ದೇವರ ನಾಡಲ್ಲಿ ಲ್ಯಾಂಡ್ ಜಿಹಾದ್!

ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಈ ಲ್ಯಾಂಡ್ ಜಿಹಾದ್ (ಮಾರಾಟಕ್ಕಿರುವ ಭೂಮಿಯನ್ನು ಹಠಕ್ಕೆ ಬಿದ್ದಂತೆ ಎಷ್ಟೇ ಮೊತ್ತ ಕೊಟ್ಟರೂ ಇಸ್ಲಾಂ ಮತಸ್ಥರೇ ಖರೀದಿಸುವ ವ್ಯವಸ್ಥಿತ ಜಾಲ) ಮುಂದುವರೆದಿದೆ. ಪಶ್ಚಿಮದ ಗುಜರಾತ್ ಬಿಟ್ಟರೆ ಭಾರತದ ಉಳಿದ ಮೂರೂ ಮೂಲೆಗಳಲ್ಲಿ ಪ್ರತ್ಯೇಕತಾವಾದದ ಕೂಗು ಇದೀಗ ಲ್ಯಾಂಡ್ ಜಿಹಾದ್ ಮೂಲಕ ಮತ್ತಷ್ಟು ಬಲಗೊಳ್ಳುತ್ತಿದೆ.

Kerala-

ದೇವರ ಸ್ವಂತ ನಾಡು (God’s own country) ಎಂದು ಕರೆಯಲ್ಪಡುವ ಕೇರಳದಲ್ಲಿ ಇದೀಗ ಲ್ಯಾಂಡ್ ಜಿಹಾದ್ ಸಪ್ಪಳ! ಮತಾಂತರ, ಲವ್ ಜಿಹಾದ್, ಉಗ್ರ ತರಬೇತಿ ಕೇಂದ್ರಗಳು, ಅಪರಾಧ, ಹಿಂಸೆ, ಭ್ರಷ್ಟಾಚಾರ, ಸಾಮೂಹಿಕ ಹತ್ಯೆ, ಮಾದಕ ವ್ಯಸನ, ಜಿಹಾದಿ ಭಯೋತ್ಪಾದನೆ ಇತ್ಯಾದಿ ಸಮಾಜ ದ್ರೋಹಿ ಚಟುವಟಿಕೆಗಳ ಜತೆಗೆ ಇದೀಗ ಲ್ಯಾಂಡ್ ಜಿಹಾದ್ (ಭೂ ಜಿಹಾದ್) ಎಂಬ ಹೊಸ ಶಬ್ದವೊಂದು ಹಿಂದೂ ಕುಟುಂಬಗಳ ಮೈ ನಡುಗಿಸುತ್ತಿದೆ.

ಮೇಲ್ನೋಟಕ್ಕೆ ಹೇಳಿಕೇಳಿ ಇದೊಂದು ತೀರಾ ಕಾನೂನು ಬದ್ಧ ಭೂವ್ಯವಹಾರ. ಎಕರೆಗಟ್ಟಲೆ ಕೃಷಿಯೋಗ್ಯ ಜಮೀನನ್ನು ಯೋಗ್ಯ ಬೆಲೆ ತೆತ್ತು ಕೊಂಡುಕೊಳ್ಳುವ ವ್ಯವಹಾರ. ಆದರೆ ‘ಜಾಗ ಮಾರಾಟಕ್ಕಿದೆ’ ಎಂದಾಕ್ಷಣ ಹೆಚ್ಚಿನ ಬೆಲೆ ತೆತ್ತು ಖರೀದಿ ಮಾಡುವವರು ಮಾತ್ರ ಒಂದೇ ಕೋಮಿನವರು! ಮುಸ್ಲಿಂ ಬಾಹುಳ್ಯದ ಮಲಪ್ಪುರಂನಿಂದ ಪ್ರಾರಂಭಗೊಂಡ ಈ ವ್ಯವಹಾರ ಗಡಿನಾಡು ಕಾಸರಗೋಡಿನ ತನಕವೂ ವ್ಯಾಪಿಸಿ ಭಟ್ಕಳದವರೆಗೂ ಮುಂದುವರೆದಿದೆ ಕಳೆದ ದಶಕವೊಂದರಲ್ಲೇ ಈ ಪರಿಣಾಮವಾಗಿ ಲಕ್ಷಾಂತರ ಎಕರೆ ಭೂಪ್ರದೇಶವು ಮುಸ್ಲಿಂ ವ್ಯಾಪಾರಿಗಳ ಒಡೆತನಕ್ಕೆ ಸೇರಿದೆ. ಅತ್ಯಂತ ವ್ಯವಸ್ಥಿತವಾಗಿ ಈ ರಿಯಲ್ ಎಸ್ಟೇಟ್ ವ್ಯವಹಾರವು ನಡೆಯುತ್ತಿದ್ದು ಗಲ್ಫ್ ರಾಷ್ಟ್ರಗಳಿಂದ ಇದಕ್ಕಾಗಿ ಹಣದ ಹೊಳೆ ಹರಿದು ಬರುತ್ತಿರುವುದಾಗಿ ಸಂಶಯಿಸಲಾಗಿದೆ.

