ರಾಷ್ಟ್ರೀಯ ಸ್ವಯಂಸೇವಕ ಸಂಘ

ರಾಷ್ಟ್ರೀಯ ಪ್ರಧಾನ ಕಾರ್ಯಾಲಯ – ನಾಗಪುರ

Shri Bal Apte

ಮಾಜಿ ಸಾಂಸದ ಶ್ರೀ ಬಾಳಾ ಆಪ್ಟೆಯವರ ನಿಧನಕ್ಕೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್‌ರ ಶೋಕ ಸಂದೇಶ

ಶ್ರೀ ಬಾಳಾ ಆಪ್ಟೆಯವರ ನಿಧನದಿಂದ ನಮಗೆಲ್ಲರಿಗೂ ತೀವ್ರ ದುಃಖ ಮತ್ತು ನಷ್ಟದ ಅನುಭವವುಂಟಾಗಿದೆ. ಅವರ ಜೀವನವು ಹಿಂದೂ ಸಮಾಜದ ಸಂಘಟನೆ ಮತ್ತು ಪುನರುತ್ಥಾನಕ್ಕಾಗಿ ನಿರಂತರ ಸಮರ್ಪಣೆಯ ಅನುಪಮ ಉದಾಹರಣೆಯಾಗಿದೆ. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಅತಿ ಅವಶ್ಯವಾಗಿ ಬೇಕಾಗಿರುವ ಅನುಶಾಸನವನ್ನು ತಮ್ಮ ಜೀವನದುದ್ದಕ್ಕೂ ಅಪ್ಟೆಯವರು ಪಾಲಿಸಿದ್ದರು ಮತ್ತು ಇತರರು ಪಾಲಿಸುವಂತೆಯೂ ಮಾಡಿದರು. ಅತ್ಯಂತ ಸ್ಪಷ್ಟವಾಗಿ. ಕೆಲವೊಮ್ಮೆ ಕಟೋರತೆಯಿಂದಲೂ ಸಹಜ ಸ್ನೇಹವನ್ನು ಉಳಿಸಿಕೊಂಡು ವಿಷಯ-ವಿದ್ಯಮಾನಗಳನ್ನು ವಿಮರ್ಶಿಸುವ ಪರಿ ಯಾವತ್ತೂ ನೆನಪಲ್ಲಿ ಉಳಿಯುವಂಥದ್ದು. ಅವರ ನಿಧನದಿಂದ ಆ ವಿಶಿಷ್ಟ ಶೈಲಿಯ ಸಮಾಪ್ತಿ ಕಂಡಿದೆ. ಅವರ  ಕುಟುಂಬ ಸದಸ್ಯರೊಂದಿಗೆ ನಮಗೆಲ್ಲರಿಗೂ ಈ ನಷ್ಟವನ್ನೆದುರಿಸಬೇಕಾಗಿದೆ.

ಆಪ್ಟೆಯವರ ನೆನಪಲ್ಲಿ ಆದರಾಂಜಲಿಗಳನ್ನು ಅರ್ಪಿಸುತ್ತಾ ಈ ಆಘಾತವನ್ನು ಸಹಿಸುವ ಸಾಮರ್ಥ್ಯವನ್ನು ನಮಗೆ ನೀಡಲು ಮತ್ತ್ತು ದಿವಂಗತರ ಆತ್ಮಕ್ಕೆ ಶಾಂತಿ ಮತ್ತು ಸದ್ಗತಿಯನ್ನು ಕರುಣಿಸಬೇಕೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

-ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘಚಾಲಕ