓದುಗರಲ್ಲಿ, ಸ್ವಯಂಸೇವಕರಲ್ಲಿ ವಿನಂತಿಯೇನೆಂದರೆ, ನಿಮ್ಮಲ್ಲಿ ಅಥವಾ ನಿಮಗೆ ಪರಿಚಯ ಇರುವ ಬಂಧುಗಳಲ್ಲಿ ಸುದರ್ಶನ್‌ಜೀ ಕುರಿತ ಫೋಟೋಗಳು ಇದ್ದಲ್ಲಿ ದಯವಿಟ್ಟು ಅದನ್ನು ಸ್ಕ್ಯಾನ್ (SCAN)ಮಾಡಿ ಇ-ಮೇಲ್ ಮೂಲಕ karnatakarss@gmail.com ಗೆ ಕಳುಹಿಸಿಕೊಡಬೇಕು. ಫೋಟೋ ಕ್ಲಿಕ್ಕಿಸಿದ ಸಂದರ್ಭ, ಜೊತೆಯಲ್ಲಿರುವವರ ಮಾಹಿತಿಯನ್ನೂ ನಮೂದಿಸಿ. ಸಂಪರ್ಕ 9880621824

-ರಾಜೇಶ್ ಪದ್ಮಾರ್

ವಿಶ್ವ ಸಂವಾದ ಕೇಂದ್ರ, ಬೆಂಗಳೂರು