Download: ದಿಲೀಪ್ ಪಡಗಾಂವ್‍ಕರ್ ವರದಿ ವಿರುದ್ಧ ರಾಷ್ಟ್ರಪತಿಗಳಿಗೆ ಮನವಿ

Download ಮನವಿ ಪತ್ರ (pdf)

 

ಜಮ್ಮು – ಕಾಶ್ಮೀರ ಉಳಿಸಿ ಹೋರಾಟ ಸಮಿತಿ, ಕರ್ನಾಟಕ

ನಂ. 55, ಶೇಷಾದ್ರಿಪುರಂ, ಒಂದನೇ ಮುಖ್ಯ ರಸ್ತೆ, ಬೆಂಗಳೂರು – 560020

ಗೌರವಾನ್ವಿತ ರಾಷ್ಟ್ರಪತಿಯವರಿಗೆ ಮಾನ್ಯ ರಾಜ್ಯಪಾಲರ ಮೂಲಕ ಸಲ್ಲಿಸುವ ಮನವಿ ಪತ್ರ

 MEMPORANDUM Kannada:

ಇವರಿಗೆ,

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು

ರಾಷ್ಟ್ರಪತಿ ಭವನ

ನವದೆಹಲಿ

ಮಾನ್ಯರೇ,

ವಿಷಯ: ಜಮ್ಮು ಮತ್ತು ಕಾಶ್ಮೀರದ ಬಗ್ಗೆ ದಿಲೀಪ್ ಪಡಗಾಂವ್‌ಕರ್ ನೇತೃತ್ವದ ಸಂವಾದಕಾರರ ತಂಡವು ನೀಡಿದ ವರದಿಯ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿಷಯಗಳನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿಸುತ್ತೇವೆ.

 •       ೧೯೪೭ ಅಕ್ಟೋಬರ್ ೨೬ ರಂದು ಜಮ್ಮು ಮತ್ತು ಕಾಶ್ಮೀರದ ಅಂದಿನ ಮಹಾರಾಜ ಶ್ರೀ ಹರಿಸಿಂಗ್ ಅವರು ತಮ್ಮ ರಾಜ್ಯವನ್ನು ಸಂವಿಧಾನಬದ್ದವಾಗಿ ಭಾರತ ಜೊತೆ ವಿಲಯನಗೊಳಿಸಿದ್ದರು. ಅಂದಿನಿಂದ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ವಿಲಯನದ ಪ್ರಕ್ರಿಯೆಗಳ ಪ್ರಕಾರ ಮುಂದೆಂದೂ ಜಮ್ಮು ಮತ್ತು ಕಾಶ್ಮೀರದಲ್ಲಿ ಗೊಂದಲಗಳು ಉಂಟಾಗುವಂತಿರಲಿಲ್ಲ.
 •       ರಾಜ್ಯದ ಬಹುದೊಡ್ಡ ಭೂಭಾಗವನ್ನು ಪಾಕಿಸ್ಥಾನ ಮತ್ತು ಚೀನಾ ಅಕ್ರಮವಾಗಿ ತಮ್ಮ ವಶಮಾಡಿಕೊಂಡಿವೆ. ಆದರೆ ಆ ಭೂಭಾಗಗಳು ಸಂವಿಧಾನಾತ್ಮಕವಾಗಿ ಭಾರತz ಭೂಭಾಗಗಳಾಗಿವೆ. ಅವನ್ನು ಮರಳಿ ನಮ್ಮ ವಶ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಸಂಬಂಧ ಭಾರತದ ಸಂಸತ್ತು ೧೯೯೪ ಫೆಬ್ರವರಿ ೨೨ ರಂದು ನಿರ್ಣಯವನ್ನು ಕೂಡ ಪಾಸು ಮಾಡಿತ್ತು.
 •       ರಾಜ್ಯದ ಯಾವುದೇ ಭಾಗವನ್ನು ಪ್ರತ್ಯೇಕಿಸುವುದು, ವಿಲಯನವನ್ನು ವಿರೋಧಿಸುವುದು, ಆ ಭಾಗವನ್ನು ಸ್ವತಂತ್ರ ಎಂದು ಘೋಷಿಸಿಕೊಳ್ಳುವುದುರಾಷ್ಟ್ರದ್ರೋಹಕ್ಕೆ ಸಮಾನ.
 •       ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗಾಗಿ ಭಾರತವು ಮೂರು ಪ್ರತ್ಯಕ್ಷ ಯುದ್ಧಗಳನ್ನೂ. ಕಾರ್ಗಿಲ್‌ನಂಥ ತೆರವುಗೊಳಿಸುವಿಕೆಯ ಕಾರ್ಯವನ್ನೂ ಮಾಡಿದೆ. ೧೯೮೮ರಿಂದ ನಿರಂತರವಾಗಿ ಭಯೋತ್ಪಾದನೆಯ ವಿರುದ್ಧದ ಯುದ್ಧವಂತೂ ನಡೆದೇ ಇದೆ.ಯುದ್ಧದಲ್ಲಿಹೋರಾಡಿದಯೋಧರಿಗೆ ನೀಡಲಾದ ಪರಮವೀರಚಕ್ರಗಳಲ್ಲಿ ೧೬ ಪರಮವೀರ ಚಕ್ರ ಪ್ರಶಸ್ತಿಗಳು ಜಮ್ಮು ಮತ್ತು ಕಾಶ್ಮೀರದ ಯುದ್ಧದಲ್ಲಿ ಭಾಗವಹಿಸಿದ ಯೋಧರಿಗಾಗಿಯೇ ನೀಡಲ್ಪಟ್ಟಿವೆ. ಇದುವರೆಗೆ ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗಾಗಿ ಸುಮಾರು ೬ ಸಾವಿರಕ್ಕೂ ಅಧಿಕ ಯೋಧರು ಬಲಿಯಾಗಿದ್ದಾರೆ.

