ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ

ದಿನಾಂಕ:10-5-2012

ಪತ್ರಿಕಾ ಪ್ರಕಟಣೆ

Shivakumar Swamiji

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಇಂದು ಬೆಳಿಗ್ಗೆ ಶ್ರೀ ಸಿದ್ಧಗಂಗಾ ಗುರುಪೀಠದ ಮಠಾಧೀಶರಾದ ಪೂಜ್ಯ ಡಾ|| ಶಿವಕುಮಾರ ಸ್ವಾಮೀಜಿಯವರಿಗೆ 105 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಗೌರವ ಸಮರ್ಪಿಸಿದರು.

ಶ್ರೀ ಸಿದ್ಧಗಂಗಾ ಮಠಕ್ಕೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ 5ದಶಕಗಳಿಗೂ ಮಿಕ್ಕ ಹಾರ್ದಿಕ ಸಂಬಂಧವಿದೆ. 60ರ ದಶಕದಲ್ಲಿಯೇ ಸಂಘದ ಅಂದಿನ ಮುಖ್ಯಸ್ಥರಾದ ಶ್ರೀ ಗುರೂಜಿ ಗೋಳ್ವಾಲ್ಕರ್ರವರು ಶ್ರೀಮಠಕ್ಕೆ ಭೇಟಿಕೊಟ್ಟು ಸ್ವಾಮೀಜಿಯವರೊಂದಿಗೆ ರಾಷ್ಟ್ರೀಯ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿದ್ದರು. 1969ರಲ್ಲಿ ಅಸ್ಪೃಶ್ಯತೆಯ ಆಚರಣೆಯ ನಿವಾರಣೆಗೆಂದೇ ಉಡುಪಿಯಲ್ಲಿ ನಡೆದ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಸ್ವತಃ ಪೂಜ್ಯ ಸಿದ್ಧಗಂಗಾ ಮಠಾಧೀಶರು ಪಾಲ್ಗೊಂಡಿದ್ದರು. ಆನಂತರವೂ ಸಂಘದ ಪ್ರಮುಖರು ನಿರಂತರ ಶ್ರೀಗಳ ಭೇಟಿ, ಸಂಪರ್ಕದಲ್ಲಿದ್ದಾರೆ.

ಇವತ್ತು ಬೆಳಿಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಮೈ.ಚ.ಜಯದೇವ್ ಅಲ್ಲದೇ ಕೃ.ನರಹರಿ, ಡಾ|| ಪ್ರಭಾಕರ ಭಟ್, ತಿಪ್ಪೇಸ್ವಾಮಿ ಹಾಗೂ ಕಜಂಪಾಡಿ ಸುಬ್ರಹ್ಮಣ್ಯ ಭಟ್ರವರು ಶ್ರೀಗಳನ್ನು ಭೇಟಿಯಾಗಿ ಗೌರವ ಸಮರ್ಪಿಸಿ ಆಶೀರ್ವಾದ ಪಡೆದರು. ಭೇಟಿಯ ಸಂದರ್ಭದಲ್ಲಿ ಸಂಘದ ರಜಾಕಾಲೀನ ಶಿಬಿರಗಳ ಮಾಹಿತಿ ಕೊಡಲಾಯಿತು. ಶ್ರೀಗಳು ದೇಶದಲ್ಲಿ ನೈತಿಕತೆ ಕುಸಿಯುತ್ತಿರುವುದನ್ನು ಉಲ್ಲೇಖಿಸಿದರು. ಯುವಕರಿಗೆ ದೇಶಭಕ್ತಿಯ ಶಿಕ್ಷಣದ ಅವಶ್ಯಕತೆಯನ್ನು ಹೇಳಿದರು.

Mai Cha Jayadev meets Dr Shivakumar Swamiji

————————————————————————————————

74, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – 560004