Increasing Muslim Population in Kasaragod, the northern district of Kerala

ಕಾಸರಗೋಡಿನ ಹಲವಾರು ಕೃಷಿ ಪ್ರಧಾನ ಪ್ರದೇಶಗಳ ಒಡೆತನ ಇದೀಗ ಮುಸ್ಲಿಂ ಸಮುದಾಯದ ವ್ಯಾಪಾರಿಗಳ ಕೈಯಲ್ಲಿದೆ. ಈಗಾಗಲೇ ಶೇಕಡಾ 55ಕ್ಕೆ ಇಳಿದಿರುವ ಕೇರಳದ ಹಿಂದೂ ಜನಸಂಖ್ಯೆ 2025ರ ವೇಳೆಗೆ ಅಲ್ಪಸಂಖ್ಯಾತವಾಗಲಿದೆ. ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಈ ಲ್ಯಾಂಡ್ ಜಿಹಾದ್ (ಮಾರಾಟಕ್ಕಿರುವ ಭೂಮಿಯನ್ನು ಹಠಕ್ಕೆ ಬಿದ್ದಂತೆ ಎಷ್ಟೇ ಮೊತ್ತ ಕೊಟ್ಟರೂ ಇಸ್ಲಾಂ ಮತಸ್ಥರೇ ಖರೀದಿಸುವ ವ್ಯವಸ್ಥಿತ ಜಾಲ) ಮುಂದುವರೆದಿದೆ. ಪಶ್ಚಿಮದ ಗುಜರಾತ್ ಬಿಟ್ಟರೆ ಭಾರತದ ಉಳಿದ ಮೂರೂ ಮೂಲೆಗಳಲ್ಲಿ ಪ್ರತ್ಯೇಕತಾವಾದದ ಕೂಗು ಇದೀಗ ಲ್ಯಾಂಡ್ ಜಿಹಾದ್ ಮೂಲಕ ಮತ್ತಷ್ಟು ಬಲಗೊಳ್ಳುತ್ತಿದೆ.

ಈಗಾಗಲೇ ಉಗ್ರರಿಗೆ ತರಬೇತಿ ನೀಡುವ ಕೇಂದ್ರವಾಗಿ ಮಾರ್ಪಟ್ಟಿರುವ ಕೇರಳದಲ್ಲಿ ಇನ್ನಷ್ಟು ಸಾಮಾಜಿಕ ಅಶಾಂತಿ ತೋರಲಿದೆ ಎಂಬುದು ಅಲ್ಲಿನ ತಜ್ಞರ ಅಭಿಮತ. ಇದೇ ವೇಳೆ ಇದೊಂದು ಅಧಿಕೃತ ಹಾಗೂ ಕಾನೂನುಬದ್ಧ ಪ್ರಕ್ರಿಯೆಯಾದ್ದರಿಂದ ಇದೊಂದು ಚರ್ಚಾ ವಿಷಯವಾಗಿ ವಿಚಾರವಂತರ ಮಧ್ಯೆ ಇನ್ನೂ ನುಸುಳಿಲ್ಲ. ಭೂಮಿಯ ಒಡೆತನ ಸಾಧಿಸಿದಷ್ಟೂ ಪ್ರತ್ಯೇಕತೆಯ ಕೂಗು ಗಟ್ಟಿಯಾಗುತ್ತಲೇ ಇದೆ.

ಅನೇಕ ವರ್ಷಗಳಿಂದ ಕಾರ್ಮಿಕ ವರ್ಗದ ತೀವ್ರ ಪರಿಶ್ರಮದಿಂದ ಕಟ್ಟಿ ಬೆಳೆಸಿದ ಎಕರೆಗಟ್ಟಲೆ ಕೃಷಿ ಭೂಮಿಯನ್ನು ಹಣದ ಗಂಟು ಕಂಡಕೂಡಲೇ ಯಾರೇ ಬಂದರೂ ಮಾರಿಬಿಟ್ಟು ಬೆಂಗಳೂರು – ಪುಣೆ – ಮುಂಬೈ ನಗರಕ್ಕೆ ವಲಸೆಹೋಗಿ ಸಾಫ್ಟ್‌ವೇರ್ ಇಂಜಿಯರ್ ಮಕ್ಕಳೊಂದಿಗೆ ‘ಹಾಯಾ’ಗಿರುವ ಪ್ರವೃತ್ತಿ ಸವರ್ಣೀಯ ಹಿಂದೂಗಳಲ್ಲಿ ಹೆಚ್ಚುತ್ತಿರುವುದೇ ಒಂದು ಅಪಾಯಕಾರಿ ಬೆಳವಣಿಗೆ ಎಂಬುದು ಹಿರಿಯರೊಬ್ಬರ ಮನದಾಳದ ಮಾತು.

ಕೇರಳದ ನಂತರ ಈ ವೈರಸ್ ಕರ್ನಾಟಕಕ್ಕೆ ಪಸರಿಸುವ ದಿನಗಳು ದೂರವಿಲ್ಲ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Land Jihad: The new threat in Kerala when Hindus sliding to a Minority

Tue May 29 , 2012
by VSK-Karnataka Of  late, Kerala has been suffering from a new syndrome, the Land Jihad! Known as ‘Gods own Country’, Kerala s always been a victim of cultural and religious invasions.  The state which is already suffering from forcible conversions, love jihad, violence, increased teenage crimes, murders, communal violence, corruption,  is […]