ಸಂವಾದಕಾರರು ನೀಡಿದ ಈ ವರದಿಯಲ್ಲಿ ಅನೇಕ ರಾಷ್ಟ್ರವಿರೋಧಿಹಾಗೂ ಸಂವಿಧಾನಬಾಹಿರವಾದ ಸಲಹೆಗಳು ಮತ್ತು ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆಯಾಗುವ ಹಲವು ವಿಷಯಗಳಿವೆ. ಇದಕ್ಕೆ ಕೆಲವು ಉದಾಹರಣೆಗಳುಈ ಕೆಳಗಿವೆ.

 •       ೧೯೫೨ರ ಒಪ್ಪಂದದ ಬಳಿಕ ರಾಜ್ಯದಲ್ಲಿ ಜಾರಿಯಲ್ಲಿರುವ ಭಾರತೀಯ ಸಂವಿಧಾನದ ಅನುಚ್ಛೇದಗಳು ಮತ್ತು ಕಾನೂನುಗಳಪುನರ್ವಿಮರ್ಶೆಗಾಗಿ ಸಾಂವಿಧಾನಿಕ ಸಮಿತಿಯೊಂದನ್ನು ರಚಿಸಬೇಕು.
 •       ಜಮ್ಮು-ಕಾಶ್ಮೀರದ ಜನರು ಭಾರತ ಮತ್ತು ಜಮ್ಮು-ಕಾಶ್ಮೀರ, ಎರಡೂ ಪ್ರದೇಶಗಳ ನಾಗರಿಕರು.
 •       ಈಗಾಗಲೇ ಜಾರಿಗೊಳಿಸಿರುವ ಭಾರತದ ಕಾನೂನುಗಳು ಜಮ್ಮು ಕಾಶ್ಮೀರದ ಜನರಿಗೆ ಹಿತವನ್ನು ಮಾಡುವಲ್ಲಿ ವಿಫಲವಾಗಿವೆ.
 •       ೩೭೦ ನೇ ವಿಧಿಯ ಖಂಡ(೧) ಮತ್ತು (೩) ರಅಧಿಕಾರಗಳನ್ನು ಮೊಟಕುಗೊಳಿಸುವುದರಿಂದ ರಾಷ್ಟ್ರಪತಿಗಳ ಅಧಿಕಾರಗಳು ಕುಂಠಿತಗೊಳ್ಳ್ಳುತ್ತವೆ.
 •       ಸಂವಿಧಾನದ ೩೭೦ ನೇ ವಿಧಿಯಲ್ಲಿ ಉಲ್ಲೇಖಿತವಾಗಿರುವ ‘ತಾತ್ಕಾಲಿಕ’ ಎಂಬ ಶಬ್ದದ ಬದಲಿಗೆ ‘ವಿಶೇಷ’ ಎಂದು ಉಲ್ಲೇಖಿಸಬೇಕು.
 •       ರಾಜ್ಯಪಾಲರನ್ನು ನೇಮಕ ಮಾಡಲು ರಾಜ್ಯ ಸರಕಾರ ರಾಷ್ಟ್ರಪತಿಗಳಿಗೆ ಮೂರು ಹೆಸರುಗಳನ್ನು ಸೂಚಿಸುವುದು ಮತ್ತು ಆ ಮೂರರಲ್ಲಿ ಯಾವುದಾದರೂ ಒಂದನ್ನು ರಾಷ್ಟ್ರಪತಿಯವರು ಅನುಮೋದಿಸುವುದು.
 •       ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಹುದ್ದೆಗಳ ಹೆಸರುಗಳನ್ನು ಈಗಿರುವ ಹೆಸರಿನ ಜೊತೆಗೆ ಉರ್ದುವಿನಲ್ಲಿಯೂ ಬಳಸುವುದು.

ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷೆ, ಆರ್ಥಿಕ ಬೆಳವಣಿಗೆಗಳಿಗೆ ಸಂಬಂಧಿಸಿದ ವಿಚಾರಗಳಿಗಲ್ಲದೇ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಭಾರತದ ಸಂಸತ್ತು ಕಾನೂನು ಮಾಡುವಂತಿಲ್ಲ.

ಜಮ್ಮು ಮತ್ತು ಕಾಶ್ಮೀರವನ್ನುದಕ್ಷಿಣ ಮತ್ತು ಮಧ್ಯ ಏಷ್ಯಾದ ನಡುವಣ ಸೇತುವೆ ಎಂದಿರುವುದು.

ಹೀಗೆ ಈ ವರದಿಯಲ್ಲಿ ಅನೇಕ ಭಾರತವಿರೋಧಿ ಅಂಶಗಳಿರುವುದರಿಂದ ಮಹಾಮಹಿಮ ರಾಷ್ಟ್ರಪತಿಗಳುಈ ಮನವಿಯನ್ನುಭಾರತ ಸರಕಾರದ ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಿಸಿ ಆ ಮೂಲಕ ಸಾರ್ವಜನಿಕ ಚರ್ಚೆಯಾಗಲು ಅನುವು ಮಾಡಿಕೊಡಲು ನಿರ್ದೇಶಿಸುವುದರ ಜೊತೆಗೆ ಸಂವಾದಕಾರರು ಎಂತಹ ಪರಿಸ್ಥಿತಿಯಲ್ಲಿ, ಯಾವ ಆಧಾರದ ಮೇಲೆ ಈ ವರದಿಯನ್ನು ನೀಡಿದ್ದಾರೆ ಮತ್ತು ಅವರಿಗೆ ರಾಷ್ಟ್ರವಿರೋಧಿ ಪ್ರತ್ಯೇಕತಾವಾದಿಗಳೊಡನೆ ಸಂಬಂಧಗಳೇನಾದರೂ ಇವೆಯೇ ಎಂಬ ಬಗ್ಗೆ ತನಿಖೆಗೆ ಆದೇಶ ನೀಡಬೇಕೆಂದೂ ಈ ಕೆಳಗೆ ಸಹಿ ಮಾಡಿರುವ ನಾವುಗಳು ವಿನಂತಿಸುತ್ತೇವೆ.

ದಿನಾಂಕ: ೬ ಜುಲೈ ೨೦೧೨

ಸ್ಥಳ: ಬೆಂಗಳೂರು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Who is Secular and What is secularism? : MG Vaidya

Thu Jul 5 , 2012
by MG Vaidya, in Organiser At present, a fierce debate is raging in the media, as to who is secular. The two extreme points are represented by two Chief Ministers of our country. One is the Chief Minister of Bihar Shri Nitish Kumar and the other is Shri Narendra Modi […]